Tech Tips: ಗೂಗಲ್, ಮ್ಯಾಪ್, ಯೂಟ್ಯೂಬ್‌ನಲ್ಲಿ ನೀವು ನಡೆಸಿದ ಹುಡುಕಾಟವನ್ನು ಗೌಪ್ಯವಾಗಿಡುವುದು ಹೇಗೆ? ಇಲ್ಲಿದೆ ಟಿಪ್ಸ್
Searches private on Google: ಗೂಗಲ್, ಯೂಟ್ಯೂಬ್ ಮತ್ತು ಮ್ಯಾಪ್‌ನಲ್ಲಿ ನಾವು ಹುಡುಕಾಟ ನಡೆಸಿದ್ದು ನಮ್ಮ ಮೊಬೈಲ್, ಕಂಪ್ಯೂಟರ್ ಬಳಸಿದ ಇತರರಿಗೆ ತಿಳಿಯಬಾರದೆಂದಾದರೆ ಗೂಗಲ್ ಸೆಟ್ಟಿಂಗ್‌ನಲ್ಲಿರುವ ಪ್ರೈವೇಟ್ ಅಥವಾ ಖಾಸಗಿ ಸಲಹೆಗಳನ್ನು ಪಾಲಿಸಿ
ಆನ್‌ಲೈನ್‌ನಲ್ಲಿ ಕೆಲವೊಮ್ಮೆ ನಾವು ಕೆಲವೊಮ್ಮೆ ಏನೇನೋ ಹುಡುಕಾಟ ನಡೆಸಿರುತ್ತವೆ. ಕೆಲವು ಖಾಸಗಿಯಾಗಿರಲು ಬಯಸುವಂತಹ ವಿಷಯಗಳು, ಕೆಲವೊಂದು ಫನ್ನಿ ವಿಷಯಗಳು ಸೇರಿದಂತೆ ಏನೋ ಹುಡುಕಿರುತ್ತೇವೆ. ಆದರೆ, ನಾವು ಏನು ಹುಡುಕಿದ್ದೇವೆ ಎನ್ನುವುದು ಇತರರಿಗೆ ತಿಳಿಯುವುದನ್ನು ನಾವು ಬಯಸುವುದಿಲ್ಲ. ಇದೇ ರೀತಿ ಈ ರೀತಿಯ ಮಾಹಿತಿಗಳು ಸೈಬರ್ ಅಪರಾಧಿಗಳಿಗೂ ಸಿಗಬಾರದೆಂದು ಬಯಸುತ್ತೇವೆ. ಇದೇ ಕಾರಣಕ್ಕೆ ಆನ್‌ಲೈನ್‌ನಲ್ಲಿ ಏನು ಹುಡುಕುವಿರಿ ಎನ್ನುವುದನ್ನು ಪ್ರೈವೇಟ್ ಆಗಿ ಇಡಲು ಅವಕಾಶವಿದೆ. ಗೂಗಲ್, ಮ್ಯಾಪ್ ಅಥವಾ ಯೂಟ್ಯೂಬ್‌ನಲ್ಲಿ ಏನು ಹುಡುಕುವಿರೋ ಅದನ್ನು ಪ್ರೈವೇಟ್ ಆಗಿ ಇಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಗೂಗಲ್‌ನಲ್ಲಿ ಹೇಗೆ?
ಗೂಗಲ್‌ನಲ್ಲಿ ನೀವು ಏನು ಬೇಕಾದರೂ ಹುಡುಕಬಹುದು. ಕೇಳಿದ್ದೆಲ್ಲವನ್ನು ಕೊಡುವ ದೇವರಂತೆ ಅದರಲ್ಲಿ ಮಾಹಿತಿಗಳು ದೊರಕುತ್ತವೆ. ಆದರೆ, ನಮ್ಮ ಆ ಕ್ಷಣದ ಮೂಡ್‌ಗೆ, ಅವಶ್ಯಕತೆಗೆ ತಕ್ಕಂತೆ ಏನೋ ಹುಡುಕಿರುತ್ತೇವೆ. ಆದರೆ, ಸರ್ಚ್ ಹಿಸ್ಟರಿಯಲ್ಲಿ ಅದನ್ನು ಇನ್ಯಾರು ನೋಡಬಾರದು.
- ಅತ್ಯುತ್ತಮ ದಾರಿಯೆಂದರೆ ಗೂಗಲ್‌ನಲ್ಲಿ Incognito Mode ಮೂಲಕ ಹುಡುಕಾಟ ನಡೆಸುವುದು. ಈ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ ಗೂಗಲ್ ನಿಮ್ಮ ಬ್ರೌಸಿಂಗ್ ಹಿಸ್ಟರಿ, ಕುಕ್ಕೀಸ್, ಸೈಟ್ ಡೇಟಾ ಅಥವಾ ಮಾಹಿತಿಯನ್ನು ಸೇವ್ ಮಾಡಿಟ್ಟುಕೊಳ್ಳುವುದಿಲ್ಲ.
