logo
ಕನ್ನಡ ಸುದ್ದಿ  /  ಜೀವನಶೈಲಿ  /  Summer Tips: ನಿರ್ಜಲೀಕರಣ ಸಮಸ್ಯೆ ತಪ್ಪಿಸಲು ಬೇಸಿಗೆ ಕಾಲದಲ್ಲಿ ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿದರೆ ಉತ್ತಮ

Summer Tips: ನಿರ್ಜಲೀಕರಣ ಸಮಸ್ಯೆ ತಪ್ಪಿಸಲು ಬೇಸಿಗೆ ಕಾಲದಲ್ಲಿ ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿದರೆ ಉತ್ತಮ

HT Kannada Desk HT Kannada

Mar 15, 2024 03:29 PM IST

ಬೇಸಿಗೆಯಲ್ಲಿ ಗರ್ಭಿಣಿಯರು ಸೇವಿಸಬೇಕಾದ ಆಹಾರಗಳು

  • Summer Tips: ಬೇಸಿಗೆಯಲ್ಲಿ ಗರ್ಭಿಣಿಯರು ಹೆಚ್ಚಿನ ಸಮಸ್ಯೆ ಅನುಭವಿಸುತ್ತಾರೆ. ನಿರ್ಜಲೀಕರಣದಂತಹ ಸಮಸ್ಯೆಗಳಿಂದ ಬಳಲುವ ಗರ್ಭಿಣಿಯರು ಬೇಸಿಗೆಕಾಲದಲ್ಲಿ ಯಾವೆಲ್ಲಾ ಆಹಾರ ಸೇವಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಬೇಸಿಗೆಯಲ್ಲಿ ಗರ್ಭಿಣಿಯರು ಸೇವಿಸಬೇಕಾದ ಆಹಾರಗಳು
ಬೇಸಿಗೆಯಲ್ಲಿ ಗರ್ಭಿಣಿಯರು ಸೇವಿಸಬೇಕಾದ ಆಹಾರಗಳು

Summer Tips: ಬೇಸಿಗೆಯಲ್ಲಿ ಸೂರ್ಯನ ಶಾಖವನ್ನು ತಡೆದುಕೊಳ್ಳಲು ಸಾಮಾನ್ಯರಿಗೆ ಆಗುವುದಿಲ್ಲ. ಅಂತದರಲ್ಲಿ ಗರ್ಭಿಣಿಯರಂತೂ ಸೆಖೆಗೆ ನರಕಯಾತನೆಯನ್ನೇ ಅನುಭವಿಸುತ್ತಾರೆ. ಅತಿಯಾದ ಸೆಖೆಯಿಂದ ನಿರ್ಜಲೀಕರಣ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರು ಬೇಸಿಗೆ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೋಷಿಯಲ್‌ ಮೀಡಿಯಾದಲ್ಲಿ 'ಬರ್ಡ್‌ ಟೆಸ್ಟ್‌' ಟ್ರೆಂಡಿಂಗ್‌; ಜೋಡಿ ಹಕ್ಕಿಗಳ ಟೆಸ್ಟ್‌ನಲ್ಲಿದೆ ಟ್ವಿಸ್ಟ್

ಭಾರತೀಯರಿಗೆ ಸನ್‌ಸ್ಕ್ರೀನ್‌ ಅವಶ್ಯಕತೆ ಇಲ್ವಾ, ಇದನ್ನ ಹಚ್ಚಿಲ್ಲ ಅಂದ್ರೆ ಏನಾಗುತ್ತೆ? ತ್ವಚೆಯ ಕಾಳಜಿ ಕುರಿತು ಮಹತ್ವದ ಸಲಹೆಯಿದು

Health News: ಕಾರಿನೊಳಗಿನ ಗಾಳಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳಿವೆ; ಅಧ್ಯಯನದ ವರದಿ ಹೀಗಿದೆ

ಅಕ್ಷಯ ತೃತೀಯದಂದು ಕೇದಾರನಾಥ ಕ್ಷೇತ್ರದ ಬಾಗಿಲು ಓಪನ್; ದೇವಾಲಯ ಕುರಿತು ನಿಮಗೆ ತಿಳಿದಿರಬೇಕಾದ 6 ವಿಷಯಗಳಿವು

