logo
ಕನ್ನಡ ಸುದ್ದಿ  /  ಜೀವನಶೈಲಿ  /  Camera Spying: ಸ್ಮಾರ್ಟ್‌ಫೋನ್‌ ಕ್ಯಾಮೆರಾದ ಮೂಲಕ ಸೈಬರ್‌ ಅಪರಾಧಿಗಳು ನಿಮ್ಮನ್ನು ನೋಡುತ್ತಿರಬಹುದು, ಕ್ಯಾಮ್‌ಫೆಕ್ಟಿಂಗ್‌ ಬಗ್ಗೆ ತಿಳಿಯಿರಿ

Camera Spying: ಸ್ಮಾರ್ಟ್‌ಫೋನ್‌ ಕ್ಯಾಮೆರಾದ ಮೂಲಕ ಸೈಬರ್‌ ಅಪರಾಧಿಗಳು ನಿಮ್ಮನ್ನು ನೋಡುತ್ತಿರಬಹುದು, ಕ್ಯಾಮ್‌ಫೆಕ್ಟಿಂಗ್‌ ಬಗ್ಗೆ ತಿಳಿಯಿರಿ

Praveen Chandra B HT Kannada

Jun 29, 2023 07:00 AM IST

google News

Camera Spying: ಸ್ಮಾರ್ಟ್‌ಫೋನ್‌ ಕ್ಯಾಮೆರಾದ ಮೂಲಕ ಸೈಬರ್‌ ಅಪರಾಧಿಗಳು ನಿಮ್ಮನ್ನು ನೋಡುತ್ತಿರಬಹುದು, ಕ್ಯಾಮ್‌ಫೆಕ್ಟಿಂಗ್‌ ಬಗ್ಗೆ ತಿಳಿಯಿರಿ

    • Phone camera spying: ಈಗಿನ ಡಿಜಿಟಲ್‌ ವಂಚನೆ ಕಾಲದಲ್ಲಿ ನಮ್ಮ ಸ್ಮಾರ್ಟ್‌ಫೋನ್‌ ಕ್ಯಾಮೆರಾವೂ ಬೇಹುಗಾರಿಕೆ ಮಾಡುತ್ತಿರಬಹುದು. ಈ ರೀತಿ ಕ್ಯಾಮೆರಾವು ಬೇಹುಗಾರಿಕೆ ಮಾಡುತ್ತಿದೆಯೇ ಎಂದು ತಿಳಿಯುವುದು ಹೇಗೆ (Cyber Security tips) ಎಂದು ತಿಳಿದುಕೊಳ್ಳೋಣ.
Camera Spying: ಸ್ಮಾರ್ಟ್‌ಫೋನ್‌ ಕ್ಯಾಮೆರಾದ ಮೂಲಕ ಸೈಬರ್‌ ಅಪರಾಧಿಗಳು ನಿಮ್ಮನ್ನು ನೋಡುತ್ತಿರಬಹುದು, ಕ್ಯಾಮ್‌ಫೆಕ್ಟಿಂಗ್‌ ಬಗ್ಗೆ ತಿಳಿಯಿರಿ
Camera Spying: ಸ್ಮಾರ್ಟ್‌ಫೋನ್‌ ಕ್ಯಾಮೆರಾದ ಮೂಲಕ ಸೈಬರ್‌ ಅಪರಾಧಿಗಳು ನಿಮ್ಮನ್ನು ನೋಡುತ್ತಿರಬಹುದು, ಕ್ಯಾಮ್‌ಫೆಕ್ಟಿಂಗ್‌ ಬಗ್ಗೆ ತಿಳಿಯಿರಿ

