logo
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಹಣ್ಣುಗಳ ರಾಶಿ ನಡುವೆ ಸ್ಟ್ರಾಬೆರಿಯೊಂದು ಅವಿತು ಕುಳಿತಿದೆ; 20 ಸೆಕೆಂಡ್‌ನಲ್ಲಿ ಹುಡುಕೋದು ನಿಮಗಿರುವ ಚಾಲೆಂಜ್‌

Optical Illusion: ಹಣ್ಣುಗಳ ರಾಶಿ ನಡುವೆ ಸ್ಟ್ರಾಬೆರಿಯೊಂದು ಅವಿತು ಕುಳಿತಿದೆ; 20 ಸೆಕೆಂಡ್‌ನಲ್ಲಿ ಹುಡುಕೋದು ನಿಮಗಿರುವ ಚಾಲೆಂಜ್‌

Reshma HT Kannada

Nov 02, 2023 08:37 AM IST

google News

ಚಿತ್ರದಲ್ಲಿ ಸ್ಟ್ರಾಬೆರಿ ಎಲ್ಲಿದೆ ಹುಡುಕಿ

    • ಇಲ್ಲೊಂದು ಆಪ್ಟಿಕಲ್‌ ಇಲ್ಯೂಷನ್‌ ಇಮೇಜ್‌ ಇದೆ. ಇದರಲ್ಲಿ ದ್ರಾಕ್ಷಿ, ಕಲ್ಲಂಗಡಿ, ಚೆರಿ ಹಣ್ಣುಗಳ ರಾಶಿ ಇದೆ. ಈ ಎಲ್ಲಾ ಹಣ್ಣುಗಳ ನಡುವಲ್ಲಿ ಕಳ್ಳ ಸ್ಟ್ರಾಬೆರಿ ಅವಿತಿದೆ. ಹಾಗಾದ್ರೆ ಸ್ಟ್ರಾಬೆರಿ ಎಲ್ಲಿದೆ. ಇದನ್ನು ಹುಡುಕುವುದು ನಿಮಗೆ ಇಂದಿರುವ ಚಾಲೆಂಜ್‌.
ಚಿತ್ರದಲ್ಲಿ ಸ್ಟ್ರಾಬೆರಿ ಎಲ್ಲಿದೆ ಹುಡುಕಿ
ಚಿತ್ರದಲ್ಲಿ ಸ್ಟ್ರಾಬೆರಿ ಎಲ್ಲಿದೆ ಹುಡುಕಿ

ನಿಮ್ಮ ಮನಸ್ಸಿಗೆ ತುಂಬಾ ಬೇಸರ ಆಗಿದೆ, ಸಮಯ ಹೋಗ್ತಾ ಇಲ್ಲ ಅನ್ಸಿದ್ರೆ ಆ ಟೈಮ್‌ನಲ್ಲಿ ನಿಮಗೆ ಹೆಲ್ಪ್‌ಗೆ ಬರೋದು ಖಂಡಿತ ಫ್ರೆಂಡ್ಸ್‌ ಅಲ್ಲ, ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಿಮ್ಮ ಮನಸ್ಸಿಗೆ ಖುಷಿ ಕೊಡೋದು ಖಂಡಿತ. ಇವು ಮನಸ್ಸನ್ನು ಬೇರೆಡೆ ಸೆಳೆಯುದಂತೆ ಹಿಡಿದಿಟ್ಟುಕೊಳ್ಳುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ. ಇವು ಮನಸ್ಸಿಗೆ ಚಾಲೆಂಜ್‌ ಹಾಕುವ ಮೂಲಕ ನಮ್ಮನ್ನು ಕ್ರಿಯೇಟಿವಿ ಆಗಿ ಇರುವಂತೆ ನೋಡಿಕೊಳ್ಳುತ್ತವೆ.

ಇನ್ನಷ್ಟು ಇಂತಹ ವೈರಲ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಈ ಚಿತ್ರದಲ್ಲಿ ಬಗೆ ಬಗೆಯ ಹಣ್ಣುಗಳ ರಾಶಿ ಇದೆ. ಈ ಹಣ್ಣಿನ ರಾಶಿಯ ನಡುವೆ ಒಂದು ಸ್ಟ್ರಾಬೆರಿ ಹಣ್ಣು ಅವಿತು ಕುಳಿತಿದೆ. ಹಾಗಾದರೆ ಆ ಸ್ಟ್ರಾಬೆರಿ ಹಣ್ಣು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮವೊಂದರಲ್ಲಿ ಈ ಸ್ಟ್ರಾಬೆರಿ ಹುಡುಕುವ ಆಪ್ಟಿಕಲ್‌ ಇಲ್ಯೂಷನ್‌ ಸಾಕಷ್ಟು ವೈರಲ್‌ ಆಗಿದೆ.

