logo
ಕನ್ನಡ ಸುದ್ದಿ  /  ಜೀವನಶೈಲಿ  /  Pan 2.0 Card Scam: ಪ್ಯಾನ್‌ 2.0 ಹೆಸರಲ್ಲಿ ಹೀಗೆಲ್ಲ ವಂಚನೆ ನಡೆಯಬಹುದು, ಎಚ್ಚರಿಸಿದ ಸೈಬರ್‌ ತಜ್ಞ ಉದಯ ಶಂಕರ್‌ ಪುರಾಣಿಕ

PAN 2.0 card scam: ಪ್ಯಾನ್‌ 2.0 ಹೆಸರಲ್ಲಿ ಹೀಗೆಲ್ಲ ವಂಚನೆ ನಡೆಯಬಹುದು, ಎಚ್ಚರಿಸಿದ ಸೈಬರ್‌ ತಜ್ಞ ಉದಯ ಶಂಕರ್‌ ಪುರಾಣಿಕ

Praveen Chandra B HT Kannada

Nov 26, 2024 06:09 PM IST

google News

PAN 2.0 card scam: ಪ್ಯಾನ್‌ 2.0 ಹೆಸರಲ್ಲಿ ಹೀಗೆಲ್ಲ ವಂಚನೆ ನಡೆಯಬಹುದು, ಎಚ್ಚರಿಸಿದ ಸೈಬರ್‌ ತಜ್ಞ ಉದಯ ಶಂಕರ್‌ ಪುರಾಣಿಕ

    • PAN 2.0 card scam: ಪ್ಯಾನ್‌ 2.0 ಯೋಜನೆಯ ಹೆಸರಲ್ಲಿ ಸೈಬರ್‌ ವಂಚನೆ ನಡೆಯಬಹುದು ಎಂದು ಸೈಬರ್‌ ತಜ್ಞ ಉದಯ ಶಂಕರ್‌ ಪುರಾಣಿಕ ಎಚ್ಚರಿಸಿದ್ದಾರೆ. ಸೈಬರ್‌ ಅಪರಾಧಿಗಳನ್ನು ನಂಬಿ ಮೋಸ ಹೋಗಬೇಡಿ. ಇಂತಹ ಘಟನೆ ನಡೆದರೆ ತಕ್ಷಣ 1930ಗೆ ಕರೆ ಮಾಡಿ ದೂರು ನೀಡಿ ಅಥವಾ cybercrime.gov.inನಲ್ಲಿ ದೂರು ದಾಖಲಿಸಿ.
PAN 2.0 card scam: ಪ್ಯಾನ್‌ 2.0 ಹೆಸರಲ್ಲಿ ಹೀಗೆಲ್ಲ ವಂಚನೆ ನಡೆಯಬಹುದು, ಎಚ್ಚರಿಸಿದ ಸೈಬರ್‌ ತಜ್ಞ ಉದಯ ಶಂಕರ್‌ ಪುರಾಣಿಕ
PAN 2.0 card scam: ಪ್ಯಾನ್‌ 2.0 ಹೆಸರಲ್ಲಿ ಹೀಗೆಲ್ಲ ವಂಚನೆ ನಡೆಯಬಹುದು, ಎಚ್ಚರಿಸಿದ ಸೈಬರ್‌ ತಜ್ಞ ಉದಯ ಶಂಕರ್‌ ಪುರಾಣಿಕ

PAN 2.0 card scam: ಈಗ ಬಹುತೇಕರು ಪ್ಯಾನ್‌ ಕಾರ್ಡ್‌ ಹೊಂದಿದ್ದಾರೆ. ಇದೇ ಪ್ಯಾನ್‌ ಕಾರ್ಡ್‌ನ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ PAN 2.0 ಯೋಜನೆಗೆ ಕೇಂದ್ರ ಸರಕಾರದ ಸಂಪುಟ ಸಭೆಯು ಅನುಮತಿ ನೀಡಿದೆ. ತೆರಿಗೆದಾರರ ನೋಂದಣಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಈ ಸಂದರ್ಭವನ್ನು ಸೈಬರ್‌ ಅಪರಾಧಿಗಳು ದುರ್ಬಳಕೆ ಮಾಡಿಕೊಳ್ಳವ ಸಾಧ್ಯತೆಯೂ ಇದೆ. ಹೀಗಾಗಿ, ಈ ಕುರಿತು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನಿಮ್ಮ ಈಗಿರುವ ಪ್ಯಾನ್‌ ಕಾರ್ಡ್‌ ಅನ್ನು ಅಪ್‌ಗ್ರೇಡ್‌ ಮಾಡುತ್ತೇವೆ ಎಂದು ಹೇಳುವ ಅಪರಿಚಿತ ಫೋನ್‌ ಕರೆಗಳನ್ನು, ಇಮೇಲ್‌ಗಳನ್ನು ನಂಬಬೇಡಿ. ಆನ್‌ಲೈನ್‌ ವಂಚಕರು ಈಗ ವಂಚನೆಗೆ ವೈವಿಧ್ಯಮಯ ಹಾದಿಗಳನ್ನು ಅನುಸರಿಸುತ್ತಿದ್ದು, ಸದಾ ಜಾಗೃತ ಸ್ಥಿತಿಯಲ್ಲಿ ಜನರು ಇರುವುದು ಉತ್ತಮ.

