logo
ಕನ್ನಡ ಸುದ್ದಿ  /  ಜೀವನಶೈಲಿ  /  Viral Optical Illusion: ಅರೇ ಇದೇನಿದು, ಚಿತ್ರದಲ್ಲಿನ ವೃತ್ತಗಳು ತಿರುಗುತ್ತಿವೆಯಾ ಅಥವಾ ಭ್ರಮೆನಾ? ನಿಮಗೂ ಹಾಗೆ ಅನ್ನಿಸ್ತಿದ್ಯಾ ನೋಡಿ

Viral Optical Illusion: ಅರೇ ಇದೇನಿದು, ಚಿತ್ರದಲ್ಲಿನ ವೃತ್ತಗಳು ತಿರುಗುತ್ತಿವೆಯಾ ಅಥವಾ ಭ್ರಮೆನಾ? ನಿಮಗೂ ಹಾಗೆ ಅನ್ನಿಸ್ತಿದ್ಯಾ ನೋಡಿ

Reshma HT Kannada

Jul 05, 2023 12:26 PM IST

google News

ಸರಿಯಾಗಿ ನೋಡಿ ಚಿತ್ರ ತಿರುಗ್ತಾ ಇದ್ಯಾ? ಈಗ ಒಂದೇ ವೃತ್ತ ನೋಡಿ ತಿರುಗೋದು ನಿಲ್ಲುತ್ತೆ!!

    • Viral Optical Illusion: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಪ್ಟಿಕಲ್‌ ಇಲ್ಯೂಷನ್‌ ಇಮೇಜ್‌ವೊಂದು ಈಗ ತಲೆ ಕೆಡಿಸುತ್ತಿದೆ. ತಕ್ಷಣಕ್ಕೆ ನೋಡಿದಾಗ ಈ ಚಿತ್ರ ಗಿರಗಿರನೇ ತಿರುಗಿದಂತೆ ಭಾಸವಾಗುತ್ತದೆ. ಅದರ ಮೇಲೆ ದೃಷ್ಟಿನೆಟ್ಟರೆ ಸ್ಥಿರವಾಗುತ್ತದೆ. ನಿಮಗೂ ಹಾಗೆ ಅನ್ನಿಸ್ತಾ ಇದ್ಯಾ? ಚಿತ್ರ ನೋಡಿ 
ಸರಿಯಾಗಿ ನೋಡಿ ಚಿತ್ರ ತಿರುಗ್ತಾ ಇದ್ಯಾ? ಈಗ ಒಂದೇ ವೃತ್ತ ನೋಡಿ ತಿರುಗೋದು ನಿಲ್ಲುತ್ತೆ!!
ಸರಿಯಾಗಿ ನೋಡಿ ಚಿತ್ರ ತಿರುಗ್ತಾ ಇದ್ಯಾ? ಈಗ ಒಂದೇ ವೃತ್ತ ನೋಡಿ ತಿರುಗೋದು ನಿಲ್ಲುತ್ತೆ!!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಕ್ಷಣ ಕಾಲ ನಮ್ಮ ದೃಷ್ಟಿಯನ್ನು ಅದರ ಮೇಲೆ ಹಿಡಿದುವಂತೆ ಮಾಡುವುದು ಸುಳ್ಳಲ್ಲ. ಇವು ದೀರ್ಘಕಾಲದವರೆಗೆ ಜನರನ್ನ ಆರ್ಕಷಿಸುತ್ತವೆ. ಏಕೆಂದರೆ ಚಿತ್ರದಲ್ಲಿ ಕಾಣುವ ಅಂಶವು ವಾಸ್ತವವೋ ಅಥವಾ ಗ್ರಹಿಕೆಯೋ ಎಂಬುದನ್ನು ಅರಿಯಲು ನಮಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಇದು ಜನರನ್ನು ದಿಗ್ಭ್ರಮೆಗೊಳಿಸುವುದು ಸುಳ್ಳಲ್ಲ. ಬಣ್ಣ ಬದಲಿಸುವುದು, ತಿರುಗುವುದು, ಒಂದು ಗೆರೆಯ ಮೇಲೆ ಇನ್ನೊಂದು ಅಂಟಿಕೊಂಡಂತಿರುವುದು ಹೀಗೆ ಹಲವು ಬಗೆಯ ಆಪ್ಟಿಕಲ್‌ ಇಲ್ಯೂಷನ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಆಪ್ಟಿಕಲ್‌ ಇಲ್ಯೂಷನ್‌ ಒಂದು ನಮ್ಮ ಮನದಲ್ಲಿ ಗೊಂದಲ ಬಿರುಗಾಳಿ ಎಬ್ಬಿಸುವುದರಲ್ಲಿ ಅನುಮಾನವಿಲ್ಲ. ಇದನ್ನು ಪ್ರತಿಬಾರಿ ನೋಡಿದಾಗಲು ಒಂದೊಂದು ರೀತಿ ಕಾಣುತ್ತದೆ.

