Teachers Day Fun Games: ಶಿಕ್ಷಕರ ದಿನಕ್ಕೆ ಸಂಭ್ರಮದ ಆಟ ಮತ್ತು ಚಟುವಟಿಕೆಗಳು, ಇವುಗಳನ್ನೊಮ್ಮೆ ಟ್ರೈ ಮಾಡಿ
Sep 04, 2024 03:17 PM IST
ಸಾಂದರ್ಭಿಕ ಚಿತ್ರ (HT Photo)
- Happy Teachers Day 2022: ಸೆಪ್ಟೆಂಬರ್ 5ರಂದು ಶಿಕ್ಷಕರ ದಿನದಂದು ಮಕ್ಕಳು-ವಿದ್ಯಾರ್ಥಿಗಳು ಖುಷಿಖುಷಿಯಾಗಿರಲು ಪ್ರತಿಶಾಲೆಗಳಲ್ಲಿಯೂ ವಿವಿಧ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಭಾಷಣ ಸ್ಪರ್ಧೆ ಇತ್ಯಾದಿಗಳ ಜತೆಗೆ ಫನ್ ಚಟುವಟಿಕೆಗಳೂ ಇರುತ್ತವೆ.
Happy Teachers Day 2022: ಮೊದಲಿಗೆ ದೇಶದ ಭವಿಷ್ಯ ಬರೆಯುವ ಹೆಮ್ಮೆಯ ಶಿಕ್ಷಕ ಶಿಕ್ಷಕಿಯರಿಗೆ ಶಿಕ್ಷಕರ ದಿನದ ಶುಭಾಶಯಗಳು. ನಾಳೆ ಶಿಕ್ಷಕರ ದಿನದಂದು ಪ್ರತಿಶಾಲೆಗಳಲ್ಲಿಯೂ ಭಿನ್ನವಿಭಿನ್ನ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಸೆಪ್ಟೆಂಬರ್ 5ರಂದು ಶಿಕ್ಷಕರ ದಿನದಂದು ಮಕ್ಕಳು-ವಿದ್ಯಾರ್ಥಿಗಳು ಖುಷಿಖುಷಿಯಾಗಿರಲು ಪ್ರತಿಶಾಲೆಗಳಲ್ಲಿಯೂ ವಿವಿಧ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಭಾಷಣ ಸ್ಪರ್ಧೆ ಇತ್ಯಾದಿಗಳ ಜತೆಗೆ (ಕನ್ನಡದಲ್ಲಿ ಶಿಕ್ಷಕರ ದಿನದ ಭಾಷಣ ಇಲ್ಲಿದೆ) ಫನ್ ಚಟುವಟಿಕೆಗಳೂ ಇರುತ್ತವೆ.
ಭಾರತದ ಎರರಡನೇ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಆಚರಿಸಲು ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿದ್ದರು. ಅವರು ಆದರ್ಶ ಶಿಕ್ಷಕರಾಗಿದ್ದರು. ಈ ದಿನದಂದು ನಿಮ್ಮ ಶಾಲೆಯಲ್ಲಿ ಅಥವಾ ಇತರ ಕಡೆ ಶಿಕ್ಷಕರ ದಿನದಂದು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಈ ಮುಂದಿನ ಫನ್ ಗೇಮ್ಸ್ ಮತ್ತು ಚಟುವಟಿಕೆಗಳನ್ನು ಇಡಬಹುದು.
ಸ್ಟೇಜ್ ಕಾರ್ಯಕ್ರಮ: ಬಹುತೇಕ ಶಾಲೆಕಾಲೇಜುಗಳಲ್ಲಿ ಮಕ್ಕಳಿಗೆ ಮತ್ತು ಶಿಕ್ಷಕ ಶಿಕ್ಷಕಿಯರಿಗೆ ನಾಳೆ ಸ್ಟೇಜ್ ಕಾರ್ಯಕ್ರಮ ಇದ್ದೇ ಇರುತ್ತದೆ. ಮಕ್ಕಳಿಗೆ ಭಾಷಣ, ಹಾಡು, ನೃತ್ಯ ಇತ್ಯಾದಿಗಳು ಇರುತ್ತವೆ. ಶಿಕ್ಷಕ-ಶಿಕ್ಷಕಿಯರೂ ಹಾಡು, ನೃತ್ಯದ ಮೂಲಕ ಮಕ್ಕಳನ್ನು ರಂಜಿಸಬಹುದು. ಹಾಡು, ನೃತ್ಯ ಮಾತ್ರವಲ್ಲದೆ ಮಿಮಿಕ್ರಿ, ಮಕ್ಕಳೊಂದಿಗೆ ಸಂಗೀತ ಕುರ್ಚಿ, ಹಾಡಿನ ಬಂಡಿ ಇತ್ಯಾದಿ ಕಾರ್ಯಕ್ರಮಗಳನ್ನೂ ಮಾಡಬಹುದು.
