93 ಕೆಜಿ ಇದ್ದವರು ಸುಲಭ ವಿಧಾನದ ಮೂಲಕ 20 ಕೆಜಿ ತೂಕ ಇಳಿಸಿಕೊಂಡ ಕುನಾಲ್ ಉಪಾಧ್ಯಾಯ, ಹೀಗಿತ್ತು ಅವರ ವೈಟ್ ಲಾಸ್ ಜರ್ನಿ
Nov 21, 2024 01:02 PM IST
ರಿಯಲ್ ಲೈಫ್ ವೈಟ್‌ಲಾಸ್ ಸ್ಟೋರಿ
- ಸಾಮಾಜಿಕ ಜಾಲತಾಣಗಳಲ್ಲಿ ಈಗ ರಿಯಲ್ ಲೈಫ್ ವೈಟ್‌ಲಾಸ್ ಸ್ಟೋರಿಗಳು ಹೆಚ್ಚು ಹರಿದಾಡುತ್ತಿವೆ. ತೂಕ ಇಳಿಸಿಕೊಳ್ಳುವುದು ಖಂಡಿತ ಸುಲಭದ ಮಾತಲ್ಲ, ಹಾಗಂತ ಅಸಾಧ್ಯವೂ ಅಲ್ಲ ಎಂಬುದನ್ನು ಹಲವರು ತಮ್ಮ ಸ್ಟೋರಿ ಪೋಸ್ಟ್ ಮಾಡುವ ಮೂಲಕ ಹೇಳುತ್ತಿದ್ದಾರೆ. ಇಲ್ಲೊಬ್ಬರು ತಾವು 20 ಕೆಜೆ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬುದನ್ನು ಹೇಳಿದ್ದಾರೆ. ಅವರ ವೈಟ್‌ಲಾಸ್ ಜರ್ನಿ ಹೀಗಿತ್ತು.
ತೂಕ ಇಳಿಕೆಯ ಹಾದಿ ಖಂಡಿತ ಸುಲಭವಾಗಿರುವುದಿಲ್ಲ. ಇದಕ್ಕಾಗಿ ನೀವು ಸಾಕಷ್ಟು ಶ್ರಮ ಹಾಕಬೇಕು. ನಿರಂತರವಾಗಿ ವರ್ಕೌಟ್, ಡಯೆಟ್ ಮಾಡಬೇಕು. ನಿಮ್ಮಿಷ್ಟದ ತಿಂಡಿ ತಿನ್ನಲು ಕೂಡ ಸಾಧ್ಯವಾಗದೇ ಬಾಯಿ ಕಟ್ಟಿಕೊಂಡು ಇರಬೇಕು. ಹಾಗಂತ ಇದರ ಫಲಿತಾಂಶ ಖಂಡಿತ ನಿಮಗೆ ಕಹಿಯಾಗಿರುವುದಿಲ್ಲ, ಬದಲಾಗಿ ಸಿಹಿ ನೀಡುತ್ತದೆ. ಹೀಗೆ ತೂಕ ಇಳಿಸಿಕೊಂಡವರ ಹಲವು ಕಥೆಗಳು ನಮಗೂ ಸ್ಫೂರ್ತಿಯಾಗುತ್ತವೆ.
ಇಲ್ಲೊಬ್ಬರು 36 ವರ್ಷದ ವ್ಯಕ್ತಿ ತಾವು 20ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದು ಹೇಗೆ ಎಂಬ ವೈಟ್‌ಲಾಸ್ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಕಥೆಯನ್ನೂ ನೀವೂ ಓದಿ.
