logo
ಕನ್ನಡ ಸುದ್ದಿ  /  ಜೀವನಶೈಲಿ  /  ದಕ್ಷಿಣ ಭಾರತ ಪ್ರವಾಸ ಮಾಡುವ ಪ್ಲಾನ್ ಮಾಡ್ತಿದ್ದೀರಾದರೆ ಇಲ್ಲಿವೆ 10 ಐಡಿಯಾ, ಬೇಕಾದ್ದು ಚೂಸ್ ಮಾಡಿ ಪ್ರವಾಸ ಹೊರಡಿ

ದಕ್ಷಿಣ ಭಾರತ ಪ್ರವಾಸ ಮಾಡುವ ಪ್ಲಾನ್ ಮಾಡ್ತಿದ್ದೀರಾದರೆ ಇಲ್ಲಿವೆ 10 ಐಡಿಯಾ, ಬೇಕಾದ್ದು ಚೂಸ್ ಮಾಡಿ ಪ್ರವಾಸ ಹೊರಡಿ

Umesh Kumar S HT Kannada

Sep 22, 2024 05:16 PM IST

google News

ದಕ್ಷಿಣ ಭಾರತ ಪ್ರವಾಸಕ್ಕೆ 10 ಐಡಿಯಾ (ಸಾಂಕೇತಿಕ ಚಿತ್ರ)

  • ಸಾಮಾನ್ಯವಾಗಿ ಅಕ್ಟೋಬರ್ ರಜೆಯಲ್ಲಿ ಕಿರು ಪ್ರವಾಸ, ದೀರ್ಘ ಪ್ರವಾಸ ಮಾಡುವುದು ಸಾಮಾನ್ಯ. ಹಾಗೆ ನೀವು ಯಾರಾದರೂ ದಕ್ಷಿಣ ಭಾರತ ಪ್ರವಾಸ ಮಾಡುವ ಪ್ಲಾನ್ ಮಾಡ್ತಿದ್ದೀರಾದರೆ ಇಲ್ಲಿವೆ 10 ಐಡಿಯಾ, ಬೇಕಾದ್ದು ಚೂಸ್ ಮಾಡಿ ಪ್ರವಾಸ ಹೊರಡಿ. ಅದಕ್ಕೂ ಮೊದಲು ಬೇಕಾದ ಸಿದ್ಧತೆ ಈಗಲೇ ಶುರುಮಾಡಿ.

ದಕ್ಷಿಣ ಭಾರತ ಪ್ರವಾಸಕ್ಕೆ 10 ಐಡಿಯಾ (ಸಾಂಕೇತಿಕ ಚಿತ್ರ)
ದಕ್ಷಿಣ ಭಾರತ ಪ್ರವಾಸಕ್ಕೆ 10 ಐಡಿಯಾ (ಸಾಂಕೇತಿಕ ಚಿತ್ರ)

ಈ ಅಕ್ಟೋಬರ್‌ ರಜೆಗೆ ದಕ್ಷಿಣ ಭಾರತ ಪ್ರವಾಸವನ್ನು ಯೋಜಿಸುತ್ತಿದ್ದೀರಾ? ನಿಮ್ಮ ಆಲೋಚನೆ ಸರಿ ಇದೆ. ದಕ್ಷಿಣ ಭಾರತವು ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ನಿಧಿಯಾಗಿದ್ದು ಅದು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಸೊಂಪಾದ ಭೂದೃಶ್ಯಗಳು, ಬೆರಗುಗೊಳಿಸುವ ವಾಸ್ತುಶಿಲ್ಪ ಮತ್ತು ಶ್ರೀಮಂತ ಅಡುಗೆ ವೈವಿಧ್ಯ ಅಥವಾ ಪಾಕ ಪರಂಪರೆಯೊಂದಿಗೆ ಅತ್ಯುತ್ತಮ ಅನುಭವವನ್ನೇ ನೀಡುತ್ತದೆ.