ಟೀಚರ್ಸ್‌ಗೆ ಫನ್ ಆಟಗಳು: ಶಿಕ್ಷಕರ ದಿನದಂದು ಮಕ್ಕಳು ಮತ್ತು ಶಿಕ್ಷಕರಿಗಾಗಿ ಫನ್ ಗೇಮ್‌ಗಳನ್ನು ಇಡಬಹುದು. ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳ ಮೂಲಕ ಮಕ್ಕಳು ಮತ್ತು ಶಿಕ್ಷಕ ಶಿಕ್ಷಕಿಯರು ಶಿಕ್ಷಕರ ದಿನವನ್ನು ಅರ್ಥಪೂರ್ಣವಾಗಿ ಸಂತೋಷದಿಂದ ಕಳೆಯಬಹುದು. ಫುಟ್‌ಬಾಲ್ ಮ್ಯಾಚ್, ಕ್ಯಾರಮ್, ಬಾಸ್ಕೆಟ್‌ಬಾಲ್, ಮ್ಯೂಸಿಕಲ್ ಚೇರ್ ಇತ್ಯಾದಿ ಫನ್ ಆಟಗಳ ಮೂಲಕ ಎಂಜಾಯ್ ಮಾಡಬಹುದು.
ಪಿಕ್‌ನಿಕ್‌ಗೆ ತೆರಳುವುದು: ಶಿಕ್ಷಕರ ದಿನದಂದು ಮಕ್ಕಳೊಂದಿಗೆ ಹತ್ತಿರದ ಯಾವುದಾದರೂ ಸುಂದರ ತಾಣಗಳಿಗೆ ಪಿಕ್‌ನಿಕ್‌ಗೆ ಹೋಗಬಹುದು. ಈ ಮೂಲಕ ಮಕ್ಕಳೊಂದಿಗೆ ಶಿಕ್ಷಕರಿಗೆ, ಶಿಕ್ಷಕರೊಂದಿಗೆ ಮಕ್ಕಳಿಗೆ ಬೆರೆಯಲು ಉತ್ತಮ ವಾತಾವರಣ ದೊರಕುತ್ತದೆ. ಈಗ ಮಳೆಗಾಲವಾಗಿರುವುದರಿಂದ ಪಿಕ್‌ನಿಕ್‌ಗೆ ಹೋಗುವಾಗ ತುಸು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.
ಒಂದೇ ಟೀಮ್: ಟೀಚರ್ಸ್ ಮತ್ತು ಮಕ್ಕಳು ಒಟ್ಟಾಗಿ ಆಡಬಹುದು. ಅಂದ್ರೆ ಮಕ್ಕಳ ಜತೆ ಶಿಕ್ಷಕರು ಸೇರಿ ಒಂದೇ ಟೀಮ್ ಆಗಿ ಕಾರ್ಯಕ್ರಮ ನೀಡಬಹುದು, ಆಟವಾಡಬಹುದು.
ಜ್ಞಾನ ಹೆಚ್ಚಳ: ಈ ದಿನ ಫನ್ ಜತೆಗೆ ಜ್ಞಾನ ಹೆಚ್ಚಿಸುವಂತಹ ಚಟುವಟಿಕೆಯಲ್ಲಿಯೂ ತೊಡಗಬಹುದು. ಅಂದರೆ, ಶಿಕ್ಷಕರ ದಿನದ ಮಹತ್ವ ಸಾರುವ ವಿಷಯಗಳ ಕುರಿತು ಭಾಷಣ ಮಾಡುವುದು, ಮಕ್ಕಳಲ್ಲಿ ಪ್ರಶ್ನೆ ಕೇಳುವುದು, ಸರಿಯುತ್ತರ ನೀಡಿದವರಿಗೆ ಬಹುಮಾನ ನೀಡುವುದು ಇತ್ಯಾದಿ ಚಟುವಟಿಕೆ ಮಾಡಬಹುದು.
ಚರ್ಚೆ: ಮಕ್ಕಳಲ್ಲಿ ಸಂವಹನ ಕಲೆ, ಚರ್ಚಾ ಕಲೆ ಉತ್ತಮ ಪಡಿಸಲು ಶಿಕ್ಷಕರ ದಿನದ ಕುರಿತು ಚರ್ಚೆಗಳನ್ನು ಏರ್ಪಡಿಸಬಹುದು. ಈಗಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡಲು, ಚರ್ಚಿಸಲು ಪ್ರೇರೇಪಿಸಬಹುದು.
ಒಟ್ಟಾರೆ, ಶಿಕ್ಷಕರ ದಿನವು ಫನ್ ಮತ್ತು ಚಟುವಟಿಕೆಗಳಿಗೆ ಸೂಕ್ತವಾದ ದಿನವಾಗಿದೆ.