logo
ಕನ್ನಡ ಸುದ್ದಿ  /  ಜೀವನಶೈಲಿ  /  Teachers’ Day 2022: ಶಿಕ್ಷಕರ ದಿನದ ಶುಭಾಶಯ ಹೇಳುವ ಮುನ್ನ ಈ ದಿನದ ಹಿನ್ನೆಲೆ, ಮಹತ್ವ ತಿಳಿದುಕೊಳ್ಳಿ

Teachers’ Day 2022: ಶಿಕ್ಷಕರ ದಿನದ ಶುಭಾಶಯ ಹೇಳುವ ಮುನ್ನ ಈ ದಿನದ ಹಿನ್ನೆಲೆ, ಮಹತ್ವ ತಿಳಿದುಕೊಳ್ಳಿ

Praveen Chandra B HT Kannada

Sep 04, 2024 03:15 PM IST

google News

Teachers’ Day 2022: ಶಿಕ್ಷಕರ ದಿನದ ಶುಭಾಶಯ ಈ ದಿನದ ಹಿನ್ನೆಲೆ, ಮಹತ್ವ ತಿಳಿಯಿರಿ

    • ಸೆಪ್ಟೆಂಬರ್‌ 5 ಶಿಕ್ಷಕರ ದಿನ. ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ಜನ್ಮದಿನದಂದು ಭಾರತದಲ್ಲಿ ಶಿಕ್ಷಕರ ದಿನ ಆಚರಿಸಲಾಗುತ್ತದೆ. ಹಲವು ಸಂವತ್ಸರ ಕಳೆದರೂ ಇಂದಿಗೂ ಆದರ್ಶ ಶಿಕ್ಷಕರೆಂದರೆ ರಾಧಾಕೃಷ್ಣನ್‌ ಅವರೇ ನೆನಪಾಗುತ್ತಾರೆ. ಶಿಕ್ಷಕರ ದಿನದ ಶುಭಾಶಯವನ್ನು ಹೇಳುವ ಮೊದಲು ಈ ದಿನದ ಮಹತ್ವ, ಹಿನ್ನೆಲೆ ಇತ್ಯಾದಿಗಳನ್ನು ತಿಳಿದಿರಬೇಕು.
Teachers’ Day 2022: ಶಿಕ್ಷಕರ ದಿನದ ಶುಭಾಶಯ ಈ ದಿನದ ಹಿನ್ನೆಲೆ, ಮಹತ್ವ ತಿಳಿಯಿರಿ
Teachers’ Day 2022: ಶಿಕ್ಷಕರ ದಿನದ ಶುಭಾಶಯ ಈ ದಿನದ ಹಿನ್ನೆಲೆ, ಮಹತ್ವ ತಿಳಿಯಿರಿ

ಸೆಪೆಂಬರ್‌ 5 ಶಿಕ್ಷಕರ ದಿನ. ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ಜನ್ಮದಿನದಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಹಲವು ಸಂವತ್ಸರ ಕಳೆದರೂ ಇಂದಿಗೂ ಆದರ್ಶ ಶಿಕ್ಷಕರೆಂದರೆ ಸರ್ವಪಳ್ಳಿ ರಾಧಾಕೃಷ್ಣನ್‌ ಅವರೇ ನೆನಪಾಗುತ್ತಾರೆ. ಶಿಕ್ಷಕರ ದಿನದ ಶುಭಾಶಯವನ್ನು ಹೇಳುವ ಮೊದಲು ಈ ದಿನದ ಮಹತ್ವ, ಹಿನ್ನೆಲೆ ಇತ್ಯಾದಿಗಳನ್ನು ತಿಳಿದಿರಬೇಕು.

ವಿಶ್ವ ಶಿಕ್ಷಕರ ದಿನ (World Teachers Day)

ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿವರ್ಷ ಅಕ್ಟೋಬರ್‌ 5ರಂದು ವಿಶ್ವಶಿಕ್ಷಕರ ದಿನವನ್ನು ಆಚರಿಸಬೇಕೆಂದು ಯುನೆಸ್ಕೊ ಕರೆ ನೀಡಿದೆ. 1966 ಅಕ್ಟೋಬರ್‌ 5ರಂದು ಯುನೆಸ್ಕೊ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ಅಕ್ಟೋಬರ್‌ 5ರಿಂದ ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಭಾರತದಲ್ಲಿ ಶಿಕ್ಷಕರ ದಿನದ ಹಿನ್ನೆಲೆ (Teachers’ Day history)

ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ , 1962-664 ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. 1962ರಲ್ಲಿ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್‌ 5ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮಶಿಕ್ಷಕ ಹುದ್ದೆಯನ್ನು ಅಪಾರವಾಗಿ ಗೌರವಿಸುತ್ತಿದ್ದ ರಾಧಾಕೃಷ್ಣನ್‌ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ ಸೆಪ್ಟೆಂಬರ್‌ 5ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ ಇವರ ಜನ್ಮದಿನವಾದ ಸೆಪ್ಟೆಂಬರ್‌ 5ರಂದು ಪ್ರತಿವರ್ಷ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಬಾಲ್ಯ, ವಿದ್ಯಾಭ್ಯಾಸ

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್‌ 5, 1888 ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್‌ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ , ತಾಯಿ ಸೀತಮ್ಮ ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು.

