Village Business Ideas: ಹಳ್ಳಿಯಾದರೇನು ಶಿವ, ಹಳ್ಳಿಯಲ್ಲಿದ್ದುಕೊಂಡು ಈ ಬಿಸ್ನೆಸ್ ಮಾಡಿದರೆ ಕೈತುಂಬಾ ಸಂಪಾದನೆ, ಇಲ್ಲಿದೆ 40 ಐಡಿಯಾ
Oct 25, 2024 04:16 PM IST
ಹಳ್ಳಿಯಲ್ಲಿದ್ದುಕೊಂಡು ಈ ಬಿಸ್ನೆಸ್ ಮಾಡಿದರೆ ಕೈತುಂಬಾ ಸಂಪಾದನೆ ಮಾಡಬಹುದು.
- Village Business Ideas In Kannada : ಸಾಕಷ್ಟು ಜನರಿಗೆ ಹಳ್ಳಿ, ತಮ್ಮ ಊರು ಇಷ್ಟ. ಊರಿನಲ್ಲೇ ಇರಬೇಕೆಂದು ಬಯಸುವವರು ಊರಲ್ಲಿಯೇ ಸ್ವಂತ ಉದ್ಯಮ ಮಾಡಿ ಕೈತುಂಬಾ ಸಂಪಾದನೆ ಮಾಡಬಹುದು. ಗ್ರಾಮ, ಹಳ್ಳಿ, ಊರುಗಳಲ್ಲಿ ಮಾಡಬಹುದಾದ 40 ಬಿಸ್ನೆಸ್ ಐಡಿಯಾಗಳು ಇಲ್ಲಿವೆ.
Village Business Ideas In Kannada: ಕೆಲವರು ಪಟ್ಟಣಕ್ಕೆ ಹೋಗಿ ಕೈತುಂಬಾ ಸಂಪಾದನೆ ಮಾಡಬೇಕೆಂದುಕೊಳ್ಳುತ್ತಾರೆ. ನಗರದಲ್ಲಿ ತಿಂಗಳ ಕೆಲವು ಸಾವಿರ ಸಂಬಳ ಕೂಡಿಟ್ಟು ಬಾಡಿಗೆ ಮನೆಯಲ್ಲೇ ಕಳೆಯಬೇಕಾಗುತ್ತದೆ. ಸೈಟ್ ಮನೆ ಖರೀದಿಸಿದರೂ ಅದರ ಸಾಲ ತೀರಿಸುವುದರಲ್ಲಿಯೇ ಜೀವನ ಸಾಕಾಗುತ್ತದೆ. ಇದೇ ಸಮಯದಲ್ಲಿ ತಮ್ಮ ಜತೆಗಿದ್ದ ಊರಿನ ಹುಡುಗರು ಏನಾದರೂ ಸ್ವಂತ ವ್ಯಾಪಾರ ಮಾಡಿ ದೊಡ್ಡ ಮನೆ, ಆಸ್ತಿ ಖರೀದಿಸುವುದನ್ನು ನೋಡಿದಾಗ ಹಳ್ಳಿಯಲ್ಲೇ ಇರಬಹುದಿತ್ತು ಎನಿಸದೆ ಇರದು. ಇದೇ ಸಮಯದಲ್ಲಿ ಕೆಲವರು ಕೈತುಂಬಾ ವೇತನ ಬಿಟ್ಟು ಹಳ್ಳಿಗೆ ಮರಳುತ್ತಾರೆ. ಲಕ್ಷಗಟ್ಟಲೆ ಸಂಬಳದ ಸಾಫ್ಟ್ ವೇರ್ ಉದ್ಯೋಗ ಬಿಟ್ಟು ಹಳ್ಳಿಯಲ್ಲಿ ಡೈರಿ ಫಾರಂ ನಡೆಸುವ ಸಕ್ಸಸ್ ಸ್ಟೋರಿಗಳು ಆಗಾಗ ಕಾಣಿಸುತ್ತವೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಪರವೂರಿನಲ್ಲಿ ಪರಕೀಯವಾಗಿರುವುದಕ್ಕಿಂತ ತಮ್ಮ ಊರಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಇರುತ್ತದೆ.
