Personality Test: ನಿಮ್ಮ ಬಗ್ಗೆ ನಿಮಗೆ ತಿಳಿದಿರದ ರಹಸ್ಯ ತಿಳಿಯಬೇಕಾ? ಬೆಕ್ಕು, ಮೀನು ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ
Aug 24, 2024 03:37 PM IST
ಪರ್ಸನಾಲಿಟಿ ಟೆಸ್ಟ್
- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ನೋಡಿದಾಗ ಮನಸ್ಸಿಗೆ ವಿಚಿತ್ರ ಅನ್ನಿಸೋದು ಸಹಜ. ಆದರೆ ಇವುಗಳ ಮೂಲಕ ನಮ್ಮ ವ್ಯಕ್ತಿತ್ವವನ್ನೂ ಕಂಡುಕೊಳ್ಳಬಹುದು. ನಮ್ಮ ಬಗ್ಗೆ ನಮಗೆ ಗೊತ್ತಿರದ ಹಲವು ವಿಚಾರಗಳನ್ನು ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದ ಮೂಲಕ ಕಂಡುಕೊಳ್ಳಬಹುದು. ಹಾಗಾದರೆ ಬೆಕ್ಕು, ಮೀನು ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಎಂದರೆ ನಮ್ಮ ಕಣ್ಣು ಮನಸ್ಸಿಗೆ ವಿಚಿತ್ರ ಎನ್ನಿಸುತ್ತವೆ. ಕೆಲವೊಮ್ಮೆ ನಮ್ಮ ಕಣ್ಣಿಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತವೆ. ಆದರೆ ಇವು ನಮ್ಮ ವ್ಯಕ್ತಿತ್ವವನ್ನೂ ಪರೀಕ್ಷೆ ಮಾಡುತ್ತವೆ ಎಂದರೆ ನಂಬಲೇಬೇಕು. ವಿಚಿತ್ರ ಆದರೂ ಇದು ಸತ್ಯ. ಆಪ್ಟಿಕಲ್ ಇಲ್ಯೂಷನ್‌ಗಳ ಮೂಲಕ ವ್ಯಕ್ತಿತ್ವ ತಿಳಿದುಕೊಳ್ಳುವ ವಿಧಾನವನ್ನು ಮನೋಶಾಸ್ತ್ರದಲ್ಲೂ ಬಳಸಲಾಗುತ್ತದೆ. ನಮ್ಮ ಬದುಕಿನ ಬಗ್ಗೆ ನಮಗೆ ತಿಳಿದಿರದ ಅದೆಷ್ಟೋ ವಿಚಾರತಗಳನ್ನು ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದ ಮೂಲಕ ಕಂಡುಕೊಳ್ಳಬಹುದು.
ನಿಮ್ಮ ಬದುಕಿನ ಆಸೆ, ನಿಮ್ಮ ವರ್ತನೆ, ನಿಮ್ಮ ಸ್ವಭಾವ ಹೀಗೆ ನಿಮ್ಮ ಬಗ್ಗೆ ಹಲವು ವಿಚಾರಗಳನ್ನು ಬಹಿರಂಗ ಮಾಡುತ್ತವೆ ಈ ಚಿತ್ರಗಳು. ಹಾಗಾದರೆ ಇಂದಿನ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಬೆಕ್ಕು ಕಾಣಿಸ್ತಾ ಅಥವಾ ನೀವು ಕಾಣಿಸ್ತಾ ಹೇಳಿ. ನಿಮ್ಮ ರಹಸ್ಯ ಏನು ತಿಳಿಯಿರಿ.