ಪುರಾತನ ದೇವಾಲಯಗಳ ಐತಿಹಾಸಿಕ ವೈಭವ, ಕೇರಳದ ಪ್ರಶಾಂತ ಹಿನ್ನೀರು ಅಥವಾ ಪಶ್ಚಿಮ ಘಟ್ಟಗಳ ಮಂಜಿನ ಬೆಟ್ಟಗಳತ್ತ ನೀವು ಆಕರ್ಷಿತರಾಗಬಹುದು. ಗಜಿಬಿಜಿಯ ನಗರ ಜೀವನದಿಂದ ಕೊಂಚ ದೂರ ಬಂದು ರಿಲಾಕ್ಸ್‌ ಆಗಬೇಕು ಎಂದು ಬಯಸುವವರಿಗೆ ದಕ್ಷಿಣ ಭಾರತ ಪ್ರವಾಸ ನಿಜಕ್ಕೂ ಅತ್ಯುತ್ತಮ. ಆದರೆ ಪ್ರವಾಸ ಆಯೋಜಿಸುವಾಗ ಯಾವ ರೀತಿಯ ಪ್ರವಾಸ ಎಂಬುದನ್ನು ಮೊದಲೇ ನಿರ್ಧರಿಸಿ.

ದಕ್ಷಿಣ ಭಾರತ ಪ್ರವಾಸ ಕೈಗೊಳ್ಳುವುದಕ್ಕೆ 10 ಐಡಿಯಾಗಳು

1) ಸಾಂಸ್ಕೃತಿಕ- ಪಾರಂಪರಿಕ ಪ್ರವಾಸ ಕೈಗೊಳ್ಳುವಿರಾದರೆ ಅತ್ಯುತ್ತಮ ಪ್ರವಾಸಿ ಸ್ಥಳಗಳು - ಮೈಸೂರು, ಹಂಪಿ, ಬಾದಾಮಿ. ಇಲ್ಲಿ ಮೈಸೂರು ಅರಮನೆ, ಹಂಪಿಯ ಪುರಾತನ ದೇವಾಲಯಗಳು, ಬಾದಾಮಿ ಗುಹಾ ದೇಗುಲ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು.

2) ಹಿನ್ನೀರು ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವಿರಾದರೆ ಕೇರಳದ ಆಲೆಪ್ಪಿ, ಕುಮರಕಂ ಬೆಸ್ಟ್. ಇಲ್ಲಿ ಉಳಿದುಕೊಳ್ಳಲು ಹೌಸ್ ಬೋಟ್‌, ಮನಸ್ಸಿಗೆ ಮುದ ನೀಡುವ ಹಿನ್ನೀರು ಪ್ರದೇಶ, ಕೇರಳದ ಸಾಂಪ್ರದಾಯಿಕ ಊಟೋಪಚಾರ ಲಭ್ಯವಿದೆ.

3) ಗಿರಿಧಾಮಗಳಿಗೆ ಭೇಟಿ ನೀಡುವ ಆಲೋಚನೆ ಇದ್ದರೆ ತಮಿಳುನಾಡು ಮತ್ತು ಕೇರಳಗಳ ಕಡೆಗೆ ಗಮನಹರಿಸಬಹುದು. ವಿಶೇಷವಾಗಿ ಊಟಿ, ಕೊಡೈಕನಾಲ್‌, ಮುನ್ನಾರ್‌ ಬೆಸ್ಟ್. ಚಹಾ ತೋಟ, ಪ್ರಕೃತಿ ರಮಣೀಯ ದೃಶ್ಯಗಳು, ಹೂತೋಟ, ಚಾರಣಕ್ಕೆ ಬೆಟ್ಟ, ತಂಪಾದ ವಾತಾವರಣ ಉತ್ತಮ ಅನುಭವ ಕೊಟ್ಟೀತು.

