ರಿಯಲ್ ಮಿ ನಾರ್ಜೊ 70 ಟರ್ಬೊ 5G ಭಾರತದಲ್ಲಿ ಬಿಡುಗಡೆ, ದರ 16999 ರೂನಿಂದ ಆರಂಭ, ಈ ಸ್ಮಾರ್ಟ್‌ಫೋನ್‌ನಲ್ಲಿ ಏನಿದೆ ವಿಶೇಷ
Dec 16, 2024 01:48 PM IST
ರಿಯಲ್ ಮಿ ನಾರ್ಜೊ 70 ಟರ್ಬೊ 5G ಭಾರತದಲ್ಲಿ ಬಿಡುಗಡೆ
ರಿಯಲ್ ಮಿ ನಾರ್ಜೊ 70 ಟರ್ಬೊ 5G ಭಾರತದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಇದರ 6 ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ಆವೃತ್ತಿಗೆ ಕೇವಲ 16,999 ರೂ. ಇದೆ. ಈ ಫೋನ್‌ನಲ್ಲಿ ಆಕರ್ಷಕವಾದ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಆಯ್ಕೆ ನೀಡಲಾಗಿದೆ. (ಬರಹ: ವಿನಯ್ ಭಟ್)
ರಿಯಲ್ ಮಿ ಅತ್ಯಂತ ಕಡಿಮೆ ಬೆಲೆಗೆ ಗೇಮಿಂಗ್-ಕೇಂದ್ರಿತ ಕೊಡುಗೆಯಾಗಿ ರಿಯಲ್ ಮಿ ನಾರ್ಜೊ 70 ಟರ್ಬೊ 5G ಫೋನನ್ನು ರಿಲೀಸ್ ಮಾಡಿದೆ. ಈ ಹೊಸ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5ಜಿ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆಕರ್ಷಕವಾದ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಆಯ್ಕೆ ಕೂಡ ನೀಡಲಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ರಿಯಲ್ ಮಿ ನಾರ್ಜೊ 70 ಟರ್ಬೊ 5ಜಿ ಬೆಲೆ
ರಿಯಲ್ ಮಿ ನಾರ್ಜೊ 70 ಟರ್ಬೊ 5G ಭಾರತದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 6 ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ಆವೃತ್ತಿಗೆ ಕೇವಲ 16,999 ರೂ. ಇದೆ. ಹಾಗೆಯೆ 8 ಜಿಬಿ + 128ಜಿಬಿ ಮತ್ತು 12 ಜಿಬಿ + 256 ಜಿಬಿ ಸ್ಟೋರೇಜ್ ರೂಪಾಂತರಗಳ ಬೆಲೆ ಕ್ರಮವಾಗಿ ರೂ. 17,999 ಮತ್ತು ರೂ. 20,999 ಆಗಿದೆ. ಇದು ಟರ್ಬೊ ಎಲ್ಲೊ, ಟರ್ಬೊ ಗ್ರೀನ್ ಮತ್ತು ಟರ್ಬೊ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಫೋನ್‌ನ ಮೊದಲ ಮಾರಾಟವು ಸೆಪ್ಟೆಂಬರ್ 16 ರಂದು ಅಮೆಜಾನ್ ಮತ್ತು ರಿಯಲ್ ಮಿ ವೆಬ್‌ಸೈಟ್ ಮೂಲಕ ನಡೆಯಲಿದೆ.
ರಿಯಲ್ ಮಿ ನಾರ್ಜೊ 70 ಟರ್ಬೊ 5ಜಿ ಫೀಚರ್ಸ್
ಡ್ಯುಯಲ್ ಸಿಮ್ (ನ್ಯಾನೋ) ರಿಯಲ್ ಮಿ ನಾರ್ಜೊ 70 ಟರ್ಬೊ 5G ಆಂಡ್ರಾಯ್ಡ್ 14 ಆಧಾರಿತ ರಿಯಲ್ ಮಿ ಯುಐ 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.67-ಇಂಚಿನ ಸ್ಯಾಮ್ಸಂಗ್ ಇ4 ಒಲೆಡ್ ಡಿಸ್ಪ್ಲೇ ಹೊಂದಿದ್ದು, ಗೇಮಿಂಗ್ಗಾಗಿ 90 ಎಫ್‌ಪಿಎಸ್ ಅನ್ನು ನೀಡುವ ಜಿಟಿ ಮೋಡ್ ಅನ್ನು ಕೂಡ ನೀಡಲಾಗಿದೆ. 120 ಎಚ್‌ಝಡ್ ರಿಫ್ರೆಶ್ ರೇಟ್, 1s80Hz ಟಚ್ ರೇಟ್, 2,000nits ಗರಿಷ್ಠ ಬ್ರೈಟ್ನೆಸ್ ಇದೆ. ಇಷ್ಟೇ ಅಲ್ಲದೆ ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವನ್ನು ಕೂಡ ನೀಡಲಾಗಿದೆ.
ಮೀಡಿಯಾಟೆಕ್ ಡೈಮನ್ಸಿಟಿ 7300 ಎನರ್ಜಿ 5ಜಿ ಪ್ರೊಸೆಸರ್ ಅನ್ನು ಮಾಲಿ-ಜಿ615 ಜಿಪಿಯು ಜೊತೆಗೆ ಜೋಡಿಸಲಾಗಿದೆ, 12 ಜಿಬಿ ಎಲ್‌ಪಿಡಿಡಿಆರ್4 ಎಕ್ಸ್ ರಾಮ್ ಮತ್ತು 256 ಜಿಬಿವರೆಗೆ ಯುಎಫ್‌ಎಕ್ಸ್ 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಆನ್‌ಬೋರ್ಡ್ ರಾಮ್ ಅನ್ನು ವಾಸ್ತವಿಕವಾಗಿ 26 ಜಿಬಿವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ವಿಚಾರಕ್ಕೆ ಬಂದರೆ ಈ ಫೋನ್ 50-ಮೆಗಾಪಿಕ್ಸೆಲ್ ಎಐ-ಬೆಂಬಲಿತ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ, 16-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ನೀಡಲಾಗಿದೆ.
ರಿಯಲ್ ಮಿ ನಾರ್ಜೊ 70 ಟರ್ಬೊ 5ಜಿಯಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ಬ್ಲೂಟೂತ್ 5.4, ಜಿಪಿಎಸ್, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು ವೈ-ಫೈ ಸೇರಿವೆ. ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ. 45 ಡಬ್ಲ್ಯು ಚಾರ್ಜಿಂಗ್ ಬೆಂಬಲದೊಂದಿಗೆ 5,000 ಎಂಎಎಚ್ ಬ್ಯಾಟರಿ ಘಟಕವನ್ನು ಹೊಂದಿದೆ. ವೇಗದ ಚಾರ್ಜಿಂಗ್ ವೈಶಿಷ್ಟ್ಯವು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದಷ್ಟು ಬ್ಯಾಟರಿಯನ್ನು ಫುಲ್ ಮಾಡುತ್ತದೆ ಎಂದು ಕಂಪನಿ ಹೇಳಿದೆ.