Credit Score: ಉತ್ತಮ ಕ್ರೆಡಿಟ್​ ಸ್ಕೋರ್​​ ನಿರ್ವಹಣೆ ಮಾಡುವುದು ಹೇಗೆ? ಇದರಿಂದ ಏನೆಲ್ಲ ಲಾಭವಿದೆ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Credit Score: ಉತ್ತಮ ಕ್ರೆಡಿಟ್​ ಸ್ಕೋರ್​​ ನಿರ್ವಹಣೆ ಮಾಡುವುದು ಹೇಗೆ? ಇದರಿಂದ ಏನೆಲ್ಲ ಲಾಭವಿದೆ? ಇಲ್ಲಿದೆ ಮಾಹಿತಿ

Credit Score: ಉತ್ತಮ ಕ್ರೆಡಿಟ್​ ಸ್ಕೋರ್​​ ನಿರ್ವಹಣೆ ಮಾಡುವುದು ಹೇಗೆ? ಇದರಿಂದ ಏನೆಲ್ಲ ಲಾಭವಿದೆ? ಇಲ್ಲಿದೆ ಮಾಹಿತಿ

Good Credit Score Benefits: ಬ್ಯಾಂಕ್​ಗಳಿಂದ ಸಾಲದ ಅವಶ್ಯಕತೆ ಇರುವವರಿಗೆ ಬ್ಯಾಂಕ್​ನ ಸಿಬ್ಬಂದಿ ಮೊದಲು ಕೇಳುವುದೇ ನಿಮ್ಮ ಕ್ರೆಡಿಟ್​ ಸ್ಕೋರ್​. ಕ್ರೆಡಿಟ್​ ಸ್ಕೋರ್​ನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ಮಾತ್ರ ನಿಮಗೆ ಸಾಲ ಸೌಲಭ್ಯ ಸರಿಯಾಗಿ ಸಿಗಲು ಸಾಧ್ಯ. ಹಾಗಾದರೆ ಉತ್ತಮ ಕ್ರೆಡಿಟ್​ ಸ್ಕೋರ್​ ನಿರ್ವಹಣೆ ಹೇಗೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಕ್ರೆಡಿಟ್​ ಸ್ಕೋರ್​​ (ಪ್ರಾತಿನಿಧಿಕ ಚಿತ್ರ)
ಕ್ರೆಡಿಟ್​ ಸ್ಕೋರ್​​ (ಪ್ರಾತಿನಿಧಿಕ ಚಿತ್ರ)

ನೀವು ಆರ್ಥಿಕವಾಗಿ ನಿಮ್ಮನ್ನು ನೀವು ಹೇಗೆ ಬ್ಯಾಲೆನ್ಸ್​ ಮಾಡಿಕೊಂಡಿದ್ದೀರಿ ಎನ್ನುವುದನ್ನು ನಿಮ್ಮ ಕ್ರೆಡಿಟ್​ ಸ್ಕೋರ್​ ಮೂಲಕ ತಿಳಿದುಕೊಳ್ಳಬಹುದು. ನಿಮ್ಮ ಕ್ರೆಡಿಟ್​ ಸ್ಕೋರ್​ ಚೆನ್ನಾಗಿದೆ ಎಂದರೆ ನೀವು ಬ್ಯಾಂಕಿಂಗ್​ನ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದೀರಿ ಎಂದೇ ಅರ್ಥ. ಹಾಗಾದರೆ ನಿಮ್ಮ ಕ್ರೆಡಿಟ್​ ಸ್ಕೋರ್​ ಕೂಡ ಚೆನ್ನಾಗಿ ಇರಬೇಕು ಎಂದರೆ ನೀವು ಯಾವೆಲ್ಲ ರೀತಿಯಲ್ಲಿ ಮುತುವರ್ಜಿ ವಹಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ..

