logo
ಕನ್ನಡ ಸುದ್ದಿ  /  ಜೀವನಶೈಲಿ  /  Tips For Bone Health: ಈ ಕೆಟ್ಟ ಅಭ್ಯಾಸಗಳು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸಬಹುದು..ಎಚ್ಚರಿಕೆಯಿಂದ ಇರಿ

Tips For Bone health: ಈ ಕೆಟ್ಟ ಅಭ್ಯಾಸಗಳು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸಬಹುದು..ಎಚ್ಚರಿಕೆಯಿಂದ ಇರಿ

HT Kannada Desk HT Kannada

Oct 11, 2022 09:17 PM IST

ಮೂಳೆಗಳನ್ನು ದುರ್ಬಲಗೊಳಿಸುವ ಅಭ್ಯಾಸಗಳಿಂದ ದೂರವಿರಿ

    • ಬಿಸಿಲಿನಿಂದ ಏನು ಸಮಸ್ಯೆಯಾಗುವುದೋ ಎಂಬ ಕಾರಣಕ್ಕೆ ಬಹಳ ಜನರು ಮನೆಯೊಳಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದಾಗಿ ಅವರು ಸಾಕಷ್ಟು ವಿಟಮಿನ್ ಡಿ ಪಡೆಯುವುದಿಲ್ಲ. ಹೀಗೆ ಮಾಡುವುದು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಟಮಿನ್ ಡಿ ಕೊರತೆಯು ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆಗೆ ಕಾರಣವಾಗಬಹುದು.
ಮೂಳೆಗಳನ್ನು ದುರ್ಬಲಗೊಳಿಸುವ ಅಭ್ಯಾಸಗಳಿಂದ ದೂರವಿರಿ
ಮೂಳೆಗಳನ್ನು ದುರ್ಬಲಗೊಳಿಸುವ ಅಭ್ಯಾಸಗಳಿಂದ ದೂರವಿರಿ (PC: Freepik.com)

ಅನಾರೋಗ್ಯಕರ ಆಹಾರ ಪದ್ದತಿ ಮತ್ತು ಜೀವನಶೈಲಿಯಿಂದ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಅದರಲ್ಲಿ ಮೂಳೆ ದೌರ್ಬಲ್ಯವೂ ಒಂದು. ನೀವು ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದರೂ ಕೆಲವೊಮ್ಮೆ ಮೂಳೆ ದೌರ್ಬಲ್ಯವು ಪ್ರಮುಖ ಸಮಸ್ಯೆಯಾಗಬಹುದು. ಇದಕ್ಕೆ ನಾನಾ ಕಾರಣಗಳಿವೆ.

ಟ್ರೆಂಡಿಂಗ್​ ಸುದ್ದಿ

ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ

Flax Seeds: ಆರೋಗ್ಯಕಷ್ಟೇ ಅಲ್ಲ, ಅಂದಕ್ಕೂ ಬೇಕು ಅಗಸೆ ಬೀಜ; ಚರ್ಮ, ಕೂದಲಿನ ಕಾಂತಿ ಹೆಚ್ಚಲು ಇದನ್ನು ಹೀಗೆ ಬಳಸಿ

Egg Chat Recipe: ಮೊಟ್ಟೆ ತಿನ್ನೊಲ್ಲ ಅಂತ ಮಕ್ಕಳು ಹಟ ಮಾಡ್ತಾರಾ, ಈ ರೀತಿ ಎಗ್‌ ಚಾಟ್‌ ಮಾಡಿಕೊಡಿ, ಮತ್ತೂ ಬೇಕು ಅಂತ ತಿಂತಾರೆ

ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು

ಮೂಳೆಗಳು ದುರ್ಬಲವಾಗಿದ್ದರೆ ನೋವಿನ ಜೊತೆಗೆ ಮೂಳೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಶುರುವಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರೂ ತಮ್ಮ ಮೂಳೆಗಳ ಆರೋಗ್ಯದತ್ತ ಗಮನ ನೀಡಬೇಕು. ಅಷ್ಟೇ ಅಲ್ಲ, ಕೆಲವೊಮ್ಮೆ ನಾವು ಮಾಡುವ ತಪ್ಪುಗಳು ಮೂಳೆಗಳನ್ನು ದುರ್ಬಲಗೊಳಿಸಬಹುದು. ಆದ್ದರಿಂದ ನಮ್ಮ ಮೂಳೆಗಳನ್ನು ದುರ್ಬಲಗೊಳಿಸುವ ಕೆಲವೊಂದು ಅಭ್ಯಾಸಗಳನ್ನು ನಾವು ಬಿಡಬೇಕು.

