ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ ಭಾರತದ 10 ಬೆಸ್ಟ್ ತಾಣಗಳಿವು; ನೀವಿನ್ನೂ ಈ ಜಾಗಗಳನ್ನು ನೋಡಿಲ್ಲ ಅಂದ್ರೆ ಈ ವರ್ಷ ಮಿಸ್ ಮಾಡ್ಬೇಡಿ
- Traveling Tips: ನವೆಂಬರ್ ತಿಂಗಳು ಆರಂಭವಾಯಿತು ಎಂದರೆ ಚಳಿಗಾಲವೂ ಆರಂಭವಾಯಿತು ಎಂದರ್ಥ. ಈ ಚಳಿಗಾಲದಲ್ಲಿ ಪ್ರವಾಸ ಮಾಡಲು ಏನೂ ಒಂಥರಾ ಖುಷಿ ಇರುತ್ತದೆ. ಈ ವರ್ಷ ನಿನ್ನ ಕುಟುಂಬ ಅಥವಾ ಸ್ನೇಹಿತರೊಂದಿಗೆ ಚಳಿಗಾಲದ ಪ್ರವಾಸಕ್ಕೆ ಬೆಸ್ಟ್ ಜಾಗ ಹುಡುಕ್ತಾ ಇದೀರಾ, ಹಾಗಾದ್ರೆ ನಾವು ನಿಮಗೆ ಸಹಾಯ ಮಾಡ್ತೀವಿ. ಅಂದ್ ಹಾಗೆ ಈ ಜಾಗಗಳೆಲ್ಲಾ ಇರೋದು ಭಾರತದಲ್ಲೇ.

(1 / 5)
ಚಳಿಗಾಲ ಬಂತೆಂದರೆ ಮೊದಲು ನೆನಪಾಗುವುದು ಕಾಶ್ಮೀರ. ಈ ಋತುವಿನಲ್ಲಿ ಕಾಶ್ಮೀರ ಕಣಿವೆಯಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಸ್ವರ್ಗ. ಗುಲ್ಮಾರ್ಗ್, ಸೋನ್ಮಾರ್ಗ್, ಪಹಲ್ಗಾಮ್ ಮತ್ತು ಪುಲ್ವಾಮಾದ ಸೌಂದರ್ಯವನ್ನು ಸವಿಯಲು ಜೀವನದಲ್ಲಿ ಒಮ್ಮೆಯಾದ್ರೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕು.
(2 / 5)
ಹಿಮಾಚಲ ಪ್ರದೇಶವು ಹಲವು ನೈಸರ್ಗಿಕ ಸೌಂದರ್ಯ ತಾಣ ನೆಲೆಯಾಗಿದೆ. ನೀವು ಈ ರಾಜ್ಯಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಶಿಮ್ಲಾ- ಕುಫ್ರಿ, ಧರ್ಮಶಾಲಾ, ಕುಲು, ಮನಾಲಿ, ಡಾಲ್ಹೌಸಿಗೆ ಭೇಟಿ ನೀಡಬೇಕು. ಮಂಜಿನ ಜೊತೆ ಮನದ ಬೇಗೆಗಳೆಲ್ಲಾ ಕರಗಬೇಕು ಅಂದ್ರೆ ಈ ಜಾಗಗಳಿಗೆ ಭೇಟಿ ನೀಡಿ.
(3 / 5)
ನೀವು ಚಳಿಗಾಲದಲ್ಲಿ ಗೋವಾಕ್ಕೆ ಭೇಟಿ ನೀಡಬಹುದು. ಹಲವು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಗೋವಾ ಪ್ರವಾಸ ಯೋಜಿಸುತ್ತಾರೆ. ಈ ಬಾರಿ ಜಲಕ್ರೀಡೆಯ ಜತೆಗೆ ಸಿನಿಮೋತ್ಸವದ ಸಂಭ್ರಮವೂ ನಿಮ್ಮ ಜೊತೆಯಾಗಲಿದೆ. ನೀವು ಸಿನಿ ಪ್ರೇಮಿಯಾಗಿದ್ರೆ ಗೋವಾ ಚಲನಚಿತ್ರೋತ್ಸವ ನಡುವೆ ಸಂದರ್ಭದಲ್ಲಿ ಇಲ್ಲಿದೆ ಭೇಟಿ ಕೊಡಿ.(Pixabay)
(4 / 5)
ಈಶಾನ್ಯ ಭಾರತಕ್ಕೆ ಭೇಟಿ ನೀಡಲು ಬಯಸುವವರಿಗೆ ಗ್ಯಾಂಗ್‌ಟಕ್ (ಸಿಕ್ಕಿಂ), ತವಾಂಗ್ (ಅರುಣಾಚಲ ಪ್ರದೇಶ), ಶಿಲ್ಲಾಂಗ್ (ಮೇಘಾಲಯ) ಉತ್ತಮ ಆಯ್ಕೆಗಳು. ಈ ಚಳಿಗಾಲದಲ್ಲಿ ನಿಸರ್ಗದ ಮಡಿಲಲ್ಲಿ ಶಾಂತಾವಾಗಿ ಕಾಲ ಕಳೆಯಲು ಈ ಜಾಗಗಳು ಬೆಸ್ಟ್.
ಇತರ ಗ್ಯಾಲರಿಗಳು