logo
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಪ್ರೀತಿ, ಪ್ರೇಮದ ಬಗ್ಗೆ ನಿಮ್ಮ ಅಭಿಪ್ರಾಯವೇನು, ತಿಳಿಬೇಕು ಅಂದ್ರೆ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

Personality Test: ಪ್ರೀತಿ, ಪ್ರೇಮದ ಬಗ್ಗೆ ನಿಮ್ಮ ಅಭಿಪ್ರಾಯವೇನು, ತಿಳಿಬೇಕು ಅಂದ್ರೆ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

Reshma HT Kannada

Nov 22, 2024 09:26 AM IST

google News

ಪರ್ಸನಾಲಿಟಿ ಟೆಸ್ಟ್

    • ಪ್ರೀತಿ–ಪ್ರೇಮದ ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಅಭಿಪ್ರಾಯ, ಭಾವನೆ ಇರುತ್ತದೆ. ನಿಮಗೆ ಪ್ರೀತಿಯ ಬಗ್ಗೆ ಯಾವ ಭಾವನೆ ಇದೆ ಎಂಬುದನ್ನು ತಿಳಿಯಬೇಕಾ, ನಿಮ್ಮ ಬಗ್ಗೆ ನಿಮಗೆ ಗೊತ್ತಿರದ ವಿಚಾರವನ್ನು ತಿಳಿಸುವ ಚಿತ್ರವಿದು. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೊದಲು ಕಂಡಿದ್ದೇನು, ಹೇಳಿ. ಅದು ನಿಮ್ಮ ಭಾವನೆ, ಅಭಿಪ್ರಾಯವನ್ನು ಸೂಚಿಸುತ್ತದೆ.
ಪರ್ಸನಾಲಿಟಿ ಟೆಸ್ಟ್
ಪರ್ಸನಾಲಿಟಿ ಟೆಸ್ಟ್

ನಮ್ಮ ದೇಹದ ಅಂಗಾಂಗಗಳು, ನಾವು ವರ್ತಿಸುವ ರೀತಿ, ನಡೆಯುವ ಶೈಲಿ, ತಿನ್ನುವ ವಿಧಾನ ಈ ಎಲ್ಲವೂ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಮಾತ್ರವಲ್ಲ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೂಡ ನಮ್ಮ ವ್ಯಕ್ತಿತ್ವವನ್ನು ಬಯಲು ಮಾಡುತ್ತವೆ. ಆಪ್ಟಿಕಲ್ ಇಲ್ಯೂಷನ್ ಚಿತ್ರ ಎಂದರೆ ಕಣ್ಣಿಗೆ ವಿಚಿತ್ರವಾಗಿ ಕಂಡರೂ ಇದು ನಮ್ಮ ಮನಸ್ಸನ್ನು ಓದುವ ಚಿತ್ರ ಎಂದರೆ ತಪ್ಪಾಗಲಿಕ್ಕಿಲ್ಲ.

ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹಲವು ಅಂಶಗಳಿದ್ದರೂ ನಮ್ಮ ಕಣ್ಣಿಗೆ ಮೊದಲು ಒಂದು ಅಂಶ ಗೋಚರವಾಗುತ್ತದೆ. ಆ ಅಂಶವು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಆರಂಭದಲ್ಲಿ ನಿಮಗೆ ಕಾಣಿಸಿತು ಎಂಬುದರ ಆಧಾರದ ಮೇಲೆ ನೀವು ಭಾವನಾತ್ಮಕ ಸೃಜನಶೀಲತೆ (ಬಲ ಮೆದುಳಿನ ಪ್ರಾಬಲ್ಯ) ಅಥವಾ ತಾರ್ಕಿಕ ವಿಶ್ಲೇಷಣೆ (ಎಡ ಮೆದುಳಿನ ಪ್ರಾಬಲ್ಯ) ಕಡೆಗೆ ಒಲವು ತೋರುತ್ತೀರಾ ಎಂಬುದನ್ನು ಈ ವ್ಯಕ್ತಿತ್ವ ಪರೀಕ್ಷೆಯು ಅಳೆಯುತ್ತದೆ. ಇಂದಿನ ಚಿತ್ರದಲ್ಲಿ ಟೋಪಿ ಹಾಕಿರುವ ಮಹಿಳೆ ಹಾಗೂ ಪಕ್ಷಿ, ಒಂದು ಸುಂದರ ಭೂ ದೃಶ್ಯವಿದೆ. ಇದರಲ್ಲಿ ನಿಮ್ಮ ಕಣ್ಣು ಮೊದಲು ಗ್ರಹಿಸಿದ್ದೇನು ಹೇಳಿ. ಆ ಮೂಲಕ ಪ್ರೀತಿಯ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಯಬಹುದು.

