ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್, ಪಫಿನೆಸ್ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಮನೆಮದ್ದು; ಮನೆಯಲ್ಲೇ ಹೀಗೆ ಕ್ರೀಮ್ ತಯಾರಿಸಿ
ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಹಾಗೂ ಪಫಿನೆಸ್ ಸಮಸ್ಯೆಯಿಂದ ಹಲವು ಮಂದಿ ಬಳಲುತ್ತಿದ್ದಾರೆ. ನಿದ್ದೆಯ ಕೊರತೆ, ಫೋನ್-ಲ್ಯಾಪ್‌ಟಾಪ್ ವೀಕ್ಷಣೆಯೂ ಇದಕ್ಕೆ ಕಾರಣವಾಗಿರಬಹುದು. ಅಥವಾ ಆರೋಗ್ಯ ಸಮಸ್ಯೆಯಿಂದಲೂ ಉಂಟಾಗಬಹುದು. ಇದನ್ನು ಹೋಗಲಾಡಿಸಲು ಮನೆಯಲ್ಲೇ ಅಂಡರ್ ಐ ಕ್ರೀಮ್ ಅನ್ನು ತಯಾರಿಸಬಹುದು. ಇಲ್ಲಿದೆ ಮಾಡುವ ವಿಧಾನ.
ಕಣ್ಣುಗಳ ಕೆಳಗೆ ಕಪ್ಪು ವರ್ತುಲ (ಡಾರ್ಕ್ ಸರ್ಕಲ್) ಗಳು ಇರುವುದು ಸಾಮಾನ್ಯವಾಗಿದೆ. ಹೆಚ್ಚಿನ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕತ್ತಲೆಯಲ್ಲಿ ಫೋನ್‍ನ ಅತಿಯಾದ ಬಳಕೆ, ನಿದ್ರೆಯ ಕೊರತೆಯಿಂದಾಗಿ ಈ ಸಮಸ್ಯೆಗಳು ಸಂಭವಿಸುತ್ತವೆ. ಕೇವಲ ಇವಿಷ್ಟೇ ಅಲ್ಲ ಕೆಲವು ಆರೋಗ್ಯ ಸಮಸ್ಯೆಗಳು ಸಹ ಇದಕ್ಕೆ ಕಾರಣವಾಗಬಹುದು. ಕಣ್ಣುಗಳ ಕೆಳಗೆ ಊತ (ಪಫಿನೆಸ್) ನಿದ್ದೆಯ ಕೊರತೆ ಅಥವಾ ಅತಿಯಾದ ಆಯಾಸ, ಒತ್ತಡದಿಂದ ಉಂಟಾಗುತ್ತದೆ. ಈ ಎರಡೂ ಕಾರಣಗಳಿಂದಾಗಿ, ಮುಖದ ಸೌಂದರ್ಯವು ಹಾಳಾಗುತ್ತದೆ. ಈ ಸಮಸ್ಯೆಯನ್ನು ಎದುರಿಸಲು ಬಹುತೇಕರು ದುಬಾರಿ ಮೊತ್ತದ ಐ ಕ್ರೀಮ್ ಬಳಸುತ್ತಾರೆ. ಇದರ ಬದಲು ಮನೆಯಲ್ಲಿಯೇ ಕಣ್ಣಿನ ಕ್ರೀಮ್ ಅನ್ನು ತಯಾರಿಸಬಹುದು. ಈ ಕ್ರೀಮ್ ಹಚ್ಚಿದ ನಂತರ, ನೀವು ವ್ಯತ್ಯಾಸವನ್ನು ಗಮನಿಸಬಹುದು. ಇದನ್ನು ತಯಾರಿಸುವ ವಿಧಾನ ಹೇಗೆ, ಏನೆಲ್ಲಾ ಸಾಮಗ್ರಿಗಳು ಬೇಕು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ಮನೆಯಲ್ಲಿ ಕಣ್ಣಿನ ಕೆಳಗೆ (ಅಂಡರ್ ಐ) ಕ್ರೀಮ್ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಅಲೋವೆರಾ ಜೆಲ್- ಒಂದು ಕಪ್, ಫಿಲ್ಟರ್ ಮಾಡಿದ ನೀರು- 2 ಟೀ ಚಮಚ, ವಿಟಮಿನ್ ಇ ಆಯಿಲ್ ಕ್ಯಾಪ್ಸೂಲ್, ಜೇನುಮೇಣ (honey wax)- 3 ಟೀ ಚಮಚ, ಗುಲಾಬಿ ಎಣ್ಣೆ- 2 ಟೀ ಚಮಚ, ಬಾದಾಮಿ ಎಣ್ಣೆ- 3 ಟೀ ಚಮಚ, ಲ್ಯಾವೆಂಡರ್ ಆಯಿಲ್- 5 ರಿಂದ 6 ಹನಿಗಳು.
