logo
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗೆದ್ದಾಗ ಕಣ್ಣುಗಳು ಊದಿಕೊಂಡಿರುತ್ತವೆಯೇ: ಚಳಿಗಾಲದಲ್ಲಿ ಪಫಿನೆಸ್ ಕಡಿಮೆ ಮಾಡಲು ಇಲ್ಲಿದೆ ಸಲಹೆ

ಬೆಳಗೆದ್ದಾಗ ಕಣ್ಣುಗಳು ಊದಿಕೊಂಡಿರುತ್ತವೆಯೇ: ಚಳಿಗಾಲದಲ್ಲಿ ಪಫಿನೆಸ್ ಕಡಿಮೆ ಮಾಡಲು ಇಲ್ಲಿದೆ ಸಲಹೆ

Priyanka Gowda HT Kannada

Dec 04, 2024 01:30 PM IST

google News

ಬೆಳಗೆದ್ದಾಗ ಕಣ್ಣುಗಳು ಊದಿಕೊಂಡಿರುತ್ತವೆಯೇ: ಚಳಿಗಾಲದಲ್ಲಿ ಪಫಿನೆಸ್ ಕಡಿಮೆ ಮಾಡಲು ಇಲ್ಲಿದೆ ಸಲಹೆ

  • ಬೆಳಗ್ಗೆ ಎದ್ದಾಗ ಬಹುತೇಕರ ಕಣ್ಣುಗಳು ಊದಿಕೊಂಡಿರುತ್ತವೆ. ಚಳಿಗಾಲದಲ್ಲಿ ಕಣ್ಣುಗಳಲ್ಲಿ ಊತ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಒಣ ಗಾಳಿಯು ತ್ವಚೆ ಅಥವಾ ಚರ್ಮವನ್ನು ಹೇಗೆ ಒಣಗಿಸುತ್ತದೆಯೋ ಹಾಗೆಯೇ ಅದು ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ.  ಕಣ್ಣುಗಳ ಊತ ಅತವಾ ಪಫಿನೆಸ್ ಅನ್ನ ಕಡಿಮೆ ಮಾಡಲು ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು.

ಬೆಳಗೆದ್ದಾಗ ಕಣ್ಣುಗಳು ಊದಿಕೊಂಡಿರುತ್ತವೆಯೇ: ಚಳಿಗಾಲದಲ್ಲಿ ಪಫಿನೆಸ್ ಕಡಿಮೆ ಮಾಡಲು ಇಲ್ಲಿದೆ ಸಲಹೆ
ಬೆಳಗೆದ್ದಾಗ ಕಣ್ಣುಗಳು ಊದಿಕೊಂಡಿರುತ್ತವೆಯೇ: ಚಳಿಗಾಲದಲ್ಲಿ ಪಫಿನೆಸ್ ಕಡಿಮೆ ಮಾಡಲು ಇಲ್ಲಿದೆ ಸಲಹೆ (PC: Freepik)

ಚಳಿಗಾಲದಲ್ಲಿ ಹೆಚ್ಚಿನವರ ಕಣ್ಣುಗಳು ಬೆಳಗ್ಗೆ ಏಳುತ್ತಿದ್ದಂತೆಯೇ ಊದಿಕೊಳ್ಳುತ್ತವೆ. ಸ್ವಲ್ಪ ಸಮಯದ ನಂತರ ಕಣ್ಣುಗಳು ಸಾಮಾನ್ಯವಾಗುತ್ತವೆ. ಆದರೆ, ಬಹುತೇಕ ಮಂದಿ ಬೆಳಗಿನ ಜಾವ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಒಣ ಗಾಳಿಯು ತ್ವಚೆ ಅಥವಾ ಚರ್ಮವನ್ನು ಹೇಗೆ ಒಣಗಿಸುತ್ತದೆಯೋ ಹಾಗೆಯೇ ಅದು ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ನಿಮ್ಮ ಕಣ್ಣುಗಳ ಊತವನ್ನು ಉಂಟುಮಾಡುವ ಅನೇಕ ಇತರ ಅಂಶಗಳಿವೆ. ಉದಾಹರಣೆಗೆ, ತಂಪಾದ ಶುಷ್ಕ ಗಾಳಿ, ಅಲರ್ಜಿಗಳು, ಒಣ ಕಣ್ಣುಗಳು ಹಾಗೂ ಇನ್ನಿತರೆ ಸಮಸ್ಯೆ ಕಾಡಬಹುದು. ಕಣ್ಣುಗಳ ಊತ ಅಥವಾ ಪಫಿನೆಸ್ ಕಡಿಮೆ ಮಾಡಲು ಈ ಸಲಹೆಗಳನ್ನು ಅನುಸರಿಸಬಹುದು.