ನೀವು ಗ್ರಾಮೀಣ ಪ್ರದೇಶದಲ್ಲಿ ಸಣ್ಣದಾಗಿ ಏನಾದರೂ ಉದ್ಯಮ, ವ್ಯಾಪಾರ ಮಾಡಬೇಕೆಂದುಕೊಂಡಿದ್ದರೆ ಇಲ್ಲೊಂದಿಷ್ಟು ಐಡಿಯಾಗಳಿವೆ. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯು ಇನ್ನೂ ಹಳ್ಳಿಗಳಲ್ಲಿದೆ. ನಗರ ಪ್ರದೇಶಗಳಿಗಿಂತ ಭಿನ್ನವಾಗಿ ಹಳ್ಳಿಗಳು ತಮ್ಮದೇ ಆದ ಮೂಲಸೌಕರ್ಯವನ್ನು ಹೊಂದಿವೆ.ಗ್ರಾಮೀಣ ಪ್ರದೇಶದಲ್ಲೂ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳಿವೆ. ಕೃಷಿಯನ್ನೇ ಅವಲಂಬಿಸಿರುವ ಊರುಗಳಲ್ಲೂ ವ್ಯಾಪಾರ ಮಾಡಬಹುದು. ಒಂದು ಹಳ್ಳಿಯಲ್ಲಿ ನೆಲೆಸಿರುವ ವ್ಯಕ್ತಿ ಅಲ್ಲಿಗೆ ಸೂಕ್ತವಾದ ವ್ಯಾಪಾರ ಆರಂಭಿಸುವುದು ಲಾಭದಾಯಕ. ನೀವು ವಾಸಿಸುವ ಪ್ರದೇಶದಲ್ಲಿ ಸಣ್ಣ ವ್ಯಾಪಾರವನ್ನು ಸ್ಥಾಪಿಸಲು ಕಡಿಮೆ ಹೂಡಿಕೆಯ ಅಗತ್ಯವಿರುತ್ತದೆ. ಎಲ್ಲರೂ ಪರಿಚಿತರೇ ಆಗಿರುವುದರಿಂದ ಅಲ್ಲಿ ವ್ಯಾಪಾರ ಮಾಡುವುದು ಕೂಡ ಸುಲಭ. ಬಾಯಿ ಮಾತಿನ ಮೂಲಕವೂ ಪ್ರಚಾರ ಪಡೆಯುತ್ತೀರಿ.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 70ಕ್ಕಿಂತ ಹೆಚ್ಚು ಜನಸಂಖ್ಯೆಯು ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ವಾಸಿಸುತ್ತಿದೆ. ನಿಮ್ಮ ವ್ಯಾಪಾರವು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಬೇಕು. ಆಗ ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಹಳ್ಳಿಗಳೂ ಈಗ ನವೀಕರಣಗೊಂಡಿವೆ. ಅದಕ್ಕೆ ತಕ್ಕಂತೆ ನಿಮ್ಮ ವ್ಯಾಪಾರವನ್ನು ಯೋಜಿಸಬೇಕು. ನೀವು ಹಳ್ಳಿಗಳಲ್ಲಿ ಏನಾದರೂ ಬಿಸ್ನೆಸ್ ಮಾಡಲು ಉದ್ದೇಶಿಸಿದರೆ ಈ ಮುಂದಿನ 40 ಐಡಿಯಾಗಳನ್ನು ಪರಿಶೀಲಿಸಿ.