ಬೆಕ್ಕು
ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಬೆಕ್ಕು ಕಂಡರೆ ನೀವು ಸ್ವಾತಂತ್ರ್ಯವಾಗಿರಲು ಬಯಸುತ್ತೀರಿ. ಬದುಕಿನಲ್ಲಿ ಸ್ಥಿರತೆ ಇರಬೇಕು ಎಂದು ಬಯಸುವವರು. ತಾಳ್ಮೆ ನಿಮಗಿರುವ ಒಳ್ಳೆಯ ಗುಣಗಳಲ್ಲಿ ಒಂದು. ಸವಾಲು ಎದುರಿಸುವ ವಿಚಾರದಲ್ಲಿ ನೀವು ಸೋಲಬಹುದು. ನೀವು ಉದಾರ ಮನಸ್ಸಿನವರು. ಯಾವಾಗಲೂ ಬೇರೆಯವರಿಗೆ ಸಹಾಯ ಮಾಡಬೇಕು ಎಂದು ಬಯಸುತ್ತೀರಿ. ನೀವು ಕ್ಷಮಾ ಗುಣದವರು. ನಮ್ಮ ತಪ್ಪುಗಳಿಗೆ ಪ್ರಾಮಾಣಿಕವಾಗಿ ಕ್ಷಮೆ ಕೇಳುವವರನ್ನು ಮುಕ್ತ ಮನಸ್ಸಿನಿಂದ ಕ್ಷಮಿಸುತ್ತೀರಿ.
ಮೀನು
ಚಿತ್ರದಲ್ಲಿ ನಿಮ್ಮ ಕಣ್ಣು ಮೀನನ್ನು ಮೊದಲು ಗ್ರಹಿಸಿದರೆ ಇತರರಲ್ಲಿ ಅಪ್ರಾಮಾಣಿಕತೆಯನ್ನು ಗ್ರಹಿಸುವ ತೀಕ್ಷ್ಣ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ. ಹಾಗಾಗಿ ನಿಮಗೆ ಪ್ರಾಮಾಣಿಕರಲ್ಲದ ಜನರಿಂದ ಸುಲಭವಾಗಿ ದೂರ ಉಳಿದು ಬಿಡುತ್ತೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನೀವು ಜಾಗರೂಕರಾಗಿರುತ್ತೀರಿ, ಆಗಾಗ್ಗೆ ದುಃಖ ಅಥವಾ ಕೋಪದ ಭಾವನೆಗಳನ್ನು ತಡೆದುಕೊಳ್ಳುತ್ತೀರಿ. ನೀವು ಹಗಲುಗನಸುಗಳಲ್ಲಿ ಕಳೆದುಹೋಗುತ್ತೀರಿ, ನಿಮ್ಮನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಮತ್ತು ನಿಮ್ಮ ಸಂಕೀರ್ಣತೆಗಳನ್ನು ಮೆಚ್ಚುವ ಯಾರಿಗಾದರೂ ಹಂಬಲಿಸುತ್ತೀರಿ.
ಈ ಪರ್ಸನಾಲಿಟಿ ಟೆಸ್ಟ್ ಅನ್ನೂ ಓದಿ
Personality Test: ನೀವು ಯಾವುದಕ್ಕೆ ಹೆಚ್ಚು ಭಯ ಪಡ್ತೀರಾ ತಿಳಿಬೇಕಾ? ಮೊಲ-ಹದ್ದು ಎರಡರಲ್ಲಿ ಮೊದಲು ಕಂಡಿದ್ದೇನು ಹೇಳಿ
ಭಯ ಯಾರಿಗಿಲ್ಲ ಹೇಳಿ, ಆದರೂ ಕೆಲವೊಮ್ಮೆ ನಾವು ಯಾವುದಕ್ಕೂ ಭಯಪಡದಂತೆ ಇರುತ್ತೇವೆ. ಆದರೆ ನಮ್ಮೊಳಗಿನ ಆತ್ಮವು ಯಾವುದಾದರೂ ಒಂದು ವಿಚಾರಕ್ಕೆ ಖಂಡಿತ ಭಯ ಪಡುತ್ತದೆ. ಹಾಗಾದರೆ ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ ತಿಳಿಯಬೇಕಾ? ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು ಹೇಳಿ.