- ಗೂಗಲ್ ಹೊರತುಪಡಿಸಿ DuckDuckGo ಅಥವಾ Startpage ಇತ್ಯಾದಿಗಳಲ್ಲಿ ಹುಡುಕಾಟ ನಡೆಸುವುದು. ಇವು ನಿಮ್ಮ ಹುಡುಕಾಟವನ್ನು ಟ್ರ್ಯಾಕ್ ಮಾಡುವುದು.
- ನೀವು ಏನಾದರೂ ಹುಡುಕಾಟ ನಡೆಸಿದರೆ, ಅದು ಸರ್ಚ್ ಹಿಸ್ಟರಿಯಲ್ಲಿ ಕಾಣಿಸಿದರೆ Settings > Privacy > Clear browsing data ಮಾಡಿ ಕ್ರೋಮ್‌ನಲ್ಲಿ ಡಿಲೀಟ್ ಮಾಡಬಹುದು. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿಯೂ ಇದೇ ರೀತಿ ಮಾಡಬಹುದು.
ಯೂಟ್ಯೂಬ್
ಯೂಟ್ಯೂಬ್‌ನಲ್ಲಿ ಜನರು ಏನೇನೋ ವಿಡಿಯೋ ಹುಡುಕಬಹುದು. ಹಾಸ್ಯ, ಅಪಹಾಸ್ಯ, ಚಿತ್ರವಿಚಿತ್ರ ವಿಡಿಯೋಗಳನ್ನು ಹುಡುಕಬಹುದು. ನೀವು ನಿಮ್ಮ ಸ್ನೇಹಿತನಿಗೆ ಉಡುಗೊರೆ ನೀಡಲು ಯೂಟ್ಯೂಬ್‌ನಲ್ಲಿ ಏನೋ ಹುಡುಕಿದ್ದೀರಿ ಎಂದಿರಲಿ, ಆ ಸ್ನೇಹಿತನಿಗೆ ನಿಮ್ಮ ಫೋನ್ ಬಳಸುವ ಅಭ್ಯಾಸ ಇದ್ದರೆ ಆತನ ಕಣ್ಣಿಗೆ ಆ ಸರ್ಚ್ ಹಿಸ್ಟರಿ ಕಾಣಬಾರದು. ಇದೇ ರೀತಿ ನಿಮ್ಮ ಸಂಗಾತಿಗೆ ಬರ್ತ್‌ಡೇ ಗಿಫ್ಟ್ ನೀಡಲು ಏನೂ ಹುಡುಕುವಿರಿ, ಆಕೆ/ಆತನಿಗೂ ಅದು ಕಾಣಿಸಬಾರದು.
ಯೂಟ್ಯೂಬ್, ವೆಬ್, ಆಪ್‌ಗಳಲ್ಲಿ ಏನಾದರೂ ಹುಡುಕಾಟದ ಇತಿಹಾಸ ಕಂಡರೆ ಅಲ್ಲಿ ರಿಮೂವ್ ಆಯ್ಕೆ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಬಹುದು.
ಯೂಟ್ಯೂಬ್‌ನಲ್ಲಿ Settings > Privacy > Playlists ಸೆಟ್ಟಿಂಗ್‌ಗೆ ಹೋಗಿ Keep all my saved playlists private ಅಂತ ಮಾಡಿ.
ಇದೇ ಸಮಯದಲ್ಲಿ ಗೂಗಲ್ ನಿಮಗೆ ನಿಮ್ಮ ಸರ್ಚ್ ಇತಿಹಾಸಕ್ಕೆ ತಕ್ಕಂತೆ ಜಾಹೀರಾತು ತೋರಿಸಬಾರದು ಎಂದಾದರೆ ಯೂಟ್ಯೂಬ್‌ನ ಲೈಬ್ರೆರಿ ವಿಭಾಗಕ್ಕೆ ಹೋಗಿ. Library (ಕೆಳಗೆ ಬಲಭಾಗದಲ್ಲಿದೆ) > History > Three button menu > Manage all history > Controls ಆಯ್ಕೆ ಇರುತ್ತದೆ
ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿಯೂ ಇದೇ ರೀತಿ ಮಾಡಬಹುದು.
ಗೂಗಲ್ ಮ್ಯಾಪ್
ಕೆಲವೊಮ್ಮೆ ನೀವು ಭೇಟಿ ನೀಡಿದ ಸ್ಥಳದ ಕುರಿತು ಮಾಹಿತಿ ಹಂಚಿಕೊಳ್ಳದೆ ಇರಲು ಬಯಸಬಹುದು. ಗೂಗಲ್ ಮ್ಯಾಪ್‌ನಲ್ಲಿ ಇನ್‌ಕಾಗ್ನಿಟಿಟೊ ಮೋಡ್‌ನಲ್ಲಿ ಹೋಗುವುದು ಒಂದು ವಿಧಾನ. ಮೊಬೈಲ್ ಫೋನ್‌ನಲ್ಲಿಯೂ ಇದೇ ರೀತಿ ಮಾಡಬಹುದು. ಫೋನ್‌ನಲ್ಲಿ ಗೂಗಲ್ ಆಪ್‌ನಲ್ಲಿ ಪ್ರೊಫೈಲ್ ಪಕ್ಕ ಈ ಆಯ್ಕೆ ಇರುತ್ತದೆ.