ಈ ಆಪ್ಟಿಕಲ್‌ ಇಲ್ಯೂಷನ್‌ನಲ್ಲಿ ಏನಿದೆ?

ಇಲ್ಲೊಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಇದು ಒಂದಿಷ್ಟು ದುಂಡನೆಯ ಚಿತ್ತಾರಗಳನ್ನು ಹೊಂದಿದೆ. ಈ ಚಿತ್ತಾರಗಳನ್ನು ನೋಡಿದಾಗ ಅವು ತಿರುಗುತ್ತವೆ ಎಂಬ ಭ್ರಮೆ ಉಂಟಾಗುತ್ತದೆ. ಆದರೆ ನೀವು ಒಂದು ವೃತ್ತದ ಮೇಲೆ ದೃಷ್ಟಿ ನೆಟ್ಟರೆ ಅವು ಸ್ಥಿರವಾಗಿರುತ್ತವೆ. ಇದನ್ನು ಸೃಷ್ಟಿಸಿದವರು ಯಾರು?

ಪ್ರಾಯೋಗಿಕ ಮನಃಶಾಸ್ತ್ರಜ್ಞ ಅಕಿಯೋಶಿ ಕಿಟೋಕಾ ಎನ್ನುವವರು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ರಚಿಸಿದ್ದಾರೆ. ಇದನ್ನು ರೊಟೇಟಿಂಗ್‌ ಸ್ನೇಕ್‌ ಇಲ್ಯೂಷನ್‌ ಎಂದೂ ಕರೆಯಲಾಗುತ್ತದೆ.

ʼಇದು ಜಿಫ್‌ ಇಮೇಜ್‌ ಅಲ್ಲ. ಇದು @AkiyoshiKitaoka ರಚಿಸಿದ ಆಪ್ಟಿಕಲ್‌ ಇಲ್ಯೂಷನ್‌ ಆಗಿದ್ದು, ಅದು ನಿಮ್ಮ ಕಣ್ಣಿನ ಚಲನೆಗಳಿಗೆ ಸಂಬಂಧಿಸಿದೆʼ ಎಂದು @Rainmaker1973 ಎಂಬ ಟ್ವಿಟರ್‌ ಬಳಕೆದಾರರೊಬ್ಬರು ಬರೆದುಕೊಂಡು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನಿಜಕ್ಕೂ ನಿಮ್ಮನ್ನು ಗೊಂದಲಕ್ಕೆ ದೂಡುವುದರಲ್ಲಿ ಎರಡು ಮಾತಿಲ್ಲ. ಜೂನ್‌ 27 ರಂದು ಹಂಚಿಕೊಂಡ ಈ ಚಿತ್ರವನ್ನು ಇಲ್ಲಿಯವರೆಗೆ ಸುಮಾರು 99,000 ಮಂದಿ ವೀಕ್ಷಣೆ ಮಾಡಿದ್ದಾರೆ. 400ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಹಲವರು ತಮಗನ್ನಿಸಿದ್ದನ್ನು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಯಪ್ಪಾ ನನ್ನ ಕಣ್ಣುಗಳು, ನಿಲ್ಲಿಸಿʼ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಈ ಮ್ಯಾಜಿಕ್‌ ಅನ್ನು ನನ್ನ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼನೀವು ನಿದ್ದೆಯಿಂದ ಎದ್ದ ಕೂಡಲೇ ಇದನ್ನು ನೋಡಿದರೆ ಇದು ಕೆಲಸ ಮಾಡುವುದಿಲ್ಲʼ ಎಂದು ಇನ್ನೊಬ್ಬ ಬಳಕೆದಾರ ತಮಾಷೆಗೆ ಕಾಮೆಂಟ್‌ ಮಾಡಿದ್ದಾರೆ. ಈ ಆಪ್ಟಿಕಲ್‌ ಇಲ್ಯೂಷನ್‌ ನೋಡಿ ನಿಮಗೆ ಏನ್ನನ್ನಿಸ್ತಾ ಇದೆ.