ತಯಾರಿಸುವ ವಿಧಾನ: ಈ ಕ್ರೀಮ್ ಅನ್ನು ತಯಾರಿಸಲು ಒಂದು ಬಟ್ಟಲಿನಲ್ಲಿ ಅಲೋವೆರಾ ಜೆಲ್, ಫಿಲ್ಟರ್ ಮಾಡಿದ ನೀರು ಮತ್ತು ವಿಟಮಿನ್ ಇ ಎಣ್ಣೆಯ ಕ್ಯಾಪ್ಸೂಲ್ ಅನ್ನು ಮಿಶ್ರಣ ಮಾಡಬೇಕು. ನಂತರ ಡಬಲ್ ಬಾಯ್ಲರ್ ಅಥವಾ ಮೈಕ್ರೋವೇವ್‍ನಲ್ಲಿ ಸ್ವಲ್ಪ ಬಿಸಿ ಮಾಡಿ ಪಕ್ಕಕ್ಕೆ ಇಡಿ. ಈಗ ಮೇಣ, ಗುಲಾಬಿ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಡಬಲ್ ಬಾಯ್ಲರ್ ನಲ್ಲಿ ಸಂಪೂರ್ಣವಾಗಿ ಕರಗುವವರೆಗೆ ಬಿಸಿ ಮಾಡಿ. ನಂತರ ಶಾಖದಿಂದ ತೆಗೆದುಹಾಕಿ, ಬ್ಲೆಂಡರ್‌ಗೆ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ನಂತರ, ಕ್ರಮೇಣ ಅಲೋವೆರಾ ಜೆಲ್ ಮತ್ತು ನೀರಿನ ಮಿಶ್ರಣವನ್ನು ಸೇರಿಸಿ. ಎರಡೂ ಮಿಶ್ರಣಗಳನ್ನು ಮಿಶ್ರಣ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಕೆನೆಯುಕ್ತ ಸ್ಥಿರತೆಯನ್ನು ಪಡೆಯುವವರೆಗೆ ಅದನ್ನು ಮಿಶ್ರಣ ಮಾಡುತ್ತಲೇ ಇರಬೇಕು. ಅಂತಿಮವಾಗಿ, ಲ್ಯಾವೆಂಡರ್ ಎಣ್ಣೆಯ ಹನಿಗಳು ಅಥವಾ ನಿಮ್ಮ ಆಯ್ಕೆಯ ಯಾವುದೇ ಎಸೆನ್ಶಿಯಲ್ ಆಯಿಲ್ ಅನ್ನು ಸೇರಿಸಬಹುದು. ಈಗ ಕ್ರೀಮ್ ಅನ್ನು ಕಂಟೇನರ್‌ನಲ್ಲಿ ಸಂಗ್ರಹಿಸಿ, ಬಳಸಬಹುದು.
ಕಣ್ಣುಗಳ ಕೆಳಗಿನ ಕಪ್ಪು ವೃತ್ತಗಳು (ಡಾರ್ಕ್ ಸರ್ಕಲ್) ಹಾಗೂ ಊತ (ಪಫಿನೆಸ್) ಗೆ ಇದು ಉತ್ತಮ ಮನೆಮದ್ದಾಗಿದೆ. ಇದನ್ನು ಪ್ರತಿದಿನ ಬಳಸಬಹುದು. ಈ ಮೂಲಕ ಸಮಸ್ಯೆಯನ್ನು ನಿವಾರಿಸಬಹುದು. ಕಣ್ಣುಗಳ ಕೆಳಗೆ ಶುಷ್ಕತೆ ಇದ್ದರೆ, ಅದನ್ನು ನಿಭಾಯಿಸಲು ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಬಹುದು.
ವಿಭಾಗ