ನಟಿ ಸಾಯಿ ಪಲ್ಲವಿಯವರಂತೆ ತ್ವಚೆಯನ್ನು ಪಡೆಯಬೇಕಾ: ಈ 5 ಸಲಹೆಗಳನ್ನು ಪಾಲಿಸಿ, ಚರ್ಮದ ಗ್ಲೋ ಹೆಚ್ಚಿಸಿ
Oct 31, 2024 12:51 PM IST
ನಟಿ ಸಾಯಿ ಪಲ್ಲವಿಯವರಂತೆ ತ್ವಚೆಯನ್ನು ಪಡೆಯಬೇಕಾ: ಈ 5 ಸಲಹೆಗಳನ್ನು ಪಾಲಿಸಿ, ಚರ್ಮದ ಗ್ಲೋ ಹೆಚ್ಚಿಸಿ
ದಕ್ಷಿಣ ಭಾರತದ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ಸಾಯಿ ಪಲ್ಲವಿ ತಮ್ಮ ನಟನೆ ಮಾತ್ರವಲ್ಲ ಸುಂದರವಾದ ತ್ವಚೆಗೆ ಖ್ಯಾತಿ ಪಡೆದಿದ್ದಾರೆ. ಯಾವುದೇ ಮೇಕಪ್ ಇಲ್ಲದ ಸಾಯಿ ಪಲ್ಲವಿ ಅವರ ತ್ವಚೆಯ ಹೊಳಪು ಎಲ್ಲರಿಗೂ ಅಚ್ಚರಿ ತಂದಿರುವುದಂತೂ ಸತ್ಯ. ನಟಿ ಸಾಯಿ ಪಲ್ಲವಿಯವರ ನೈಸರ್ಗಿಕ ಗ್ಲೋ ಅಪ್ ತ್ವಚೆಯ ದಿನಚರಿಯ ಐದು ಸಲಹೆಗಳು ಇಲ್ಲಿದೆ.
ದಕ್ಷಿಣ ಭಾರತದ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ಸಾಯಿ ಪಲ್ಲವಿ ತಮ್ಮ ಸುಂದರವಾದ ತ್ವಚೆಗೆ ಖ್ಯಾತಿ ಪಡೆದಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲ, ಮೇಕಪ್ ಹಾಕದೆ ಅವರ ತ್ವಚೆಯ ಹೊಳಪು ಹಲವರಿಗೆ ಅಚ್ಚರಿ ತಂದಿದೆ. ಮುಖದಲ್ಲಿ ಯಾವುದೇ ಕಲೆಗಳಿಲ್ಲದೆ ನೈಸರ್ಗಿಕವಾಗಿ ಸುಂದರವಾದ ಹೊಳೆಯುವ ಚರ್ಮವನ್ನು ಹೊಂದಿದ್ದಾರೆ. ನಟಿ ಸಾಯಿ ಪಲ್ಲವಿಯವರ ನೈಸರ್ಗಿಕ ಗ್ಲೋ ಅಪ್ ತ್ವಚೆಯ ದಿನಚರಿಯ ಐದು ಸಲಹೆಗಳು ಇಲ್ಲಿದೆ.
ನಟಿ ಸಾಯಿ ಪಲ್ಲವಿಯ ಗ್ಲೋ ಅಪ್ ತ್ವಚೆಯ ದಿನಚರಿ
ನೈಸರ್ಗಿಕ ಪದಾರ್ಥಗಳನ್ನು ಅಳವಡಿಸಿಕೊಳ್ಳಿ: ನೈಸರ್ಗಿಕ ಉತ್ಪನ್ನಗಳ ಮೇಲೆ ನಟಿ ಸಾಯಿ ಪಲ್ಲವಿಗೆ ಹೆಚ್ಚಿನ ನಂಬಿಕೆ. ತನ್ನ ಚರ್ಮದ ಮೇಲೆ ರಾಸಾಯನಿಕಗಳನ್ನು ಹೊಂದಿರದ ಉತ್ಪನ್ನಗಳನ್ನು ಬಳಸುವ ಅಗತ್ಯವನ್ನು ನಟಿ ಒತ್ತಿಹೇಳುತ್ತಾರೆ. ಸಾಯಿ ಪಲ್ಲವಿಯ ಮುಖದಂತೆ ಹೊಳೆಯಲು ತ್ವಚೆಯ ಹೊಳಪಿಗಾಗಿ, ಬೇವು, ಅರಿಶಿನ, ಜೇನುತುಪ್ಪ ಮತ್ತು ಅಲೋವೆರಾವನ್ನು ಹೊಂದಿರುವ ಉತ್ಪನ್ನಗಳ ಬಳಕೆಯನ್ನು ಅಳವಡಿಸಿಕೊಳ್ಳಿ. ಇವು ನೈಸರ್ಗಿಕ ಅಂಶಗಳಾಗಿದ್ದು, ಗುಣಪಡಿಸುವ ಮತ್ತು ಹೊಳಪು ನೀಡುವ ಪರಿಣಾಮವನ್ನು ಹೊಂದಿವೆ ಎಂದು ನಂಬಲಾಗಿದೆ. ಇದು ಚರ್ಮದ ಟೋನ್ ಅನ್ನು ಸುಧಾರಿಸುವಲ್ಲಿ ಉತ್ತಮವಾಗಿದೆ.
ಹೈಡ್ರೇಟೆಡ್ ಆಗಿರಿ: ಸಾಯಿ ಪಲ್ಲವಿ ತನ್ನ ತ್ವಚೆಯ ದಿನಚರಿಯ ಬಗ್ಗೆ ತುಂಬಾ ಕಾಳಜಿ ವಹಿಸುವ ಪ್ರಮುಖ ಅಂಶವೆಂದರೆ ಸಾಕಷ್ಟು ನೀರು ಕುಡಿಯುವುದು. ಸಾಕಷ್ಟು ನೀರು ಕುಡಿಯುವುದು ಮತ್ತು ಲೋಷನ್‌ಗಳನ್ನು ಬಳಸುವುದರ ಮೂಲಕ ಚರ್ಮವು ಹೈಡ್ರೇಟೆಡ್ ಆಗಿರುತ್ತದೆ. ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮವನ್ನು ತಾಜಾ ಮತ್ತು ಒಳಗಿನಿಂದ ಕಾಂತಿಯುತವಾಗಿರಿಸುತ್ತದೆ.
ಅತಿಯಾದ ಮೇಕಪ್ ಬಳಸಬೇಡಿ: ಸಾಯಿ ಪಲ್ಲವಿ ಉತ್ತಮವಾದ ತ್ವಚೆಯ ಆರೈಕೆಯ ದಿನಚರಿಯನ್ನು ಉತ್ತೇಜಿಸುತ್ತಾರೆ. ಅವರು ತುಂಬಾ ಕಡಿಮೆ ಮೇಕಪ್ ಬಳಸುತ್ತಾರೆ. ಚರ್ಮವು ಉಸಿರಾಡಲು ಹೆಚ್ಚು ಸಮಯ ಮೇಕಪ್ ಅನ್ನು ಬಳಸುವುದೇ ಇಲ್ಲ. ಚರ್ಮವನ್ನು ನೈಸರ್ಗಿಕ ರೀತಿಯಲ್ಲಿ ಪುನಃಸ್ಥಾಪಿಸಲು ಅತಿಯಾದ ಮೇಕಪ್ ಬಳಸದಿರುವುದು ಒಳ್ಳೆಯದು.
ಸ್ಥಿರವಾದ ದಿನಚರಿ: ತ್ವಚೆಯ ಸೌಂದರ್ಯಕ್ಕೆ ನಿರ್ದಿಷ್ಟವಾದ ಕ್ರಮವನ್ನು ಅನುಸರಿಸಬೇಕು ಎಂದು ನಟಿ ಸಾಯಿ ಪಲ್ಲವಿ ಅಭಿಪ್ರಾಯಪಟ್ಟಿದ್ದಾರೆ. ಚರ್ಮವನ್ನು ಶುಚಿಗೊಳಿಸುವುದು, ಎಫ್ಫೋಲಿಯೇಟ್ ಮಾಡುವುದು, ಟೋನರನ್ನು ಅನ್ವಯಿಸುವುದು ಮತ್ತು ಪ್ರತಿದಿನ ಚರ್ಮವನ್ನು ತೇವಗೊಳಿಸಬೇಕು. ಸರಿಯಾದ ಉತ್ಪನ್ನಗಳ ಬಳಕೆಯು ತ್ವಚೆಯ ಕಾಳಜಿಗೆ ಉತ್ತಮ.
ಸನ್ ಬರ್ನ್: ನಿಮ್ಮ ತ್ವಚೆಗೆ ಹಾನಿಯಾಗದಂತೆ ಕಾಪಾಡಲು ಟೋಪಿಗಳು ಮತ್ತು ಸ್ಕಾರ್ಫ್‌ಗಳನ್ನು ಧರಿಸಬಹುದು. ಮತ್ತು ಬಿಸಿಲಿನಲ್ಲಿ ಹೋಗುವುದನ್ನು ಆದಷ್ಟು ಕಡಿಮೆ ಮಾಡುವ ಬಗ್ಗೆ ಸಾಯಿಪಲ್ಲವಿ ಸಲಹೆ ನೀಡಿದ್ದಾರೆ. ಹೊರಗೆ ಹೋದಾಗ ತ್ವಚೆಗೆ ಸನ್‌ಸ್ಕ್ರೀನ್ ಅನ್ನು ಅನ್ವಯಿಸಬೇಕು. ಇದು ಚರ್ಮವನ್ನು ಸುಕ್ಕುಗಟ್ಟುವಂತೆ ಮಾಡಲು ತಡೆಯುತ್ತದೆ. ಹಾಗೆಯೇ ಪಿಗ್ಮೆಂಟೇಶನ್ ಮತ್ತು ಚರ್ಮದ ಹಾನಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಸೂರ್ಯನ ಬಿಸಿಲಿನ ಪರಿಣಾಮಗಳ ವಿರುದ್ಧ ನಿಮ್ಮ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್ ಅನ್ನು ಸರಿಯಾದ ರೀತಿಯಲ್ಲಿ ಬಳಸುವುದು ಮುಖ್ಯ.
ನಟಿ ಸಾಯಿ ಪಲ್ಲವಿಯಂತಹ ತ್ವಚೆಯ ಹೊಳಪನ್ನು ನಿಮಗೂ ಪಡೆಯಬೇಕು ಎಂದಿದ್ದರೆ, ಈ ಮೇಲೆ ತಿಳಿಸಿದ ಸಲಹೆಯನ್ನು ಅನುಸರಿಸಬಹುದು. ಇವು ನಟಿ ಸಾಯಿಪಲ್ಲವಿ ಅವರ ತ್ವಚೆಯ ದಿನಚರಿಯಾಗಿದೆ.