ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಹೊಸ ದೇಶೀಯ ಸ್ಮಾರ್ಟ್‌ಫೋನ್: ಶವೋಮಿ, ಸ್ಯಾಮ್ಸಂಗ್ಗೆ ನಡುಕ
Jul 12, 2024 07:38 AM IST
ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಹೊಸ ದೇಶೀಯ ಸ್ಮಾರ್ಟ್‌ಫೋನ್
- ಭಾರತೀಯ ಮಾರುಕಟ್ಟೆಯಲ್ಲಿ ಪ್ರಸಿದ್ಧ ಲಾವಾ ಕಂಪನಿ ತನ್ನ ಹೊಸ ಲಾವಾ ಬ್ಲೇಜ್ X 5G ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಇದು 15,000 ರೂಪಾಯಿ ಒಳಗೆ ಲಭ್ಯವಿರುವ ಕೆಲವೇ ಕೆಲವು 5ಜಿ ಫೋನುಗಳ ಸಾಲಿಗೆ ಸೇರಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದ ಪ್ರಸಿದ್ಧ ಟೆಕ್ನಾಲಜಿ ಕಂಪನಿ ಲಾವಾ ಇದೀಗ ಹೊಸ ಸ್ಮಾರ್ಟ್ಫೋನ್ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಅತಿ ಕಡಿಮೆ ಬೆಲೆಗೆ ಲಾವಾ ಬ್ಲೇಜ್ X 5G ದೇಶದಲ್ಲಿ ಅನಾವರಣಗೊಂಡಿದ್ದು; ಶವೋಮಿ, ಸ್ಯಾಮ್ಸಂಗ್, ಟೆಕ್ನೋ ಕಂಪನಿಗಳಿಗೆ ಕಠಿಣ ಪೈಪೋಟಿ ನೀಡುತ್ತಿದೆ. ಈ ಹೊಸ ಹ್ಯಾಂಡ್‌ಸೆಟ್ 120Hzನ ಡಿಸ್‌ಪ್ಲೇಯನ್ನು ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದರ ಜೊತೆಗೆ ಬ್ಯಾಟರಿ, ಕ್ಯಾಮೆರಾ ಕೂಡ ಅದ್ಭುತವಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಲಾವಾ ಬ್ಲೇಜ್ X 5G ಬೆಲೆ
ಭಾರತದಲ್ಲಿ ಲಾವಾ ಬ್ಲೇಜ್ X 5G ಸ್ಮಾರ್ಟ್‌ಫೋನ್ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಇದರ 4GB RAM + 128GB ಸ್ಟೋರೇಜ್ ಮಾದರಿಗೆ 14,999 ರೂಪಾಯಿ ನಿಗದಿ ಮಾಡಲಾಗಿದೆ. ಅಂತೆಯೆ 128GB ಸ್ಟೋರೇಜ್ ಹೊಂದಿರುವ 6GB ಮತ್ತು 8GB ರೂಪಾಂತರಗಳ ಬೆಲೆ ಕ್ರಮವಾಗಿ ರೂಪಾಯಿ 15,999 ಮತ್ತು 16,999 ರೂಪಾಯಿ ಆಗಿದೆ. ಇದು ಸ್ಟಾರ್‌ಲೈಟ್ ಪರ್ಪಲ್ ಮತ್ತು ಟೈಟಾನಿಯಂ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಜುಲೈ 20 ರಿಂದ ಲಾವಾ ಮೊಬೈಲ್ ಫೋನ್ ಇ-ಸ್ಟೋರ್ ಮತ್ತು ಅಮೆಜಾನ್ ಮೂಲಕ ಮಾರಾಟವಾಗಲಿದೆ. ಮೊದಲ ಸೇಲ್ ಪ್ರಯುಕ್ತ ಎಲ್ಲಾ ರೂಪಾಂತರಗಳ ಮೇಲೆ 1,000 ರೂಪಾಯಿ ರಿಯಾಯಿತಿ ಇದೆ.
ಲಾವಾ ಬ್ಲೇಜ್ X 5G ಫೀಚರ್ಸ್
ಲಾವಾ ಬ್ಲೇಜ್ X 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.67-ಇಂಚಿನ ಪೂರ್ಣ-ಎಚ್‌ಡಿ + (1,080 x 2,400 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ 800nits ಗರಿಷ್ಠ ಬ್ರೈಟ್ನೆಸ್ನಿಂದ ಕೂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನೊಂದಿಗೆ 8GB LPDDR4X RAM ಮತ್ತು 128GB UFS 2.2 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ ಈ ಫೋನ್ನಲ್ಲಿ 64-ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಮುಂಭಾಗದಲ್ಲಿ ಫ್ಲ್ಯಾಷ್‌ನೊಂದಿಗೆ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಲಾವಾ ಬ್ಲೇಜ್ Xನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್, ವೈ-ಫೈ, GPS, OTG, 5G, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. ದೊಡ್ಡದಾದ 5,000mAh Li-Polymer ಬ್ಯಾಟರಿ ನೀಡಲಾಗಿದ್ದು, ಇದು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 15,000 ರೂಪಾಯಿ ಒಳಗೆ ಲಭ್ಯವಿರುವ ಕೆಲವೇ ಕೆಲವು 5ಜಿ ಫೋನುಗಳ ಸಾಲಿಗೆ ಲಾವಾ ಬ್ಲೇಜ್ X 5G ಕೂಡ ಸೇರಿದೆ. ಇದೇ ಬೆಲೆಯಲ್ಲಿ ಶವೋಮಿ ಕಂಪನಿಯ ರೆಡ್ಮಿ ಫೋನುಗಳು, ಸ್ಯಾಮ್ಸಂಗ್, ಟೆಕ್ನೋ ಕಂಪನಿಯ ಫೋನುಗಳು ಕೂಡ ಲಭ್ಯವಿದೆ. ಈ ಮೂಲಕ ಲಾವಾ ವಿದೇಶಿ ಕಂಪನಿಗಳಿಗೆ ಟಕ್ಕರ್ ಕೊಡಲು ಮುಂದಾಗಿದೆ.
ವರದಿ: ವಿನಯ್ ಭಟ್.
ಇನ್ನಿತರ 5ಜಿ ಸ್ಮಾರ್ಟ್‌ಫೋನ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಕ್ಯಾಮೆರಾ ಪ್ರಿಯರಿಗೆ ಬಂಪರ್ ಸುದ್ದಿ; ಒಂದೇ ದಿನ ಬರೋಬ್ಬರಿ 108MP ಕ್ಯಾಮರಾದ 2 ಫೋನ್ ಬಿಡುಗಡೆ