Green Tea While Pregnant: ಗರ್ಭಿಣಿಯರು ಗ್ರೀನ್ ಟೀ ಸೇವಿಸಬಹುದೇ? ಹೊಟ್ಟೆಯಲ್ಲಿರುವ ಮಗುವಿಗೆ ಏನಾದರೂ ಅಪಾಯವಿದೆಯೇ?
ಮಹಿಳೆಯರು ದೇಹದ ತೂಕ ಕಡಿಮೆಯಾಗಬೇಕು ಎನ್ನುವ ಕಾರಣಕ್ಕೆ ಗ್ರೀನ್ ಟೀ ಸೇವಿಸುತ್ತಾರೆ. ಗ್ರೀನ್ ಟೀಯಲ್ಲಿರುವ ಹಲವು ಔಷಧೀಯ ಗುಣಗಳಿಂದಲೂ ಸೇವಿಸುವವರೂ ಹೆಚ್ಚು. ಆದರೆ, ಗರ್ಭಿಣಿಯರು ಗ್ರೀನ್ ಟೀ ಸೇವಿಸಬಹುದೇ? ಸೇವಿಸಬಾರದೇ? ಎನ್ನುವ ಸಂದೇಹ ಹಲವರಲ್ಲಿ ಇರಬಹುದು.
ಯುವತಿಯರು, ಮಹಿಳೆಯರಿಗೆ ಗ್ರೀನ್ ಟೀ ಸೇವನೆಯೆಂದರೆ ಅಚ್ಚುಮೆಚ್ಚು. ಮುಖ್ಯವಾಗಿ ಫಿಟ್ನೆಸ್, ಬೊಜ್ಜು ಕರಗುತ್ತದೆ ಎಂದು ಗ್ರೀನ್ ಟೀ ಸೇವಿಸುವವರು ಹೆಚ್ಚು. ದಿನದಲ್ಲಿ ಹಲವು ಲೋಟ ಗ್ರೀನ್ ಟೀ ಕುಡಿದು ಫಿಟ್ ಆಗಿರಲು ಬಯಸುತ್ತಾರೆ. ದೇಹದ ತೂಕ ಕಡಿಮೆಯಾಗಬೇಕು ಎನ್ನುವ ಕಾರಣಕ್ಕೆ ಗ್ರೀನ್ ಟೀ ಸೇವಿಸುತ್ತಾರೆ. ಗ್ರೀನ್ ಟೀಯಲ್ಲಿರುವ ಹಲವು ಔಷಧೀಯ ಗುಣಗಳಿಂದಲೂ ಸೇವಿಸುವವರೂ ಹೆಚ್ಚು. ಆದರೆ, ಗರ್ಭಿಣಿಯರು ಗ್ರೀನ್ ಟೀ ಸೇವಿಸಬಹುದೇ? ಸೇವಿಸಬಾರದೇ? ಎನ್ನುವ ಸಂದೇಹ ಹಲವರಲ್ಲಿ ಇರಬಹುದು.
ಸಂಶೋಧನೆಗಳ ಪ್ರಕಾರ ಗ್ರೀನ್ ಟೀ ನಲ್ಲಿ ಕೆಫಿನ್ ಅಂಶ ಇರುವುದರಿಂದ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು ಎಂದು ಸಂಶೋಧನೆಗಳು ಹೇಳಿವೆ. ಒಂದು ದಿನಕ್ಕೆ ಒಬ್ಬ ಗರ್ಭಿಣಿ ಮಹಿಳೆ ಸುಮಾರು 200 ಮಿಲಿಗ್ರಾಂ ಕೆಫಿನ್ ಅಂಶ ಸೇವಿಸಬಹುದು ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಕೆಫಿನ್ ಅಂಶ ಹೊಂದಿದ ಯಾವುದೇ ಆಹಾರ ಪದಾರ್ಥಗಳನ್ನು ಇಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕು. ಅಂದರೆ ಸರಿಸುಮಾರು ಒಂದು ದಿನಕ್ಕೆ ಹೆಚ್ಚೆಂದರೆ ಎರಡು ಕಪ್ ಗ್ರೀನ್ ಟೀ ಕುಡಿಯಬಹುದು. ಹೀಗಾಗಿ, ಇತರೆ ಸಮಯದಂತೆ ಗರ್ಭ ಧರಿಸಿದ ಸಮಯದಲ್ಲಿ ಅತಿಯಾದ ಗ್ರೀನ್ ಟೀ ಸೇವನೆ ಬೇಡ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗ್ರೀನ್ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದೆ. ಆರೋಗ್ಯಕಾರಿ ಪಾನೀಯವಾಗಿದ್ದರೂ ಗರ್ಭಿಣಿಯರು ಹೆಚ್ಚು ಕುಡಿಯಬಾರದು. ಗ್ರೀನ್ ಟೀಯನ್ನು ಕ್ಯಾಮೆಲಿಯಾ ಸೈನೆನ್ಸಿಸ್ ಸಸ್ಯದಿಂದ ಪಡೆಯಲಾಗುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ. ಇದು ಆರೋಗ್ಯ ಪಾನೀಯವಾಗಿದೆ. ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ. ಕೆಲವೊಮ್ಮೆ ಹಸಿರು ಚಹಾವು ದೇಹದಲ್ಲಿ ಫೋಲಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಗರ್ಭ ಧರಿಸಿದ ಮೊದಲ ಮೂರು ತಿಂಗಳು ಗ್ರೀನ್ ಟೀ ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು. ಮೂರನೇ ತ್ರೈಮಾಸಿಕದಲ್ಲಿ ಗ್ರೀನ್ ಚಹ ಸೇವಿಸಬಹುದು. ಆದರೆ, ಗ್ರೀನ್ ಟೀಯಲ್ಲಿ ಕಾಫಿಗಿಂತ ಕಡಿಮೆ ಕೆಫಿನ್ ಇದೆ.
