logo
ಕನ್ನಡ ಸುದ್ದಿ  /  ಜೀವನಶೈಲಿ  /  Prawn Masala Dosa: ವಿಕೆಂಡ್ ಸ್ಪೆಷಲ್: ನಾನ್ ವೆಜ್ ಪ್ರಿಯರಿಗೆ ಸೀಗಡಿ ಮಸಾಲೆ ದೋಸೆ.. ವಾವ್ ಎನ್ನುವಂತಹ ರುಚಿ..!

Prawn Masala Dosa: ವಿಕೆಂಡ್ ಸ್ಪೆಷಲ್: ನಾನ್ ವೆಜ್ ಪ್ರಿಯರಿಗೆ ಸೀಗಡಿ ಮಸಾಲೆ ದೋಸೆ.. ವಾವ್ ಎನ್ನುವಂತಹ ರುಚಿ..!

HT Kannada Desk HT Kannada

Dec 18, 2022 02:02 PM IST

google News

ಸೀಗಡಿ ಮಸಾಲೆ ದೋಸೆಯನ್ನು ಮಾಡುವ ವಿಧಾನ ಹೇಗೆ ಅನ್ನೋದನ್ನು ನೋಡಿ.

  • ಸಾಮಾನ್ಯ ಮಸಾಲೆ ದೋಸೆಯನ್ನು ಎಲ್ಲರೂ ತಿನ್ನುತ್ತಾರೆ, ಆದರೆ ಈ ವಾರಾಂತ್ಯದಲ್ಲಿ ವಿಶೇಷವಾಗಿ ಸಿಗಡಿ ಮಸಾಲೆ ದೋಸೆಯನ್ನು ತಿಂದು ನೋಡಿ. ಇದರ ರುಚಿ ಸಾಮಾನ್ಯವಲ್ಲ. ಪ್ರೌನ್ಸ್ ದೋಸೆ ರೆಸಿಪಿ ಹೇಗೆ ಮಾಡೋದು ಅನ್ನೋದರ ಮಾಹಿತಿ ಇಲ್ಲಿದೆ.

ಸೀಗಡಿ ಮಸಾಲೆ ದೋಸೆಯನ್ನು ಮಾಡುವ ವಿಧಾನ ಹೇಗೆ ಅನ್ನೋದನ್ನು ನೋಡಿ.
ಸೀಗಡಿ ಮಸಾಲೆ ದೋಸೆಯನ್ನು ಮಾಡುವ ವಿಧಾನ ಹೇಗೆ ಅನ್ನೋದನ್ನು ನೋಡಿ.

ಬೆಂಗಳೂರು: ಸಾಮಾನ್ಯವಾಗಿ ಬೆಳಗ್ಗಿನ ತಿಂಡಿಗೆ ಬಿಸಿ ಬಿಸಿ ಇಡ್ಲಿ, ದೋಸೆ ಅಥವಾ ಮಸಾಲೆ ದೋಸೆಯನ್ನು ಚಟ್ನಿಯೊಂದಿಗೆ ತಿನ್ನುವ ಮಜಾನೇ ಬೇರೆ. ಆದರೆ ಯಾವಾಗಲೂ ಇದೇ ಇದ್ರೆ ನಾಲಿಗೆ ಸ್ವಲ್ಪ ವೆರೈಟಿಯನ್ನು ಕೇಳುತ್ತೆ. ಅದರಲ್ಲೂ ಸೆಂಡೆ ಬಂತು ಅಂದರೆ ನಾನ್-ವೆಜ್ ಇದ್ರೆ ಮನಸ್ಸಿಗೆ ಮತ್ತಷ್ಟು ಖುಷಿ ಕೊಡುತ್ತೆ.