ನಿಮ್ಮ ಸುಂದರ ಸೆಲ್ಫಿ ತೆಗೆಯುವ ಮುಂಭಾಗದ ಕ್ಯಾಮೆರಾವು ನೀವು ಬಳಸದೆ ಇರುವಾಗ ಕಳ್ಳ ಕಣ್ಣಿನಿಂದ ನಿಮ್ಮನ್ನು ನೋಡುತ್ತಿರಬಹುದೇ? ನೀವು ಸ್ಕ್ರೀನ್‌ನಲ್ಲಿ ಪಾಸ್‌ವರ್ಡ್‌ ನಮೂದಿಸುವ ಸಮಯದಲ್ಲಿ ಆ ಕ್ಯಾಮೆರಾ ಇಣುಕುತ್ತಿರಬಹುದೇ? ನಿಮ್ಮ ಖಾಸಗಿ ದೃಶ್ಯಗಳನ್ನು ಕ್ಯಾಮೆರಾ ನೋಡುತ್ತಿರಬಹುದೇ? ಒಟ್ಟಾರೆ ನಮ್ಮ ಸ್ಮಾರ್ಟ್‌ಫೋನ್‌ ನಾವು ಬಳಸದೆ ಇರುವಾಗಲೂ ನಮ್ಮನ್ನು ಬೇಹುಗಾರಿಕೆ ಮಾಡುತ್ತಿರಬಹುದೇ? ಇಂತಹ ಸಂದೇಹಗಳು ನಿಮ್ಮಲ್ಲಿರಬಹುದು. ಹೌದು, ಈಗಿನ ಡಿಜಿಟಲ್‌ ವಂಚನೆ ಕಾಲದಲ್ಲಿ ನಮ್ಮ ಸ್ಮಾರ್ಟ್‌ಫೋನ್‌ ಕ್ಯಾಮೆರಾವೂ ಬೇಹುಗಾರಿಕೆ ಮಾಡುತ್ತಿರಬಹುದು. ಈ ರೀತಿ ಕ್ಯಾಮೆರಾವು ಬೇಹುಗಾರಿಕೆ ಮಾಡುತ್ತಿದೆಯೇ ಎಂದು ತಿಳಿಯುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಇತ್ತೀಚೆಗೆ ನಡೆದ ಕೆಲವೊಂದು ಸೈಬರ್‌ ಅಟ್ಯಾಕ್‌ಗಳನ್ನು ಪರಿಶೀಲಿಸಿದ ಬಳಿಕ "ಸೈಬರ್‌ ಅಪರಾಧಿಗಳು ಬಳಕೆದಾರರ ಫೋನ್‌ ಕ್ಯಾಮೆರಾವನ್ನು ಹ್ಯಾಕ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ. ಮಾಲ್‌ವೇರ್‌ ಲಿಂಕ್‌ಗಳ ಮೂಲಕ ಈ ಅಪರಾಧಿಗಳು ಬಳಕೆದಾರರ ಫೋನ್‌ನ ಕ್ಯಾಮೆರಾದ ರೆಕಾರ್ಡಿಂಗ್‌ ಫೀಚರ್‌ ಬಳಸುತ್ತಾರೆ.

ಈ ರೀತಿ ಹ್ಯಾಕಿಂಗ್‌ ಮಾಡಿ ನಮ್ಮ ಮೊಬೈಲ್‌ ಸಾಧನಗಳಿಗೆ ಇನ್‌ಫೆಕ್ಟ್‌ ಮಾಡುವುದನ್ನು ಕಾಂಪ್‌ಫೆಕ್ಟಿಂಗ್‌ ಎಂದು ಕರೆಯಲಾಗುತ್ತದೆ. ನಿಮ್ಮ ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಬಳಸಲು ಅಂದರೆ ಕ್ಯಾಮ್‌ಫ್ಯಾಕ್ಟಿಂಗ್‌ ಮಾಡಲು ಸ್ಲಿಪ್‌ ರಿಮೋಟ್‌ ಕಂಟ್ರೋಲ್‌ ಮಾಲ್‌ವೇರ್‌ ಅವರಿಗೆ ಸಾಕಾಗುತ್ತದೆ ಎಂದು ಸೈಬರ್‌ ಭದ್ರತಾ ತಜ್ಞರಾದ ಆಂಡ್ರಾಯುಸ್‌ ವಾರ್ಮೆನ್‌ಹುವೆನ್‌ ಹೇಳಿದ್ದಾರೆ.

ಈ ರೀತಿಯ ಸೈಬರ್‌ ಅಪರಾಧಿಗಳು ಬಳಕೆದಾರರ ಮೊಬೈಲ್‌ ಅಥವಾ ಕಂಪ್ಯೂಟರ್‌ಗೆ ಸಂದೇಶ ಅಥವಾ ಇಮೇಲ್‌ ಮೂಲಕ ಮಾಲ್‌ವೇರ್‌ ಇರುವ ಲಿಂಕ್‌ ಕಳುಹಿಸುತ್ತಾರೆ. ಬಳಕೆದಾರರು ಆ ಲಿಂಕ್‌ ಕ್ಲಿಕ್‌ ಮಾಡಿದ ಬಳಿಕ ಆ ಮಾಲ್‌ವೇರ್‌ ಸಾಫ್ಟ್‌ವೇರ್‌ ಕಂಪ್ಯೂಟರ್‌ ಅಥವಾ ಮೊಬೈಲ್‌ ಫೋನ್‌ನಲ್ಲಿ ಇನ್‌ಸ್ಟಾಲ್‌ ಆಗುತ್ತದೆ. ಬಳಿಕ ಅವರು ಆ ಮಾಲ್‌ವೇರ್‌ ನೆರವಿನಿಂದ ನಿಮ್ಮ ಕ್ಯಾಮೆರಾವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಈ ಮೂಲಕ ನಿಮ್ಮ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾರೆ.

ಕ್ಯಾಮೆರಾ ಬೇಹುಗಾರಿಕೆ ತಿಳಿಯುವುದು ಹೇಗೆ?