ಆಪ್ಟಿಕಲ್‌ ಇಲ್ಯೂಷನ್‌ ಇಮೇಜ್‌ಗೆ ಸಂಬಂಧಿಸಿದ ಈ ಸುದ್ದಿಯನ್ನೂ ಓದಿ 

Optical Illusion: ಅರೇ ಇದೇನಿದು, ಚಿತ್ರದಲ್ಲಿನ ಚೌಕ ಅಲುಗಾಡ್ತಾ ಇದ್ಯಾ; ಸರಿಯಾಗಿ ನೋಡಿ; ನಿಮಗೂ ಹಂಗೆ ಅನ್ನಿಸ್ತಾ; ಕಣ್ಣಿಗೊಂದು ಸವಾಲ್‌

A Challenge To The Eyes: ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಲಾದ ಚಿತ್ರವೊಂದು ಈಗ ಜನರನ್ನು ದಿಗ್ಭ್ರಮೆಗೊಳಿಸಿದೆ. ಈ ಆಪ್ಟಿಕಲ್‌ ಇಮೇಜ್‌ ನೋಡಿದವರೆಲ್ಲಾ ಶಾಕ್‌ ಆಗುತ್ತಿದ್ದಾರೆ. ಹಾಗಾದರೆ ಚಿತ್ರದಲ್ಲಿ ಅಂಥದ್ದೇನಿದೆ ನೀವು ನೋಡಿ.

ಆಪ್ಟಿಕಲ್‌ ಇಲ್ಯೂಷನ್‌ ಅಥವಾ ಭ್ರಾಮಕ ಚಿತ್ರಗಳು ಕೆಲವೊಮ್ಮೆ ತಲೆ ಕೆಡಿಸುತ್ತವೆ, ಮಾತ್ರವಲ್ಲ ಇವು ಮನರಂಜನೆಯನ್ನೂ ನೀಡುತ್ತವೆ. ಏಕೆಂದರೆ ಇವು ಮೆದುಳಿಗೆ ಆವಿಷ್ಕಾರ ಮತ್ತು ಉತ್ಸಾಹವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಆ ಕಾರಣಕ್ಕೆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳಿರುವ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಸದಾ ಜನರನ್ನು ಸೆಳೆಯುತ್ತವೆ. ಇಲ್ಲೊಂದು ಅಪರೂಪ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಬೂದು ಬಣ್ಣದ ಈ ಚಿತ್ರದಲ್ಲಿನ ಚೌಕಗಳು ಅಲುಗಿದಂತೆ ಭಾಸವಾಗುತ್ತಿವೆ. ಇದು ಅಲುಗಾಡುತ್ತಿದೆಯೇ ಅಥವಾ ನಿಶ್ಚಲವಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಪೋಸ್ಟ್‌ ಹಂಚಿಕೊಂಡಿದೆ ರೆಡ್ಡಿಟ್‌.

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