ಹಕ್ಕಿ ಹಾಗೂ ಟೋಪಿ ಹಾಕಿರುವ ಮಹಿಳೆ

ಈ ಚಿತ್ರದಲ್ಲಿ ಹಕ್ಕಿ ಹಾಗೂ ಟೋಪಿ ಹಾಕಿರುವ ಮಹಿಳೆ ನಿಮಗೆ ಮೊದಲು ಕಂಡರೆ ನಿಮಗೆ ಪ್ರೀತಿ–ಪ್ರೇಮದ ಸಂಬಂಧದಲ್ಲಿ ದೀರ್ಘಕಾಲದವರೆಗೆ ಕಮಿಟೆಡ್ ಆಗಿ ಇರುವುದು ಇಷ್ಟವಾಗುತ್ತದೆ. ಸ್ವಾತಂತ್ರ್ಯ ನಿಮಗೆ ಬಹಳ ಇಷ್ಟ. ಪ್ರಣಯ ಸಂಬಂಧಗಳಿಗಿಂತ ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಅನ್ವೇಷಣೆಗಳಿಗೆ ನೀವು ಆದ್ಯತೆ ನೀಡುತ್ತೀರಿ. ನಿಮ್ಮ ವಿಶ್ಲೇಷಣಾತ್ಮಕ ಸ್ವಭಾವವು ನಿಮಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಕೆಲವೊಮ್ಮೆ ಅತಿಯಾದ ಆಲೋಚನೆಯ ಒತ್ತಡಕ್ಕೂ ಕಾರಣವಾಗಬಹುದು. ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ವ್ಯಕ್ತಿ ನೀವು.

ಭೂದೃಶ್ಯದಲ್ಲಿರುವ ಮುಖ

ಭೂದೃಶ್ಯದೊಳಗೆ ಒಂದು ಮುಖವನ್ನು ನೋಡಿದರೆ ನೀವು ಸಹಾನುಭೂತಿಯ ಬಲವಾದ ಅರ್ಥವನ್ನು ಹೊಂದಿರುತ್ತೀರಿ. ನೀವು ಇತರರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತೀರಿ. ಪ್ರೀತಿ ಹಾಗೂ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತೀರಿ. ನಿಮ್ಮ ಸಹಾನುಭೂತಿಯ ಸ್ವಭಾವವು ಆಳವಾದ ಸಂಪರ್ಕಗಳನ್ನು ಬೆಳೆಸುತ್ತದೆ. ಕೆಲವೊಮ್ಮೆ ಅತಿಯಾದ ಸಂಪರ್ಕವೇ ನಿಮಗೆ ಮುಳುವಾಗಬಹುದು ಎಚ್ಚರ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯನ್ನು ಸಂಪೂರ್ಣ ನಿಜ ಹಾಗೂ ನಿಖರವಾಗಿದೆ ಎಂದು ನಾವು ಹೇಳುವುದಿಲ್ಲ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಇದನ್ನು ಪುಷ್ಟೀಕರಿಸುವುದೂ ಇಲ್ಲ. ಇದು ಅಂತರ್ಜಾಲ ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಬರಹ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ). 

ಈ ಪರ್ಸನಾಲಿಟಿ ಟೆಸ್ಟ್ ಅನ್ನೂ ಓದಿ 

Personality Test: ಪ್ರೀತಿ–ಪ್ರೇಮದ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗೆ, ತಿಳಿಯಲು ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

ಮನುಷ್ಯರ ವ್ಯಕ್ತಿತ್ವ ಒಬ್ಬರಿಗಿಂತ ಒಬ್ಬರದು ಭಿನ್ನವಾಗಿರುತ್ತದೆ. ಇದು ಎಲ್ಲಾ ವಿಚಾರಕ್ಕೂ ಅನ್ವಯವಾಗುತ್ತದೆ. ಪ್ರೀತಿ–ಪ್ರೇಮದ ವಿಚಾರಕ್ಕೆ ಬಂದಾಗ ನೀವು ಎಂತಹ ಪ್ರೇಮಿ, ಸಂಗಾತಿಯ ಜೊತೆ ನಿಮ್ಮ ವರ್ತನೆ ಹೇಗಿರುತ್ತದೆ ಎಂಬುದನ್ನು ತಿಳಿಯಬೇಕು ಅಂದ್ರೆ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