Brain Teaser: ಈ ಇಬ್ಬರಲ್ಲಿ ಮಗುವನ್ನ ಕಿಡ್ನಾಪ್ ಮಾಡಿದವರು ಯಾರು, ಶೇ 98ರಷ್ಟು ಮಂದಿಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗದ ಪ್ರಶ್ನೆಯಿದು
Nov 22, 2024 08:49 AM IST
ಬ್ರೈನ್ ಟೀಸರ್
- ಇಂದಿನ ಬ್ರೈನ್ ಟೀಸರ್ ಸಖತ್ ಮಜಾ ಇದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಮಗುವನ್ನು ಎತ್ತಿಕೊಂಡಿದ್ದಾರೆ. ಒಬ್ಬ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಬಂದವನು. ಹಾಗಾದರೆ ಈ ಒಬ್ಬರಲ್ಲಿ ಮಕ್ಕಳ ಕಳ್ಳ ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮಗಿರೋದು 10 ಸೆಕೆಂಡ್ ಸಮಯ. ಶೇ 98ರಷ್ಟು ಮಂದಿಗೆ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಬ್ರೈನ್ ಟೀಸರ್‌ಗಳು ಮಜಾ ನೀಡೋದು ಮಾತ್ರವಲ್ಲ ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತವೆ. ಇದಕ್ಕೆ ಉತ್ತರ ಕಂಡುಕೊಳ್ಳುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಅದರಲ್ಲೂ ಕೆಲವೊಂದು ಪ್ರಶ್ನೆಗಳು ಮೆದುಳಿಗೆ ಹುಳ ಬಿಡೋದು ಪಕ್ಕಾ, ಯಾವ ರೀತಿ ಯೋಚನೆ ಮಾಡಿದ್ರು ನಿಮಗೆ ಉತ್ತರ ಮಾತ್ರ ಸಿಗೊಲ್ಲ. ಅಂತಹ ಪ್ರಶ್ನೆ ಇಂದಿನ ಬ್ರೈನ್ ಟೀಸರ್‌ನಲ್ಲಿದೆ.
ಶೇ 98 ರಷ್ಟು ಮಂದಿ 10 ಸೆಕೆಂಡ್‌ನಲ್ಲಿ ಉತ್ತರ ಹೇಳಲು ಸೋತಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವೇ ನೋಡಿ. ಇದಕ್ಕೆ ನೀವು ಉತ್ತರ ಹೇಳಿದರೆ ನಿಮ್ಮಷ್ಟು ಬುದ್ಧಿವಂತರಿಲ್ಲ ಎಂದರ್ಥ. ಹಾಗಂತ ಈ ಪ್ರಶ್ನೆಗೆ ಸುಲಭವಾಗಿ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ ಬಿಡಿ. ಇದಕ್ಕಾಗಿ ನೀವು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಅಂತಹ ಟ್ರಿಕ್ಸ್ ಈ ಬ್ರೈನ್ ಟೀಸರ್‌ನಲ್ಲಿ ಏನಿದೆ ಅಂತ ಯೋಚನೆ ಮಾಡ್ತಾ ಇದೀರಾ. ಈ ಬ್ರೈನ್ ಟೀಸರ್‌ನ ಪ್ರಶ್ನೆ ಹೀಗಿದೆ ನೋಡಿ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಇಬ್ಬರು ವ್ಯಕ್ತಿಗಳಿದ್ದಾರೆ. ಒಬ್ಬ ಹಸಿರು ಬಣ್ಣದ ಜಾಕೆಟ್ ನೀಲಿ ಟೀ ಶರ್ಟ್ ಧರಿಸಿದ್ದರೆ, ಇನ್ನೊಬ್ಬ ಹಳದಿ ಬಣ್ಣದ ಶರ್ಟ್ ಧರಿಸಿದ್ದಾನೆ. ಈ ಇಬ್ಬರ ಕೈಯಲ್ಲೂ ಒಂದೊಂದು ಮಗುವಿದೆ. ಒಂದು ಮಗು ಜೋರಾಗಿ ಅಳುತ್ತಿದ್ದರೆ, ಇನ್ನೊಂದು ಮಗುವಿನ ಬಾಯಿಗೆ ನಿಪ್ಪಲ್ ಇರಿಸಲಾಗಿದೆ. ಹಸಿರು ಜಾಕೆಟ್ ಹಾಕಿರುವ ವ್ಯಕ್ತಿ ಮಗುವನ್ನು ಜೋಪಾನ ಮಾಡಿದ್ರೆ, ಹಳದಿ ಶರ್ಟ್ ಧರಿಸಿರುವ ವ್ಯಕ್ತಿ ಮಗುವನ್ನು ಬೇಕಾಬಿಟ್ಟಿ ಹಿಡಿದುಕೊಂಡಿದ್ದಾನೆ. ಈ ಇಬ್ಬರಲ್ಲಿ ಒಬ್ಬ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಬಂದಿರುತ್ತಾನೆ. ಹಾಗಾದರೆ ಈ ಇಬ್ಬರಲ್ಲಿ ಮಕ್ಕಳ ಕಳ್ಳ ಯಾರು ಎಂದು ನೀವು ಕಂಡುಹಿಡಿಯಬೇಕು.
ಈ ಬ್ರೈನ್ ಟೀಸರ್‌ಗೆ ನೀವು ಕೇವಲ 10 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಬೇಕು. ಅದು ನಿಮಗಿರುವ ಸವಾಲು. ಯೋಚನೆ ಮಾಡಿ ಉತ್ತರ ಕೊಡಿ. ನಿಮಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಯ್ತು ಎಂದರೆ ತಡ ಮಾಡಬೇಡಿ. ಕೂಡಲೇ ಈ ಬ್ರೈನ್ ಟೀಸರ್ ಅನ್ನು ನಿಮ್ಮ ಆತ್ಮೀಯರಿಗೆ ಕಳುಹಿಸಿ, ಅವರ ಬಳಿ ಮಗುವನ್ನು ಕಿಡ್ನಾಪ್ ಮಾಡಿದವನು ಯಾರು ಎಂದು ಕಂಡುಹಿಡಿಯಲು ಹೇಳಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ನೀವು ಬಹಳ ಬುದ್ಧಿವಂತರಾದ್ರೆ ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ
ಬ್ರೈನ್ ಟೀಸರ್‌ಗಳು ನಿಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿಗೆ ಸವಾಲು ಹಾಕುವುದು ಸುಳ್ಳಲ್ಲ. ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಒಂದು ಟೀ ಶರ್ಟ್ ಇದೆ. ಆ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಸವಾಲು. ಕೇವಲ 15 ಸೆಕೆಂಡ್ ಒಳಗೆ ಈ ಪ್ರಶ್ನೆಗೆ ಉತ್ತರ ಹೇಳಬೇಕು.
Brain Teaser: ಶೇ 98ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ
ನಿಮ್ಮ ಮೆದುಳು ಸಖತ್ ಶಾರ್ಪ್, ನೀವು ತುಂಬಾನೇ ಬುದ್ಧಿವಂತರು ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಪ್ರಶ್ನೆ ಇದೆ. ಈ ಪ್ರಶ್ನೆಗೆ ಉತ್ತರ ಹೇಳಲು ಶೇ 98ರಷ್ಟು ಮಂದಿ ಸೋತಿದ್ದಾರೆ. ನಿಮಗೆ ಉತ್ತರಿಸಲು ಸಾಧ್ಯವೇ ನೋಡಿ. ಜಾನಿಯ ತಂದೆಯ 5ನೇ ಮಗನ ಹೆಸರೇನು? ಥಟ್ಟಂತ ಹೇಳಿ. ನಿಮಗಿದು ಸವಾಲ್.