logo
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾಮರಾ ಪ್ರಿಯರಿಗೆ ಬಂಪರ್ ಸುದ್ದಿ; ಒಂದೇ ದಿನ ಬರೋಬ್ಬರಿ 108mp ಕ್ಯಾಮರಾದ 2 ಫೋನ್ ಬಿಡುಗಡೆ

ಕ್ಯಾಮರಾ ಪ್ರಿಯರಿಗೆ ಬಂಪರ್ ಸುದ್ದಿ; ಒಂದೇ ದಿನ ಬರೋಬ್ಬರಿ 108MP ಕ್ಯಾಮರಾದ 2 ಫೋನ್ ಬಿಡುಗಡೆ

Jayaraj HT Kannada

Jul 11, 2024 04:00 PM IST

google News

ಕ್ಯಾಮರಾ ಪ್ರಿಯರಿಗೆ ಬಂಪರ್ ಸುದ್ದಿ: ಒಂದೇ ದಿನ ಬರೋಬ್ಬರಿ 108MP ಕ್ಯಾಮರಾದ 2 ಫೋನ್ ಬಿಡುಗಡೆ

    • ಕ್ಯಾಮೆರಾ ಪ್ರಿಯರಿಗಾಗಿ ಭಾರತದಲ್ಲಿ ಒಂದೇ ದಿನ ಎರಡು ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಆಗಿದೆ. ಅಚ್ಚರಿ ಎಂದರೆ ಈ ಎರಡೂ ಫೋನ್ ಬರೋಬ್ಬರಿ 108 ಮೆಗಾ ಫಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. ಶವೋಮಿ ಕಂಪನಿಯ ರೆಡ್ಮಿ 12 5G ಮತ್ತು ಟೆಕ್ನೋ ಸ್ಪಾರ್ಕ್ 20 ಪ್ರೊ 5ಜಿ ಫೋನುಗಳು ರಿಲೀಸ್ ಆಗಿವೆ.
ಕ್ಯಾಮರಾ ಪ್ರಿಯರಿಗೆ ಬಂಪರ್ ಸುದ್ದಿ: ಒಂದೇ ದಿನ ಬರೋಬ್ಬರಿ 108MP ಕ್ಯಾಮರಾದ 2 ಫೋನ್ ಬಿಡುಗಡೆ
ಕ್ಯಾಮರಾ ಪ್ರಿಯರಿಗೆ ಬಂಪರ್ ಸುದ್ದಿ: ಒಂದೇ ದಿನ ಬರೋಬ್ಬರಿ 108MP ಕ್ಯಾಮರಾದ 2 ಫೋನ್ ಬಿಡುಗಡೆ

ಭಾರತದಲ್ಲಿ ಕ್ಯಾಮೆರಾ ಫೋನ್‌ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಚ್ಚರಿ ಎಂದರೆ ಇಂದು ಬಜೆಟ್ ಬೆಲೆಗೆ ಆಕರ್ಷಕ ಕ್ಯಾಮೆರಾ ಫೀಚರ್​ಗಳ ಫೋನ್ ಭಾರತದಲ್ಲಿವೆ. ಅದರಂತೆ ಇದೀಗ ದೇಶದಲ್ಲಿ ಬರೋಬ್ಬರಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಎರಡು ಸ್ಮಾರ್ಟ್​ಫೋನ್​ಗಳು ಒಂದೇ ದಿನ ಅನಾವರಣಗೊಂಡಿದೆ. ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು 3x ಇನ್-ಸೆನ್ಸರ್ ಜೂಮ್‌ನೊಂದಿಗೆ ರೆಡ್ಮಿ 13 5G ಫೋನ್‌ ಅನ್ನು ಬಿಡುಗಡೆ ಮಾಡಿದೆ. ಅತ್ತ ಟೆಕ್ನೋ ಕಂಪನಿ 108-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಜೊತೆಗೆ ಟೆಕ್ನೋ ಸ್ಪಾರ್ಕ್ 20 ಪ್ರೊ 5ಜಿ ಅನ್ನು ರಿಲೀಸ್ ಮಾಡಿದೆ. ಈ ಎರಡೂ ಫೋನುಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ರೆಡ್ಮಿ 13 5G ಬೆಲೆ, ಲಭ್ಯತೆ

ಭಾರತದಲ್ಲಿ ರೆಡ್ಮಿ 13 5G ಯ 6GB RAM + 128GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 13,999 ರೂಪಾಯಿ ಇದೆ. 8GB + 128GB ಮೆಮೊರಿ ರೂಪಾಂತರದ ಬೆಲೆ 15,499 ರೂಪಾಯಿ ಆಗಿದೆ. ಈ ಫೋನ್ ಹವಾಯಿಯನ್ ಬ್ಲೂ, ಬ್ಲ್ಯಾಕ್ ಡೈಮಂಡ್ ಮತ್ತು ಆರ್ಕಿಡ್ ಪಿಂಕ್ ಬಣ್ಣಗಳಲ್ಲಿ ಲಭ್ಯವಿದೆ. ಇದು ಜುಲೈ 12 ರಂದು ಮಧ್ಯಾಹ್ನ 12 ಗಂಟೆಗೆ ಇ-ಕಾಮರ್ಸ್ ತಾಣವಾದ ಅಮೆಜಾನ್, ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಪ್ರಾರಂಭವಾಗುತ್ತದೆ.