ಕ್ರೆಡಿಟ್​ ಕಾರ್ಡ್ ಬಿಲ್​ಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದೇ ಇರುವುದು ಅಥವಾ ಬಿಲ್​ ಪಾವತಿಯಿಂದಲೇ ತಪ್ಪಿಸಿಕೊಳ್ಳುವುದು ನಿಮ್ಮ ಕ್ರೆಡಿಟ್​ ಸ್ಕೋರ್ ಹಾಳು ಮಾಡಿಕೊಳ್ಳಲು ನಿಮಗೆ ನಿಮಗೆ ನೀವು ಕೊಟ್ಟುಕೊಳ್ಳಬಹುದಾದ ಒಂದು ದೊಡ್ಡ ತೊಂದರೆ ಎಂದೇ ಹೇಳಬಹುದಾಗಿದೆ. ಹೀಗಾಗಿ ನೀವು ನಿರ್ದಿಷ್ಟ ದಿನಾಂಕದಂದೇ ನಿಮ್ಮ ಕ್ರೆಡಿಟ್​ ಬಿಲ್​ಗಳನ್ನು ಪಾವತಿ ಮಾಡಿಬಿಡಬೇಕು. ಆಟೋ ಡೆಬಿಟ್​ ಆಯ್ಕೆಯನ್ನು ನೀವು ಕೊಟ್ಟಲ್ಲಿ ಹಣ ತನ್ನಿಂದ ತಾನೇ ನಿಮ್ಮ ಬ್ಯಾಂಕ್​ನಿಂದ ಡೆಬಿಟ್​ ಆಗುತ್ತದೆ.

ಇನ್ನೊಂದು ಮುಖ್ಯವಾದ ಅಂಶ ಏನೆಂದರೆ ನಿಮ್ಮ ಕ್ರೆಡಿಟ್​ ಮಿತಿಯನ್ನು ಎಷ್ಟು ಬಾರಿ ಬಳಸಲಾಗಿದೆ ಎನ್ನುವುದು ಕೂಡ ನಿಮ್ಮ ಕ್ರೆಡಿಟ್​ ಸ್ಕೋರ್​ಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಕಾರ್ಡ್​ ಮಿತಿಯನ್ನು ಮೀರಿ ನೀವು ಟ್ರಾನ್ಸಾಕ್ಷನ್​ಗಳನ್ನು ನಡೆಸುವುದು ನಿಮ್ಮ ಕ್ರೆಡಿಟ್​ ಸ್ಕೋರ್​ಗೆ ಅಪಾಯಕಾರಿ . ಇದರಿಂದ ನಿಮಗೆ ಬೇರೆ ಕಡೆಯಿಂದ ಸಾಲ ಪಡೆದುಕೊಳ್ಳುವುದು ಕೂಡ ಕಷ್ಟವೆನಿಸುತ್ತದೆ.

ಕೆಲವರು ಬೇರೆ ಬೇರೆ ಕ್ರೆಡಿಟ್​ ಕಾರ್ಡ್​ಗಳಲ್ಲಿ ಸಾಲ ಪಡೆಯುತ್ತಾರೆ. ಹಾಗೂ ಕ್ರೆಡಿಟ್​ ಕಾರ್ಡ್​ನಿಂದ ಅತಿ ಹೆಚ್ಚು ಹಣ ಪಡೆಯಲು ಇದೇ ಉತ್ತಮ ಮಾರ್ಗ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದು ನಿಮ್ಮ ಕ್ರೆಡಿಟ್​ ಸ್ಕೋರ್​ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಲುಬಹುದು . ಹೆಚ್ಚೆಚ್ಚು ಕ್ರೆಡಿಟ್​ ಕಾರ್ಡ್ಗಳ ಬಳಕೆಯಿಂದ ನಿಮಗೆ ಬಿಲ್​ ಪಾವತಿಯಲ್ಲಿ ಗೊಂದಲ ಉಂಟಾಗಬಹುದು. ಹಾಗೂ ಕ್ರೆಡಿಟ್​ ಕಾರ್ಡ್ ಬಿಲ್​ ಪಾವತಿ ತಡವಾದಲ್ಲಿ ಕ್ರೆಡಿಟ್​ ಸ್ಕೋರ್​ ಕಡಿಮೆಯಾಗುತ್ತದೆ .

