logo
ಕನ್ನಡ ಸುದ್ದಿ  /  ಜೀವನಶೈಲಿ  /  Bluetooth Speakers: ಪೋರ್ಟಬಲ್​ ಬ್ಲೂಟೂತ್​ ಸ್ಪೀಕರ್​ಗಳ ಹುಡುಕಾಟದಲ್ಲಿದ್ದೀರೇ? ಇಲ್ಲಿವೆ ಬಜೆಟ್​ ಫ್ರೆಂಡ್ಲಿ ಆಯ್ಕೆಗಳು

Bluetooth Speakers: ಪೋರ್ಟಬಲ್​ ಬ್ಲೂಟೂತ್​ ಸ್ಪೀಕರ್​ಗಳ ಹುಡುಕಾಟದಲ್ಲಿದ್ದೀರೇ? ಇಲ್ಲಿವೆ ಬಜೆಟ್​ ಫ್ರೆಂಡ್ಲಿ ಆಯ್ಕೆಗಳು

HT Kannada Desk HT Kannada

Dec 20, 2023 06:48 PM IST

google News

ಪಾರ್ಟಿಗೆ ಬ್ಲೂಟೂತ್ ಸ್ಪೀಕರ್​

    • Portable Bluetooth Speakers: ಪಾರ್ಟಿ ಮೂಡ್​ಗೆ ಜಾರುವವರಿಗೆ ಡಿಸೆಂಬರ್ ಹೇಳಿ ಮಾಡಿಸಿದಂತಹ ತಿಂಗಳು. ನೀವು ಕೂಡ ಪಾರ್ಟಿಗಾಗಿ ಉತ್ತಮ ಬ್ಲೂಟೂತ್​ ಸ್ಪೀಕರ್​ಗಳ ಹುಡುಕಾಟದಲ್ಲಿದ್ದರೆ ಇಲ್ಲಿ ನಿಮಗೆ ಭಾರತದಲ್ಲಿ ಲಭ್ಯವಿರುವ ಟಾಪ್​ 5 ಬ್ಲೂಟೂತ್​​ ಸ್ಪೀಕರ್​ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಪಾರ್ಟಿಗೆ ಬ್ಲೂಟೂತ್ ಸ್ಪೀಕರ್​
ಪಾರ್ಟಿಗೆ ಬ್ಲೂಟೂತ್ ಸ್ಪೀಕರ್​

ಇಯರ್​ ಎಂಡ್​ ಬೇರೆ ಸಮೀಪಿಸುತ್ತಿದೆ. ಹೊಸ ವರ್ಷಕ್ಕೆ ಸ್ವಾಗತ ಕೋರುವಾಗ ಒಳ್ಳೆಯ ಸಂಗೀತ ಕೇಳೋಣ ಎಂಬ ಆಸೆ ಎಲ್ಲರಿಗೂ ಇರುತ್ತೆ. ನೀವು ಕೂಡ ಫ್ರೆಂಡ್ಸ್​ ಜೊತೆ ವರ್ಷಾಂತ್ಯದ ಪಾರ್ಟಿ ಮಾಡಬೇಕು ಎಂದುಕೊಂಡಿದ್ದರೆ ಬ್ಲೂಟೂತ್​ ಸ್ಪೀಕರ್​ಗಳು ನಿಮ್ಮ ಪಾರ್ಟಿ ಮೂಡ್​ಗೆ ಇನ್ನಷ್ಟು ಮಜಾ ನೀಡಬಲ್ಲವು. ಸಾಮಾನ್ಯ ಸ್ಪೀಕರ್​ಗಳಿಗೆ ಹೋಲಿಕೆ ಮಾಡಿದ್ರೆ ಹೆಚ್ಚಿನ ಆಯ್ಕೆಗಳನ್ನು ಹೊಂದಿರುವ ಬ್ಲೂಟೂತ್​ ಸ್ಪೀಕರ್​ಗಳನ್ನು ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವುದು ಕೂಡ ಸುಲಭವಾಗಿದೆ. ನೀವು ಎಲ್ಲೇ ಸಾಂಗ್​ ಕೇಳಬೇಕು ಎಂದು ಬಯಸಿದರೂ ಸಹ ಆ ಸ್ಥಳಕ್ಕೆ ಸುಲಭವಾಗಿ ಸ್ಪೀಕರ್​ಗಳನ್ನು ಕೊಂಡೊಯ್ಯಬಹುದಾಗಿದೆ. ನೀವು ಕೂಡ ಹೊಸ ಬ್ಲೂಟೂತ್​ ಸ್ಪೀಕರ್​ಗಳ ಹುಡುಕಾಟದಲ್ಲಿದ್ದರೆ ಇಲ್ಲಿ ದಿ ಬೆಸ್ಟ್​ ಬ್ಲೂಟೂತ್​ ಸ್ಪೀಕರ್​ಗಳ ಬಗ್ಗೆ ನಿಮಗೆ ಐಡಿಯಾ ಸಿಗಲಿದೆ .

ಕೈಗೆಟುಕುವ ದರದಲ್ಲಿ ಹೆಚ್ಚಿನ ಫೀಚರ್ಸ್​ ಹೊಂದಿರುವ ಬ್ಲೂಟೂತ್​ ಸ್ಪೀಕರ್​ಗಳ ಬಗ್ಗೆ ವಿವರಣೆ ಇಲ್ಲಿ ನೀಡಲಾಗಿದೆ. ಈ ವೈರ್​ಲೆಸ್​ ಸ್ಪೀಕರ್​ಗಳು ನಿಮಗೆ ಬಜೆಟ್​ ಸ್ನೇಹಿ ಕೂಡ ಆಗಿದ್ದು ಉತ್ತಮ ಅನುಭವವನ್ನು ನೀಡುತ್ತದೆ. ಈ ಬ್ಲೂಟೂತ್​​ ಸ್ಪೀಕರ್​ಗಳಿಂದ ನೀವು ಹೊಸ ವರ್ಷವನ್ನು ಇನ್ನಷ್ಟು ಜಾಲಿಯಾಗಿ ಸ್ವಾಗತಿಸಬಹುದಾಗಿದೆ.

1.ಸೋನಿ ಎಸ್​ಆರ್​ಎಕ್ಸ್​ ಎಕ್ಸ್​ವಿ 800 ಎಕ್ಸ್​ - ಶ್ರೇಣಿಯ ಪೋರ್ಟಬಲ್​ ಬ್ಲೂಟುತ್​ ಪಾರ್ಟಿ ಸ್ಪೀಕರ್​:

ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಗುಣಮಟ್ಟದ ಸ್ಪೀಕರ್​ ಬ್ರ್ಯಾಂಡ್​ಗಳಲ್ಲಿ ಸೋನಿ ಕೂಡ ಒಂದು. ಅದರಲ್ಲೂ ಈ ಪಾರ್ಟಿ ಸ್ಪೀಕರ್​ಗಳಂತೂ ಸಿಕ್ಕಾಪಟ್ಟೆ ಚೆನ್ನಾಗಿದೆ. 43,500 ರೂಪಾಯಿ ಮೌಲ್ಯದ ಈ ಸ್ಪೀಕರ್​ಗಳು ನಿಮಗೆ ಸತತ 25 ಗಂಟೆಗಳ ಕಾಲ ಹಾಡು ಕೇಳಿಸುವ ಸಾಮರ್ಥ್ಯ ಹೊಂದಿವೆ. ಅಲ್ಲದೇ ನೀವು ಡಸ್ಟ್​ಪ್ರೂಫ್​ ಹಾಗೂ ಸ್ಪಾಶ್​ಪ್ರೂಫ್​​ ಸೌಕರ್ಯಗಳನ್ನೂ ಪಡೆಯಲಿದ್ದೀರಿ. ಹೀಗಾಗಿ ಹೊರಾಂಗಣದಲ್ಲಿ ಪಾರ್ಟಿ ಮಾಡುವವರಿಗೆ ಇದು ಬೆಸ್ಟ್​ ಆಯ್ಕೆಯಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸುವಾಗ ಕೊಂಚ ಭಾರ ಎನಿಸಬಹುದು ಎಂಬುದೊಂದನ್ನು ಬಿಟ್ಟರೆ ಮತ್ತೆಲ್ಲ ರೀತಿಯಲ್ಲೂ ಇದು ಬೆಸ್ಟ್​ ಆಯ್ಕೆಯಾಗಿದೆ.

