logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಬಾಯಾರಿಕೆ ಆಗುತ್ತಿಲ್ಲವೆಂದು ನೀರು ಕುಡಿಯುವುದು ಕಡಿಮೆ ಮಾಡಿದ್ದೀರಾ: ಈ ಆರೋಗ್ಯ ಅಪಾಯ ಎದುರಾಗಬಹುದು; ಇರಲಿ ಎಚ್ಚರ

ಚಳಿಗಾಲದಲ್ಲಿ ಬಾಯಾರಿಕೆ ಆಗುತ್ತಿಲ್ಲವೆಂದು ನೀರು ಕುಡಿಯುವುದು ಕಡಿಮೆ ಮಾಡಿದ್ದೀರಾ: ಈ ಆರೋಗ್ಯ ಅಪಾಯ ಎದುರಾಗಬಹುದು; ಇರಲಿ ಎಚ್ಚರ

Priyanka Gowda HT Kannada

Dec 03, 2024 02:09 PM IST

google News

ಚಳಿಗಾಲದಲ್ಲಿ ಬಾಯಾರಿಕೆ ಆಗುತ್ತಿಲ್ಲವೆಂದು ನೀರು ಕುಡಿಯುವುದು ಕಡಿಮೆ ಮಾಡಿದ್ದೀರಾ: ಈ ಆರೋಗ್ಯ ಅಪಾಯ ಎದುರಾಗಬಹುದು; ಇರಲಿ ಎಚ್ಚರ

  • ಚಳಿಗಾಲದಲ್ಲಿ ಬಾಯಾರಿಕೆ ಆಗುತ್ತಿಲ್ಲವೆಂದು ಕೆಲವರು ಕಡಿಮೆ ನೀರು ಕುಡಿಯುತ್ತಾರೆ. ದೇಹವು ಸಾಕಷ್ಟು ನೀರು ಪಡೆಯದಿದ್ದರೆ ಈ ಆರೋಗ್ಯ ಅಪಾಯ ಎದುರಾಗಬಹುದು. ನೀರು ಕುಡಿಯದಿದ್ದರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಡಿಮೆ ನೀರು ಕುಡಿಯುವುದರಿಂದ ಆಗುವ ತೊಂದರೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಬಾಯಾರಿಕೆ ಆಗುತ್ತಿಲ್ಲವೆಂದು ನೀರು ಕುಡಿಯುವುದು ಕಡಿಮೆ ಮಾಡಿದ್ದೀರಾ: ಈ ಆರೋಗ್ಯ ಅಪಾಯ ಎದುರಾಗಬಹುದು; ಇರಲಿ ಎಚ್ಚರ
ಚಳಿಗಾಲದಲ್ಲಿ ಬಾಯಾರಿಕೆ ಆಗುತ್ತಿಲ್ಲವೆಂದು ನೀರು ಕುಡಿಯುವುದು ಕಡಿಮೆ ಮಾಡಿದ್ದೀರಾ: ಈ ಆರೋಗ್ಯ ಅಪಾಯ ಎದುರಾಗಬಹುದು; ಇರಲಿ ಎಚ್ಚರ (Canva)

