Travel: ಭಾರತೀಯರಿಗೆ ಶ್ರೀಲಂಕಾ ಪ್ರವಾಸವಿನ್ನು ಸುಲಭ; ಈ ದೇಶದಲ್ಲಿ ಕಡಿಮೆ ಖರ್ಚಿನಲ್ಲಿ ನೋಡಬಹುದಾದ 6 ಅದ್ಭುತ ತಾಣಗಳಿವು
Nov 20, 2023 09:52 AM IST
ಶ್ರೀಲಂಕಾ
- ಭಾರತೀಯ ಪ್ರವಾಸಿಗರಿಗೆ ನೆರೆಯ ರಾಷ್ಟ್ರ ಶ್ರೀಲಂಕಾ ಪ್ರವೇಶವಿನ್ನು ಸುಲಭವಾಗಿದೆ. ಲಂಕೆಗೆ ಪ್ರವೇಶಿಸಲು ಉಚಿತ ವೀಸಾ ಅವಕಾಶ ಕಲ್ಪಿಸಿದೆ ಈ ದೇಶ. ಶ್ರೀಲಂಕಾ ಪ್ರವಾಸ ನಿಮ್ಮ ಕನಸಾಗಿದ್ದರೆ, ನೀವು ಈ 6 ಬಜೆಟ್ ಫ್ರೆಂಡ್ಲಿ ತಾಣಕ್ಕೆ ಭೇಟಿ ನೀಡಲೇಬೇಕು.
ಪ್ರಾಯೋಗಿಕ ಕಾರ್ಯಕ್ರಮದ ಭಾಗವಾಗಿ ಮಾರ್ಚ್ 31, 2024ರವರೆಗೆ ಭಾರತೀಯ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾಗಳನ್ನು ನೀಡುವ ಶ್ರೀಲಂಕಾದ ನಿರ್ಧಾರವು ಪ್ರವಾಸೋದ್ಯಮಕ್ಕೆ ಉತ್ತೇಜಕ ಅವಕಾಶಗಳನ್ನು ತರೆದಿಟ್ಟಿದೆ. ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿರುವ ಈ ಕ್ರಮವು ರಷ್ಯಾ, ಚೀನಾ, ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಜಪಾನ್ ಸೇರಿದಂತೆ 6 ದೇಶಗಳಲ್ಲಿ ಇದೆ.
ಅದ್ಭುತವಾದ ದ್ವೀಪಗಳು, ಕಡಲತೀರಗಳು, ವನ್ಯಜೀವಿಗಳು, ರುಚಿಕರವಾದ ಆಹಾರ ಪದಾರ್ಥಗಳು, ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಶ್ರೀಲಂಕಾಕ್ಕೆ ಪ್ರಪಂಚದಾದ್ಯಂತ ಹಲವು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ದೇಶವು ಭಾರತೀಯ ಪ್ರವಾಸಿಗರಿಗೆ ವೀಸಾ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ಶ್ರೀಲಂಕಾದಲ್ಲಿ ಪ್ರವಾಸ ಸುಲಭವಾಗಿದೆ. ಇನ್ನೂ ಮೂರು ತಿಂಗಳು ನೀವು ವೀಸಾವಿಲ್ಲದೆ ಶ್ರೀಲಂಕಾ ಪ್ರವಾಸ ಮಾಡಬಹುದು. ಈ ದೇಶದಲ್ಲಿ ಕಡಿಮೆ ಬಜೆಟ್‌ನಲ್ಲಿ ಎಕ್ಸ್‌ಪ್ಲೋರ್ ಮಾಡಬಹುದಾದ ಸ್ಥಳಗಳ ಪರಿಚಯ ಇಲ್ಲಿದೆ.
