Brain Teaser: ಈ ಇಬ್ಬರು ಮಹಿಳೆಯರಲ್ಲಿ ಯಾರು ಮನೆಗೆ ಹೆಚ್ಚು ನೀರು ತರುತ್ತಾರೆ, 20 ಸೆಕೆಂಡ್‌ನಲ್ಲಿ ಉತ್ತರಿಸಿ, ಮೆದುಳಿಗೊಂದು ಸವಾಲು
Dec 04, 2024 11:16 AM IST
ಬ್ರೈನ್ ಟೀಸರ್
- ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಇಬ್ಬರು ಮಹಿಳೆಯರು ನೀರು ತರುತ್ತಿರುವ ದೃಶ್ಯವಿದೆ. ಇಬ್ಬರಲ್ಲಿ ಯಾರು ಹೆಚ್ಚು ನೀರು ತರುತ್ತಿದ್ದಾರೆ ಎಂದು ನೀವು ಹೇಳಬೇಕು. ನಿಮಗಿರೋದು 20 ಸೆಕೆಂಡ್ ಸಮಯ, ಅಷ್ಟರಲ್ಲಿ ನೀವು ಸರಿಯಾದ ಉತ್ತರ ಕಂಡುಹಿಡಿಯಬೇಕು.
ಬ್ರೈನ್ ಟೀಸರ್ ಪ್ರಶ್ನೆ ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದರಿಂದ ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣ ವೃದ್ಧಿಯಾಗುತ್ತದೆ. ನಾವು ಸಜೃನಾತ್ಮಕವಾಗಿ ಯೋಚಿಸಲು ಕೂಡ ಬ್ರೈನ್ ಟೀಸರ್‌ಗಳು ಸಹಾಯ ಮಾಡುತ್ತವೆ. ಈ ಬ್ರೈನ್ ಟೀಸರ್‌ಗಳು ನಮ್ಮ ಸಾಮರ್ಥ್ಯದ ಮೇಲೆ ಗಮನ ಹರಿಸುತ್ತವೆ. ಇದು ನಮ್ಮ ಗಮನಶಕ್ತಿ ಹೆಚ್ಚಲು ಕೂಡ ಸಹಕಾರಿ.
ಸಾಮಾನ್ಯವಾಗಿ ಬ್ರೈನ್ ಟೀಸರ್‌ಗಳಲ್ಲಿ ತಪ್ಪಾಗಿರುವುದನ್ನು ಗುರುತಿಸುವುದು, ಎರಡು ಚಿತ್ರದಲ್ಲಿನ ವ್ಯತ್ಯಾಸ ಗುರುತಿಸುವುದು, ಗಣಿತದ ಪಜಲ್ ಈ ಎಲ್ಲವೂ ಒಳಗೊಂಡಿರುತ್ತದೆ. ಇದಕ್ಕೆ ಉತ್ತರ ಹೇಳುವ ಸಲುವಾಗಿ ನಾವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಆದರೆ ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುವುದು ಸುಳ್ಳಲ್ಲ. ಆ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ.
ಬ್ರೈನ್ ಟೀಸರ್‌ನಲ್ಲಿ ಏನಿದೆ?
ಇಂದಿನ ಬ್ರೈನ್ ಟೀಸರ್‌ನಲ್ಲಿ ಇಬ್ಬರು ಮಹಿಳೆಯರು ನೀರನ್ನು ಹಿಡಿದು ಬರುತ್ತಿರುವುದನ್ನು ಕಾಣಬಹುದು. ಒಬ್ಬಳು ಎರಡು ಮರ ಬುಟ್ಟಿಯಲ್ಲಿ ನೀರು ತುಂಬಿಸಿಕೊಂಡಿದ್ದರೆ, ಇನ್ನೊಬ್ಬಳು ಹುಡುಗಿ ಎರಡು ಸ್ಟೀಲ್ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡಿದ್ದಾಳೆ. ಮರದ ಬುಟ್ಟಿಗೆ ಹೋಲಿಸಿದರೆ ಸ್ಟೀಲ್ ಬಕೆಟ್‌ಗಳು ಚಿಕ್ಕದಾಗಿವೆ. ಮೊದಲ ನೋಟಕ್ಕೆ ಎರಡೂ ಒಂದೇ ರೀತಿ ಇದೆ. ಆದರೆ ಇದರಲ್ಲಿ ಒಂದು ಟ್ವಿಸ್ಟ್ ಇದೆ. ಈ ಇಬ್ಬರಲ್ಲಿ ಯಾವ ಮಹಿಳೆ ಹೆಚ್ಚು ನೀರು ತರುತ್ತಾರೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಇದಕ್ಕೆ ನಿಮಗಿರೋದು 20 ಸೆಕೆಂಡ್ ಸಮಯ. ಆ ಸಮಯದೊಳಗೆ ನೀರು ಯಾರು ಹೆಚ್ಚು ತರುತ್ತಾರೆ ಎಂಬುದನ್ನು ನೀವು ಕಂಡುಹಿಡಿಯಬೇಕು.
ನಿಮ್ಮ ಸಮಯ ಶುರುವಾಗಿದೆ, 20 ಸೆಕೆಂಡ್‌ನಲ್ಲಿ ನಿಮಗೆ ಯಾವ ಮಹಿಳೆ ಮನೆಗೆ ಹೆಚ್ಚು ನೀರು ತರುತ್ತಾಳೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಯ್ತಾ. ಹಾಗಾದರೆ ನೀವು ಖಂಡಿತ ಬುದ್ಧಿವಂತರು. ಒಂದು ವೇಳೆ ಇದರಲ್ಲಿ ಯಾರು ಹೆಚ್ಚು ನೀರು ಮನೆಗೆ ತರುತ್ತಾರೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದರೆ ನಾವು ಉತ್ತರ ಹೇಳುತ್ತೇವೆ. ಎರಡನೇ ಮಹಿಳೆ ಹೆಚ್ಚು ನೀರು ತರುತ್ತಾಳೆ. ಯಾಕೆಂದರೆ ಮೊದಲ ಮಹಿಳೆಯ ಮರದ ಬುಟ್ಟಿ ತೂತಾಗಿದೆ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾದ್ರೆ ಈ 5 ಜನರಲ್ಲಿ ಕೊಲೆಗಾರ ಯಾರು ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ
ಪತ್ತೇದಾರಿ ಕೆಲಸ ಮಾಡೋದ್ರಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದು ಕೊಲೆ ನಡೆದಿರುವ ವಿವರ ಇದ್ದು, 5 ಜನರಲ್ಲಿ ಕೊಲೆಗಾರ ಯಾರು ಎಂದು ನೀವು ಕಂಡು ಹಿಡಿಯಬೇಕು. ಇದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು.