ಐಲೈನರ್, ಕಾಡಿಗೆ, ಮಸ್ಕರಾ ಹಚ್ಚುವಾಗ ಹಲವರು ಬಾಯಿ ಅರ್ಧ ತೆರೆದಿರುವುದೇಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ಸಂಗತಿ
Nov 12, 2024 11:59 AM IST
ಐಲೈನರ್, ಕಾಡಿಗೆ, ಮಸ್ಕರಾ ಹಚ್ಚುವಾಗ ಬಹುತೇಕರ ಬಾಯಿ ಅರ್ಧ ತೆರೆದಿರುವುದೇಕೆ?
- ಕಾಡಿಗೆ, ಐಲೈನರ್ ಹಚ್ಚುವಾಗ ಬಹುತೇಕರು ಬಾಯಿಯನ್ನು ಅರ್ಧದಷ್ಟು ತೆರೆದಿರುವುದನ್ನು ನೀವು ಗಮನಿಸಿ ಇರಬಹುದು. ಆದರೆ ಹೀಗೆಕೆ ಎಂದು ಆಲೋಚಿಸಿದ್ದೀರಾ? ಇದು ಶಾರೀರಿಕ ಪ್ರಕ್ರಿಯೆಯೇ ಅಥವಾ ಇದಕ್ಕೆ ಬೇರೆ ಏನಾದರೂ ಕಾರಣವಿದೆಯೇ ಇಲ್ಲಿದೆ ಈ ವಿಚಾರದ ಹಿಂದಿನ ಸತ್ಯ ಹೀಗಿದೆ.
ನಮ್ಮ ದೇಹದ ಕುರಿತಾದ ಕೆಲವು ವಿಚಾರಗಳು ನಮ್ಮ ನಮಗೆ ಅಚ್ಚರಿ ಅನ್ನಿಸೋದು ಸುಳ್ಳಲ್ಲ. ನಮ್ಮ ದೇಹ ಹಾಗೂ ಮನಸ್ಸು ಕೆಲಸ ಮಾಡುವ ರೀತಿ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಕೆಲವು ಬಾರಿ ನಮಗೇ ಅರಿವಿಲ್ಲದಂತೆ ಕೆಲವು ವಿಚಾರಗಳಲ್ಲಿ ನಮ್ಮ ದೇಹವು ಪ್ರತಿಕ್ರಿಯಿಸುವ ರೀತಿಯು ಏಕೆ ಹೀಗೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿಸುಬಹುದು.
ಅಂತಹ ಪ್ರಕ್ರಿಯೆಯಲ್ಲಿ ಐಲೈನರ್, ಕಾಡಿಗೆ, ಮಸ್ಕರಾ ಹಚ್ಚುವಾಗ ಬಾಯಿ ಅರ್ಧ ತೆರೆಯುವುದು ಕೂಡ ಒಂದು. ಇದರ ಬಗ್ಗೆ ನೀವು ಎಂದಾದ್ರೂ ಯೋಚನೆ ಮಾಡಿದ್ದೀರಾ, ಐಲೈನರ್ ಹಚ್ಚುವಾಗ ಬಾಯಿ ಯಾಕೆ ಅರ್ಧ ತೆರೆದಿರುತ್ತದೆ ಎಂದು ನೀವು ಯೋಚಿಸಿದ್ದೀರಾ, ಇದರಿಂದ ಹಿಂದೆ ಖಂಡಿತ ಒಂದು ಕಾರಣವಿರುತ್ತದೆ.
ನೈಸರ್ಗಿಕ ಪ್ರತಿವರ್ತನದಿಂದಾಗಿ ಮಸ್ಕರಾ ಅಥವಾ ಐಲೈನರ್ ಅನ್ನು ಅನ್ವಯಿಸುವಾಗ ಮಹಿಳೆಯರು ಹೆಚ್ಚಾಗಿ ಬಾಯಿ ತೆರೆಯುತ್ತಾರೆ. ಕಣ್ಣುಗಳ ಸಮೀಪ ಯಾವುದೇ ಪ್ರಕ್ರಿಯೆ ಮಾಡಿದಾಗ ಮುಖದ ಸ್ನಾಯುಗಳು ರಿಲ್ಯಾಕ್ಸ್ ಮೂಡ್‌ಗೆ ತೆರಳುತ್ತವೆ. ಇದರಿಂದ ದವಡೆ ಸಡಿಲವಾಗುತ್ತದೆ. ಇದರಿಂದ ಬಾಯಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದು ಫ್ಯಾಕ್ಟ್ಸ್ ಡೈಲಿ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಭಾರತಕ್ಕೆ ಆಲೂಗೆಡ್ಡೆ ಬಂದಿದ್ದು ಹೇಗೆ?
ಐಲೈನರ್, ಮಸ್ಕರಾ ಹಚ್ಚುವಾಗ ಬಾಯಿ ತೆರೆಯುವುದು ನೈಸರ್ಗಿಕ ಪ್ರಕ್ರಿಯೆಯೇ?