ಕಣ್ಣುಗಳ ಊತವನ್ನು ಕಡಿಮೆ ಮಾಡಲು ಅನುಸರಿಸಬಹುದಾದ ಸಲಹೆಗಳು ಇಲ್ಲಿವೆ

ಸನ್ ಗ್ಲಾಸ್ ಧರಿಸಿ: ಶೀತ ಹಾಗೂ ಹೆಚ್ಚಿನ ಗಾಳಿ ಇರುವ ದಿನದಂದು ಹೊರಗೆ ಹೋದಾಗ ನಿಮ್ಮ ಕಣ್ಣುಗಳ ರಕ್ಷಣೆ ಅತಿ ಮುಖ್ಯ. ಗಾಳಿಯ ಪರಿಣಾಮದಿಂದ ಕಣ್ಣು ಒಣಗಿದಂತಾಗಬಹುದು. ಹೀಗಾಗಿ ಕಣ್ಣುಗಳನ್ನು ರಕ್ಷಿಸಲು ಸನ್ ಗ್ಲಾಸ್ ಅನ್ನು ಧರಿಸುವುದು ಉತ್ತಮ. ಹಾಗೆಯೇ ಕಣ್ಣುಗಳ ಮೇಲೆ ಯುವಿ ಬೆಳಕಿನ ಕಿರಣಗಳು ನೇರವಾಗಿ ಬೀಳದಂತೆ ಎಚ್ಚರವಹಿಸಿ.

ದ್ರವ ಸೇವನೆಯನ್ನು ಹೆಚ್ಚಿಸಿ: ಕಣ್ಣಿನ ಊತವನ್ನು ಕಡಿಮೆ ಮಾಡಲು ಮತ್ತು ಶುಷ್ಕತೆಯಿಂದ ರಕ್ಷಿಸಲು ಹೈಡ್ರೀಕರಿಸುವುದು ಬಹಳ ಮುಖ್ಯ. ನೀರು ಮತ್ತು ಇತರ ದ್ರವಾಹಾರಳನ್ನು ಸೇವಿಸುವುದು ಬಹಳ ಮುಖ್ಯ. ಇವು ನಿಮ್ಮ ದೇಹವನ್ನು ಸಂಪೂರ್ಣವಾಗಿ ಹೈಡ್ರೀಕರಿಸಲು ಸಹಾಯ ಮಾಡುತ್ತದೆ ಹಾಗೆಯೇ ಕಣ್ಣುಗಳನ್ನು ತೇವಾಂಶಯುಕ್ತವಾಗಿರಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ನೀರಿನ ಸೇವನೆಯನ್ನು ಕಡಿಮೆ ಮಾಡಬೇಡಿ. ದಿನನಿತ್ಯ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಬೇಕು.

ಕಣ್ಣಿಗೆ ಬೆಚ್ಚಗಿನ ಬಟ್ಟೆಯಿಂದ ಒತ್ತಿ: ಒಣ ಕಣ್ಣುಗಳಿಂದ ಒಂದೇ ಸಮನೆ ನೀರಿಳಿದು ಬರುತ್ತದೆ. ಬೆಚ್ಚಗಿನ, ಮೃದುವಾಗ ಹತ್ತಿ ಬಟ್ಟೆಯನ್ನು ಕಣ್ಣಿಗೆ ಒತ್ತಿ ಹಿಡಿಯುವುದರಿಂದ ಕಣ್ಣೀರಿನ ಸ್ರವಿಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎರಡು ಮೂರು ನಿಮಿಷಗಳ ಕಾಲ ಪ್ರತಿ ಕಣ್ಣಿಗೆ ಬೆಚ್ಚಗಿನ ಬಟ್ಟೆಯನ್ನು ಒತ್ತುವ ಮುಖಾಂತರ, ಕಣ್ಣುಗಳು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡಬಹುದು. ಇವು ತುರಿಕೆ ಹಾಗೂ ಊದಿಕೊಂಡ ಕಣ್ಣುಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಒಣ ಕಣ್ಣಿನ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಇದು ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ.

ಕಣ್ಣುಗಳಿಗೆ ವಿಶ್ರಾಂತಿ ನೀಡಿ: ಹೆಚ್ಚು ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ನೋಡುತ್ತಿದ್ದರೆ ಇದನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಿ. ಅಲ್ಲದೆ, ಪ್ರತಿ 2 ಗಂಟೆಗಳಿಗೊಮ್ಮೆ 10 ನಿಮಿಷಗಳ ಕಾಲ ನಡೆಯಿರಿ. ಈ ಮೂಲಕ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ. ಗ್ಯಾಜೆಟ್ ಹೆಚ್ಚು ಹೊತ್ತು ನೋಡುವುದರಿಂದ ಕಣ್ಣುಗಳಲ್ಲಿ ಊತವನ್ನು ಉಂಟುಮಾಡಬಹುದು.

ಆರೋಗ್ಯಕರ ಆಹಾರ ಸೇವನೆ ಮುಖ್ಯ: ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಪೌಷ್ಟಿಕ ಆಹಾರವು ಕಣ್ಣುಗಳು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಕ್ಯಾರೆಟ್, ಪಾಲಕ್ ಸೊಪ್ಪು, ಮೀನು ಮತ್ತು ಬಾದಾಮಿಗಳಂತಹ ಆಹಾರವನ್ನು ಸೇವಿಸಬೇಕು. ಇವೆಲ್ಲವೂ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಣ್ಣುಗಳು ಆರೋಗ್ಯಕರವಾಗಿದ್ದರೆ ಉರಿಯೂತದ ಅಪಾಯವು ಕಡಿಮೆಯಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