ಭಾರತಕ್ಕೆ ಬಂದು ನೆಲೆಸಿದ ನಂತರ ಜೀವನದಲ್ಲಾದ 8 ಬದಲಾವಣೆ ಬಹಿರಂಗಪಡಿಸಿದ ಅಮೆರಿಕ ವ್ಯಕ್ತಿ; ನೆಟ್ಟಿಗರ ಕಾಮೆಂಟ್ ಹೀಗಿದೆ
Oct 29, 2024 10:01 AM IST
ಭಾರತಕ್ಕೆ ಬಂದು ನೆಲೆಸಿದ ನಂತರ ಜೀವನದಲ್ಲಾದ 8 ಬದಲಾವಣೆ ಬಹಿರಂಗಪಡಿಸಿದ ಅಮೆರಿಕ ವ್ಯಕ್ತಿ
- ಪತ್ನಿ ಹಾಗೂ ಮಕ್ಕಳೊಂದಿಗೆ ಭಾರತದಲ್ಲಿ ವಾಸಿಸುತ್ತಿರುವ ಯುಎಸ್ಎ ಮೂಲದ ವ್ಯಕ್ತಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಸದ್ಯ ವೈರಲ್ ಆಗಿದೆ. ಭಾರತದ ಜೀವನದ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಅಮೆರಿಕ ವ್ಯಕ್ತಿಯ ಬಗ್ಗೆ ಭಾರತೀಯರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.
ಭಾರತೀಯರ ಜೀವನಶೈಲಿ ಭಾರತೀಯರು ಮಾತ್ರವಲ್ಲದೆ ಹಲವು ವಿದೇಶಿಗರಿಗೂ ಅಚ್ಚುಮೆಚ್ಚು. ಯುಎಸ್‌ನಿಂದ ಭಾರತಕ್ಕೆ ಸ್ಥಳಾಂತರಗೊಂಡ ವ್ಯಕ್ತಿಯೊಬ್ಬರು, ಭಾರತದ ನೆಲದಲ್ಲಿ ತಾವು ಎದುರಿಸಿದ ಸಾಂಸ್ಕೃತಿಕ ವ್ಯತ್ಯಾಸಗಳನ್ನು ದಾಖಲಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತೀಯರಿಗೆ ಪರಿಚಿತವಾಗಿರುವ ದೈನಂದಿನ ಜೀವನವು, ವಿದೇಶಿಯರಿಗೆ ಹೇಗನಿಸುತ್ತದೆ ಎಂಬುದನ್ನು ಈ ವಿಡಿಯೋ ಮೂಲಕ ತಿಳಿಯಬಹುದು. ಅಮೆರಿಕದ ವ್ಯಕ್ತಿ ಭಾರತೀಯ ಜೀವನಶೈಲಿಯನ್ನು ಅನುಭವಿಸಿದ ಬಳಿಕ ಈ ವಿಡಿಯೋ ಮಾಡಿದ್ದಾರೆ.
ಅಮೆರಿಕ ಮೂಲದವರಾದ ಟಿಮ್ ಫಿಶರ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಪತ್ನಿ ಕೆನಡಾದವರಾಗಿದ್ದು, ಮೂವರು ಮಕ್ಕಳೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಾರೆ. "ಬೇರೆ ದೇಶಕ್ಕೆ ಹೋಗುವುದೆಂದರೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಯುಎಸ್‌ನಿಂದ ಭಾರತಕ್ಕೆ ಸ್ಥಳಾಂತರಗೊಂಡ ನಂತರ ನನ್ನ ಜೀವನದಲ್ಲಿ ಆದ 8 ಬದಲಾವಣೆಗಳು ಇಲ್ಲಿವೆ.
ಫಿಶರ್ ಕಂಡುಕೊಂಡ ಮೊದಲ ಬದಲಾವಣೆ ಆಹಾರದ ವಿಷಯದಲ್ಲಾಗಿದೆ. ತಮ್ಮ ದೈನಂದಿನ ಆಹಾರವು “ಈಗ ಹೆಚ್ಚು ಪರಿಮಳಯುಕ್ತವಾಗಿದೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಭಾರತದಲ್ಲಿ ವಾಹನ ಚಾಲನಾ ನಿಯಮಗಳು ಅಮೆರಿಕಕ್ಕಿಂತ ಹೇಗೆ ಭಿನ್ನ ಎಂಬುದನ್ನು ಅವರು ವಿವರಿಸಿದ್ದಾರೆ.
"ತಾನೀಗ ಹಿಂದಿ ಭಾಷೆ ಓದಲು ಕಲಿತಿದ್ದೇನೆ. ಸೈಕಲ್‌ನಲ್ಲಿ ನನ್ನ ಮಕ್ಕಳನ್ನು ಕೂಡಾ ಕೂರಿಸಿಕೊಂಡು ರಸ್ತೆಯಲ್ಲಿ ಹೋಗಬಹುದು. ಭಾರತದಲ್ಲಿ ನನ್ನ ಕಾರ್ ಗ್ಯಾರಜ್‌ನ ಬಾಗಿಲುಗಳು ಈ ಆಟೊಮ್ಯಾಟಿಕ್ ಆಗಿ ತೆರೆಯಲ್ಲ. ಮನೆಯ ಆವರಣದಲ್ಲಿರುವ ಹುಲ್ಲನ್ನು ಆಗಾಗ ತೆಗೆಯಬೇಕಾದ ಅಗತ್ಯವಿಲ್ಲ," ಎಂದು ಅವರು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ
ಫಿಶರ್ ಅವರ ವಿಡಿಯೋ ನೋಡಿ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಹಾಕಿದ್ದಾರೆ. “ಆಧಾರ್ ಕಾರ್ಡ್ ಲೋಡಿಂಗ್” ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ “ನೀವು ಹಿಂದಿ ಕಲಿತಿದ್ದೀರಾ? ನಿಮ್ಮ ಬಗ್ಗೆ ತುಂಬಾ ಗೌರವವಿದೆ ಎಂದಿದ್ದಾರೆ.” ಮತ್ತೊಬ್ಬರು ಕಾಮೆಂಟ್ ಮಾಡಿ, “ಭಾರತದ ನಗರದಲ್ಲಿ ನನ್ನ ವಾಸ್ತವ್ಯದ ಸಮಯದಲ್ಲಿ ನಾನು ವರ್ಣಭೇದ ನೀತಿಯನ್ನು ಎದುರಿಸಿದೆ. ಆದರೂ ನಾನು ಒಳ್ಳೆಯ ಜನರನ್ನು ಕೂಡಾ ಭೇಟಿಯಾಗಿದ್ದೇನೆ. ನೀವು ಭಾರತದಲ್ಲಿ ನೆಲೆ ಕಂಡುಕೊಂಡಿದ್ದಕ್ಕೆ ಸಂತೋಷವಾಗಿದೆ. ಸೈಕಲ್ ಸವಾರಿಯನ್ನು ಆನಂದಿಸಿ. ಇದು ಅತ್ಯುತ್ತಮ,” ಎಂದು ಬರೆದಿದ್ದಾರೆ.