ಹಳ್ಳಿಗಳಲ್ಲಿ ಮಾಡಬಹುದಾದ 40 ಬಿಸ್ನೆಸ್ ಐಡಿಯಾಗಳು
- ಸೌರ ವಿದ್ಯುತ್ ಉತ್ಪನ್ನಗಳ ವ್ಯವಹಾರ
- ಮೊಬೈಲ್ ರಿಪೇರಿ ಅಂಗಡಿ
- ಬಿದಿರು ಉತ್ಪನ್ನಗಳ ಮಾರಾಟ
- ತೋಟಗಾರಿಕೆ ವ್ಯಾಪಾರ
- ಸಾವಯವ ಕೃಷಿ
- ಜೇನುಸಾಕಣೆ
- ಅಣಬೆ ಕೃಷಿ
- ಹೈಡ್ರೋಪೋನಿಕ್ ಕೃಷಿ
- ಉಪ್ಪಿನಕಾಯಿ ತಯಾರಿಕೆ
- ಬೆಲ್ಲ ತಯಾರಿಕೆ
- ಕೌಶಲ್ಯ ತರಬೇತಿ ಕೇಂದ್ರ
- ಎರೆಹುಳು ಗೊಬ್ಬರ ಮಾರಾಟ
- ಡೈರಿ ಫಾರ್ಮ್
- ಕೃಷಿ ಪ್ರವಾಸೋದ್ಯಮ
- ಮೀನು ಸಾಕಣೆ
- ಆಯುರ್ವೇದ ಗಿಡಮೂಲಿಕೆಗಳ ಕೃಷಿ
- ಹಿಟ್ಟು ಗಿರಣಿ
- ಕೋಳಿ ಸಾಕಾಣಿಕೆ
- ಕೃಷಿ ಉಪಕರಣಗಳ ಮಾರಾಟ
- ತಿಂಡಿ ವ್ಯಾಪಾರ
- ನೀರು ಸರಬರಾಜು ವ್ಯವಹಾರ
- ಸಾಮಾನ್ಯ ಅಂಗಡಿ
- ಕರಕುಶಲ ವ್ಯಾಪಾರ
- ಕೃಷಿ ಯಂತ್ರೋಪಕರಣಗಳ ಮಾರಾಟ
- ಸಾರಿಗೆ ಸೌಲಭ್ಯಕ್ಕಾಗಿ ವಾಹನಗಳು
- ಅಕ್ಕಿ ಗಿರಣಿ
- ಮೆಣಸಿನ ಪುಡಿ ಮಾರಾಟ
- ಕೋಳಿ ಆಹಾರ ಮಾರಾಟ
- ಟೈಲರಿಂಗ್
- ಮೇಕೆ ಸಾಕಣೆ
- ಬೇಕರಿ ವ್ಯಾಪಾರ
- ತೈಲ ಉತ್ಪಾದನೆ
- ಇಟ್ಟಿಗೆ ತಯಾರಿಕೆ
- ಸೆಣಬಿನ ಚೀಲಗಳ ತಯಾರಿಕೆ
- ಹೂವಿನ ವ್ಯವಹಾರ
- ಬೀಜ ಉತ್ಪಾದನೆ
- ಸಾವಯವ ಸಾಬೂನುಗಳ ತಯಾರಿಕೆ
- ರೂರಲ್ ಕೋಚಿಂಗ್ ಸೆಂಟರ್
- ಕಂಪ್ಯೂಟರ್ ಕೋಚಿಂಗ್ ಸೆಂಟರ್
- ಶಾಮಿಯಾನ, ಲೈಟಿಂಗ್ಸ್ ವ್ಯವಹಾರ
ಹೀಗೆ ಹಳ್ಳಿಗಳಲ್ಲಿ ಮಾಡಬಹುದಾದ ಹಲವು ವ್ಯವಹಾರಗಳು ಇವೆ. ಮೊದಲನೆಯದಾಗಿ ನೀವು ನಿರ್ದಿಷ್ಟ ಹಳ್ಳಿಯಲ್ಲಿ ಒಂದಿಷ್ಟು ದಿನ ಇದ್ದು, ಇಲ್ಲಿ ಏನು ಬೇಡಿಕೆಯಿದೆ, ಯಾವ ವ್ಯಾಪಾರ ಮಾಡಿದರೆ ಹೆಚ್ಚು ಲಾಭವಾಗಬಹುದು ಯೋಚಿಸಿ. ಆ ಊರಲ್ಲಿ ಇರುವ ಪ್ರತಿಸ್ಪರ್ಧೆಯನ್ನೂ ಗಮನಿಸಿ.
ವಿಭಾಗ