ಐಲೈನರ್ ಅಥವಾ ಮಸ್ಕರಾವನ್ನು ಅನ್ವಯಿಸಲು ಬಾಯಿ ತೆರೆಯುವುದು ಒಂದು ನಿರ್ದಿಷ್ಟ ದೈಹಿಕ ಪ್ರತಿಕ್ರಿಯೆಯಿಂದ ಉಂಟಾಗದ, ಆಗಾಗ ಸಹಜವಾಗಿ ಆಗುವ ಪ್ರಕ್ರಿಯೆ ಎನ್ನುತ್ತಾರೆ ಗುರುಗ್ರಾಮದ ಪಾರಸ್ ಆಸ್ಪತ್ರೆ ನ್ಯೂರೋಇಂಟರ್ವೆನ್ಷನ್ ಗುಂಪಿನ ನಿರ್ದೇಶಕ ಡಾ ವಿಪುಲ್ ಗುಪ್ತಾ.
ಇದು ನಮ್ಮ ಮುಖದ ಸ್ನಾಯುಗಳು ಹೇಗೆ ಸೇರಿಕೊಂಡಿವೆ ಎಂಬುದು ಈ ವಿದ್ಯಮಾನಕ್ಕೆ ಕಾರಣವಾಗಿದೆ. ನಾವು ಕಣ್ಣುಗಳಂತಹ ಸೂಕ್ಷ್ಮ ಪ್ರದೇಶಗಳಿಗೆ ಸೌಂದರ್ಯವರ್ಧಕಗಳನ್ನು ಅನ್ವಯಿಸಿದಾಗ ಕಣ್ಣುಗಳನ್ನು ನಿಯಂತ್ರಿಸುವ ಆರ್ಬಿಕ್ಯುಲಾರಿಸ್ ಓಕುಲಿ ಮತ್ತು ಇತರ ಮುಖದ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ನಮ್ಮ ಕೈಗಳನ್ನು ಸ್ಥಿರಗೊಳಿಸಲು ಅಥವಾ ಈ ಸ್ನಾಯುಗಳ ಮೇಲಿನ ಒತ್ತಡವನ್ನು ಸರಾಗಗೊಳಿಸಲು ನಮ್ಮ ದವಡೆಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ, ಇದು ಸುತ್ತಮುತ್ತಲಿನ ಮುಖದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ನಿಖರವಾದ ಚಲನೆಗಳ ಮೇಲೆ ಕೇಂದ್ರೀಕರಿಸಲು ನಮಗೆ ಸಹಾಯ ಮಾಡುತ್ತದೆ, ”ಡಾ ಗುಪ್ತಾ ಹೇಳಿದರು.
ಡಾ ಗುಪ್ತಾ ಅವರ ಪ್ರಕಾರ, ಕೆಲವರು ತಮ್ಮ ಮುಖದ ಸ್ನಾಯುಗಳ ನಡುವಿನ ಸಂಪರ್ಕದಿಂದಾಗಿ ಮೇಕ್ಅಪ್ ಅನ್ನು ಅನ್ವಯಿಸುವಾಗ ತಮ್ಮ ತಲೆಯನ್ನು ಓರೆಯಾಗಿಸುತ್ತಾರೆ ಅಥವಾ ಹುಬ್ಬುಗಳನ್ನು ಮೇಲಕ್ಕೆತ್ತುತ್ತಾರೆ.
ಬಹುತೇಕರಿಗೆ ಇದು ಅಭ್ಯಾಸವಾಗಿರುತ್ತದೆ. ಇದೊಂಥರ ಅವರಿಗೆ ಅರಿವಿಲ್ಲದಂತೆ ಅವರು ಮಾಡುವ ಚಟುವಟಿಕೆಯಾಗಿದೆ. ಆದರೆ ಇದು ಕಣ್ಣು ಮಿಟುಕಿಸುವಂತೆ ರಕ್ಷಣಾತ್ಮಕ ಪ್ರಕ್ರಿಯೆ ಏನಲ್ಲ. ಇದು ಒಂದು ರೀತಿಯ ಸುಪ್ತಾವಸ್ಥೆಯ ಚಟುವಟಿಕೆಯಾಗಿದೆ. ಕಣ್ಣಿನಂತಹ ಸೂಕ್ಷ್ಮಭಾಗಕ್ಕೆ ಮೇಕಪ್ ಮಾಡುವಾಗ ಸ್ಥಿರ ಹಾಗೂ ನಿಖರವಾಗಿರಬೇಕು ಎನ್ನುವ ಕಾರಣಕ್ಕೆ ಬಾಯಿಯನ್ನು ಅರ್ಧಕ್ಕೆ ತೆರೆದಿರುತ್ತಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ಗುಪ್ತಾ. ಇದು ಮನುಷ್ಯನ ಒಂದು ಸಹಜ ಪ್ರಕ್ರಿಯೆಯಾಗಿದೆ ಹೊರತು ಇದಕ್ಕೂ ದೈಹಿಕ ಅಥವಾ ಶಾರೀರಿಕ ಅಂಶಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಅವರ ಅಭಿಪ್ರಾಯ.