4) ವನ್ಯಜೀವಿ ಸಫಾರಿ ಹೋಗುತ್ತೀರಾದರೆ ನಾಗರಹೊಳೆ ನ್ಯಾಷನಲ್ ಪಾರ್ಕ್ ಮತ್ತು ಬಂಡೀಪುರ ನ್ಯಾಷನಲ್ ಪಾರ್ಕ್ ಉತ್ತಮ ಅನುಭವ ನೀಡಬಹುದು. ಇಲ್ಲಿ ಸಫಾರಿ ಹೋದರೆ ಆನೆಗಳು, ಹುಲಿ ಮತ್ತು ವಿವಿಧ ರೀತಿಯ ವನ್ಯಜೀವಿಗಳನ್ನು ನೋಡಬಹುದು.

5) ಧಾರ್ಮಿಕ ಪ್ರವಾಸ ಕೈಗೊಳ್ಳುವಿರಾದರೆ ಆಂಧ್ರದ ತಿರುಪತಿ, ಕರ್ನಾಟಕದ ಚಾಮುಂಡಿ ಬೆಟ್ಟ, ಮಧುರೈ, ಕೇರಳದ ಗುರುವಾಯೂರು, ತಿರುವನಂತಪುರದ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಮತ್ತು ಸುತ್ತಮುತ್ತಲಿನ ದೇವಾಲಯಗಳಿಗೂ ಪ್ರವಾಸ ಆಯೋಜಿಸಬಹುದು.

ಚಾರಣ, ಆಹಾರ, ಉತ್ಸವಗಳತ್ತ ಮನಸ್ಸು ಎಳೆಯುತ್ತಿದೆಯೇ?

6) ಬೀಚ್‌ಗೆ ಹೋಗಬೇಕು ಎನ್ನುತ್ತೀರಾದರೆ ಕರ್ನಾಟಕದ ಗೋಕರ್ಣ, ಮುರುಡೇಶ್ವರ, ಕೇರಳದ ಬೀಚ್‌ ರೆಸಾರ್ಟ್‌ಗಳು, ಪುದುಚೇರಿ, ತಮಿಳುನಾಡಿನ ಮಹಾಬಲಿಪುರಂ ಕಡೆಗೂ ಗಮನಹರಿಸಬಹುದು. ವಿವಿಧ ರೀತಿಯ ಚಟುವಟಿಕೆಗಳಿರುವ ರೆಸಾರ್ಟ್ ಆಯ್ಕೆ ಮಾಡಿಕೊಂಡರೆ ಮನರಂಜನೆಯೂ ಸಿಕ್ಕೀತು.

7) ಆಹಾರ ವೈವಿಧ್ಯ ಆಸ್ವಾದಿಸಲು ಬಯಸುತ್ತೀರಾದರೆ ಚೆನ್ನೈ, ಹೈದರಾಬಾದ್‌, ಕೂರ್ಗ್‌ಗಳನ್ನು ಪರಿಗಣಿಸಬಹುದು. ಇಲ್ಲಿ ಬೀದಿ ಬದಿ ಆಹಾರ, ಸಾಂಪ್ರದಾಯಿಕ ಆಹಾರ ಮತ್ತು ಪಾಕ ವೈವಿಧ್ಯವನ್ನು ಆಸ್ವಾದಿಸಲು ಸಾಧ್ಯವಿದೆ.

8) ಚಾರಣ ಅಥವಾ ಸಾಹಸ ಪ್ರವಾಸೋದ್ಯಮ ಬಯಸುತ್ತೀರಾದರೆ ಕೂರ್ಗ್ ಮತ್ತು ಚಿಕ್ಕಮಗಳೂರನ್ನು ಪರಿಗಣಿಸಬಹುದು. ಇಲ್ಲಿ ಟ್ರೆಕ್ಕಿಂಗ್‌, ರಿವರ್ ರಾಫ್ಟಿಂಗ್‌, ಚಾರಣಕ್ಕೂ ಅವಕಾಶವಿದೆ. ಕಾಫಿ ತೋಟಗಳು, ಹೋಂ ಸ್ಟೇ ಕೂಡ ಇರುವ ಕಾರಣ ವಿಭಿನ್ನ ಅನುಭವ ಕೊಟ್ಟೀತು.

