ಚಳಿಗಾಲದಲ್ಲಿ ದೇಹ ಬೆಚ್ಚಗಿರಿಸಿ, ಸ್ಟೈಲಿಶ್ ಲುಕ್ ನೀಡುವ ಕೋಟ್‌ಗಳಿವು; ಫ್ಯಾಷನ್ ಪ್ರಿಯರು ಗಮನಿಸಿ
Nov 04, 2024 09:04 AM IST
ಚಳಿಗಾಲಕ್ಕೆ ಹೊಂದುವ ಕೋಟ್‌ಗಳು
- ಚಳಿಗಾಲ ಎಂದರೆ ದೇಹ ಬೆಚ್ಚಗಿರುವ ಉಡುಪುಗಳು ವಾರ್ಡ್‌ರೋಬ್ ಅಲಂಕರಿಸುವ ಕಾಲ. ಚಳಿಗಾಲದಲ್ಲಿ ದೇಹ ಬೆಚ್ಚಗಿರುವುದು ಮಾತ್ರವಲ್ಲ ಸ್ಟೈಲಿಶ್ ಆಗಿಯೂ ಕಾಣಿಸಬೇಕು ಎಂದು ಹೆಣ್ಣುಮಕ್ಕಳು ಬಯಸುವುದು ಸಹಜ. ಚಳಿಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಿಸುವ ಜೊತೆಗೆ ಬೆಚ್ಚಗಿರಲು ಸಹಾಯ ಮಾಡುವ ಕೋಟ್‌ಗಳಿವು. 2024ರ ಟ್ರೆಂಡಿ ಜಾಕೆಟ್‌ಗಳನ್ನು ಗಮನಿಸಿ.
ಚಳಿಗಾಲ ಆರಂಭವಾಗಿದೆ. ನಿಮ್ಮ ವಾರ್ಡ್‌ರೋಬ್‌ನಲ್ಲಿರುವ ಬಟ್ಟೆಗಳನ್ನು ಬದಲಿಸಲು ಕಾಲವಿದು. ಕೋಟ್ ಅಥವಾ ಜಾಕೆಟ್‌ಗಳನ್ನು ವಾರ್ಡ್‌ರೋಬ್‌ನಲ್ಲಿ ಮುನ್ನೆಲೆ ತರಲು ಇದು ಸೂಕ್ತ ಸಮಯ. ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಕೋಟ್‌ಗಳು ಸಿಗುತ್ತವೆ. ಆದರೆ ಯಾವುದು ಸೂಕ್ತ ಎಂದು ಗ್ರಹಿಸಿ ಖರೀದಿಸುವುದು ಕಷ್ಟವಾಗಬಹುದು. ಚಳಿಗಾಲದ ಬಟ್ಟೆ ಎಂದರೆ ದೇಹ ಬೆಚ್ಚಗಿರಿಸುವುದು ಮಾತ್ರವಲ್ಲ, ಸ್ಟೈಲಿಶ್ ಆಗಿಯೂ ಕಾಣಬೇಕು ಎಂದು ಹೆಣ್ಣುಮಕ್ಕಳಿಗೆ ಅನ್ನಿಸುವುದು ಸಹಜ.
ವಿಂಟರ್‌ನಲ್ಲಿ ಚಳಿಯಿಂದ ದೇಹವನ್ನು ಕಾಪಾಡಿಕೊಳ್ಳುವ ಜೊತೆಗೆ ಸ್ಟೈಲಿಶ್ ಆಗಿ ಕಾಣುವುದು ಕೂಡ ಮುಖ್ಯವಾಗುತ್ತದೆ. ಫ್ಯಾಷನ್ ಮಾರುಕಟ್ಟೆ ಎಂಬುದು ಹರಿಯುವ ನದಿಯಂತೆ. ಇಲ್ಲಿ ಪ್ರತಿ ವರ್ಷವು ಹೊಸ ಹೊಸ ಕಲೆಕ್ಷನ್‌ಗಳು ಬರುತ್ತಿರುತ್ತವೆ. ಈ ವರ್ಷ ಖರೀದಿಸಿದ್ದು ಮುಂದಿನ ವರ್ಷಕ್ಕೆ ಹಳೆಯದಾಗಿ ಕಾಣಿಸಬಹುದು. ನಿಮ್ಮ ಬಜೆಟ್‌ಗೆ ಹೊಂದುವಂತೆ ಕೋಟ್‌ಗಳನ್ನು ಖರೀದಿಸುವುದು ಸವಾಲು ಎನ್ನಿಸಬಹುದು. ಅದೇನೆ ಇದ್ದರೂ ಚಳಿಗಾಲದಲ್ಲಿ ಹೆಣ್ಣುಮಕ್ಕಳ ವಾರ್ಡ್‌ರೋಬ್‌ನಲ್ಲಿ ಈ 5 ಕೋಟ್‌ಗಳು ತಪ್ಪದೇ ಇರಬೇಕು.
ಲೆದರ್ ಕೋಟ್
ಲೆದರ್ ಕೋಟ್ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುತ್ತದೆ. ಮಾತ್ರವಲ್ಲ ಇದು ಸ್ಟೈಲಿಶ್ ಲುಕ್ ನೀಡುವುದು ಸುಳ್ಳಲ್ಲ. ಬಹಳ ಹಿಂದಿನ ಕಾಲದಿಂದಲೂ ಚಳಿಗಾಲದಲ್ಲಿ ಲೆದರ್ ಕೋಟ್ ಅಥವಾ ಜಾಕೆಟ್‌ಗಳು ಮಾರುಕಟ್ಟೆಯಲ್ಲಿರುವುದನ್ನು ನೀವು ಗಮನಿಸಿ ಇರಬಹುದು. ಆದರೆ ಈ ಬಾರಿ ನೀವು ಖರೀದಿಸುವಾಗ ಕ್ಲಾಸಿಕ್ ಹಾಗೂ ಲೇಟೆಸ್ಟ್ ಟ್ರೆಂಡ್ ಅನ್ನು ಗುರುತಿಸುವುದು ಮುಖ್ಯವಾಗುತ್ತದೆ. ಲೆದರ್ ಕೋಟ್ ಅಥವಾ ಜಾಕೆಟ್ ಧರಿಸುವಾಗ ನೀವು ಅದಕ್ಕೆ ಹೊಂದುವಂತೆ ಫಾರ್ಮಲ್ ಅಥವಾ ಸೆಮಿ ಫಾರ್ಮಲ್ ಉಡುಪನ್ನು ಧರಿಸಬೇಕು. ಇದು ಕ್ಯಾಷುವಲ್ ಡ್ರೆಸ್ ಜೊತೆ ಧರಿಸಲು ಕೂಡ ಸೂಕ್ತ ಎನ್ನಿಸುತ್ತದೆ.
ಟ್ರೆಂಚ್ ಕೋಟ್
ಪ್ರತಿಯೊಬ್ಬರೂ ತಮ್ಮ ವಾರ್ಡ್‌ರೋಬ್‌ನಲ್ಲಿ ಸೇರಿಸಬೇಕಾದ ಮತ್ತೊಂದು ಕ್ಲಾಸಿಕ್ ಉಡುಪು ಎಂದರೆ ಟ್ರೆಂಚ್ ಕೋಟ್. ಇದು ಅನಾದಿಕಾಲದಿಂದಲೂ ಧರಿಸುತ್ತಿರುವ ಉಡುಪು. ಟ್ರೆಂಚ್ ಕೋಟ್ ವಿದೇಶಗಳಲ್ಲಿ ಬಳಕೆ ಹೆಚ್ಚಿದ್ದರೂ ಇತ್ತೀಚಿನ ದಿನಗಳಲ್ಲಿ ಹೊಸ ರೂಪಗಳಲ್ಲಿ ಭಾರತೀಯ ಮಾರುಕಟ್ಟೆಗೂ ಪ್ರವೇಶಿಸಿದೆ. ಇದನ್ನು ಯಾವುದೇ ಬಟ್ಟೆ ಜೊತೆ ಕೂಡ ಧರಿಸಬಹುದು.
ಕ್ವಿಲ್ಟೆಡ್ ಕೋಟ್
ಅತೀ ಅತಿ ಹೆಚ್ಚು ಶೀತ ವಾತಾವರಣ ಇರುವ ಪ್ರದೇಶದಲ್ಲಿದ್ದರೆ ಈ ಕೋಟ್ ನಿಮಗೆ ಹೇಳಿ ಮಾಡಿಸಿದ್ದು, ಇದು ಚಳಿಯಿಂದ ನಿಮ್ಮ ದೇಹವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ. ಇದು ಧರಿಸಲು ಆರಾಮವಾಗಿದ್ದು, ಬಹಳ ದಿನಗಳವರೆಗೆ ಬಾಳಿಕೆ ಬರುತ್ತದೆ. ಇದರಲ್ಲಿ ವಿಭಿನ್ನ ಶೈಲಿಗಳು ಲಭ್ಯವಿದ್ದು ನಿಮಗೆ ಹೊಂದುವುದನ್ನು ಖರೀದಿಸಬಹುದು. ಕ್ವಿಲ್ಟೆಡ್ ಜಾಕೆಟ್ ಕೈಗಟುಕುವ ದರದಲ್ಲಿ ಲಭ್ಯವಿರುತ್ತದೆ.
ಸ್ಕಾರ್ಫ್ ಕೋಟ್
ಇದು ಇತ್ತೀಚಿನ ಟ್ರೆಂಡಿ ಕೋಟ್ ಆಗಿದೆ. ಈ ಕೋಟ್ ಡಿಫ್ರೆಂಟ್ ಲುಕ್ ನೀಡುವುದು ಸುಳ್ಳಲ್ಲ. ಇದು ಜಾಕೆಟ್ ಜೊತೆಗೆ ಉಲ್ಲನ್ ಅಥವಾ ಕಾಶ್ಮೀರಿ ಸ್ಕಾರ್ಫ್ ಅನ್ನು ಅಳವಡಿಸಿರುವ ಜಾಕೆಟ್ ಆಗಿದೆ. ಇದರಿಂದ ಕುತ್ತಿಗೆಯನ್ನು ಚಳಿಯಿಂದ ರಕ್ಷಿಸಿಕೊಳ್ಳಲು ಸ್ಕಾರ್ಫ್ ಖರೀದಿಸುವುದು ಉಳಿಯುತ್ತದೆ.
ಶಿಯರ್ಲಿಂಗ್ ಕೋಟ್
ಇದು ಕೂಡ ಬಹಳ ಹಿಂದಿನಿಂದಲೂ ಟ್ರೆಂಡ್‌ನಲ್ಲಿರುವ ಕೋಟ್ ಆಗಿದ್ದು ಇದು ಹೊಸ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಸದ್ಯ ಉದ್ದನೆಯ ಶಿಯರ್ಲಿಂಗ್ ಕೋಟ್ ಟ್ರೆಂಡ್‌ನಲ್ಲಿದೆ. ಇದು ವಿಂಟರ್ ಫ್ಯಾಷನ್ ಟ್ರೆಂಡ್‌ಗೆ ಹೊಸ ಭಾಷ್ಯ ಬರೆದಿರುವುದು ಸುಳ್ಳಲ್ಲ. ಇದನ್ನು ಜೀನ್ಸ್ ಟಾಪ್, ಸ್ಕರ್ಟ್ ಟಾಪ್ ಜೊತೆ ಧರಿಸಲು ಸೂಕ್ತವಾಗುತ್ತದೆ.
ನೋಡಿದ್ರಲ್ಲ ಚಳಿಗಾಲದಲ್ಲಿ ದೇಹ ಬೆಚ್ಚಗಿರಿಸುವ ಜೊತೆಗೆ ಸ್ಟೈಲಿಶ್ ಆಗಿಯೂ ಕಾಣಿಸಲು ನಿಮ್ಮ ವಾರ್ಡ್‌ರೋಬ್‌ನಲ್ಲಿ ಈ ಮೇಲಿನ ಕೋಟ್ ಅಥವಾ ಜಾಕೆಟ್ ಇರಲೇಬೇಕು. ಫ್ಯಾಷನ್ ಪ್ರಿಯರು ನೀವಾಗಿದ್ದರೆ ಈ ಕೋಟ್‌ಗಳನ್ನು ನಿಮ್ಮ ವಾರ್ಡ್‌ರೋಬ್‌ನಲ್ಲಿ ತುಂಬಿಸಿ.