logo
ಕನ್ನಡ ಸುದ್ದಿ  /  ಜೀವನಶೈಲಿ  /  Snoring And Food: ಗೊರಕೆ ಹೊಡೆಯುವ ಅಭ್ಯಾಸವಿದೆಯೆ? ಈ ಆಹಾರಗಳು ನಿಮಗೆ ಸಹಾಯ ಮಾಡಬಹುದು

snoring and food: ಗೊರಕೆ ಹೊಡೆಯುವ ಅಭ್ಯಾಸವಿದೆಯೆ? ಈ ಆಹಾರಗಳು ನಿಮಗೆ ಸಹಾಯ ಮಾಡಬಹುದು

HT Kannada Desk HT Kannada

Feb 18, 2023 10:14 PM IST

google News

ಗೊರಕೆ

    • ಗೊರಕೆಗೆ ಆಯಾಸ, ಸ್ಥೂಲಕಾಯ, ಕಟ್ಟಿದ ಮೂಗು, ನಿದ್ದೆಯಲ್ಲಿ ಉಸಿರುಕಟ್ಟುವಿಕೆ ಇವು ಕಾರಣಗಳಿರಬಹುದು. ಇದಕ್ಕೆ ಗಾಬರಿ ಪಡುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಇರುವ ಕೆಲವು ಆಹಾರ ಪದಾರ್ಥಗಳು ಗೊರಕೆ ನಿಯಂತ್ರಿಸಲು ಸಹಾಯ ಮಾಡುತ್ತವೆ. 
ಗೊರಕೆ
ಗೊರಕೆ

ರಾತ್ರಿ ಮಲಗಿದಾಗ ಗೊರಕೆ ಹೊಡೆಯುವ ಅಭ್ಯಾಸ ಹಲವರಲ್ಲಿದೆ. ಕೆಲವರ ಗೊರಕೆಯ ಶಬ್ದ ಎಷ್ಟಿರುತ್ತದೆ ಎಂದರೆ ಅಕ್ಕಪಕ್ಕದ ಕೋಣೆಯಲ್ಲೂ ಮಲಗುವುದು ಕಷ್ಟವಾಗುತ್ತದೆ. ಗೊರಕೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಆಳವಾದ ನಿದ್ದೆಯಲಿದ್ದಾರೆ ಎಂಬುದನ್ನು ಗೊರಕೆ ಸೂಚಿಸುತ್ತದೆ ಎನ್ನುತ್ತಾರೆ. ಆದರೆ ಗೊರಕೆ ಹೊಡೆಯಲು ಹಲವು ಕಾರಣಗಳಿವೆ. ಆಯಾಸ, ಸ್ಥೂಲಕಾಯ, ಕಟ್ಟಿದ ಮೂಗು, ನಿದ್ದೆಯಲ್ಲಿ ಉಸಿರುಕಟ್ಟುವಿಕೆ ಈ ಕಾರಣಗಳಿಂದಲೂ ಗೊರಕೆ ಹೊಡೆಯಬಹುದು. ಇದಕ್ಕೆ ಗಾಬರಿ ಪಡುವ ಅವಶ್ಯಕತೆ ಇಲ್ಲದಿದ್ದರೂ ಕೆಲವೊಮ್ಮೆ ಇದು ಗಂಭೀರ ಕಾಯಿಲೆಯ ಲಕ್ಷಣವನ್ನು ಹೊಂದಿರುವ ಸಾಧ್ಯತೆಯೂ ಇದೆ. ಗೊರಕೆಯಿಂದ ನಿಮಗೆ ತೊಂದರೆ ಎನ್ನಿಸಿದರೆ ವೈದ್ಯರ ಬಳಿ ತೋರಿಸುವುದು ಉತ್ತಮ. ಆದರೆ ಉತ್ತಮ ಆಹಾರಕ್ರಮದಿಂದಲೂ ಗೊರಕೆ ಹೊಡೆಯುವುದನ್ನು ನಿಲ್ಲಿಸಬಹುದು.

ಅರಿಸಿನ

ಆಯುರ್ವೇದದಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಅರಿಸಿನವೇ ಮದ್ದು. ಗೊರಕೆ ಹೊಡೆಯುವವರಿಗೂ ಅರಿಸಿನ ಬಹಳ ಪರಿಣಾಮಕಾರಿ ಔಷಧಿ. ಇದು ಕೂಡ ಉತ್ಕರ್ಷಣ ವಿರೋಧ ಗುಣವನ್ನು ಹೊಂದಿದೆ. ಇದು ಕಟ್ಟಿಕೊಂಡಿರುವ ಮೂಗಿನ ಸಮಸ್ಯೆಗೆ ಪರಿಹಾರ ನೀಡಿ ಗಂಟಲು ನೋವನ್ನು ಗುಣಪಡಿಸುತ್ತದೆ. ಅರಿಸಿನವನ್ನು ಸೇವಿಸುವುದರಿಂದ ರಕ್ತಸಂಚಾರ ವೃದ್ಧಿಯಾಗುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಸಿನ ಪುಡಿ ಮಿಶ್ರಣ ಮಾಡಿ ಸೇವಿಸಿ.

