logo
ಕನ್ನಡ ಸುದ್ದಿ  /  ಜೀವನಶೈಲಿ  /  Tender Coconut And Weight Loss: ಎಳನೀರು ಕುಡಿಯುವುದರಿಂದ ದೇಹತೂಕ ನಿಯಂತ್ರಿಸಬಹುದೇ? ದೇಹದಂಡಿಸುವವರು ಎಳನೀರು ಕುಡಿಯುವುದು ಅವಶ್ಯವೆ?

Tender coconut and weight loss: ಎಳನೀರು ಕುಡಿಯುವುದರಿಂದ ದೇಹತೂಕ ನಿಯಂತ್ರಿಸಬಹುದೇ? ದೇಹದಂಡಿಸುವವರು ಎಳನೀರು ಕುಡಿಯುವುದು ಅವಶ್ಯವೆ?

HT Kannada Desk HT Kannada

Mar 12, 2023 05:02 PM IST

google News

ಎಳನೀರು

    • Tender coconut and weight loss: ಎಳನೀರಿನ ನಿರಂತರ ಸೇವನೆಯಿಂದ ದೇಹತೂಕ ಕಡಿಮೆಯಾಗುವ ಜೊತೆಗೆ ದೇಹಕ್ಕೆ ಚೈತನ್ಯವೂ ಸಿಗುತ್ತದೆ, ಇದು ದೇಹದ ನಿರ್ಜಲೀಕರಣವನ್ನು ದೂರ ಮಾಡುವ ಜೊತೆಗೆ ದೇಹಕ್ಕೆ ಅಗತ್ಯ ಪೋಷಕಾಂಶವನ್ನೂ ಒದಗಿಸುತ್ತದೆ.
ಎಳನೀರು
ಎಳನೀರು

ಎಳನೀರು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಹಲವರು ಇದನ್ನು ಪ್ರತಿದಿನ ಕುಡಿಯುತ್ತಾರೆ. ಇನ್ನೂ ಕೆಲವರು ಆರೋಗ್ಯ ಸಮಸ್ಯೆ ಇದ್ದಾಗ ಕುಡಿಯುತ್ತಾರೆ. ತೂಕ ಇಳಿಸುವವರು ಎಳನೀರನ್ನು ಪ್ರತಿದಿನ ಕುಡಿದರೆ ಉತ್ತಮ. ಬೇಸಿಗೆಯಲ್ಲಂತೂ ದೇಹದ ತಾಪ ತಣಿಸಲು ಎಳನೀರು ನಿಜಕ್ಕೂ ಸಹಕಾರಿ. ಇದರ ನಿರಂತರ ಸೇವನೆಯಿಂದ ದೇಹತೂಕ ಕಡಿಮೆಯಾಗುವ ಜೊತೆಗೆ ದೇಹಕ್ಕೆ ಚೈತನ್ಯವೂ ಸಿಗುತ್ತದೆ. ಇದು ನೈಸರ್ಗಿಕವಾಗಿ ದೇಹದ ನಿರ್ಜಲೀಕರಣವನ್ನು ತಪ್ಪಿಸುತ್ತದೆ. ಇದು ಪೋಷಕಾಂಶ ಸಮೃದ್ಧವಾಗಿದೆ. ಇದು ವ್ಯಾಯಾಮದ ನಂತದ ದೇಹಕ್ಕೆ ಅಗತ್ಯ ಶಕ್ತಿ ಒದಗಿಸುತ್ತದೆ. ಇದನ್ನು ಕುಡಿಯುವುದರಿಂದ ಪರಿಣಾಮಕಾರಿ ಮಾರ್ಗದಲ್ಲಿ ತೂಕ ನಿಯಂತ್ರಣವಾಗುವುದನ್ನು ನೋಡಬಹುದು.

