ಹಬ್ಬಕ್ಕೆ ಬೆಂಗಳೂರಲ್ಲೇ ಇರ್ತೀರಾ? ನವರಾತ್ರಿಯಲ್ಲಿ ದೇವಿಯ ಆಶೀರ್ವಾದ ಪಡೆಯಲು ನಿಮ್ಮ ಹತ್ತಿರದಲ್ಲೇ ಇರುವ ಈ ದೇವಸ್ಥಾನಗಳ ದರ್ಶನ ಮಾಡಿ
Oct 03, 2024 04:29 PM IST
ಶ್ರೀ ಬನಶಂಕರಿ ದೇವಸ್ಥಾನ ಬೆಂಗಳೂರು
- ಹಬ್ಬಕ್ಕೆ ಬೆಂಗಳೂರಲ್ಲೇ ಇರ್ತೀರಾ? ನವರಾತ್ರಿಯಲ್ಲಿ ದೇವಿಯ ಆಶೀರ್ವಾದ ಪಡೆಯಲು ನಿಮ್ಮ ಹತ್ತಿರದಲ್ಲೇ ಇರುವ ಈ ದೇವಸ್ಥಾನಗಳ ದರ್ಶನ ಮಾಡಿ ದೇವಿಯ ಆಶೀರ್ವಾದ ಪಡೆದುಕೊಳ್ಳಿ. ಈ ಬಾರಿ ನವರಾತ್ರಿಯಲ್ಲಿ ನೀವು ಯಾವ ಯಾವ ದೇವಸ್ಥಾನಕ್ಕೆ ಭೇಟಿ ನೀಡಬಹುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ.
ಬನಶಂಕರಿ ಅಮ್ಮನವರ ದೇವಸ್ಥಾನ:ಬೆಂಗಳೂರಿನ ಜನಪ್ರಿಯ ದೇವಸ್ಥಾನಗಳಲ್ಲಿ ಬನಶಂಕರಿ ದೇವಸ್ಥಾನಕ್ಕೆ ಮಹತ್ವದ ಸ್ಥಾನವಿದೆ. ಬೆಂಗಳೂರು ನಗರದ ವಿಶಿಷ್ಟ ತಾಣಗಳನ್ನು ಹೆಸರಿಸುವಾಗಿ ಈ ದೇಗುಲದ ಹೆಸರನ್ನು ಮಿಸ್ ಮಾಡುವಂತಿಲ್ಲ! ನೀವು ನವರಾತ್ರಿಯ ಸಂದರ್ಭದಲ್ಲಿ ಭೇಟಿ ನೀಡಿ. ದೇವಿಯ ಆಶಿರ್ವಾದ ಪಡೆದುಕೊಳ್ಳಿ. ವಿಶೇಷ ಅಲಂಕಾರ ಪೂಜೆಗಳಲ್ಲಿ ಭಾಗಿಯಾಗಿ.
ನಿಮಿಷಾಂಭ ದೇವಾಲಯ: ಶ್ರೀರಂಗಪಟ್ಟಣದ ಕಾವೇರಿ ನದಿಯ ದಡದಲ್ಲಿರುವ ಈ ದೇವಾಲಯವು ಪಾರ್ವತಿ ದೇವಿಯ ಅವತಾರವಾದ ನಿಮಿಷಾಂಭ ದೇವಿಗೆ ಸಮರ್ಪಿತವಾಗಿದೆ. ದೇವಾಲಯದ ಗೋಪುರದ ಮೇಲಿನ ಕೆತ್ತನೆಗಳು ತುಂಬಾ ಸೊಗಸಾಗಿವೆ. ಇನ್ನಿತರ ದೇವಾನು ದೇವತೆಗಳ ವಿಗ್ರಹಗಳೊಂದಿಗೆ ಇಲ್ಲಿನ ವಾಸ್ತುಶಿಲ್ಪವೂ ತುಂಬಾ ಚೆನ್ನಾಗಿದೆ.
ಗವಿ ಗಂಗಾಧರೇಶ್ವರ ದೇವಸ್ಥಾನ: ಪ್ರಾಥಮಿಕವಾಗಿ ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಪಾರ್ವತಿ ದೇವಿಯ ವಿಗ್ರಹವನ್ನು ಸಹ ಹೊಂದಿದೆ. ಇಲ್ಲಿ ಈಶ್ವರನ ಜೊತೆ ಪಾರ್ವತಿ ದೇವಿಗೂ ವಿಶೇಷ ಪೂಜೆ ನಡೆಯುತ್ತದೆ. ಆ ಕಾರಣದಿಂದ ನವರಾತ್ರಿಯ ಸಂದರ್ಭದಲ್ಲಿ ನೀವು ಈ ದೇವಸ್ಥಾನಕ್ಕೆ ಭೇಟಿ ನೀಡಬಹುದು, ದೇವಿಯ ಆಶಿರ್ವಾದ ಪಡೆಯಬಹುದು.