ಈರುಳ್ಳಿ

ಈರುಳ್ಳಿ ಗೊರಕೆಗೆ ಬಹಳ ಉತ್ತಮ ಔಷಧಿ. ಈರುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಅಧಿಕವಾಗಿದೆ. ಇದು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕನ್ನು ತಡೆಯುತ್ತದೆ. ಕೆಮ್ಮ, ಕಫ ಇದ್ದಾಗ ಹಸಿ ಈರುಳ್ಳಿಯನ್ನು ಸೇವಿಸಬೇಕು. ಇದರಿಂದ ಕಟ್ಟಿದ ಮೂಗು ಹಾಗೂ ಗಂಟಲು ಶುದ್ಧವಾಗುತ್ತದೆ. ಕಫ ಕರಗಲು ಈರುಳ್ಳಿ ಸಹಕಾರಿ. ಈರುಳ್ಳಿಯನ್ನು ಬೆಂಕಿಯಲ್ಲಿ ಸುಟ್ಟು ಸೇವಿಸಬಹುದು.

ಜೇನುತುಪ್ಪ

ಜೇನುತುಪ್ಪದಲ್ಲಿ ಹಲವು ಬಗೆಯ ಆರೋಗ್ಯ ರಕ್ಷಕ ಗುಣಗಳಿವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕಾಯಿಲೆಗಳಿಂದ ದೂರ ಉಳಿಯಬಹುದು. ಇದು ಉತ್ಕರ್ಷಣ ವಿರೋಧಿ ಗುಣವನ್ನು ಹೊಂದಿದೆ. ಜೇನುತುಪ್ಪವನ್ನು ಜಜ್ಜಿದ ಶುಂಠಿಯೊಂದಿಗೆ ಸೇವಿಸುವುದರಿಂದ ಶೀತ, ಕಫ ಹಾಗೂ ಗಂಟಲು ಕಟ್ಟುವುದು ಮುಂತಾದ ಸಮಸ್ಯೆಗಳಿವೆ ಪರಿಹಾರ ಕಂಡುಕೊಳ್ಳಬಹುದು. ಗಂಟಲಿನ ಸೋಂಕು ನಿವಾರಣೆಗೂ ಜೇನುತುಪ್ಪ ಮದ್ದು. ಜೇನುತುಪ್ಪದ ಬಳಕೆಯಿಂದ ಮೂಗಿನ ಹೊಳ್ಳೆಗಳು ತೆರೆದುಕೊಳ್ಳುತ್ತವೆ. ಇದರಿಂದ ಉಸಿರಾಟಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಬಿಸಿ ನೀರು ಅಥವಾ ಹಾಲಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ರಾತ್ರಿ ಮಲಗುವ ಮೊದಲು ಕುಡಿಯಬೇಕು, ಇದರಿಂದ ನಿಮ್ಮ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಜೇನುತುಪ್ಪ

ಸೇಬುಹಣ್ಣು

ಸೇಬುಹಣ್ಣಿನಲ್ಲಿ ಪೋಷಕಾಂಶಗಳು ಅಧಿಕವಾಗಿವೆ. ಆದ್ದರಿಂದ ಪ್ರತಿನಿತ್ಯ ಒಂದು ಸೇಬುಹಣ್ಣು ತಿನ್ನಬೇಕು, ಇದರಿಂದ ರೋಗಗಳಿಂದ ದೂರ ಉಳಿಯಬಹುದು ಎನ್ನುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ. ಇದರಿಂದ ಗೊರಕೆಯ ಪ್ರಮಾಣ ಕಡಿಮೆಯಾಗಬಹುದು.

ಶುಂಠಿ

ಶುಂಠಿ ಸರ್ವರೋಗಕ್ಕೂ ಮದ್ದು, ಇದರಲ್ಲಿರುವ ಮೆಗ್ನಿಶಿಯಂ, ಪೊಟ್ಯಾಶಿಯಂ ಹಾಗೂ ಸತುವಿನ ಅಂಶಗಳು ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ. ಶುಂಠಿಯ ಸೇವನೆಯಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದು ಆಯಾಸ ಹಾಗೂ ಗೊರಕೆಯನ್ನು ಕಡಿಮೆ ಮಾಡುತ್ತದೆ. ಗೊರಕೆ ಕಡಿಮೆ ಮಾಡಲು ರಾತ್ರಿ ಮಲಗುವ ಮುನ್ನ ಶುಂಠಿ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಉತ್ತಮ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