ಇದು ಕೂದಲು ಹಾಗೂ ಚರ್ಮದ ಆರೋಗ್ಯಕ್ಕೂ ಉತ್ತಮ. ಹಾಗಾದರೆ ಎಳನೀರು ತೂಕ ನಿಯಂತ್ರಣಕ್ಕೆ ಹೇಗೆ ಸಹಾಯ ಮಾಡುತ್ತದೆ, ಇದರಲ್ಲಿನ ಪೋಷಕಾಂಶಗಳ ಪಾತ್ರವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ನೈಸರ್ಗಿಕ ಉಪಯೋಗಗಳು

ತೂಕನಷ್ಟಕ್ಕೆ ಎಳನೀರು ಉತ್ತಮ, ಇದರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಆದರೆ ನಾವು ಎಳನೀರನ್ನು ಮಾತ್ರ ಸೇವಿಸುವುದು ಮಾತ್ರಕ್ಕೆ ಉತ್ತಮ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಲಿತ ಕಾಯಿಯ ತೆಂಗಿನ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ತೆಂಗಿನಹಾಲು ಅಥವಾ ಬಲಿತ ತೆಂಗಿನನೀರಿನಲ್ಲಿ ಕ್ಯಾಲೊರಿ ಅಂಶ ಅಧಿಕವಿರುತ್ತದೆ. ಇದು ತೂಕ ಇಳಿಸುವವರಿಗೆ ಒಳ್ಳೆಯದಲ್ಲ. ಎಳನೀರಿನಲ್ಲಿ ನಾರಿನಂಶ, ಪೊಟ್ಯಾಶಿಯಂ, ಪ್ರೊಟೀನ್, ವಿಟಮಿನ್‌ ಸಿ, ಕಿಣ್ವಗಳಿದ್ದು ಈ ಪೋಷಕಾಂಶಗಳು ದೇಹಕ್ಕೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತವೆ. ಹಾಗಾದರೆ ತೂಕ ಇಳಿಕೆಗೆ ಎಳನೀರು ಹೇಗೆ ಸಹಕಾರಿ?

ಕಡಿಮೆ ಕ್ಯಾಲೊರಿ

ಎಳನೀರಿನಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆ ಇದೆ. 1 ಕಪ್‌ ಎಳನೀರಿನಲ್ಲಿ 46ರಷ್ಟು ಪ್ರಮಾಣದ ಕ್ಯಾಲೊರಿ ಇರುತ್ತದೆ. ಇದರೊಂದಿಗೆ ಪೋಷಕಾಂಶ ಸಮೃದ್ಧವಾಗಿದೆ. ಪ್ಯಾಕೆಟ್‌ನಲ್ಲಿರುವ ಪಾನೀಯಗಳಿಗಿಂತ ಇದರ ಬಹಳ ಉತ್ತಮ. ತಂಪುಪಾನೀಯಗಳಲ್ಲಿ ಸೇರಿಸಿದ ಸಕ್ಕರೆಯಂಶ ಹಾಗೂ ಫ್ಲೇವರ್‌ಗಳಿದ್ದು ಇದು ದೇಹತೂಕವನ್ನು ಹೆಚ್ಚಳ ಮಾಡುತ್ತದೆ. ಕಡಿಮೆ ಕ್ಯಾಲೊರಿ ಪ್ರಮಾಣ ಹೊಂದಿರುವ ಈ ಪಾನೀಯ ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಅಲ್ಲದೆ ತೂಕ ಇಳಿಸಲು ಸಹಕಾರಿ.

ಚಯಾಪಚಯ ಪ್ರಮಾಣವನ್ನು ಹೆಚ್ಚಿಸುತ್ತದೆ

ಚಯಾಪಚಯ ಕ್ರಿಯೆಯಲ್ಲಿ ತೊಂದರೆ ಇರುವವರಲ್ಲಿಯೂ ಬಹಳ ಬೇಗನೆ ಸ್ಥೂಲಕಾಯತೆ ಉಂಟಾಗಬಹುದು. ಈ ಸಮಸ್ಯೆ ಇದ್ದವರು ಎಷ್ಟು ಕಡಿಮೆ ತಿಂದರೂ ವ್ಯತ್ಯಾಸವಾಗುವುದಿಲ್ಲ. ತೂಕ ಹೆಚ್ಚಳ ಆಗುತ್ತಲೇ ಇರುತ್ತದೆ. ಎಳನೀರು ಚಯಾಪಚಯ ಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಸ್ಥೂಲತೆಯ ವಿರುದ್ಧ ಹೋರಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್‌

ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕೆಟ್ಟ ಕೊಲೆಸ್ಟ್ರಾಲ್‌ ಅಪಧಮನಿಗಳ ಗೋಡೆಗಳಲ್ಲಿ ಸಂಗ್ರಹವಾಗಿ ಅಪಧಮನಿಗಳನ್ನು ಮುಚ್ಚಿಹಾಕಬಹುದು. ಇದು ಸರಾಗ ರಕ್ತ ಸಂಚಾರಕ್ಕೆ ಅಡ್ಡಿ ಪಡಿಸಬಹುದು. ಇದು ಮಾರಣಾಂತಿಕ ಕೂಡ ಹೌದು. ಎಳನೀರಿನಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಇದೆ ಎನ್ನುವುದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಲಾಗಿದೆ. ಎಳನೀರು ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಪಿತ್ತರಸ ಆಮ್ಲಗಳಾಗಿ ಪರಿವರ್ತಿಸಿ ಅದನ್ನು ದೇಹದಲ್ಲಿ ಹೊರ ಹಾಕುತ್ತದೆ.

ಇನ್ಸುಲಿನ್‌ ಸೂಕ್ಷತೆಯನ್ನು ಸುಧಾರಿಸುತ್ತದೆ

ಎಳನೀರು ಉತ್ಕರ್ಷಣ ವಿರೋಧಿಗುಣವನ್ನು ಹೊಂದಿದೆ. ಇದು ಆಮ್ಲಜನಕ ವಿರೋಧಿ ಅಂಶಗಳನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಆಮ್ಲಜನರ ವಿರೋಧಿ ಪ್ರಭೇದಗಳು ಹಲವು ರೋಗಗಳು, ಅಸ್ವಸ್ಥತೆ, ಅಕಾಲಿಕ ವಯಸ್ಸು ಇಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಎಳನೀರು ಅದನ್ನು ತಡೆದು, ಇಲ್ಸುಲಿನ್‌ ಸೂಕ್ಷತೆಯನ್ನು ಹೆಚ್ಚಿಸಲು ನೆರವಾಗಬಹುದು. ನಿಮ್ಮ ದೇಹವು ಇನ್ಸುಲಿನ್‌ಗೆ ಸಂವೇದನಾಶೀಲವಾಗಿದ್ದಾಗ, ನೀವು ತೂಕವನ್ನು ಹೆಚ್ಚಿಸುವ ಅಥವಾ ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಥೈರಾಯ್ಡ್ ಕಾರ್ಯವನ್ನು ಬೆಂಬಲಿಸುತ್ತದೆ

ಥೈರಾಯ್ಡ್ ಗ್ರಂಥಿಯು ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದಿಸದಿದ್ದಾಗ, ಚಯಾಪಚಯ ದರವು ನಿಧಾನವಾಗಿರುತ್ತದೆ. ತೆಂಗಿನ ನೀರು ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ, ಹೀಗಾಗಿ ಚಯಾಪಚಯ ದರವನ್ನು ಸಾಮಾನ್ಯಗೊಳಿಸುತ್ತದೆ.

ಹಸಿವನ್ನು ತಡೆಯುತ್ತದೆ

ತೆಂಗಿನ ನೀರು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ ಮತ್ತು ಇದು ನಿರ್ಜಲೀಕರಣವನ್ನು ತಡೆಯುತ್ತದೆ. ಎಳನೀರು ಕುಡಿದ ನಂತರ ಹೊಟ್ಟೆ ತುಂಬಿದಂತಿದ್ದು, ಕನಿಷ್ಠ ಒಂದು ಗಂಟೆಯವರೆಗೆ ಹಸಿವನ್ನು ತಡೆಯಬಹುದು. ಇದರಲ್ಲಿನ ಲವಣಗಳು ಮತ್ತು ಸಕ್ಕರೆಯ ವಿಶಿಷ್ಟ ಸಂಯೋಜನೆಯು ನಿಮ್ಮ ರುಚಿ ಮೊಗ್ಗನ್ನು ತೃಪ್ತಿಪಡಿಸುವುದರಿಂದ ಜಂಕ್ ಫುಡ್ ಅನ್ನು ತಿನ್ನುವ ಬಯಕೆಯಾಗುವುದಿಲ್ಲ. ಇದು ತೂಕ ಇಳಿಕೆಗೆ ಸಹಕಾರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