2. ಜೆಬಿಎಲ್​ ಪಾರ್ಟಿಬಾಕ್ಸ್​ 310 ಪೋರ್ಟಬಲ್​ ಬ್ಲೂಟುತ್​ ಪಾರ್ಟಿ ಸ್ಪೀಕರ್​

ಈ ಜೆಬಿಎಲ್​ ಸ್ಪೀಕರ್​ನಿಂದ ಹಾಡನ್ನು ಕೇಳುವುದೇ ಒಂದು ಮಜಾ. 240 ವ್ಯಾಟ್​ ಸಾಮರ್ಥ್ಯದ ಔಟ್​ಪುಟ್​ನ್ನು ನೀವು ಆನಂದಿಸಲಿದ್ದೀರಿ.ಪಾರ್ಟಿ ಯಾವುದೇ ಆಗಿರಲಿ ಈ ಸ್ಪೀಕರ್​ಗಳಂತೂ ಆ ಪಾರ್ಟಿಯ ಹೀರೋ ಆಗೋದ್ರಲ್ಲಿ ಯಾವುದೇ ಮಾತಿಲ್ಲ ಇವು ದೊಡ್ಡ ಪ್ರಮಾಣದಲ್ಲಿ ಸೌಂಡ್​ ಹೊರ ಹಾಕುವುದರಿಂದ ದೊಡ್ಡ ದೊಡ್ಡ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಹ ಸ್ಪೀಕರ್ ಇದಾಗಿದೆ. ಒಮ್ಮೆ ನೀವು ಸ್ಪೀಕರ್​ನ್ನು ಫುಲ್​ ಜಾರ್ಜ್​ ಮಾಡಿದರೆ ಏನಿಲ್ಲವೆಂದರೂ 18 ಗಂಟೆಗಳ ಕಾಲ ನೀವು ಅನಿಯಮಿತವಾಗಿ ಎಂಜಾಯ್​ ಮಾಡಬಹುದಾಗಿದೆ. ಅಂದಹಾಗೆ ಇವುಗಳ ಬೆಲೆ 39,499 ರೂಪಾಯಿ ಆಗಿದೆ. ಬ್ಯಾಟರಿ ಉಳಿದ ಸ್ಪೀಕರ್​ಗಳಿಗೆ ಹೊಲಿಸಿದರೆ ಸ್ವಲ್ಪ ಕಮ್ಮಿ ಅವಧಿ ಬಾಳಿಕೆ ಬರುತ್ತದೆ ಎನ್ನುವುದೊಂದರೆ ಈ ಸ್ಪೀಕರ್​​ನಿಂದ ಸಿಗುವ ನಷ್ಟವಾಗಿದೆ.

3. ಎಲ್​ಜಿ ಎಕ್ಸ್​ಬೂಮ್​ ಎಕ್ಸ್​ಎಲ್​7ಎಸ್​​​ ಬ್ಲೂಟೂತ್​ ವೈರ್​ಲೆಸ್ಟ್​ ಸ್ಪೀಕರ್ಸ್​

ಗೃಹೋಪಯೋಗಿ ವಸ್ತುಗಳ ಖರೀದಿಗೆ ಎಲ್​ಜಿ ಬ್ರ್ಯಾಂಡ್​ ಹೇಳಿ ಮಾಡಿಸಿದಂತಹ ಬ್ರ್ಯಾಂಡ್​ ಆಗಿದೆ. ಅತ್ಯುತ್ತಮ ಡಿಸೈನ್​ ಹೊಂದಿರುವ ಈ ಎಲ್​​ಜಿ ಸ್ಪೀಕರ್​ಗಳು ಅತ್ಯುತ್ತಮ ಪ್ರದರ್ಶನ ನೀಡುತ್ತವೆ. ಒಮ್ಮೆ ನೀವು ಸ್ಪೀಕರ್​ನ್ನು ಫುಲ್​ ಜಾರ್ಜ್ ಮಾಡಿದರೆ 20 ಗಂಟೆಗಳ ಕಾಲ ನೀವು ಶೋ ನಡೆಸಬಹುದಾಗಿದೆ. ಅಲ್ಲದೇ ಇವುಗಳು ಚಾರ್ಜ್ ಆಗಲೂ ಸಹ ಕಡಿಮೆ ಸಮಯ ತೆಗೆದುಕೊಳ್ಳುತ್ತವೆ ಎನ್ನುವುದು ಮತ್ತೊಂದು ವಿಶೇಷ.ಇವುಗಳ ಬೆಲೆ 33,490 ರೂಪಾಯಿ ಆಗಿದೆ. ಅಲ್ಲದೇ ಈ ಸ್ಪೀಕರ್​ಗಳಲ್ಲಿ ಅಂತಹ ಯಾವುದೇ ದೋಷ ಕೂಡ ಸಿಗುವುದಿಲ್ಲ.

4.ಸೋನಿ ಎಂಹೆಚ್​ಸಿ - ವಿ 4 - ಬ್ಲೂಟೂತ್​ ಪಾರ್ಟಿ ಸ್ಪೀಕರ್ಸ್

ಸೋನಿ ಕಂಪನಿಯ ಈ ಬ್ಲುಟೂತ್​ ಸ್ಪೀಕರ್​ಗಳು ಸಹ ಬಹು ಬೇಡಿಕೆಯನ್ನು ಹೊಂದಿವೆ. ಈ ಸ್ಪೀಕರ್​ಗಳಲ್ಲಿ ನಿಮಗೆ ಪವರ್​ಫುಲ್​ ಆಗಿರುವ ಜೆಟ್​ ಬಾಸ್​ ಬೂಸ್ಟರ್ ಕೂಡ ಸಿಗುತ್ತದೆ. ಇದು ನಿಮಗೆ ಪವರ್​ಫುಲ್​ ಸೌಂಡ್​​ನ್ನು ಸ್ಪೀಕರ್​ನಿಂದ ಹೊರ ಹಾಕಲು ಸಹಕರಿಸುತ್ತದೆ. ಅಲ್ಲದೇ ನಿಮ್ಮ ಕೈಯನ್ನು ಮೇಲೆ ಹಾಗೂ ಕೆಳಗೆ ಮಾಡುವ ಮೂಲಕ ಈ ಸ್ಪೀಕರ್​ನಲ್ಲಿ ನೀವು ವಾಲ್ಯೂಮ್​ ಅಡ್ಜಸ್ಟ್​ ಮಾಡಬಹುದಾಗಿದೆ. ಇವುಗಳ ಬೆಲೆ 32,990 ರೂಪಾಯಿ ಎಂದು ಕಂಪನಿ ತಿಳಿಸಿದೆ. ಆದರೆ ಇವುಗಳ ವಿನ್ಯಾಸ ನಿಮಗೆ ಕೊಂಚ ಬೋರಿಂಗ್​ ಎನಿಸಬಹುದು.

5. ಜೆಬಿಎಲ್​​ ಬೂಮ್​ಬಾಕ್ಸ್​ 3 ವೈಫೈ ವೈರ್​ಲೆಸ್​ ಡಾಲಿ ಅಟ್ಮೋಸ್​ ಸ್ಪೀಕರ್​

ಇದು ಕೂಡ ಭಾರತದಲ್ಲಿ ಲಭ್ಯವಿರುವ ಬೆಸ್ಟ್​ ಸ್ಪೀಕರ್​ಗಳ ಪೈಕಿ ಒಂದಾಗಿದೆ. 800 ವ್ಯಾಟ್​​ ಸಾಮರ್ಥ್ಯದ ಔಟ್​ಪುಟ್​ನ್ನು ನೀವು ಈ ಸ್ಪೀಕರ್​ಗಳಿಂದ ಪಡೆಯಲಿದ್ದೀರಿ. ಅಲ್ಲದೇ ಈ ಸ್ಪೀಕರ್​ನ ವಿನ್ಯಾಸ ಕೂಡ ಅನೇಕರಿಂದ ಮೆಚ್ಚುಗೆ ಗಳಿಸಿದೆ. ಡಸ್ಟ್​ ಪ್ರೂಫ್​ ಬೇರೆ ಆಗಿರುವುದರಿಂದ ನೀವು ಎಲ್ಲಿ ಬೇಕಿದ್ದರೂ ಈ ಸ್ಪೀಕರ್​ಗಳನ್ನು ಇಟ್ಟುಕೊಂಡು ಪಾರ್ಟಿ ಮಾಡಬಹುದಾಗಿದೆ. ಅಂದಹಾಗೆ ಇವುಗಳ ಬೆಲೆ 49,999 ರೂಪಾಯಿ ಆಗಿದೆ. ಇವುಗಳಲ್ಲಿಯೂ ಸಹ ನಿಮಗೆ ಯಾವುದೇ ದೋಷಗಳು ಕಂಡುಬರುವುದಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