logo
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಕಪ್ಪು ಕೂದಲ ಹುಡುಗಿ, ಅಗಲ ದವಡೆಯ ಮುಖ ಮೊದಲು ಕಾಣಿಸಿದ್ದೇನು? ನಿಮ್ಮ ಬಗ್ಗೆ ಹಲವು ವಿಚಾರ ತಿಳಿಸುತ್ತೆ ಈ ಚಿತ್ರ

Personality Test: ಕಪ್ಪು ಕೂದಲ ಹುಡುಗಿ, ಅಗಲ ದವಡೆಯ ಮುಖ ಮೊದಲು ಕಾಣಿಸಿದ್ದೇನು? ನಿಮ್ಮ ಬಗ್ಗೆ ಹಲವು ವಿಚಾರ ತಿಳಿಸುತ್ತೆ ಈ ಚಿತ್ರ

Reshma HT Kannada

Jul 22, 2024 11:36 AM IST

google News

ಕಪ್ಪು ಕೂದಲ ಹುಡುಗಿ, ಅಗಲವಾದ ದವಡೆ ಮೊದಲು ಕಾಣಿಸಿದ್ದೇನು, ನಿಮ್ಮ ಬಗ್ಗೆ ಹಲವು ವಿಚಾರ ತಿಳಿಸುತ್ತೆ ಈ ಚಿತ್ರ

    • ನಿಮ್ಮ ಬಗ್ಗೆ ನೀವು ತಿಳಿದುಕೊಂಡಿರುವುದು ಮಾತ್ರ ಸತ್ಯವಲ್ಲ, ನಿಮ್ಮ ಅಂತರಿಕ ವಿಚಾರಗಳನ್ನು ನೀವು ತಿಳಿಯಬೇಕು ಅಂದ್ರೆ ಪರ್ನಾಲಿಟಿ ಟೆಸ್ಟ್‌ಗೆ ಒಳಗಾಗಬೇಕು. ಇಲ್ಲೊಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡ ವಿಚಾರ ನಿಮ್ಮ ಬಗ್ಗೆ ನಿಮಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತದೆ.
ಕಪ್ಪು ಕೂದಲ ಹುಡುಗಿ, ಅಗಲವಾದ ದವಡೆ ಮೊದಲು ಕಾಣಿಸಿದ್ದೇನು, ನಿಮ್ಮ ಬಗ್ಗೆ ಹಲವು ವಿಚಾರ ತಿಳಿಸುತ್ತೆ ಈ ಚಿತ್ರ
ಕಪ್ಪು ಕೂದಲ ಹುಡುಗಿ, ಅಗಲವಾದ ದವಡೆ ಮೊದಲು ಕಾಣಿಸಿದ್ದೇನು, ನಿಮ್ಮ ಬಗ್ಗೆ ಹಲವು ವಿಚಾರ ತಿಳಿಸುತ್ತೆ ಈ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಿಮ್ಮ ಕಣ್ಣಿಗೆ ವಿಸ್ಮಯ ಎನ್ನಿಸುವುದು ಮಾತ್ರವಲ್ಲ, ಇವು ಹಲವು ವಿಚಾರಗಳನ್ನು ಒಳಗೊಂಡಿರುತ್ತವೆ. ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಒಂದೇ ಚಿತ್ರದಲ್ಲಿ ಹಲವು ಅಂಶಗಳಿದ್ದು, ಅದರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅಂಶ ಮೊದಲು ಕಾಣಿಸಬಹುದು. ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಮಾತ್ರವಲ್ಲ ಇದು ನಿಮ್ಮ ಯಾವ ಭಾಗದ ಮೆದುಳು ಹೆಚ್ಚು ಕ್ರಿಯಾಶೀಲವಾಗಿದೆ ಎಂಬುದನ್ನು ತಿಳಿಸುತ್ತದೆ.

ಇಲ್ಲಿರುವ ಚಿತ್ರದಲ್ಲಿ ಗಾಢ ಹಳದಿ ಬಣ್ಣದ ಹಿನ್ನೆಲೆಯನ್ನು ನೀವು ಗಮನಿಸಬಹುದು. ಅದರ ಮೇಲೆ ದಟ್ಟ ಕಪ್ಪು ಕೂದಲು ಹೊಂದಿರುವ ಮಹಿಳೆ ಹಾಗೂ ಅಗಲವಾದ ದವಡೆ ಹೊಂದಿರುವ ಮುಖ ಕಾಣುತ್ತದೆ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಾಣಿಸುವ ಅಂಶವು ನೀವು ಅಂತರ್ಮುಖಿಯೇ ಅಥವಾ ಬಹುರ್ಮುಖಿಯೇ ಎಂಬುದನ್ನು ತಿಳಿಸುತ್ತದೆ. ಆದರೆ ನಿಮಗೆ ಮೊದಲು ಕಂಡಿದ್ದೇನು ಎಂದು ಹೇಳುವ ವಿಚಾರದಲ್ಲಿ ನೀವು ಪ್ರಮಾಣಿಕರಾಗಿರಬೇಕು.