ಹೊರಗೆ ಬಂದರೆ ಸೂರ್ಯನ ಬಿಸಿಲಿನಿಂದ ಏನು ಸಮಸ್ಯೆಯಾಗುವುದೋ ಎಂಬ ಕಾರಣಕ್ಕೆ ಬಹಳ ಜನರು ಮನೆಯೊಳಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದಾಗಿ ಅವರು ಸಾಕಷ್ಟು ವಿಟಮಿನ್ ಡಿ ಪಡೆಯುವುದಿಲ್ಲ. ಹೀಗೆ ಮಾಡುವುದು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಟಮಿನ್ ಡಿ ಕೊರತೆಯು ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆಗೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಆಹಾರದಲ್ಲಿ ವಿಟಮಿನ್ ಡಿ ಸೇರಿಸಿ. ಅಥವಾ ಪ್ರತಿದಿನ 30 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ಕೆಲಸ ಮಾಡಿ. ಅದು ಬೆಳಗಿನ ವಾಕಿಂಗ್‌ ಆಗಿರಬಹುದು.

ಕೆಲವರು ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಮೂಳೆಗಳಿಗೆ ಹಾನಿಯಾಗುತ್ತದೆ. ಏಕೆಂದರೆ ಆರೋಗ್ಯಕರ ಮೂಳೆಗಳಿಗೆ ಚಲನೆ ಬೇಕು. ಆದ್ದರಿಂದ ಪ್ರತಿದಿನ ವ್ಯಾಯಾಮ ಮಾಡಿ ಮತ್ತು ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರು ಆಗ್ಗಾಗ್ಗೆ ಎದ್ದು 5 ನಿಮಿಷ ವಾಕ್‌ ಮಾಡಿ.

ಉಪ್ಪು ದೇಹಕ್ಕೆ ಬಹಳ ಮುಖ್ಯ. ಆದರೆ ಅತಿಯಾದ ಉಪ್ಪು ಸೇವನೆ ಮೂಳೆಗಳನ್ನು ದುರ್ಬಲಗೊಳಿಸಲು ಪ್ರಾರಂಭಿಸುತ್ತದೆ. ಆದ್ದರಿಂದ ಉಪ್ಪನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು. ಆದಷ್ಟೂ ಕಡಿಮೆ ಉಪ್ಪು ತಿನ್ನುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ .

ಅನೇಕ ಜನರು ತಂಪು ಪಾನೀಯಗಳನ್ನು ಕುಡಿಯಲು ಇಷ್ಟಪಡುತ್ತಾರೆ. ಅವರಿಗೆ ಕೋಲ್ಡ್‌ ಡ್ರಿಂಕ್ಸ್‌ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ಆದರೆ ತಂಪು ಪಾನೀಯಗಳನ್ನು ಸೇವಿಸುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಹಾಗಾಗಿ ತಂಪು ಪಾನೀಯಗಳಿಂದ ದೂರವಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಈ ಅಂಶಗಳನ್ನು ನೀವು ಗಮನದಲ್ಲಿಡಿ. ನಿಮ್ಮ ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡುವ ಈ ಅಭ್ಯಾಸಗಳಿಂದ ದೂರ ಇರಿ. ಜೀವನಶೈಲಿಯ ಬದಲಾವಣೆ ಖಂಡಿತ ನಿಮಗೆ ಉತ್ತಮ ಆರೋಗ್ಯವನ್ನು ತಂದು ನೀಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು