ಬೆಲ್ಲಿ ಫ್ಯಾಟ್‌ನಿಂದ ಬೇಸತ್ತ ಆ ಯುವತಿ ಕೆಲವೇ ದಿನಗಳಲ್ಲಿ ಹೊಟ್ಟೆಯ ಬೊಜ್ಜು ಕರಗಿಸಿ, ಸ್ಲಿಮ್ ಆಗ್ತಾರೆ, ಆಕೆ ಸಣ್ಣ ಆಗಿದ್ದು ಹೇಗೆ ನೋಡಿ
Nov 22, 2024 11:51 AM IST
ಬೆಲ್ಲಿ ಫ್ಯಾಟ್ ಕರಗಿಸಲು ಟಿಪ್ಸ್
- ತೂಕ ಇಳಿಸಿಕೊಳ್ಳೋದು ಒಂದು ರೀತಿ ಸರ್ಕಸ್ ಆದ್ರೆ ಬೆಲ್ಲಿ ಫ್ಯಾಟ್ ಕರಗಿಸೋದು ಇನ್ನೊಂದು ರೀತಿಯ ಕಷ್ಟ. ಇದಕ್ಕಾಗಿ ಹರಸಾಹಸ ಪಡಬೇಕಾಗುತ್ತೆ ಅನ್ನೋದು ಸುಳ್ಳಲ್ಲ. ಆದರೆ ಇಲ್ಲೊಬ್ಬಳು ಯುವತಿ ನಾಲ್ಕೇ ನಾಲ್ಕು ವ್ಯಾಯಾಮ ಮಾಡುವ ಮೂಲಕ ಸುಲಭವಾಗಿ ಹೊಟ್ಟೆಯ ಬೊಜ್ಜು ಕರಗಿಸಿಕೊಂಡಿದ್ದಾರೆ. ಬೊಜ್ಜು ಕರಗಿಸಲು ಆಕೆ ಮಾಡಿದ ಎಕ್ಸ್‌ಸೈಜ್‌ಗಳು ಯಾವುವು ನೋಡಿ.
ತೂಕ ಇಳಿಕೆಯ ಸವಾಲಿನ ಎದುರು ಯಾವುದು ದೊಡ್ಡ ಸವಾಲಲ್ಲ ಎಂದು ಜನ ಮಾತನಾಡಿಕೊಳ್ಳೋದನ್ನು ನೀವು ಕೇಳಿರಬಹುದು. ಆದರೆ ಇದಕ್ಕಿಂತ ದೊಡ್ಡ ಸವಾಲು ಎಂದರೆ ಹೊಟ್ಟೆಯ ಸುತ್ತಲಿನ ಬೊಜ್ಜು ಅಥವಾ ಬೆಲ್ಲಿ ಫ್ಯಾಟ್ ಕರಗಿಸೋದು. ಒಮ್ಮೆ ಹೊಟ್ಟೆ ಸುತ್ತಲೂ ಬೊಜ್ಜು ಬೆಳಿತು ಅಂದ್ರೆ ಅದನ್ನು ಕರಗಿಸೋದು ಖಂಡಿತ ಸುಲಭವಲ್ಲ.
ಆದರೆ ಇಲ್ಲೊಬ್ಬರು ಯುವತಿ ಅದು ಕೂಡ ಕಷ್ಟವಲ್ಲ ಎಂಬುದನ್ನು ತೋರಿಸಿದ್ದಾರೆ. 20 ಕೆಜಿಯಷ್ಟು ತೂಕ ಇಳಿಸಿಕೊಳ್ಳುವ ಜೊತೆ 36 ಇಂಚಿನಷ್ಟಿದ್ದ ತಮ್ಮ ಹೊಟ್ಟೆಯ ಸುತ್ತಳತೆಯನ್ನು 26 ಇಂಚಿಗೆ ತಂದುಕೊಂಡಿದ್ದಾರೆ. ನೋಡಿದವರೇ ಆಶ್ಚರ್ಯವಾಗುವ ರೀತಿಯಲ್ಲಿ ಬದಲಾಗಿರುವ ಇವರ ಹೆಸರು ರಿಧಿ ಶರ್ಮಾ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇವರು ಹೊಟ್ಟೆ ಬೊಜ್ಜು ಕರಗಿಸಿಕೊಂಡಿದ್ದು ಹೇಗೆ ಎಂದು ಬರೆದುಕೊಂಡಿದ್ದಾರೆ.
ರಿಧಿ ಹೊಟ್ಟೆ ಬೊಜ್ಜು ಕರಗಿಸಲು ಆಕೆ ಅನುಸರಿಸಿದ ಎಲ್ಲಾ ವಿಧಾನಗಳನ್ನೂ ಪಟ್ಟಿ ಮಾಡಿದ್ದಾರೆ. ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ಆಕೆ ಮಾಡಿದ ವ್ಯಾಯಾಮಗಳ ವಿಡಿಯೊ ಹಂಚಿಕೊಂಡಿರುವ ಜೊತೆ ಶೀರ್ಷಿಕೆಯಲ್ಲಿ ಆಕೆ ಹೀಗೆ ಬರೆದುಕೊಂಡಿದ್ದಾರೆ. ‘ಈ ಕೆಲವು ವ್ಯಾಯಾಮಗಳು ನನ್ನ ಮೆಚ್ಚಿನವುಗಳಾಗಿವೆ ಮತ್ತು ಇನ್ನೂ ಕೆಲವನ್ನು ನೀವು ನನ್ನ ರೀಲ್ಸ್‌ನಲ್ಲಿ ಕಾಣಬಹುದು. ನಾನು ಇದನ್ನು ವಾರಕ್ಕೆ ಕನಿಷ್ಠ 4-5 ಬಾರಿ ಮಾಡಿದ್ದೇನೆ. ಪ್ರತಿ ವ್ಯಾಯಾಮವನ್ನು ಕನಿಷ್ಠ 1 ನಿಮಿಷಗಳ ಕಾಲ ಮಾಡಬೇಕು‘ ಎಂದು ರಿಧಿ ಬರೆದುಕೊಂಡಿದ್ದಾರೆ.
‘ನೀವು ಯಾವುದೇ ಬದಲಾವಣೆಯನ್ನು ನಿರೀಕ್ಷೆ ಮಾಡಬೇಕು ಎಂದರೆ ಈ ವ್ಯಾಯಾಮಗಳನ್ನ ಕನಿಷ್ಠ 4 ರಿಂದ 5 ವಾರಗಳ ಕಾಲ ಮಾಡಬೇಕು. ಹಾಗಂತ ಬರಿ ಈ ವ್ಯಾಯಮಗಳನ್ನೇ ಮಾಡಿದ್ರೆ ಸಾಲುವುದಿಲ್ಲ. ಇದರ ಜೊತೆ ಕೋರ್ ಬಾಡಿ ಎಕ್ಸ್‌ಸೈಜ್ ಕಡೆಗೂ ಗಮನ ನೀಡಬೇಕು. ಈ ವ್ಯಾಯಾಮಗಳನ್ನ 2 ರಿಂದ 3 ಸೆಟ್ ಮಾಡುವುದರಿಂದ ತೂಕ ಕಡಿಮೆಯಾಗುವುದರ ಜೊತೆಗೆ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.
ಹೊಟ್ಟೆಯ ಕೊಬ್ಬು ಕರಗಿಸಲು 4 ವ್ಯಾಯಾಮಗಳು
- ಅಬ್ ಹೋಲ್ಡ್
- ಪ್ಲ್ಯಾಂಕ್ ಟ್ವಿಸ್ಟ್
- ವಿ ಸೈಕಲ್
- ಲೆಗ್ ಡ್ರಾಪ್
ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ಇದ್ರೂ 50 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದು ಹೇಗೆ ಹೃತಿಕ್ ರೋಷನ್ ಸಹೋದರಿ; ಸುನೈನಾ ರೋಷನ್ ವೈಟ್ಲಾಸ್ ಸ್ಟೋರಿ
ದೇಹಾಕೃತಿ ಚೆನ್ನಾಗಿ ಆಗಲು 6 ಸರಳ ಟಿಪ್ಸ್
- ಪ್ರತಿದಿನ 8-10k ಹೆಜ್ಜೆಗಳನ್ನು ನಡಿಗೆ
- ಪ್ರತಿ ಊಟದಲ್ಲಿ 20-25 ಗ್ರಾಂ ಪ್ರೋಟೀನ್ ಒಳಗೊಂಡಿರುವುದು
- ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ (ತಿಂಗಳಿಗೆ 1-2 ಬಾರಿ ಸೇವಿಸಿ)
- ರಾತ್ರಿ 7 ಗಂಟೆಗೆ ಮೊದಲು ಊಟ
- ಪ್ರತಿ ರಾತ್ರಿ 7-8 ಗಂಟೆಗಳ ಕಾಲ ನಿದ್ದೆ
- ಸ್ಥಿರವಾಗಿರುವುದು!! ನಿಮ್ಮ ದೇಹದಿಂದ ಕೊಬ್ಬನ್ನು ಕಳೆದುಕೊಳ್ಳಲು ನೀವು ಬಯಸಿದರೆ ಇದು ಅತ್ಯಂತ ಮುಖ್ಯವಾದ ವಿಷಯವಾಗಿದೆ.
ಇದನ್ನೂ ಓದಿ: 3 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಯುವತಿ, ಬೆಲ್ಲಿ ಫ್ಯಾಟ್ ಕಡಿಮೆ ಮಾಡೋಕೆ ಆಕೆ ಅನುಸರಿಸಿದ್ದು ಈ 6 ಸಿಂಪಲ್ ಟ್ರಿಕ್ಸ್