logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 312 = 36, 412= 47 ಆದ್ರೆ 612 = ಎಷ್ಟು? ಗಣಿತ ಸುಲಭ ಅನ್ನೋರು 10 ಸೆಕೆಂಡ್‌ ಒಳಗೆ ಉತ್ತರ ಹೇಳಿ ನೋಡೋಣ

Brain Teaser: 312 = 36, 412= 47 ಆದ್ರೆ 612 = ಎಷ್ಟು? ಗಣಿತ ಸುಲಭ ಅನ್ನೋರು 10 ಸೆಕೆಂಡ್‌ ಒಳಗೆ ಉತ್ತರ ಹೇಳಿ ನೋಡೋಣ

Reshma HT Kannada

Nov 26, 2024 01:22 PM IST

google News

ಬ್ರೈನ್ ಟೀಸರ್‌

    • ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಗಣಿತದ ಪಜಲ್‌ಗಳು ವೈರಲ್ ಆಗುತ್ತವೆ. ಇಂತಹ ಪಜಲ್‌ಗಳಲ್ಲಿ ಇಲ್ಲೊಂದು ವಿಶೇಷವಾದ, ಮೆದುಳಿಗೆ ಟ್ರಿಕ್ಕಿ ಎನ್ನಿಸುವ ಸವಾಲಿದೆ. ಗಣಿತ ನಿಮಗೆ ಇಷ್ಟದ ಸಬ್ಜೆಕ್ಟ್ ಅಂತಾದ್ರೆ ನೀವು ಈ ಪಜಲ್‌ಗೆ 10 ನಿಮಿಷದಲ್ಲಿ ಉತ್ತರ ಹೇಳಬೇಕು. 312 =36 ಆದ್ರೆ 612= ಎಷ್ಟು ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು. 
ಬ್ರೈನ್ ಟೀಸರ್‌
ಬ್ರೈನ್ ಟೀಸರ್‌

ಬ್ರೈನ್ ಟೀಸರ್‌ಗಳು ಎಂದರೆ ಮನಸ್ಸಿಗೆ ಖುಷಿ ಕೊಡುವಂತವು ಮಾತ್ರವಲ್ಲ, ಇವು ಮೆದುಳಿಗೆ ಸವಾಲು ಹಾಕುವ ಚಿತ್ರಗಳು ಹೌದು. ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳಲು ತಾರ್ತಿಕ ಚಿಂತನೆ ಬಹಳ ಅವಶ್ಯ. ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗಳು ನೋಡಲು ಸುಲಭವಾಗಿ ಕಂಡರೂ ಉತ್ತರ ಕಂಡುಕೊಳ್ಳುವುದು ನಿಜಕ್ಕೂ ಸವಾಲು. ಸಾಮಾನ್ಯ ಗಣಿತಕ್ಕಿಂತ ಇವು ಕೊಂಚ ಭಿನ್ನವಾಗಿರುತ್ತವೆ. ಇದು ಒಂಥರಾ ಚಾಲೆಂಜಿಂಗ್‌ ಆಗಿರುವ ಕಾರಣ ಹಲವರಿಗೆ ಇದು ಇಷ್ಟವಾಗುತ್ತದೆ. ಇದಕ್ಕೆ ಉತ್ತರ ಕಂಡುಕೊಳ್ಳುವುದರಿಂದ ಟೈಮ್‌ಪಾಸ್ ಆಗುವುದು ಸುಳಲ್ಲ.

ಬ್ರೈನ್ ಟೀಸರ್‌ಗಳಿಗೆ ನಾವು ಔಟ್ ಆಫ್ ದಿ ಬಾಕ್ಸ್ ಯೋಚಿಸುವುದರಿಂದ ನಮ್ಮಲ್ಲಿ ಯೋಚನಾ ಶಕ್ತಿ ಬೆಳೆಯುತ್ತದೆ. ಇದರಿಂದ ಮೆದುಳು ಚುರುಕಾಗುತ್ತದೆ. ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವೂ ಬೆಳೆಯುತ್ತದೆ. ಮೆದುಳಿಗೆ ಹುಳ ಬಿಡುವಂತಿದ್ದರೂ ಬ್ರೈನ್ ಟೀಸರ್‌ಗಳಿಗೆ ಅಭಿಮಾನಿಗಳು ಕಡಿಮೆಯಿಲ್ಲ. ಬ್ರೈನ್ ಟೀಸರ್‌ಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸುವವರೂ ಇದ್ದಾರೆ.

ಅದೇನೆ ಇರಲಿ ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನೀವು ಗಣಿತ ಎಕ್ಸ್‌ಪರ್ಟ್ ಆಗಿರಬೇಕು. ಗಣಿತದಲ್ಲಿ ನೀವು ಸಖತ್ ಬ್ರಿಲಿಯೆಂಟ್ ಆಗಿದ್ದರೆ ಮಾತ್ರ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಗಣಿತ ನಿಮ್ಮಿಷ್ಟದ ಸಬ್ಜೆಕ್ಟ್ ಆದರೆ ಈ ಪ್ರಶ್ನೆಗೆ ನೀವು 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

@brain_teaser_1 ಎನ್ನುವ ಎಕ್ಸ್‌ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ. "312=36, 412=47, 512=58, 612= ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ಈ ಪ್ರಶ್ನೆಗೆ ನೀವು 10 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಬೇಕು. ಇಂತಹ ಲಾಜಿಕಲ್ ಥಿಕಿಂಗ್‌ಗೆ ಒತ್ತು ನೀಡುವ ಪ್ರಶ್ನೆಗಳು ಸರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿರುತ್ತವೆ. ಹಾಗಾದರೆ ಈ ಮೈಂಡ್ ಬ್ಲೆಂಡಿಂಗ್ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಈ ಇಬ್ಬರಲ್ಲಿ ಮಗುವನ್ನ ಕಿಡ್ನಾಪ್ ಮಾಡಿದವರು ಯಾರು, ಶೇ 98ರಷ್ಟು ಮಂದಿಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗದ ಪ್ರಶ್ನೆಯಿದು

ಇಂದಿನ ಬ್ರೈನ್ ಟೀಸರ್ ಸಖತ್ ಮಜಾ ಇದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಮಗುವನ್ನು ಎತ್ತಿಕೊಂಡಿದ್ದಾರೆ. ಒಬ್ಬ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಬಂದವನು. ಹಾಗಾದರೆ ಈ ಒಬ್ಬರಲ್ಲಿ ಮಕ್ಕಳ ಕಳ್ಳ ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮಗಿರೋದು 10 ಸೆಕೆಂಡ್ ಸಮಯ. ಶೇ 98ರಷ್ಟು ಮಂದಿಗೆ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

Brain Teaser: 30 ಸೆಕೆಂಡ್‌ನಲ್ಲಿ ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು, ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ

ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳುವುದು ನಿಮ್ಮಿಷ್ಟದ ಹವ್ಯಾಸವಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಲ್ಲಿರುವ ಗಣಿತದ ಪಜಲ್‌ಗೆ ನೀವು 30 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. 4*Y= ಎಷ್ಟು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