ಒಂದೂವರೆ ನಿಮಿಷದಲ್ಲಿ ನೀವು ಸ್ಟ್ರಾಬೆರಿ ಹುಡುಕಬೇಕು. ನಿಮ್ಮ ಕಣ್ಣು, ಮೆದುಳು ನಿಜಕ್ಕೂ ಚುರುಕಾಗಿದ್ರೆ ನೀವು ಆ ಸಮಯದ ಒಳಗೆ ಅಥವಾ ಅದಕ್ಕಿಂತ ಮೊದಲೇ ಈ ಟಾಸ್ಕ್‌ ಅನ್ನು ಮುಗಿಸುತ್ತೀರಿ.

ಕೆಂಪು, ನೀಲಿ, ಗುಲಾಬಿ ಬಣ್ಣಗಳ ಹಣ್ಣುಗಳಿಂದ ಕೂಡಿರುವ ಈ ಚಿತ್ರದಲ್ಲಿ ಸ್ಟ್ರಾಬೆರಿಯನ್ನು ಹುಡುಕುವುದು ಕೊಂಚ ಕಷ್ಟವೇ ಸರಿ. ಆದರೆ ಈ ರೀತಿಯ ಒಗಟುಗಳನ್ನು ಬಿಡಿಸಲು ಪರಿಹಾರ ಮಾರ್ಗ ಎಂದರೆ ಚಿತ್ರವನ್ನು ಒಂಬತ್ತು ವಿಭಾಗಗಳಾಗಿ ವಿಂಗಡಿಸಿಕೊಂಡು ನೋಡುವುದು. ನಂತರ ಪ್ರತಿ ಭಾಗವನ್ನು ಒಂದೊಂದಾಗಿ ಸರಿಯಾಗಿ ಗಮನಿಸುತ್ತಾ ಬರುವುದು.

ಸರಿಯಾಗಿ ನೋಡಿದ್ರಾ ಸ್ಟ್ರಾಬೆರಿ ಸಿಕ್ತಾ, ನಿಮಗೆ ಇನ್ನೂ ಸ್ಟ್ರಾಬೆರಿ ಸಿಕ್ಕಿಲ್ಲಾ ಅಂದ್ರೆ ಚಿತ್ರದ ಎಡಭಾಗದ ಮೇಲೆ ಕೇಂದ್ರೀಕರಿಸಿ. ಎಡ ಭಾಗ ಮಧ್ಯದಲ್ಲಿ ಗಮನಿಸಿದ್ರೆ ನಿಮಗೆ ಸ್ಟ್ರಾಬೆರಿ ಕಾಣಿಸಬಹುದು. ಸರಿಯಾಗಿ ಗಮನಿಸಿದ್ರೆ ಖಂಡಿತ ಸ್ಟ್ರಾಬೆರಿ ನಿಮಗೆ ಸಿಗುತ್ತೆ, ಇದರಲ್ಲಿ ಅನುಮಾನವಿಲ್ಲ. ಆದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿರಬೇಕು.

ಇದನ್ನೂ ಓದಿ

Optical Illusion: ಇಲ್ಲಿರುವ ಕುಂಬಳಕಾಯಿ ರಾಶಿಯಲ್ಲಿ ಒಂದು ಮಾತ್ರ ಡಿಫ್ರೆಂಟಾಗಿದೆ; ಅದು ಯಾವುದು, 10 ಸೆಕೆಂಡ್‌ನಲ್ಲಿ ಹುಡುಕಿ

ನಿಮಗೆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಸವಾಲು ಸ್ವೀಕರಿಸೋದು ಇಷ್ಟ ಆದ್ರೆ ಇಲ್ಲೊಂದು ಅಪರೂಪದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಚಿತ್ರದಲ್ಲಿ ಹ್ಯಾಲೋವಿನ್‌ ಅಲಂಕಾರದಲ್ಲಿರುವ ಒಂದಿಷ್ಟು ಕುಂಬಳಕಾಯಿಗಳಿವೆ. ಈ ಎಲ್ಲದರ ನಡುವೆ ಒಂದು ಸಿಂಗರಿಸಿಕೊಂಡಿರುವ ಗ್ಲಾಮರಸ್‌ ಕುಂಬಳಕಾಯಿ ಇದೆ. ಹಾಗಾದರೆ ಆ ಕುಂಬಳಕಾಯಿ ಯಾವುದು, ಅದನ್ನು ಕಂಡುಹಿಡಿಯುವ ಚಾಲೆಂಜ್‌ ನಿಮ್ಮ ಮುಂದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