ಐಫೋನ್ ಮತ್ತು ಆಂಡ್ಯಾಯ್ಡ್ ಫೋನ್‌ನಲ್ಲಿ 5G ಆಫ್ ಮಾಡುವುದು ಹೇಗೆ? ಹಂತವಾರು ವಿವರ ಇಲ್ಲಿದೆ
- 5G ಆಯ್ಕೆಯಲ್ಲಿ ನಿಮಗೆ ಹೆಚ್ಚಿನ ವೇಗದ ಇಂಟರ್ನೆಟ್ ಸಿಗುತ್ತದೆ. ಆದರೆ ಕೆಲವೊಮ್ಮೆ ನಿಮಗೆ ಇಂಟರ್ನೆಟ್ ಉಳಿಸಲು ಅಥವಾ ಬೇರೆ ಬೇರೆ ಕಾರಣಗಳಿಂದ 5ಜಿ ಇಂಟರ್ನೆಟ್ ಬೇಡ ಎಂದು ಅನಿಸಬಹುದು. ನಿಮ್ಮ ಆಂಡ್ರಾಯ್ಡ್ ಮತ್ತು ಐಫೋನ್‌ನಲ್ಲಿ ನೀವು 5G ಆಫ್ ಮಾಡಲು ಈ ಕ್ರಮಗಳನ್ನು ಅನುಸರಿಸಬಹುದು. ಐಫೋನ್ ಹಾಗೂ ಆಂಡ್ರಾಯ್ಡ್‌ಗೆ ಭಿನ್ನ ವಿಧಾನ ನೀಡಲಾಗಿದೆ.

(1 / 7)
ನೀವು iPhone ಬಳಸುತ್ತಿದ್ದರೆ ಅದರಲ್ಲಿ 5G ಅನ್ನು ಆಫ್ ಮಾಡಲು ಭಿನ್ನ ವಿಧಾನಗಳಿವೆ. 5G ಮತ್ತು 4G ವೇಗದಲ್ಲಿ ದೊಡ್ಡ ವ್ಯತ್ಯಾಸಗಳಿಲ್ಲ. ಹೀಗಾಗಿ ಕೆಲವರು 4G ವೇಗವನ್ನು ಆಯ್ಕೆ ಮಾಡುತ್ತಾರೆ. ಐಫೋನ್‌ನಲ್ಲಿ 5G ಅನ್ನು ಆಫ್ ಮಾಡಲು ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.
(2 / 7)
ಹಂತ 1: ನಿಮ್ಮ ಐಫೋನ್‌ನಲ್ಲಿ ಸೆಟ್ಟಿಂಗ್ (Settings) ಅಪ್ಲಿಕೇಶನ್ ತೆರೆಯಿರಿ. ಅದರಲ್ಲಿ ಸೆಲ್ಯುಲಾರ್ (Cellular) ಆಯ್ಕೆ ಕ್ಲಿಕ್ ಮಾಡಿ. ಅದರಲ್ಲಿ ವಾಯ್ಸ್ ಆಂಡ್ ಡೇಟಾ (Voice & Data) ಆಯ್ಕೆ ಮೇಲೆ ಕ್ಲಿಕ್ ಮಾಡಿ.
(3 / 7)
ಹಂತ 2: 5G ಬಳಕೆಯನ್ನು ಆಫ್ ಮಾಡಬೇಕೆಂದರೆ ನೀವು ಇನ್ನೊಂದು ಇಂಟರ್ನೆಟ್ ವೇಗವನ್ನು ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ LTE ಬಟನ್ ಅನ್ನು ಟ್ಯಾಪ್ ಮಾಡಿದರೆ ನಿಮ್ಮ ಕೆಲಸ ಆದಂತೆ.
(5 / 7)
ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ Settings (ಸೆಟ್ಟಿಂಗ್ಸ್) ಓಪನ್ ಮಾಡಿ. ಅದರಲ್ಲಿ Connections (ಕನೆಕ್ಷನ್ಸ್) ಆಯ್ಕೆ ಮೇಲೆ ಕ್ಲಿಕ್ ಮಾಡಿ.
(6 / 7)
'ನೆಟ್‌ವರ್ಕ್ ಮೋಡ್'ನಲ್ಲಿ, ನಿಮಗೆ 5G/LTE/3G/2G, LTE/3G/2G, ಮತ್ತು 2G ಆಯ್ಕೆಗಳು ಕಾಣುತ್ತವೆ. ಈಗ 5G ಅನ್ನು ಸ್ವಿಚ್ ಆಫ್ ಮಾಡಲು, 'LTE/3G/2G' ಅನ್ನು ಆಯ್ಕೆಮಾಡಿ. ಆಗ 5G ಆಫ್ ಆಗುತ್ತದೆ.
ಇತರ ಗ್ಯಾಲರಿಗಳು