ನಮ್ಮಲ್ಲಿ ಹಲವು ಬಗೆಯ ದೋಸೆಗಳಿವೆ. ಆದರೆ ಹೆಚ್ಚಾಗಿ ಮಸಾಲೆ ದೋಸೆ, ಪನೀರ್ ದೋಸೆ, ಈರುಳ್ಳಿ ದೋಸೆ, ಬೆಣ್ಣೆ ದೋಸೆ ಹೀಗೆ ಹಲವು ಬಗೆಯ ದೋಸೆಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಕೆಲವೊಮ್ಮೆ ನೀವು ಮೊಟ್ಟೆ ದೋಸೆಯನ್ನು ಸಹ ಪ್ರಯತ್ನಿಸಬಹುದು. ಆದರೆ ನೀವು ಎಂದಾದರೂ ಸೀಗಡಿ ಮಸಾಲೆ ದೋಸೆಯನ್ನು ಪ್ರಯತ್ನಿಸಿದ್ದೀರಾ? ಮಾಂಸಾಹಾರಿಗಳು ಈ ದೋಸೆಗೆ ಮನಸೋಲುತ್ತಾರೆ.

ಇಲ್ಲಿ ನಾವು ನಿಮಗೆ ಪ್ರೌನ್ಸ್ ಮಸಾಲಾ ದೋಸಾ ರೆಸಿಪಿಯನ್ನು ಹೇಗೆ ಮಾಡೋದು ಎಂಬುದರ ಬಗ್ಗೆ ಇವತ್ತು ತಿಳಿಸಿಕೊಡುತ್ತೇವೆ. ಇದು ತುಂಬಾ ಸರಳವಾದ ಪಾಕವಿಧಾನವಾಗಿದ್ದು, ನೀವು ಈ ವಿಧಾನವನ್ನು ಬಳಸಿಕೊಂಡು ಚಿಕನ್ ಮಸಾಲಾ ದೋಸೆ ಅಥವಾ ಮಟನ್ ಖೀಮಾ ದೋಸೆಯನ್ನು ಸಹ ಮಾಡಬಹುದು. ಸಸ್ಯಾಹಾರಿಗಳು ತಮ್ಮ ಆಯ್ಕೆಯ ತರಕಾರಿಗಳೊಂದಿಗೆ ದೋಸೆಯನ್ನು ಮಾಡಬಹುದು.

ಪ್ರೌನ್ಸ್ (ಸೀಗಡಿ) ಮಸಾಲಾ ದೋಸೆಯು ಭಾರತದ ಮಧುರೈ, ಪಾಂಡಿಚೇರಿ ಇತರೆ ಪ್ರದೇಶ ಮತ್ತು ಶ್ರೀಲಂಕಾ, ಮಲೇಷಿಯಾದಂತಹ ಇತರ ದೇಶಗಳಲ್ಲಿ ಹೆಚ್ಚು ಜನಪ್ರಿಯ ಭಕ್ಷ್ಯವಾಗಿದೆ.

ಪ್ರೌನ್ಸ್ ದೋಸೆಯಲ್ಲಿಯೂ ಮೊಟ್ಟೆಗಳನ್ನು ಬಳಸಬಹುದು. ಈ ಮೊಟ್ಟೆಗಳು ಸೀಗಡಿಗಳನ್ನು ದೋಸೆಗೆ ಉತ್ತಮವಾಗಿ ಅಂಟಿಕೊಳ್ಳುವಂತೆ ಮಾಡುತ್ತದೆ. ಪ್ರೌನ್ಸ್ ದೋಸೆಗೆ ಮಸಾಲೆಯನ್ನು ಮೊದಲು ತಯಾರಿಸಬೇಕು ಮತ್ತು ನಂತರ ದೋಸೆಯನ್ನು ಎಂದಿನಂತೆ ತಯಾರಿಸಬೇಕು. ಕೆಳಗಿನ ಪಾಕವಿಧಾನವನ್ನು ನೋಡಿ ಮತ್ತು ಅದನ್ನು ನೀವೇ ಪ್ರಯತ್ನಿಸಿ.

