logo
ಕನ್ನಡ ಸುದ್ದಿ  /  ಜೀವನಶೈಲಿ  /  3 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಯುವತಿ, ಬೆಲ್ಲಿ ಫ್ಯಾಟ್ ಕಡಿಮೆ ಮಾಡೋಕೆ ಆಕೆ ಅನುಸರಿಸಿದ್ದು ಈ 6 ಸಿಂಪಲ್ ಟ್ರಿಕ್ಸ್‌

3 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಯುವತಿ, ಬೆಲ್ಲಿ ಫ್ಯಾಟ್ ಕಡಿಮೆ ಮಾಡೋಕೆ ಆಕೆ ಅನುಸರಿಸಿದ್ದು ಈ 6 ಸಿಂಪಲ್ ಟ್ರಿಕ್ಸ್‌

Reshma HT Kannada

Nov 18, 2024 10:30 AM IST

google News

3 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಯುವತಿ

    • ತೂಕ ಇಳಿಸೋ ಚಿಂತೆ ಇರೋರಿಗೆ ಯಾರಾದ್ರೂ ತೂಕ ಕಡಿಮೆ ಮಾಡಿಕೊಳ್ಳುವ ಸಲಹೆ ಹೇಳಿದ್ರೆ ಖುಷಿಯಿಂದ ಅನುಸರಿಸುತ್ತಾರೆ. ಇಲ್ಲೊಬ್ಬರು ಫಿಟ್‌ನೆಸ್‌ ಕೋಚ್ ಕೇವಲ ಮನೆ ಆಹಾರದ ಮೂಲಕ ತೂಕ ಕಡಿಮೆ ಮಾಡಿಕೊಳ್ಳುವುದು ಹಾಗೂ ಬೆಲ್ಲಿ ಫ್ಯಾಟ್ ಕರಗಿಸುವುದು ಹೇಗೆ ಎಂಬುದನ್ನು ಹೇಳಿದ್ದಾರೆ. ಅವರು ಹೇಳಿದ ಲಂಚ್ ಆಯ್ಕೆಯ ಮೂಲಕ ನೀವು 3 ತಿಂಗಳಲ್ಲಿ 10 ಕೆಜಿ ಕಡಿಮೆಯಾಗಬಹುದು.
3 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಯುವತಿ
3 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಯುವತಿ (PC: Hustle_Humble/Instagram)

ತೂಕ ಇಳಿಕೆ ಸದ್ಯದ ಹಾಟ್ ಟಾಪಿಕ್‌. ಯಾರ ಬಾಯಲ್ಲೂ ಕೇಳಿದ್ರೂ ತೂಕ ಇಳಿಸಿಕೊಳ್ಳಬೇಕು ಆದ್ರೆ ಹೇಗೆ ಅಂತ ಗೊತ್ತಿಲ್ಲ ಅಂತಾರೆ. ಆದರೆ ಇಂಥವರಿಗೆ ನೆರವಾಗಲು, ಸ್ಫೂರ್ತಿಯಾಗುವ ಸಲುವಾಗಿ ಹಲವರು ತಮ್ಮ ವೈಟ್‌ಲಾಸ್ ಜರ್ನಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ತೂಕ ಇಳಿಕೆಯ ಪಯಣವು ಒಬ್ಬೊಬ್ಬರದ್ದು ಒಂದೊಂದು ರೀತಿ ಇರುತ್ತದೆ.

ಕೆಲವರು ವರ್ಕೌಟ್ ಮಾಡಿ ತೂಕ ಇಳಿಸಿಕೊಂಡರೆ ಕೆಲವರು ಡಯೆಟ್ ಮಾಡಿ ತೂಕ ಇಳಿಸಿಕೊಳ್ಳುತ್ತಾರೆ. ತೂಕ ಇಳಿಕೆಯು ಒಬ್ಬೊಬ್ಬರ ದೇಹಸ್ಥಿತಿಗೆ ಅನುಗುಣವಾಗಿರುತ್ತದೆ. ಇಲ್ಲೊಬ್ಬರು ಮನೆ ಆಹಾರ ಸೇವಿಸುವ ಮೂಲಕ ತೂಕ ಇಳಿಸಿಕೊಂಡಿದ್ದಾರೆ. ಕೇವಲ ಮನೆ ಆಹಾರ ತಿಂದು ತೂಕ ಇಳಿಸಿಕೊಂಡ ಈಕೆ ಅನುಷ್ಕಾ ಸಿಂಗ್‌. ಅವರು ಕೂಡ ಆರಂಭದಲ್ಲಿ ಎಲ್ಲರಂತೆ ತೂಕ ಇಳಿಸಿಕೊಳ್ಳಲು ಸಾಕಷ್ಟು ಹೆಣಗಾಡಿದ್ದರು. ಈಗ ಅವರು ಆರೋಗ್ಯಕರ ಜೀವನಶೈಲಿ ಅನುಸರಿಸುವ ಮೂಲಕ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

‘ತೂಕ ಇಳಿಕೆಯ ಹಾದಿ ಸುಗಮವಲ್ಲ ನಿಜ, ಆದರೆ ಇದು ಅಸಾಧ್ಯವೇನಲ್ಲ. ಆದರೆ ತೂಕ ಇಳಿಸಲು ಪ್ರಯತ್ನ ಮಾಡುವವರಿಗೆ ಶಿಸ್ತು ಬಹಳ ಮುಖ್ಯ. ಜೊತೆಗೆ ನಾವು ಏನು ಮಾಡುತ್ತಿದ್ದೇನೆ ಎಂಬುದರ ಮೇಲೆ ನಂಬಿಕೆಯು ಬಲವಾಗಿರಬೇಕು ಎಂದು ಆಕೆ ಹಳೆಯ ಪೋಸ್ಟ್‌ವೊಂದರಲ್ಲಿ ಬರೆದುಕೊಂಡಿದ್ದರು.