ಕುನಾಲ್ ಉಪಾಧ್ಯಾಯ ವೈಟ್‌ಲಾಸ್ ಜರ್ನಿ
ಇವರು ಕುನಾಲ್ ಉಪಾಧ್ಯಾಯ. 36 ವರ್ಷದ ಇವರು ಸುಮಾರು 14 ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತೂಕ ಏರಿಕೆಯ ಚಿಂತೆಯಲ್ಲಿದ್ದ ಇವರು 20 ಕೆಜಿ ತೂಕ ಇಳಿಸಿಕೊಳ್ಳುತ್ತಾರೆ. ಮೊದಲು ಒಎಂಎಡಿ ಡಯೆಟ್ ಕ್ರಮ ಅನುಸರಿಸುವ ಇವರು ನಂತರ ಇಂಟರ್‌ಮಿಟೆಂಟ್ ಪಾಸ್ಟಿಂಗ್ ಕ್ರಮ ಪಾಲಿಸುತ್ತಾರೆ. ಇದರೊಂದಿಗೆ ರನ್ನಿಂಗ್, ಸೈಕ್ಲಿಂಗ್, ವೈಟ್ ಟ್ರೈನಿಂಗ್‌ಗಳನ್ನು ತಮ್ಮ ದಿನಚರಿಯಲ್ಲಿ ರೂಢಿಸಿಕೊಳ್ಳುತ್ತಾರೆ. ಸಿಹಿ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿ, ಪ್ರೊಟೀನ್ ಸಮೃದ್ಧ ಆಹಾರಗಳ ಸೇವನೆಗೆ ಒತ್ತು ನೀಡುತ್ತಾರೆ.
‘ನಾನು ಜುಲೈ 16, 2023 ರಲ್ಲಿ 93 ಕೆಜಿ ಇದ್ದೆ. ಆಗ ನನ್ನ ತೂಕ ಇಳಿಕೆಯ ಪಯಣವನ್ನು ಆರಂಭಿಸುತ್ತೇನೆ. ನಾನು ತೂಕ ಕಡಿಮೆ ಮಾಡಿಕೊಳ್ಳಬೇಕು, ದೈಹಿಕವಾಗಿ ಫಿಟ್ ಆಗಿರಬೇಕು ಎಂದು ಯೋಚಿಸುತ್ತೇನೆ. 14 ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿರುವುದು ಅವರ ದೇಹ ತೂಕ ಹೆಚ್ಚಲು ಪ್ರಮುಖ ಕಾರಣವಾಗಿತ್ತು‘ ಎಂದು ಅವರು ಹೇಳುತ್ತಾರೆ. ತೂಕ ಇಳಿಸಿಕೊಳ್ಳಲು ಕುನಾಲ್ ಅವರು ಅನುಸರಿಸಿದ ಕ್ರಮ ಯಾವುದು ನೋಡಿ.
‘ನಾನು 2 ತಿಂಗಳ ಕಾಲ OMAD ಡಯೆಟ್ ಮೂಲಕ ನನ್ನ ತೂಕ ಇಳಿಕೆಯ ಪ್ರಯಣವನ್ನು ಆರಂಭಿಸಿದೆ. 2 ತಿಂಗಳ ಕಾಲ ಪ್ರತಿದಿನ ರನ್ನಿಂಗ್ ಹಾಗೂ 20ಕಿಲೋಮೀಟರ್ ಸೈಕ್ಲಿಂಗ್ ಮಾಡುತ್ತಿದ್ದೆ. ಇದು ನನಗೆ ತೂಕ ಇಳಿಸಿಕೊಳ್ಳಲು ಸಾಕಷ್ಟು ಸಹಾಯ ಮಾಡಿತು. ಇದರಿಂದ ನಾನು 93 ಕೆಜಿಯಿಂದ 81 ಕೆಜಿಗೆ ಇಳಿಯುತ್ತೇನೆ. ಆದರೆ ತೂಕದ ಜೊತೆ ಸ್ನಾಯುಗಳು ಸಡಿಲಗೊಂಡವು. ನಂತರ ನಾನು ಇಂಟರ್‌ಮಿಟೆಂಟ್ ಉಪವಾಸ ಆರಂಭಿಸಿದೆ. ಇದು 16 ಗಂಟೆಗಳ ಉಪವಾಸ. 8 ಗಂಟೆಗಳ ಕಾಲ ಮಾತ್ರ ಆಹಾರ ಸೇವಿಸುವ ಕ್ರಮವಾಗಿತ್ತು.