ಪ್ರೌನ್ಸ್ ದೋಸೆ ರೆಸಿಪಿಗೆ ಬೇಕಾದ ಪದಾರ್ಥಗಳು

ಕಿಂಗ್ ಪ್ರೌನ್ಸ್ - 15 ರಿಂದ 20

ದೋಸೆ ಹಿಟ್ಟು - ಬೇಕಾದಷ್ಟು

ಶುಂಠಿ - 2 ಟೀಸ್ಪೂನ್

ಬೆಳ್ಳುಳ್ಳಿ - 2 ಟೀಸ್ಪೂನ್

ಈರುಳ್ಳಿ - 1 ಚಿಕ್ಕದು

ಕರಿಬೇವಿನ ಎಲೆಗಳು - 1 ಚಿಗುರು

ಟೊಮೆಟೊ - 1

ಅರಿಶಿನ ಪುಡಿ - 1/2 ಟೀಸ್ಪೂನ್

ಮೆಣಸಿನ ಪುಡಿ - 1 ಟೀಸ್ಪೂನ್

ಗರಂ ಮಸಾಲಾ ಪುಡಿ - 3/4 ಟೀಸ್ಪೂನ್

ಎಣ್ಣೆ - 2 ಟೀಸ್ಪೂನ್

ಉಪ್ಪು - ರುಚಿಗೆ ಸಾಕಷ್ಟು

ಪ್ರೌನ್ ಮಸಾಲಾ ದೋಸೆ ರೆಸಿಪಿ

ಮೊದಲು ಸೀಗಡಿಗಳನ್ನು ಸ್ವಚ್ಛವಾಗಿ ತೊಳೆಯಿರಿ, ನಂತರ ಅವುಗಳನ್ನು ತುಂಡುಗಳಾಗಿ ಕತ್ತರಿಸಿ ಅರಿಶಿನ ಪುಡಿಯೊಂದಿಗೆ 20 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.

ಎರಡನೇ ಹಂತದಲ್ಲಿ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಶುಂಠಿ, ಬೆಳ್ಳುಳ್ಳಿ, ಕರಿಬೇವಿನ ಸೊಪ್ಪು ಮತ್ತು ಈರುಳ್ಳಿ ಚೂರುಗಳನ್ನು ಹಾಕಿ ಫ್ರೈ ಮಾಡಿ.

ಅದರ ನಂತರ ಅರಿಶಿನ, ಮೆಣಸಿನಕಾಯಿ ಮತ್ತು ಗರಂ ಮಸಾಲಾ ಸೇರಿಸಿ ಮತ್ತು ಮಿಶ್ರಣ ಮಾಡಿ. ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ ಮತ್ತು ಕತ್ತರಿಸಿದ ಟೊಮ್ಯಾಟೊ ಸೇರಿಸಿ ಮತ್ತು ಫ್ರೈ ಮಾಡಿ.

ಈಗ ಮ್ಯಾರಿನೇಟ್ ಮಾಡಿದ ಸೀಗಡಿಗಳನ್ನು ಸೇರಿಸಿ ಮತ್ತು ಹುರಿಯಿರಿ. ನೀರು ಆವಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಸುಮಾರು 8 ನಿಮಿಷಗಳ ಅಡುಗೆಯ ನಂತರ, ಪ್ರೌನ್ಸ್ ಮಸಾಲಾ ಸಿದ್ಧವಾಗಿದೆ.

ಈಗ ದೋಸೆ ಪ್ಯಾನ್ ಮೇಲೆ ದೋಸೆ ಹರಡಿ. ನಂತರ ಸಿಗಡಿ ಮಸಾಲ ಹಾಕಿ ದೋಸೆಯನ್ನು ಹುರಿಯಿರಿ. ಅಷ್ಟೇ, ರುಚಿಯಾದ ಪ್ರೌನ್ಸ್ ಮಸಾಲ ದೋಸೆ ರೆಡಿ. ಈ ವೆರೈಟಿ ದೋಸೆ ರುಚಿಗೆ ನೀವು ಫುಲ್ ಫಿದಾ ಆಗುತ್ತೀರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