ಆರೋಗ್ಯ ಸಮಸ್ಯೆಗಳು
ಗರ್ಭ ಧರಿಸಿದ ಸಮಯದಲ್ಲಿ ಮಹಿಳೆಯರಲ್ಲಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ತೊಂದರೆಗಳು ಆಗಬಾರದು. ಈ ಸಮಯದಲ್ಲಿ ಗರ್ಭಿಣಿಯರಲ್ಲಿ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಕೆಫಿನ್ ಅಂಶವಿರುವ ಪಾನೀಯದಿಂದ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು.
ಗರ್ಭಿಣಿಯರು ಆಸೆಯ ಕಾರಣಕ್ಕೆ ಯಾವಾಗಾದರೊಮ್ಮೆ ತುಸು ಗ್ರೀನ್ ಟೀ ಸೇವಿಸಬಹುದು. ಅತಿಯಾದ, ನಿಯಮಿತ ಗ್ರೀನ್ ಟೀ ಸೇವನೆ ಬೇಡ ಎಂದು ತಜ್ಞರು ಹೇಳಿದ್ದಾರೆ. ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರಿಗೆ ಮೆಟಬಾಲಿಸಂ ಪ್ರಕ್ರಿಯೆ ಮೊದಲೇ ಚುರುಕಾಗಿರುತ್ತದೆ. ಆದರೆ ಹೆಚ್ಚಾಗಿ ಕೆಫಿನ್ ಅಂಶ ಹೊಂದಿರುವ ಚಹಾ ಸೇವನೆ ಮಾಡುವುದರಿಂದ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ದೇಹದಲ್ಲಿ ಸಾಕಷ್ಟು ಹಾರ್ಮೋನುಗಳ ಬದಲಾವಣೆ ಉಂಟಾಗುವುದು, ಜೊತೆಗೆ ಮಾನಸಿಕವಾಗಿ ಸಾಕಷ್ಟು ಬದಲಾವಣೆ ಕಂಡುಬರುವುದು ಆಗುವುದರಿಂದ ಆರೋಗ್ಯದ ಸಮಸ್ಯೆಗಳು ತೀವ್ರವಾಗಲಿವೆ ಎಂದು ತಜ್ಞರು ಹೇಳಿದ್ದಾರೆ.
ಗ್ರೀನ್ ಟೀಯಿಂದ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಿದೆಯೇ?
ಗರ್ಭಿಣಿಯರು ಸೇವಿಸುವ ಆಹಾರದ ಅಂಶಗಳು ಹೊಟ್ಟೆಯಲ್ಲಿರುವ ಭ್ರೂಣ, ಮಗುವಿಗೂ ಸೇರುತ್ತದೆ. ಹೀಗಾಗಿ, ಸೇವಿಸುವ ಆಹಾರ, ಪಾನೀಯಗಳ ಕುರಿತು ಗರ್ಭಿಣಿಯರು ಎಚ್ಚರಿಕೆವಹಿಸಬೇಕು. ಗರ್ಭಿಣಿ ಮಹಿಳೆಯರು ಸೇವಿಸುವ ಆಹಾರದಲ್ಲಿ ಕಂಡುಬರುವ ಫೋಲಿಕ್ ಆಮ್ಲವನ್ನು ಆಕೆಯ ದೇಹ ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗದೆ ಹುಟ್ಟುವ ಮಗುವಿನ ನರಮಂಡಲದ ಸಮಸ್ಯೆ ಎದುರಾಗುತ್ತದೆ.
ಇದರ ಪ್ರಭಾವದಿಂದ ಹುಟ್ಟುವ ಮಗುವಿಗೆ ಬೆನ್ನುಹುರಿಯ ಸಮಸ್ಯೆ ಹುಟ್ಟಿನಿಂದಲೇ ಕಾಡುತ್ತದೆ ಎನ್ನಲಾಗಿದೆ.
ಗರ್ಭಿಣಿ ಮಹಿಳೆ ಗರ್ಭಾವಸ್ಥೆಗೆ ತಲುಪಿದ ಮೊದಲ 12 ವಾರಗಳಲ್ಲಿ ಫೋಲಿಕ್ ಆಮ್ಲದ ಪ್ರಭಾವ ತುಂಬಬೇಕಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಅತಿಯಾಗಿ ಗ್ರೀನ್ ಟೀ ಸೇವನೆ ಮಾಡಲು ಹೋದರೆ ಈ ಒಂದು ಅಗತ್ಯವಾದ ವಿಟಮಿನ್ ಅಂಶ ಕೈ ತಪ್ಪಿಹೋಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.