ಕಪ್ಪು ಕೂದಲಿನ ಮಹಿಳೆ

ಕಪ್ಪು ಕೂದಲು ಹರಡಿಕೊಂಡಿರುವ ಮಹಿಳೆಯನ್ನು ನೀವು ಮೊದಲು ಗಮನಿಸಿದರೆ, ನೀವು ತೀಕ್ಷ್ಣವಾದ ವೀಕ್ಷಣಾ ಕೌಶಲವನ್ನು ಹೊಂದಿದ್ದೀರಿ. ನೀವು ಎಲ್ಲವನ್ನೂ ವಿವರವಾಗಿ ಗಮನಿಸುತ್ತೀರಿ. ನೀವು ಅಂತರ್ಮುಖಿ ವ್ಯಕ್ತಿತ್ವದವರು. ನಿಮ್ಮ ಸುತ್ತಲೂ ಸಾಕಷ್ಟು ಜನರು, ಕಿರಿಕಿರಿ ಇದ್ದರೆ ನೀವು ಬಹಳ ಬೇಗ ಸುಸ್ತಾಗುತ್ತೀರಿ. ಹಾಗಾಗಿ ಅಗತ್ಯ ಇಲ್ಲದೇ ಇರುವಾಗ ನೀವು ಕಿಕ್ಕಿರಿದ ಜನಸಂದಣಿಯಲ್ಲಿ ಹೋಗುವುದನ್ನು ತಪ್ಪಿಸಿ. ನೀವು ನಾಚಿಕೆ ಹಾಗೂ ಶಾಂತ ಸ್ವಭಾವದವರು ಎಂದು ಜನರು ನಂಬಿದ್ದಾರೆ. ಹಾಗಾಗಿ ಯಾರೂ ನಿಮಗೆ ಅಷ್ಟಾಗಿ ತೊಂದರೆ ಕೊಡುವುದಿಲ್ಲ. ನೀವು ಒಂಟಿತನವನ್ನ ಇಷ್ಟಪಡುತ್ತೀರಿ, ಒಂಟಿ ಜೀವನವನ್ನು ಹೆಚ್ಚು ಎಂಜಾಯ್‌ ಮಾಡುತ್ತೀರಿ ಹಾಗಾಗಿ ನಿಮಗೆ ಎಂದಿಗೂ ಒಂಟಿತನದ ಭಾವನೆ ಮೂಡುವುದಿಲ್ಲ.

ಅಗಲ ದವಡೆ ಹೊಂದಿರುವ ಮುಖ

ನೀವು ಮೊದಲು ದೊಡ್ಡ ಅಥವಾ ಅಗಲ ದವಡೆಯ ಮುಖವನ್ನು ಕಂಡರೆ ನೀವು ಯಾವುದೇ ವಿಚಾರದಲ್ಲಿ ವಿವರಗಳನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಇದೆ. ನೀವು ಬಹಿರ್ಮುಖ ವ್ಯಕ್ತಿಯಾಗಿದ್ದೀರಿ. ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಬೆರೆಯಲು, ಚಾಟ್ ಮಾಡಲು ಮತ್ತು ಹ್ಯಾಂಗ್ ಔಟ್ ಮಾಡಲು ಆದ್ಯತೆ ನೀಡುತ್ತೀರಿ. ನೀವು ಸುಲಭವಾಗಿ ಜನರೊಂದಿಗೆ ಬೆರೆಯುತ್ತೀರಿ. ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಪರಿಹರಿಸಲು ನೀವು ಯಾವಾಗಲೂ ಆದ್ಯತೆ ನೀಡುತ್ತೀರಿ. ನಿಮ್ಮದು ಮುಕ್ತ ವ್ಯಕ್ತಿತ್ವವಾಗಿರುತ್ತದೆ. ನಿಮ್ಮ ಸ್ನೇಹಪರ ವ್ಯಕ್ತಿತ್ವದಿಂದ ಜನರು ನಿಮಗೆ ಹತ್ತಿರವಾಗುತ್ತಾರೆ.

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