ಸಕಲೇಶ್ವರ ದೇವಾಲಯ: ಸಕಲೇಶಪುರದಲ್ಲಿರುವ ಈ ದೇವಾಲಯವು ಶಿವ ಮತ್ತು ಹೇಮಾವತಿ ದೇವಿಗೆ ಸಮರ್ಪಿತವಾಗಿದೆ.
ಅಂಬಾಭವಾನಿ ದೇವಸ್ಥಾನ: ವಿದ್ಯಾರಣ್ಯಪುರದಲ್ಲಿ ಅಂಬಾಭವಾನಿ ದೇವಸ್ಥಾನವಿದೆ. ಇಲ್ಲಿಯೂ ನವರಾತ್ರಿಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನೀವೂ ಈ ದೇವಸ್ಥಾನಕ್ಕೆ ಬಂದು ದೇವಿಯ ಕೃಪೆಗೆ ಪಾತ್ರರಾಗಬಹುದು
ಚಾಮುಂಡೇಶ್ವರಿ ದೇವಸ್ಥಾನ: ಮೈಸೂರಿನಲ್ಲಿರುವ ಈ ದೇವಸ್ಥಾನವು ಚಾಮುಂಡೇಶ್ವರಿ ದೇವಿಗೆ ಅರ್ಪಿತವಾಗಿದೆ, ಇದು ದುರ್ಗಾ ದೇವಿಯ ರೂಪವಾಗಿದೆ. ನವರಾತ್ರಿಯ ಈ ಸಂದರ್ಭದಲ್ಲಿ ತುಂಬಾ ಸುಂದರವಾಗಿ ದೇವಿಯನ್ನು ಅಲಂಕರಿಸಲಾಗುತ್ತದೆ. ನೀವೂ ಈ ದೇವಾಲಯಕ್ಕೂ ಭೇಟಿ ನೀಡಬಹುದು.
ಅಂಬಾಭವಾನಿ ದೇವಸ್ಥಾನ: ರಾಜಾಜಿನಗರದ ಗಾಯತ್ರಿನಗರದಲ್ಲಿ ಅಂಬಾಭವಾನಿ ದೇವಸ್ಥಾನವಿದೆ. ಇಲ್ಲಿಯೂ ನವರಾತ್ರಿಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನೀವೂ ಈ ದೇವಸ್ಥಾನಕ್ಕೆ ಬಂದು ದೇವಿಯ ಕೃಪೆಗೆ ಪಾತ್ರರಾಗಬಹುದು.
ನೀವು ದೇವಸ್ಥಾನಕ್ಕೆ ಹೋಗುವಾಗ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾದ ಕೆಲವು ಸಾಮಗ್ರಿಗಳಿವೆ. ಅವುಗಳನ್ನು ನೀವು ಮರೆತು ದೇವಸ್ಥಾನಕ್ಕೆ ಹೋದರೆ ಮತ್ತೆ ಪುನಃ ಮನೆಗೆ ಬಂದು ಅಥವಾ ಹತ್ತಿರದ ಅಂಗಡಿಯಲ್ಲಿ ಕೊಳ್ಳಬೇಕಾಗಿ ಬರಬಹುದು ಗಮನಿಸಿ. ನಾವಿಲ್ಲಿ ಆ ಎಲ್ಲಾ ಸಾಮಗ್ರಿಗಳ ಪಟ್ಟಿಯನ್ನು ನೀಡಿದ್ದೇವೆ.
ಹೂವುಗಳು
ದೀಪ
ಎಣ್ಣೆ
ಬತ್ತಿ
ಹಣ್ಣು
ತೆಂಗಿನ ಕಾಯಿ
ಊದುಬತ್ತಿ
ಅರಶಿನ
ಕುಂಕುಮ
ಕರ್ಪೂರ
ಅಕ್ಕಿ
ಬಳೆ
ಕಾಡಿಗೆ
ವಸ್ತ್ರ
ನೈವೇದ್ಯ (ನಿಮ್ಮ ಮನೆಯಲ್ಲಿ ಮಾಡಿದ ಸಿಹಿ)
ವಿಭಾಗ