ಸಿಗಿರಿಯಾ
ಸಿಗಿರಿಯಾ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ತಾಣವಾಗಿದೆ. ಹಚ್ಚ ಹಸಿರಿನ ವಿಶಾಲವಾದ ಬೆಟ್ಟ ಗುಡ್ಡಗಳು ಇರುವ ಈ ಸ್ಥಳಕ್ಕೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಬಹುದು. ಇದೊಂದು ಪ್ರಾಚೀನ ಅರಮನೆಯ ಅವಶೇಷಗಳನ್ನು ಹೊಂದಿರುವ ಸಮತಟ್ಟಾದ ಮೇಲ್ಭಾಗದ ಶಿಖರವನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿನ ಬೆಟ್ಟ, ಗುಡ್ಡಗಳು ಸದಾ ಮಂಜಿನಿಂದ ಆವೃತ್ತವಾಗಿರುತ್ತದೆ. ಚಾರಣ ಪ್ರಿಯರಿಗಂತೂ ಸಿಗಿರಿಯಾ ಹೇಳಿ ಮಾಡಿಸಿದ ಜಾಗ.
ಮಿರಿಸ್ಸಾ
ಮಿರಿಸ್ಸಾ ಶ್ರೀಲಂಕಾದಲ್ಲಿರುವ ಅತ್ಯುತ್ತಮ ಬೀಚ್‌ಗಳಲ್ಲಿ ಒಂದು. ಈ ಬೀಚ್‌ನ ರಮಣೀಯ ದೃಶ್ಯವು ಸ್ವರ್ಗದಂತೆ ಕಾಣಿಸುವುದು ಸುಳ್ಳಲ್ಲ. ಬಿಳಿ ಮರಳಿನ ಹಾಸಿ ಸುಂದರ ಕಡಲತೀರಗಳು ಕಣ್ಣಿಗೆ ಹಬ್ಬ ನೀಡುದಂತೂ ಸತ್ಯ. ಈ ಕಡಲ ತೀರ ಸುತ್ತಲೂ ತಾಳೆ ಮರಗಳು ಸುತ್ತುವರಿದಿದೆ. ಈ ದಕ್ಷಿಣ ಕರಾವಳಿಯುದ್ದಕ್ಕೂ ಸನ್ ಬಾತ್, ಸರ್ಫಿಂಗ್ ಮತ್ತು ಬೀಚ್ ಫ್ರಂಚ್ ಬಂಗಲೆಗಳು ಪ್ರವಾಸಿಗರನ್ನು ಆರ್ಕಷಿಸುವ ಇನ್ನಿತರ ಅಂಶಗಳಾಗಿವೆ.
ಅನುರಾಧಪುರ
ಶ್ರೀಲಂಕಾದಲ್ಲಿ ಆಧ್ಯಾತ್ಮಿಕ ಇತಿಹಾಸ ಜೀವಂತವಾಗಿರುವ ನಗರ ಅನುರಾಧಪುರ. ಇದು ಗೋಪುರದ ಡಾಗೋಬಾಗಳು, ಪಾಳುಬಿದ್ದ ಮಠಗಳು ಮತ್ತ ಪವಿತ್ರ ಟ್ಯಾಂಕ್‌ಗಳನ್ನು ಹೊಂದಿದೆ. ಈ ನಗರದ ಹೃದಯ ಭಾಗದಲ್ಲಿ ಶ್ರೀ ಮಹಾ ಬೋಧಿ ಇದೆ. ವಿಶ್ವದ ಅತ್ಯಂತ ಹಳೆಯ ಬೋಧಿ ವೃಕ್ಷಗಳಲ್ಲಿ ಇದು ಒಂದಾಗಿದೆ.