ಗರ್ಭಿಣಿಯರು ತಮ್ಮ ಆರೋಗ್ಯ ಹಾಗೂ ಗರ್ಭದಲ್ಲಿರುವ ಮಗುವಿನ ಆರೋಗ್ಯ ಎರಡರ ಕಡೆಯೂ ಗಮನ ಕೊಡಬೇಕು. ಹೀಗಾಗಿ ಪ್ರಸವ ಪೂರ್ವ ಆರೈಕೆಯಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಿಣಿಯರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಸರಿಯಾದ ಗಮನ ನೀಡಬೇಕು. ಬೇಸಿಗೆಯಲ್ಲಿ ಮಹಿಳೆಯರು ಸೇವಿಸಬಹುದಾದ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಮೊಟ್ಟೆ: ಗರ್ಭ ಧರಿಸಿದ ಮಹಿಳೆಯರಿಗೆ ಹೆಚ್ಚುವರಿ ಪ್ರೊಟೀನ್‌ ಅಗತ್ಯವಿರುತ್ತದೆ. ಮಗುವಿನ ಅಸ್ಥಿಪಂಜರ ಹಾಗೂ ಸ್ನಾಯುಗಳ ಬೆಳವಣಿಗೆಯಲ್ಲಿ ಮೊಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯು ಮಗುವಿನ ಮೂಳೆಯ ಬೆಳವಣಿಗೆಯನ್ನು ಬಲಪಡಿಸುತ್ತದೆ. ಅಲ್ಲದೇ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಕೊಲೀನ್, ಲುಟೀನ್, ವಿಟಮಿನ್ ಬಿ 12 ಹಾಗೂ ರೈಬೋಫ್ಲಾವಿನ್ ಎಂಬ ಅಂಶಗಳು ಮೊಟ್ಟೆಯಲ್ಲಿ ಅಡಕವಾಗಿರುತ್ತದೆ.

ಸೊಪ್ಪು ತರಕಾರಿಗಳು: ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಬೇಕು .ಇವುಗಳಲ್ಲಿ ವಿಟಮಿನ್ ಸಿ, ಇ ಮತ್ತು ಕೆ ಹಾಗೂ ಫೈಬರ್ ಅಂಶ ಅಡಕವಾಗಿರುತ್ತದೆ. , ಇದು ಗರ್ಭಾವಸ್ಥೆಯಲ್ಲಿ ಮಲಬದ್ಧತೆ ವಿರುದ್ಧ ಹೋರಾಡುತ್ತದೆ. ಗರ್ಭಿಣಿ ಮಹಿಳೆಯರು ಇವುಗಳ ಸಲಾಡ್ ಸೇವಿಸಬಹುದು. ಇವುಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ.

ಧಾನ್ಯಗಳು : ಗರ್ಭಿಣಿಯರು ಅಗತ್ಯ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬೇಕು. ಹೀಗಾಗಿ ಧಾನ್ಯಗಳನ್ನು ಸೇವಿಸಬೇಕೆಂದು ವೈದ್ಯರು ಶಿಫಾರಸು ಮಾಡುತ್ತಾರೆ. ಇವುಗಳು ಜೀರ್ಣಕ್ರಿಯೆಯನ್ನು ಸುಧಾರಿಸುವ ಜೊತೆಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಭಾಯಿಸುತ್ತವೆ.

ಡ್ರೈ ಫ್ರೂಟ್‌ಗಳು: ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಲಿಪಿಡ್‌ಗಳ ಅವಶ್ಯಕತೆ ಇರುತ್ತದೆ. ಉತ್ತಮ ಕೊಬ್ಬು ಮಗುವಿನ ಮೆದುಳು ಹಾಗೂ ಕಣ್ಣುಗಳ ಬೆಳವಣಿಗೆಗೆ ಸಹಕರಿಸುತ್ತದೆ.

ಸಿಟ್ರಿಕ್‌ಯುಕ್ತ ಹಣ್ಣುಗಳು: ವಿಟಮಿನ್ ಸಿ ಅಂಶ ಅಗಾಧ ಪ್ರಮಾಣದಲ್ಲಿ ಹೊಂದಿರುವ ಹಣ್ಣುಗಳು ಗರ್ಭಿಣಿಯರಿಗೆ ಉತ್ತಮವಾಗಿರುತ್ತದೆ. ಇವುಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಬೇಸಿಗೆ ತಿಂಗಳಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ.

ಮೀನು : ಮೀನುಗಳಲ್ಲಿ ಪ್ರೊಟೀನ್, ಕಬ್ಬಿಣಾಂಶ, ಜಿಂಕ್ ಪ್ರಮಾಣ ಅಗಾಧವಾಗಿರುತ್ತದೆ. ಹೀಗಾಗಿ ನೀವು ಸಸ್ಯಾಹಾರಿ ಅಲ್ಲದೇ ಹೋದರೆ ಖಂಡಿತವಾಗಿಯೂ ಬೇಸಿಗೆಯಲ್ಲಿ ಮೀನನ್ನು ತಪ್ಪದೇ ಸೇವಿಸಿ. ಮೀನುಗಳಲ್ಲಿ ಒಮೆಗಾ 3 ಅಂಶ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇವುಗಳು ಮಗುವಿನ ಮೆದುಳು ಬೆಳವಣಿಗೆಗೆ ಸಹಕಾರಿಯಾಗಿದೆ.

    ಹಂಚಿಕೊಳ್ಳಲು ಲೇಖನಗಳು