9) ಹಬ್ಬ, ಉತ್ಸವಗಳನ್ನು ಆನಂದಿಸುವ ಮನಸ್ಸು ನಿಮ್ಮದಾಗಿದ್ದರೆ ಮೈಸೂರು ದಸರಾ ಮತ್ತು ಕೇರಳದ ಕೊಚ್ಚಿನ್‌ ಕಾರ್ನಿವಲ್ ಹತ್ತಿರದಲ್ಲೇ ಇದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಾಂಪ್ರದಾಯಿಕ ಸಂಗೀತ, ನೃತ್ಯ ಮನರಂಜನೆ ಮಹಾಪೂರವೇ ಇದೆ. ಸ್ಥಳೀಯ ಕರಕುಶಲ ಪ್ರದರ್ಶನವನ್ನೂ ವೀಕ್ಷಿಸಬಹುದು. ಆಹಾರ ವೈವಿಧ್ಯವನ್ನೂ ಆಸ್ವಾದಿಸಬಹುದು.

10) ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಿ ಪ್ರವಾಸ ಮಾಡುತ್ತೀರಾದರೆ ಮಹಾಬಲಿಪುರಂ, ತಂಜಾವೂರು, ಕೊಚ್ಚಿಯ ಕೋಟೆಗಳನ್ನೊಮ್ಮೆ ನೋಡಿ ಬರಬಹುದು. ಇವೆಲ್ಲವು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿವೆ. ಪುರಾತನ ಶಿಲ್ಪಗಳು, ವಾಸ್ತುಶಿಲ್ಪಗಳು ಆಕರ್ಷಣೀಯವಾಗಿವೆ.

ದಕ್ಷಿಣ ಭಾರತದ ಒಂದು ಚಿತ್ರಣ ಕಟ್ಟಿಕೊಡಬಲ್ಲ ಪ್ರವಾಸ ಐಡಿಯಾಗಳಿವು: ಮೇಲೆ ಉಲ್ಲೇಖಿಸಿದ ಈ ಪ್ರವಾಸ ಕಲ್ಪನೆಗಳು ದಕ್ಷಿಣ ಭಾರತವು ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಸಾಹಸ ಮತ್ತು ವಿಶ್ರಾಂತಿಗೆ ನೀಡುವ ವೈವಿಧ್ಯಮಯ ಅನುಭವಗಳನ್ನು ಎತ್ತಿ ತೋರಿಸುತ್ತದೆ. ನೀವು ಇತಿಹಾಸ, ಆಧ್ಯಾತ್ಮಿಕತೆ ಅಥವಾ ಪಾಕಶಾಲೆಯ ಆನಂದವನ್ನು ಹುಡುಕುತ್ತಿರಲಿ, ದಕ್ಷಿಣ ಭಾರತದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಅನುಭವಗಳನ್ನು ಕಟ್ಟಿಕೊಡುವ ವಿಷಯಗಳು ಅನೇಕ ಇವೆ.

ಹೀಗಾಗಿ ಮಿಸ್‌ ಮಾಡಿಕೊಳ್ಳದೇ ದಕ್ಷಿಣ ಭಾರತ ಪ್ರವಾಸಕ್ಕೆ ಸಿದ್ಧತೆ ನಡೆಸಿ, ಖುಷಿ ಪಡಿ. ಜೀವನದುದ್ದಕ್ಕೂ ನೆನಪಿಡಬಲ್ಲ ಕ್ಷಣಗಳನ್ನು ನಿಮ್ಮದಾಗಿಸಿಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