ರೆಡ್ಮಿ 13 5G ಫೀಚರ್ಸ್

ರೆಡ್ಮಿ 13 5G ಆಂಡ್ರಾಯ್ಡ್ 14 ಆಧಾರಿತ ಶವೋಮಿಯ HyperOS ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 6.79-ಇಂಚಿನ ಪೂರ್ಣ-HD+ ಎಲ್​ಸಿಡಿ ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಕ್ವಾಲ್‌ಕಾಮ್‌ನಿಂದ 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 4 Gen 2 AE ಪ್ರೊಸೆಸರ್​ನಿಂದ ಚಾಲಿತವಾಗಿದೆ.

ಫೋಟೋಗಳು ಮತ್ತು ವೀಡಿಯೊಗಳಿಗಾಗಿ, ರೆಡ್ಮಿ 13 5G ಸ್ಯಾಮ್‌ಸಂಗ್ ISOCELL HM6 ಸಂವೇದಕ ಮತ್ತು f/1.75 ಅಪರ್ಚರ್ ಜೊತೆಗೆ 108-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು 3x ಇನ್-ಸೆನ್ಸರ್ ಜೂಮ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಕೂಡ ಇದೆ. ವಿಡಿಯೋ ಚಾಟ್‌ ಮತ್ತು ಸೆಲ್ಫಿಗಳಿಗಾಗಿ, 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಈ ಹ್ಯಾಂಡ್‌ಸೆಟ್‌ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.4, GPS ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. 33W ನಲ್ಲಿ 5,030mAh ಬ್ಯಾಟರಿಯನ್ನು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಸಹ ಹೊಂದಿದೆ.

ಟೆಕ್ನೋ ಸ್ಪಾರ್ಕ್ 20 ಪ್ರೊ 5G ಬೆಲೆ, ಲಭ್ಯತೆ

ಭಾರತದಲ್ಲಿ ಟೆಕ್ನೋ ಸ್ಪಾರ್ಕ್ 20 ಪ್ರೊ Pro 5Gಯ 8GB RAM ಮತ್ತು 128GB ಶೇಖರಣಾ ರೂಪಾಂತರಕ್ಕೆ 15,999 ರೂಪಾಯಿ ನಿಗದಿ ಮಾಡಲಾಗಿದೆ. ಅಂತೆಯೆ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 16,999 ಆಗಿದೆ. ಈ ಫೋನ್‌ ಸ್ಟಾರ್ಟ್ರೈಲ್ ಬ್ಲ್ಯಾಕ್ ಮತ್ತು ಗ್ಲೋಸಿ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಜುಲೈ 11 ರಿಂದ ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ಔಟ್‌ಲೆಟ್‌ಗಳಲ್ಲಿ ಲಭ್ಯವಿರುತ್ತದೆ.

ಟೆಕ್ನೋ ಸ್ಪಾರ್ಕ್ 20 ಪ್ರೊ 5G ಫೀಚರ್ಸ್

ಟೆಕ್ನೋ ಸ್ಪಾರ್ಕ್ 20 ಪ್ರೊ 5G 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ ಪೂರ್ಣ-HD+ (2,460x1,080 ಪಿಕ್ಸೆಲ್‌ಗಳು) IPS LCD ಡಿಸ್​ಪ್ಲೇ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ HiOS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು f/1.8 ದ್ಯುತಿರಂಧ್ರದೊಂದಿಗೆ, f/2.4 ದ್ಯುತಿರಂಧ್ರದೊಂದಿಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಒಳಗೊಂಡಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 30fps ಜೊತೆಗೆ 1440p ವರೆಗೆ ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಮುಂಭಾಗದಲ್ಲಿ, 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

33W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದು 10W ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಸಂಪರ್ಕಕ್ಕಾಗಿ 4G LTE, 10 5G ಬ್ಯಾಂಡ್‌ಗಳು, ವೈಫೈ 5, ಬ್ಲೂಟೂತ್ 5.3, GPS ಮತ್ತು FM ರೇಡಿಯೊವನ್ನು ಬೆಂಬಲಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