ಇನ್ನೊಂದು ಗಮನಿಸಬೇಕಾದ ವಿಚಾರ ಏನೆಂದರೆ ಯಾವುದೇ ಸಾಲವನ್ನು ನೀವು ಹೊಂದಿರದೇ ಇರುವುದು ಕೂಡ ನಿಮ್ಮ ಕ್ರೆಡಿಟ್​ ಸ್ಕೋರ್​ ಹೆಚ್ಚಿಸುವುದಿಲ್ಲ. ಸಾಲ ಇರಬೇಕು ಹಾಗೂ ನೀವು ಕಾಲ ಕಾಲಕ್ಕೆ ಸರಿಯಾಗಿ ಬಡ್ಡಿ ಪಾವತಿ ಮಾಡಿದಾಗ ಮಾತ್ರ ನಿಮ್ಮ ಕ್ರೆಡಿಟ್​ ಸ್ಕೋರ್​ ಹೆಚ್ಚುತ್ತಾ ಹೋಗುತ್ತದೆ.

ಒಳ್ಳೆಯ ಕ್ರೆಡಿಟ್​ ಸ್ಕೋರ್​ ಇದ್ದರೆ ಏನು ಲಾಭ ?

ಕ್ರೆಡಿಟ್​ ಸ್ಕೋರ್​ಗಳನ್ನು 300 ರಿಂದ 900ರ ಮಿತಿಯಲ್ಲಿ ಪ್ರತಿನಿಧಿಸಲಾಗುತ್ತದೆ. ನಿಮ್ಮ ಕ್ರೆಡಿಟ್​ ಸ್ಕೋರ್​ 900ಕ್ಕೆ ಸಮೀಪವಿದ್ದಷ್ಟೂ ನಿಮಗೆ ಒಳ್ಳೆಯದು. ಸಾಲಗಾರರ ಅರ್ಹತೆಯನ್ನು ತಿಳಿದುಕೊಳ್ಳುವಲ್ಲಿ ಕ್ರೆಡಿಟ್​ ಸ್ಕೋರ್​ ಅಥವಾ ಸಿಬಿಲ್​ ಸ್ಕೋರ್​ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ರೀತಿಯಲ್ಲಿ ಇದು ಸಾಲ ಪಡೆಯಲು ನಿಮಗೆ ಸಿಗುವ ವಿಐಪಿ ಪಾಸ್​ ಇದ್ದಂತೆ. ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡಿದಂತೆಲ್ಲ ನಿಮ್ಮ ಸಿಬಿಲ್​ ಸ್ಕೋರ್​ ಹೆಚ್ಚುತ್ತಾ ಹೋಗುತ್ತದೆ.

ಹೆಚ್ಚಿನ ಕ್ರೆಡಿಟ್​ ಸ್ಕೋರ್​ಗಳನ್ನು ಹೊಂದಿರುವವರಿಗೆ ವಿವಿಧ ಸಾಲಗಳು ಹಾಗೂ ಕ್ರೆಡಿಟ್​ ಕಾರ್ಡ್​ಗಳಲ್ಲಿ ಹೆಚ್ಚೆಚ್ಚು ಆಫರ್​ ಸಿಗುತ್ತಾ ಹೋಗುತ್ತದೆ. ಬ್ಯಾಂಕ್​ಗಳು ನಿಮಗೆ ವಿವಿಧ ಆಫರ್​ಗಳನ್ನು ನೀಡುತ್ತವೆ. ಕ್ರೆಡಿಟ್​ ಕಾರ್ಡ್​ಗಳು ತಮ್ಮ ಕ್ರೆಡಿಟ್​ ಮಿತಿಯನ್ನು ನಿಮಗೆ ಹೆಚ್ಚಿಸಿಕೊಡುತ್ತವೆ. ಆರ್ಥಿಕವಾಗಿ ಸಂಕಷ್ಟದ ಸಂದರ್ಭದಲ್ಲಿ ಈ ಎಲ್ಲಾ ಆಫರ್​ಗಳು ನಿಮಗೆ ಪ್ರಯೋಜನಕ್ಕೆ ಬರುವುದರಿಂದ ಉತ್ತಮ ಕ್ರೆಡಿಟ್​ ಸ್ಕೋರ್​ ಹೊಂದುವುದು ಅವಶ್ಯವಾಗಿದೆ.

Whats_app_banner