ಚಳಿಗಾಲದಲ್ಲಿ ಹೆಚ್ಚಾಗಿ ಬಾಯಾರಿಕೆಯನ್ನು ಅನುಭವಿಸುವುದಿಲ್ಲ. ವಾತಾವರಣ ತಣ್ಣಗಿರುವುದರಿಂದ ನೀರು ಕುಡಿಯಲೇಬೇಕು ಅನ್ನಿಸುವುದಿಲ್ಲ. ಈ ಕಾರಣದಿಂದಾಗಿ, ಕೆಲವರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯುವುದಿಲ್ಲ. ಬಾಯಾರಿಕೆಯಾಗದಿದ್ದರೆ ನೀರು ಏಕೆ ಕುಡಿಯಬೇಕು ಎಂದು ಕೆಲವರು ಯೋಚಿಸುತ್ತಾರೆ. ಕೆಲವರು ಬಾಯಾರಿಕೆಯಾದ್ರೆ ಮಾತ್ರ ನೀರು ಕುಡಿಯುವುದು. ಬಾಯಾರಿಕೆಯೇ ಆಗದಿದ್ದಲ್ಲಿ ದಿನಕ್ಕೆ 1 ಗ್ಲಾಸ್ ನೀರು ಕುಡಿಯುವುದು ಸಹ ಅನುಮಾನವೇ. ಆದರೆ, ಚಳಿಗಾಲದಲ್ಲಿ ಸಹ ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರನ್ನು ಕುಡಿಯಬೇಕು. ಅದಕ್ಕಿಂತ ಕಡಿಮೆ ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಗಳ ಜತೆಗೆ ಇನ್ನೂ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಸಾಕಷ್ಟು ನೀರು ಕುಡಿಯದಿರುವ ಅಪಾಯಗಳು ಇಲ್ಲಿವೆ.

ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯದಿರುವುದರಿಂದ ಉಂಟಾಗುವ ಅಪಾಯಗಳು

ತಲೆನೋವು, ಆಯಾಸ: ಚಳಿಗಾಲದಲ್ಲಿ ದೇಹವು ಸಾಕಷ್ಟು ನೀರು ಕುಡಿಯದಿದ್ದರೆ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆಯಾಸ ಮತ್ತು ಆಲಸ್ಯದ ಭಾವನೆ ಉಂಟಾಗುತ್ತದೆ. ಬಾಯಾರಿಕೆ ಇಲ್ಲದಿದ್ದರೂ ದೇಹದಲ್ಲಿ ನಿರ್ಜಲೀಕರಣ ತಡೆಯುವುದಕ್ಕೆ ನೀರು ಕುಡಿಯುವುದು ಅತ್ಯಗತ್ಯ. ಅದಕ್ಕಾಗಿಯೇ ಚಳಿಗಾಲದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ.

ಹೃದಯದ ಮೇಲೆ ಪರಿಣಾಮ: ಸಾಕಷ್ಟು ನೀರು ಕುಡಿಯದಿದ್ದರೆ, ದೇಹದಲ್ಲಿನ ಪೊಟ್ಯಾಸಿಯಮ್ ಮತ್ತು ಸೋಡಿಯಂನ ಎಲೆಕ್ಟ್ರೋಲೈಟ್ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಇದು ಹೃದಯದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೃದಯದ ಪ್ರತಿಕ್ರಿಯೆಯಲ್ಲಿ ಅಸಮತೋಲನ ಹೆಚ್ಚಾಗುತ್ತದೆ. ಕಡಿಮೆ ನೀರು ಕುಡಿದರೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ಹೃದಯದ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಹೃದಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಬಹುದು.