ಪ್ಯಾನ್‌ 2.0 ಹೆಸರಲ್ಲಿ ವಂಚನೆ ನಡೆಯಬಹುದು ಎಚ್ಚರ

ಪ್ಯಾನ್‌ 2.0 ಯೋಜನೆಯ ಹೆಸರಲ್ಲಿ ಸೈಬರ್‌ ವಂಚನೆ ನಡೆಯಬಹುದು ಎಂದು ಸೈಬರ್‌ ತಜ್ಞ ಉದಯ ಶಂಕರ್‌ ಪುರಾಣಿಕ ಎಚ್ಚರಿಸಿದ್ದಾರೆ. ಉದಯ ಪುರಾಣಿಕ್‌ ಅವರು ವಿಜ್ಞಾನ ಬರಹಗಾರರಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು ಸೋಷಿಯಲ್‌ ಮೀಡಿಯಾದಲ್ಲಿ "ಪ್ಯಾನ್‌ 2.0 ಯೋಜನೆಯ ಹೆಸರಿನಲ್ಲಿ ಸೈಬರ್‌ ವಂಚಕರು ಹೇಗೆ ಜನರನ್ನು ಮೋಸಗೊಳಿಸಬಹುದು? ಜನರು ಯಾವ ರೀತಿಯಲ್ಲಿ ಎಚ್ಚರಿಕೆ ಹೊಂದಿರಬೇಕು" ಎಂದು ತಿಳಿಸಿದ್ದಾರೆ.

"ಕೇಂದ್ರ ಸರ್ಕಾರ PAN 2.0 ಯೋಜನೆಯನ್ನು ಘೋಷಿಸಿದೆ. PAN ಕಾರ್ಡ್‌ ಮತ್ತು ಕಾರ್ಡ್‌ದಾರರ ಮಾಹಿತಿಯ ಸುರಕ್ಷತೆಯನ್ನು ಹೆಚ್ಚಿಸಲು ಹಲವಾರು ಸೈಬರ್‌ ಸುರಕ್ಷತೆ ಮತ್ತು ಅಧುನಿಕ ತಂತ್ರಜ್ಞಾನಗಳನ್ನು ಈ ಯೋಜನೆಯಲ್ಲಿ ಬಳಸಲಾಗುತ್ತಿದೆ. ನಿಮ್ಮ PAN ಕಾರ್ಡ್‌ ಕೆಲಸ ಮಾಡುವುದಿಲ್ಲ, ಹೊಸ PAN 2.0 ಕಾರ್ಡ್‌ಗೆ ಅರ್ಜಿ ಸಲ್ಲಿಸಿ, ಹಣ ಕೊಡಿ, ನಾವು ಹೊಸ PAN 2.0 ಕಾರ್ಡ್‌ ಕೊಡುತ್ತೇವೆ ಎಂದು ಸೈಬರ್‌ ಅಪರಾಧಿಗಳು ನಿಮಗೆ ಮೋಸ ಮಾಡಬಹುದು. ಆದಾಯ ತೆರಿಗೆ ಅಧಿಕಾರಿ ಅಥವಾ ಬೇರೆ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಸೈಬರ್‌ ಅಪರಾಧಿಗಳು ಕರೆ ಮಾಡಬಹುದು, ಇ-ಮೇಲ್‌ ಅಥವಾ ಎಸ್‌ಎಮ್‌ಎಸ್‌ ಕಳುಹಿಸಬಹುದು" ಎಂದು ಉದಯ ಶಂಕರ್‌ ಪುರಾಣಿಕ ತಿಳಿಸಿದ್ದಾರೆ.

"ಸೈಬರ್‌ ಅಪರಾಧಿಗಳನ್ನು ನಂಬಿ ಮೋಸ ಹೋಗಬೇಡಿ. ಇಂತಹ ಘಟನೆ ನಡೆದರೆ ತಕ್ಷಣ 1930ಗೆ ಕರೆ ಮಾಡಿ ದೂರು ನೀಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ. ನೀವು PAN ಕಾರ್ಡ್‌ ಹೊಂದಿದ್ದರೆ, PAN 2.0 ಕಾರ್ಡಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿಲ್ಲ ಮತ್ತು ಯಾವುದೇ ಶುಲ್ಕ ಕಟ್ಟಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