ವಿಶೇಷವೆಂದರೆ, ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಓದಿದ್ದ ಸ್ಕಾಲರ್‌ಶಿಪ್‌ ಹಣದಲ್ಲಿ. ವಿದ್ಯಾರ್ಥಿ ವೇತನದ ನೆರವಿನಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷ ಣವನ್ನು ಮುಗಿಸಿದ ರಾಧಾಕೃಷ್ಣನ್‌ ಮದ್ರಾಸ್‌ (ಈಗಿನ ಚೆನ್ನೈ) ಕ್ರಿಶ್ಚಿಯನ್‌ ಕಾಲೇಜ್‌ನಲ್ಲಿ ತತ್ವಜ್ಞಾನ ವಿಷಯದ ಮೇಲೆ ಬಿ.ಎ ಮತ್ತು ಎಂ.ಎ. ಪದವಿ ಮಾಡಿದರು. ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್‌ ಮಂಡಿಸಿದ ಪ್ರಬಂಧ ದಿ ಎಥಿಕ್ಸ್‌ ಆಫ್‌ ವೇದಾಂತ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು.

ಆದರ್ಶ ಶಿಕ್ಷಕ

1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದಿ ಫಿಲಾಸಫಿ ಆಫ್‌ ರವೀಂದ್ರನಾಥ್‌ ಠ್ಯಾಗೋರ್‌ ಎಂಬ ಮೊದಲ ಪುಸ್ತಕ ಬರೆದರು.ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು ರಾಧಾಕ್ರಿಶ್ಣಯ್ಯಎಂದು ಹಾಕುತಿದ್ದರು,ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ. 1931 ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್‌ , ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷ ಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. 1939 ರಲ್ಲಿ ಬನಾರಸ್‌ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ , 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷ ಣ ಆಯೋಗದ ಮುಖ್ಯಸ್ಥರಾಗಿ, 1949 ರಲ್ಲಿ ಸೋವಿಯತ್‌ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್‌ , ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ಭಾರತದ ಮೊದಲ ಉಪರಾಷ್ಟ್ರಪತಿ

1952 ರಲ್ಲಿ ಭಾರತದ ಶಿಕ್ಷ ಕನೊಬ್ಬ ಮೊತ್ತಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ರಾಧಾಕೃಷ್ಣನ್‌ , ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಗಮನ ಸೆಳೆಯುತ್ತಿದ್ದರು. ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ 1954 ರಲ್ಲಿ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಡಾ. ರಾಜೇಂದ್ರ ಪ್ರಸಾದ್‌ ನಂತರ, 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್‌, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು.

ವಿಶ್ವ ಶಿಕ್ಷಕರ ದಿನದ ಕುರಿತು ಇನ್ನಷ್ಟು ಮಾಹಿತಿ

ವರ್ಲ್ಡ್‌ ಟೀಚರ್ಸ್‌ ಡೇ ಅಥವಾ ಇಂಟರ್‌ನ್ಯಾಷನಲ್‌ ಟೀಚರ್ಸ್‌ ಡೇಯನ್ನು ಪ್ರತಿವರ್ಷ ಅಕ್ಟೋಬರ್‌ 5ರಂದು ಆಚರಿಸಲಾಗುತ್ತದೆ. ಮೊದಲ ಬಾರಿಗೆ 1994ರಲ್ಲಿ ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಜಗತ್ತಿನಾದ್ಯಂತ ಇರುವ ಶಿಕ್ಷಕ-ಶಿಕ್ಷಕಿಯರ ಸೇವೆಯನ್ನು ಗುರುತಿಸುವ ಸಲುವಾಗಿ ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ವಿಶ್ವ ಶಿಕ್ಷಕರ ದಿನದ ಥೀಮ್‌ (The theme of World Teachers' Day 2022 is 'Teachers: leading in crisis, reimagining the future'): ಅಂದರೆ, ಶಿಕ್ಷಕರು- ಬಿಕ್ಕಟ್ಟಿನಲ್ಲೂ ಮುನ್ನಡೆಸುವವರು, ಭವಿಷ್ಯವನ್ನು ಮರುರೂಪಿಸುವವರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