ನೀವು ಬಳಸದೆ ಇರುವಾಗಲೂ ಸ್ಮಾರ್ಟ್‌ಫೋನ್‌ನ ಕ್ಯಾಮೆರಾವನ್ನು ಇತರರು ಬಳಸುತ್ತಿದ್ದಾರೆ ಎಂದು ತಿಳಿಯಲು ಹಲವು ದಾರಿಗಳಿವೆ.

  1. ನೀವು ಕ್ಯಾಮೆರಾ ಆನ್‌ ಮಾಡದೆ ಇದ್ದರೂ ಕ್ಯಾಮೆರಾ ಲೈಟ್‌ ಸತತವಾಗಿ ಬ್ಲಿಂಕ್‌ ಆಗುತ್ತಿದ್ದರೆ ನಿಮ್ಮ ಕ್ಯಾಮೆರಾವನ್ನು ಯಾರೋ ಬಳಸುತ್ತಿದ್ದಾರೆ ಎಂದು ತಿಳಿಯಿರಿ.
  2. ನಿಮ್ಮ ಫೋನ್‌ ಹ್ಯಾಕ್‌ ಆಗಿದ್ದರೆ ಫೋನ್‌ ಬ್ಯಾಟರಿ ಅತ್ಯಂತ ಬೇಗ ಖಾಲಿಯಾಗುತ್ತಿರುತ್ತದೆ.
  3. ನಿಮ್ಮ ಮೊಬೈಲ್‌ನಲ್ಲಿ ಹಲವು ಆಪ್‌ಗಳು ನಿಮಗೆ ಗೊತ್ತಿಲ್ಲದೆ ಇನ್‌ಸ್ಟಾಲ್‌ ಆಗಿದ್ದರೂ ಇಂತಹ ಮಾಲ್‌ವೇರ್‌ನ ಚಟುವಟಿಕೆ ಎಂದೇ ತಿಳಿಯಿರಿ.
  4. ಇತ್ತೀಚೆಗೆ ನಿಮ್ಮ ಮೊಬೈಲ್‌ ಲ್ಯಾಗ್‌ ಆಗುವುದು, ಕ್ರ್ಯಾಷ್‌ ಆಗುವುದು, ತುಂಬಾ ಸ್ಲೋ ಆಗುವುದು, ನಿಮಗೆ ಬಳಸುವುದು ಕಷ್ಟವಾಗುವುದು ಇತ್ಯಾದಿ ಆಗುತ್ತಿದ್ದರೆ ನಿಮ್ಮ ಮೊಬೈಲ್‌ ಅನ್ನು ಇತರರು ಬಳಸುತ್ತಿರಬಹುದು ಎಂಬ ಅನುಮಾನ ಹೊಂದಿರಿ.

ಸುರಕ್ಷತೆ ಹೇಗೆ?

ಮೊದಲನೆಯದಾಗಿ ಇಂತಹ ಮಾಲ್‌ವೇರ್‌ ಲಿಂಕ್‌ಗಳನ್ನು ಕ್ಲಿಕ್‌ ಮಾಡಬಾರದು. ಇಂತಹ ಲಿಂಕ್‌ಗಳು ಹಲವು ಆಮೀಷದ ಸಂದೇಶ ಹೊಂದಿರುತ್ತವೆ. ಐಫೋನ್‌ ಗೆಲ್ಲಬೇಕೆ? ಇಲ್ಲಿ ಕ್ಲಿಕ್‌ ಮಾಡಿ ಇತ್ಯಾದಿ ಸಂದೇಶಗಳನ್ನು ಹೊಂದಿರುತ್ತವೆ. ಇಂತಹ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌

ನಿಮ್ಮ ಮೊಬೈಲ್‌ನಲ್ಲಿ ನೀವು ಬಳಸದೆ ಇರುವಾಗ ಕ್ಯಾಮೆರಾ ಬ್ಲಿಂಕ್‌ ಇತ್ಯಾದಿಗಳು ಆಗುತ್ತಿದ್ದರೆ ಆ ಕ್ಯಾಮೆರಾವನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನಿಮ್ಮ ಆಪ್‌ನ ಸೆಟ್ಟಿಂಗ್‌ನಲ್ಲಿ ಇರುವ ಅಪರಿಚಿತ ಆಪ್‌ಗಳನ್ನು ತಕ್ಷಣವೇ ಅನ್‌ಇನ್‌ಸ್ಟಾಲ್‌ ಮಾಡಿ.

ಸೈಬರ್‌ ವಂಚಕರು ಕ್ಯಾಮೆರಾದ ಮೂಲಕ ನಿಮ್ಮ ಜಗತ್ತನ್ನು ನೋಡಬಹುದು, ಮಾತ್ರವಲ್ಲದೆ ಮೊಬೈಲ್‌ನೊಳಗಿರುವ ಪೈಲ್‌ ಮತ್ತು ವಿಡಿಯೋಗಳನ್ನು ನೋಡಬಹುದು. ಹೀಗಾಗಿ, ಸೈಬರ್‌ ಸುರಕ್ಷತೆಗೆ ಸದಾ ಗಮನ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