'hustle._humble' ಎಂಬ ಎಂಬ ಹೆಸರಿನಲ್ಲಿ ಸಾಮಾಜಿಕ ಖಾತೆ ತೆರೆದಿರುವ ಆಕೆ ತಾನು ಶಾಲಾ ದಿನಗಳಿಂದಲೂ ಬೊಜ್ಜು ಹೊಂದಿದ್ದಾಗಿ ಹೇಳಿದ್ದಾರೆ. ಆದರೆ ಬಾಸ್ಕೆಟ್ ಬಾಲ್ ಆಡುವಾಗ ಕೊಂಚ ತೆಳ್ಳಗಾಗಿದ್ದೆ ಎಂದಿದ್ದಾರೆ. ತೂಕ ಇಳಿಸಿಕೊಂಡ ಕ್ರಮದ ಬಗ್ಗೆ ಮಾತನಾಡುವ ಆಕೆ ತಾನು ತೂಕ ಇಳಿಸಿಕೊಳ್ಳಲು ಮಧ್ಯಾಹ್ನದ ಊಟದಲ್ಲಿ ಈ 6 ಟಿಪ್ಸ್ ಫಾಲೋ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಅವರ ಪ್ರಕಾರ ಸಮತೋಲಿತ ಆಹಾರವು ತೂಕ ನಷ್ಟಕ್ಕೆ ಆಧಾರವಾಗಿದೆ. ತೂಕ ಇಳಿಕೆಯ ಪಯಣ ಆರಂಭಿಸುವ ಮೊದಲೇ ನಮಗೆ ಏನು ತಿನ್ನಬೇಕು, ಏನನ್ನು ತಿನ್ನಬಾರದು ಎನ್ನುವುದರ ಬಗ್ಗೆ ಅರಿವು ಇರಬೇಕು ಎಂದಿರುವ ಅನುಷ್ಕಾ ಸಿಂಗ್ 3 ತಿಂಗಳಲ್ಲಿ 10 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ.

ತೂಕ ಕಡಿಮೆಯಾಗುವ ಜೊತೆಗೆ ಬೆಲ್ಲಿ ಫ್ಯಾಟ್ ಇಳಿಸಲು ಆಕೆ ಕೆಲವು ಸಲಹೆಗಳನ್ನು ತಿಳಿಸಿದ್ದಾಳೆ. ತಮ್ಮ ಫುಡ್ ಚಾರ್ಟ್ ವಿವರವನ್ನೂ ಹಂಚಿಕೊಂಡಿದ್ದಾಳೆ.

* ವೈಟ್‌ರೈಸ್‌, ಸಲಾಡ್‌ನೊಂದಿಗೆ ಪನೀರ್ ಕ್ಯಾಪ್ಸಿಕಂ

* ಬೇಯಿಸಿದ ಅಲಸಂದೆ ಕಾಳಿನ ಜೊತೆ ತೊಗರಿಬೇಳೆ ಬೀಟ್ರೂಟ್ ರಾಯಿತ

* ಚಪಾತಿ, ಛೋಲೆ, ಮೊಸರು ಹಾಗೂ ಹಸಿ ಪನೀರ್

* ರಾಜ್ಮಾ ಬೌಲ್‌ನೊಂದಿಗೆ ಅನ್ನ ಮೊಳಕೆಕಾಳು ಅಲಸಂದೆ ಕಾಳು ಸಲಾಡ್

* ರವೆ ಚೀಲಾ (ದೋಸೆ ರೀತಿಯದ್ದು) ಜೊತೆ ಸ್ಟಿರ್ ಫ್ರೈ ಮಾಡಿದ ತರಕಾರಿ ಹಾಗೂ ಸಲಾಡ್

* ಪನೀರ್ ಬುರ್ಜಿ, ಕ್ವಿನೋವಾ ಮತ್ತು ಸಲಾಡ್

ಪರಿಣಾಮಕಾರಿಯಾಗಿ ತೂಕ ಇಳಿಸಿಕೊಳ್ಳಲು ಕ್ಯಾಲೊರಿ ಕಡಿಮೆ ಸೇವಿಸುವುದು ಅತಿ ಅಗತ್ಯ. ಕೊಬ್ಬನ್ನು ಕಡಿಮೆ ಮಾಡಲು ಪ್ರೋಟೀನ್, ಫೈಬರ್, ಜೀವಸತ್ವಗಳು ಸಮೃದ್ಧವಾಗಿರುವ ಆಹಾರವು ಅವಶ್ಯಕವಾಗಿದೆ. ಹಾಗಾಗಿ ದೈಹಿಕ ಚಟುವಟಿಕೆಯ ಜೊತೆಗೆ ನಾನು ಸೇವಿಸುವ ಆಹಾರದಲ್ಲಿ ಕಡಿಮೆ ಕ್ಯಾಲೊರಿ ಹಾಗೂ ಹೆಚ್ಚು ಪೋಷಕಾಂಶ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