ಏನಿದು OMAD ಡಯೆಟ್
ಒಎಂಎಡಿ ಡಯೆಟ್ ಎಂದರೆ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುವುದು. OMAD ಡಯೆಟ್ ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಮತ್ ಹೆಚ್ಚು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಊಟವು ಸಮತೋಲಿತವಾಗಿಲ್ಲದಿದ್ದರೆ ದೀರ್ಘಕಾಲದ ಹಸಿವು ಅಥವಾ ಪೋಷಕಾಂಶಗಳ ಕೊರತೆಯಿಂದಾಗಿ ಕೆಲವರಿಗೆ ಇದು ಸವಾಲಾಗಿರಬಹುದು. ಅತ್ಯುತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ಪ್ರೋಟೀನ್ಗಳು, ಆರೋಗ್ಯಕರ ಕೊಬ್ಬುಗಳು, ತರಕಾರಿಗಳು ಮತ್ತು ಧಾನ್ಯಗಳು ನಿಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ.
‘ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನಾನು ಸಾಕಷ್ಟು ಪ್ರೊಟೀನ್ ಸಮೃದ್ಧ ಆಹಾರಗಳನ್ನು ಸೇವಿಸಿದೆ. ದೈನಂದಿನ ಎಷ್ಟು ಕ್ಯಾಲೊರಿ ಕಡಿಮೆ ಆಯ್ತು, ತೂಕ ಪರಿಶೀಲನೆ ಮಾಡುವುದು ಟ್ರ್ಯಾಕ್‌ನಲ್ಲಿರಲು ನನಗೆ ಸಹಾಯ ಮಾಡಿತು ಎಂದು ಅವರು ಹೇಳುತ್ತಾರೆ. ಸದ್ಯ ಕುನಾಲ್ ದೇಹದಲ್ಲಿ ಶೇ 19.24 ರಷ್ಟು ಕೊಬ್ಬಿನಾಂಶವಿದ್ದು ಇವರು 71 ಕೆಜಿ ಇದ್ದಾರೆ.
ತೂಕ ನಷ್ಟಕ್ಕೆ ಸಂಬಂಧಿಸಿದಂತೆ ಬೇಸಿಕ್ ವ್ಯಾಯಾಮಗಳು ಬಹಳ ಅವಶ್ಯಕವಾಗಿದೆ. ಏಕೆಂದರೆ ಇದು ಕ್ಯಾಲೋರಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ವಾಕಿಂಗ್ ಮತ್ತು ಜಾಗಿಂಗ್‌ನಂತರ ವ್ಯಾಯಾಮದ ಜೊತೆ ಸೈಕ್ಲಿಂಗ್ ಕೂಡ ತೂಕ ಇಳಿಕೆ ಸಹಾಯ ಮಾಡುತ್ತೆ. ಇದಲ್ಲದೆ, ಈ ವ್ಯಾಯಾಮಗಳು ಹೃದಯವು ರಕ್ತವನ್ನು ಪಂಪ್ ಮಾಡುವ ವೇಗವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕೊಬ್ಬಿನಿಂದ ದೇಹದಲ್ಲಿ ಸಂಗ್ರಹವಾಗಿರುವ ಕ್ಯಾಲೊರಿಗಳನ್ನು ಹೊರಹಾಕುತ್ತದೆ. ನಿಯಮಿತ ವ್ಯಾಯಾಮವು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರರ್ಥ ನೀವು ವಿಶ್ರಾಂತಿ ಪಡೆಯುತ್ತಿದ್ದರೂ ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.
ದೈಹಿಕ ಪ್ರಯೋಜನಗಳ ಜೊತೆಗೆ, ವ್ಯಾಯಾಮವು ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ, ಬಿಂಗ್ ಈಟಿಂಗ್ ನಿಗ್ರಹಿಸಲು ಸಹಾಯ ಮಾಡುತ್ತದೆ. ಆಹಾರವು ತೂಕವನ್ನು ಕಳೆದುಕೊಳ್ಳುವ ಅಗತ್ಯ ಭಾಗವಾಗಿದ್ದರೂ ಬೇಸಿಕ್ ವ್ಯಾಯಾಮಗಳನ್ನು ಸೇರಿಸಿಕೊಳ್ಳುವುದರಿಂದ ತೂಕ ಇಳಿಕೆಯ ಜೊತೆ ಆರೋಗ್ಯವೂ ಚೆನ್ನಾಗಿರುತ್ತದೆ.