ಟೆಕ್ ಸಲಹೆ: ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಫೋಟೋಸ್, ವಿಡಿಯೋ, ಡೇಟಾ ವರ್ಗಾವಣೆ ಹೇಗೆ? ಇಲ್ಲಿದೆ ಸರಳ ಟಿಪ್ಸ್ ಮತ್ತು ಟ್ರಿಕ್ಸ್
Oct 07, 2024 06:30 PM IST
Tech Hacks: ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಫೋಟೋಸ್, ವಿಡಿಯೋ, ಡೇಟಾ ವರ್ಗಾವಣೆ ಹೇಗೆ?
- Transfer your data from Android to iPhone: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಿಂದ ಐಫೋನ್‌ಗೆ ಡೇಟಾ ವರ್ಗಾವಣೆ ಮಾಡುವುದು ಹೇಗೆ ಎಂಬ ಸಂದೇಹ ಬಹುತೇಕರಿಗೆ ಇರಬಹುದು. ಹೊಸದಾಗಿ ಐಫೋನ್ ಖರೀದಿಸಿದ ಸಂದರ್ಭದಲ್ಲಿ ನಿಮ್ಮ ಹಳೆಯ ಆಂಡ್ರಾಯ್ಡ್ ಫೋನ್‌ನಲ್ಲಿರುವ ಫೋಟೋಗಳು,ವಿಡಿಯೋಗಳು, ಫೈಲ್‌ಗಳು, ಕಾಂಟ್ಯಾಕ್ಟ್‌ಗಳನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು.
Transfer your data from Android to iPhone: ಆಪಲ್ ಕಂಪನಿಯು ತನ್ನ ಹೊಸ ಐಫೋನ್ 16 ಸರಣಿಯನ್ನು ಬಿಡುಗಡೆ ಮಾಡಿದೆ. ದೊಡ್ಡ ಪರದೆ, ಹೊಸ ಆಕ್ಷನ್ ಬಟನ್, ಕ್ಯಾಮೆರಾ ಬಟನ್ ಸಪೋರ್ಟ್, ಆಪಲ್ ಇಂಟಲಿಜೆನ್ಸ್ ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ. ಇನ್ನು ಕೆಲವರು ಇತ್ತೀಚಿನ ಆನ್‌ಲೈನ್ ಹಬ್ಬದ ಆಫರ್ ಸಂದರ್ಭದಲ್ಲಿ ಕೆಲವರು ಐಫೋನ್ 15 ಅಥವಾ ಬೇರೆ ಯಾವುದಾದರೂ ಐಫೋನ್‌ಗಳನ್ನು ಖರೀದಿಸಿರಬಹುದು. ಮೊದಲ ಬಾರಿಗೆ ಐಫೋನ್ ಖರೀದಿಸಿದವರಿಗೆ ತಮ್ಮ ಹಳೆಯ ಆಂಡ್ರಾಯ್ಡ್ ಫೋನ್‌ನಲ್ಲಿರುವ ಡೇಟಾವನ್ನು ಆಪಲ್‌ಗೆ ವರ್ಗಾವಣೆ ಮಾಡುವುದೇ ದೊಡ್ಡ ಸವಾಲೆಂದು ಭಾವಿಸುತ್ತಾರೆ. ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಫೋಟೋಗಳು,ವಿಡಿಯೋಗಳು, ಫೈಲ್‌ಗಳು, ಕಾಂಟ್ಯಾಕ್ಟ್‌ಗಳನ್ನು ಸುಲಭವಾಗಿ ವರ್ಗಾವಣೆ ಮಾಡಲು ಈ ಮುಂದಿನ ಸರಳ ಟ್ರಿಕ್ಸ್ ಅನುಸರಿಸಿ.
ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಡೇಟಾ ವರ್ಗಾವಣೆಯು ಮೊದಲ ನೋಟಕ್ಕೆ ಕಷ್ಟ ಎನಿಸಬಹುದು. ಆದರೆ, ಇದು ತುಂಬಾ ಸುಲಭ. ಇದಕ್ಕಾಗಿಯ ಆಪಲ್ ಕಂಪನಿಯು Move to iOS ಎಂಬ ಆಪ್ ಹೊಂದಿದೆ. ಇದರ ಮೂಲಕ ಸುಲಭವಾಗಿ ಡೇಟಾ ವರ್ಗಾಯಿಸಬಹುದು.
ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಡೇಟಾ ವರ್ಗಾವಣೆ ಹೇಗೆ?
- ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಸಾಧನವು ವೈಫೈಗೆ ಕನೆಕ್ಟ್ ಆಗಿರಲಿ. ಇತ್ತೀಚಿನ ಆಂಡ್ರಾಯ್ಡ್ ವರ್ಷನ್‌ಗೆ ಅಪ್‌ಡೇಟ್ ಆಗಿರಲಿ. ಐಫೋನ್ ಕೂಡ ಇತ್ತೀಚಿನ ವರ್ಷನ್‌ಗೆ ಅಪ್‌ಡೇಟ್ ಆಗಿರಲಿ. ಎರಡೂ ಮೊಬೈಲ್‌ಗಳು ಚಾರ್ಜ್ ಆಗಿರಲಿ.
- ನಿಮ್ಮ ಹೊಸ ಐಫೋನ್‌ನಲ್ಲಿ ಸಾಕಷ್ಟು ಸ್ಟೋರೇಜ್ ಸ್ಥಳಾವಕಾಶ ಇರುವುದನ್ನು ಖಚಿತಪಡಿಸಿಕೊಳ್ಳಿ.
- ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್‌ಪ್ಲೇಗೆ ಹೋಗಿ. ಅಲ್ಲಿ Move to iOS ಎಂದು ಹುಡುಕಿ. ಈ ಆಪ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ.
- ಹೊಸ ಫೋನ್‌ನಲ್ಲಿ ಸೆಟಪ್ ಮಾಡಿ. ಆಪ್ಸ್ ಮತ್ತು ಡೇಟಾ ಸ್ಕ್ರೀನ್‌ನಲ್ಲಿ ಮೂವ್ ಡೇಟಾ ಫ್ರಂ ಆಂಡ್ರಾಯ್ಡ್ ಕ್ಲಿಕ್‌ಮಾಡಿ.
- ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಮೂವ್ ಟು ಐಒಎಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಕಂಟಿನ್ಯೂ ಟ್ಯಾಪ್ ಮಾಡಿ. ಎರಡೂ ಸಾಧನಗಳು ಸಂಪರ್ಕಗೊಂಡಿವೆ ಮತ್ತು ಪರಸ್ಪರ ಹತ್ತಿರದಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ.
- ನಿಮ್ಮ ಐಫೋನ್‌ನಲ್ಲಿ ಆರು ಅಥವಾ ಹತ್ತು ಅಂಕೆಗಳ ಒಂದು-ಬಾರಿ-ಬಳಕೆಯ ಕೋಡ್ ಅನ್ನು ಪ್ರದರ್ಶಿಸುತ್ತದೆ.
- ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಈ ಕೋಡ್ ಅನ್ನು ನಮೂದಿಸಿ.
- ನಿಮ್ಮ ಐಫೋನ್ ತಾತ್ಕಾಲಿಕ ವೈಫೈ ನೆಟ್ವರ್ಕ್ ರಚಿಸುತ್ತದೆ.
- ಪ್ರಾಂಪ್ಟ್ ಕಾಣಿಸಿದಾಗ ನಿಮ್ಮ ಆಂಡ್ರಾಯ್ಡ್ ಫೋನ್‌ನಿಂದ ಈ ನೆಟ್‌ವರ್ಕ್‌ಗೆ ಸೇರಿ ಮತ್ತು ವರ್ಗಾವಣೆ ಪರದೆಯು ಗೋಚರಿಸುವವರೆಗೆ ಕಾಯಿರಿ.
- ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸಂಪರ್ಕಗಳು, ಸಂದೇಶಗಳು, ಫೋಟೋಗಳು, ವೀಡಿಯೊಗಳು ಮತ್ತು ಇತರೆ ಡೇಟಾಗಳು ಕಾಣಿಸುತ್ತವೆ. ಯಾವುದನ್ನು ವರ್ಗಾಯಿಸುವಿರೋ ಅದನ್ನು ಟ್ಯಾಪ್ ಮಾಡಿ. ಫೈಲ್‌ಗಳ ಗಾತ್ರಕ್ಕೆ ತಕ್ಕಂತೆ ವರ್ಗಾವಣೆಗೆ ಸಮಯ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: Tech Tips: ಗೂಗಲ್, ಮ್ಯಾಪ್, ಯೂಟ್ಯೂಬ್‌ನಲ್ಲಿ ನೀವು ನಡೆಸಿದ ಹುಡುಕಾಟವನ್ನು ಗೌಪ್ಯವಾಗಿಡುವುದು ಹೇಗೆ? ಇಲ್ಲಿದೆ ಟಿಪ್ಸ್