ಉಡಾ ವಾಲವೆ ರಾಷ್ಟ್ರೀಯ ಉದ್ಯಾನವನ
ಉಡಾ ವಾಲಾವೆ ರಾಷ್ಟ್ರೀಯ ಉದ್ಯಾನವನವು ಶ್ರೀಲಂಕಾದಲ್ಲಿ ಆಫ್ರಿಕಾ ಉದ್ಯಾನಗಳಿಗೆ ಭೇಟಿ ನೀಡಿದ ಅನುಭವ ನೀಡುತ್ತದೆ. ಹುಲ್ಲುಗಾವಲು, ಜಲಕುಳಿಗಳು, ವಿಶಾಲವಾಗಿ ಹರಡಿರುವ ಕಾಡುಗಳಲ್ಲಿ ಕಾಡೆಮ್ಮೆ, ಜಿಂಕೆ, ಮೊಸಳೆ, ಉಷ್ಣವಲಯದ ಪಕ್ಷಿಗಳು, ನೂರಾರು ಆನೆಗಳು ಸೇರಿದಂತೆ ವಿವಿಧ ವನ್ಯಜೀವಿಗಳಿಗೆ ನೆಲೆಯಾಗಿದೆ. ವನ್ಯಜೀವಿ ಉತ್ಸಾಹಿಗಳಿಗೆ ಇದು ಹೇಳಿ ಮಾಡಿಸಿದ ಜಾಗವಾಗಿದೆ.
ನೆಗೊಂಬೊ
ಕೊಲಂಬೊದಿಂದ ಸ್ವಲ್ಪ ದೂರದಲ್ಲಿರುವ ನೆಗೊಂಬೊ ಶ್ರೀಲಂಕಾದ ಅತ್ಯಂತ ಸಾಂಸ್ಕೃತಿಕವಾಗಿ ವೈವಿಧ್ಯಮಯ ನಗರಗಳಲ್ಲಿ ಒಂದಾಗಿದೆ. ಇದು ವಸಾಹತುಶಾಹಿ ಯುಗದ ಹಿಂದಿನ ಕ್ಯಾಥೆಡ್ರಲ್‌ಗಳು ಮತ್ತು ಚರ್ಚುಗಳನ್ನು ಒಳಗೊಂಡಂತೆ ಅಸಂಖ್ಯಾತ ಧಾರ್ಮಿಕ ಕಟ್ಟಡಗಳಿಗೆ ನೆಲೆಯಾಗಿದೆ. ಧಾರ್ಮಿಕ ವೈವಿಧ್ಯತೆಯಿಂದಾಗಿ 'ಲಿಟಲ್ ರೋಮ್' ಎಂದು ಕರೆಯಲ್ಪಡುವ ನೆಗೊಂಬೊವು ವಿಶಿಷ್ಟವಾದ ಹಬ್ಬಗಳು, ಐತಿಹಾಸಿಕ ಕೋಟೆ, ಡಚ್ ಕಾಲುವೆ ಮತ್ತು ಅಪ್ರತಿಮ ಸಮುದ್ರಾಹಾರ ದೃಶ್ಯವನ್ನು ನೀಡುವ ರೋಮಾಂಚಕ ನಗರವಾಗಿದೆ.
ಇದನ್ನೂ ಓದಿ
Travel: ಶ್ರೀಲಂಕಾಯಿಂದ ಥಾಯ್ಲೆಂಡ್‌ವರೆಗೆ; ವೀಸಾ ಚಿಂತೆ ಇಲ್ದೆ ಭಾರತೀಯರು ಯಾವೆಲ್ಲಾ ದೇಶ ಸುತ್ತಾಡಬಹುದು ನೋಡಿ
ವಿದೇಶ ಪ್ರವಾಸ ಮಾಡಬೇಕು ಎನ್ನುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇದು ಸುಸಂದರ್ಭ. ಈಗ ನೀವು ವೀಸಾ ಚಿಂತೆ ಇಲ್ಲದೆ ಒಂದಿಷ್ಟು ದೇಶಗಳಲ್ಲಿ ಸುತ್ತಾಡಬಹುದು. ಹಾಗಾದರೆ ವೀಸಾ ಚಿಂತೆ ಇಲ್ಲದೆ ಯಾವೆಲ್ಲಾ ದೇಶಗಳಲ್ಲಿ ತಿರುಗಾಡಬಹುದು, ಯಾವೆಲ್ಲಾ ಪ್ರದೇಶಕ್ಕೆ ಆನ್ ಅರೈವಲ್ ವೀಸಾ ಮೂಲಕ ಹೋಗಿ ಬರಬಹುದು ಎಂಬ ಮಾಹಿತಿ ಇಲ್ಲಿದೆ.