ಜೀರ್ಣಕಾರಿ ಸಮಸ್ಯೆಗಳು: ಸಾಕಷ್ಟು ನೀರು ಸೇವನೆ ಮಾಡದಿದ್ದರೆ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ತಿಂದ ಆಹಾರ ಬಹುಕಾಲ ಜೀರ್ಣವಾಗದೆ ದೇಹ ಭಾರವಾದಂತಾಗುತ್ತದೆ. ಅಲ್ಲದೆ, ನೀರು ಕುಡಿಯುವುದು ಕಡಿಮೆಯಾದರೆ ದೇಹದಲ್ಲಿರುವ ತ್ಯಾಜ್ಯಗಳು ಹೊರಗೆ ಹೋಗುವುದು ಕಷ್ಟವಾಗುತ್ತದೆ. ತ್ಯಾಜ್ಯದ ಶೇಖರಣೆಯು ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಮೂತ್ರಪಿಂಡಗಳಿಗೆ ಅಪಾಯ: ಕಡಿಮೆ ನೀರು ಕುಡಿದರೆ, ಮೂತ್ರಪಿಂಡದ ಮೇಲೆ ಒತ್ತಡವು ತೀವ್ರವಾಗಿರುತ್ತದೆ. ಮೂತ್ರಪಿಂಡಗಳಿಗೆ ರಕ್ತದಿಂದ ತ್ಯಾಜ್ಯವನ್ನು ಬೇರ್ಪಡಿಸಲು ಮತ್ತು ಹೊರಹಾಕಲು ಕಷ್ಟವಾಗುತ್ತದೆ. ಕಡಿಮೆ ನೀರು ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಸಹ ಹೆಚ್ಚಿಸುತ್ತದೆ. ಇದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುವ ಅಪಾಯವಿದೆ. ಅದಕ್ಕಾಗಿಯೇ ಆರೋಗ್ಯಕರ ಮತ್ತು ಉತ್ತಮ ಮೂತ್ರಪಿಂಡದ ಕಾರ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು ಅವಶ್ಯಕ.

ಸ್ನಾಯು ಮತ್ತು ಕೀಲು ನೋವು: ಚಳಿಗಾಲದಲ್ಲಿ ನೀವು ಸಾಕಷ್ಟು ನೀರು ಕುಡಿಯದಿದ್ದರೆ, ದೇಹದಲ್ಲಿ ಸಾಕಷ್ಟು ಎಲೆಕ್ಟ್ರೋಲೈಟ್‌ಗಳು ಇರುವುದಿಲ್ಲ. ಇದು ಕೀಲು ನೋವನ್ನು ಹೆಚ್ಚಿಸುತ್ತದೆ. ಸಂಧಿವಾತ ಹೊಂದಿರುವ ಜನರಿಗೆ, ನೋವು ಹೆಚ್ಚು ತೀವ್ರವಾಗಿರುತ್ತದೆ. ನೀರಿನ ಕೊರತೆಯೂ ಸ್ನಾಯು ನೋವಿಗೆ ಕಾರಣವಾಗಬಹುದು. ಮೂಳೆಯ ಬಲದ ಮೇಲೂ ಪರಿಣಾಮ ಬೀರಬಹುದು.

ಚರ್ಮದ ತೊಂದರೆಗಳು: ಚಳಿಗಾಲದಲ್ಲಿ, ಚರ್ಮವು ಸಾಮಾನ್ಯವಾಗಿ ತುಂಬಾ ಶುಷ್ಕವಾಗಿರುತ್ತದೆ. ನೀರು ಕಡಿಮೆ ಕುಡಿಯುವುದರಿಂದ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಇದಲ್ಲದೆ, ನೀವು ಸಾಕಷ್ಟು ನೀರು ಕುಡಿಯದಿದ್ದರೆ ಚರ್ಮದ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಚರ್ಮದಲ್ಲಿನ ತೇವಾಂಶವು ಹೆಚ್ಚು ಒಣಗುತ್ತದೆ. ನೀರು ಕಡಿಮೆಯಾದರೆ ತುಟಿಗಳು ಕೂಡ ಒಣಗಬಹುದು.

ಮೇಲೆ ತಿಳಿಸಿರುವ ಕಾರಣಗಳಿಂದಾಗಿ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಚಳಿಗಾಲದಲ್ಲಿಯೂ ದೇಹವು ಸಾಕಷ್ಟು ನೀರನ್ನು ಕುಡಿಯಬೇಕು. ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರು ಕುಡಿಯಬೇಕು. ಇದು ಅನೇಕ ಸಮಸ್ಯೆಗಳು ಉದ್ಭವಿಸುವುದನ್ನು ತಡೆಯುತ್ತದೆ. ನೀರು ಕುಡಿಯುವುದನ್ನು ನಿರ್ಲಕ್ಷಿಸಬಾರದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