logo
ಕನ್ನಡ ಸುದ್ದಿ  /  ಜೀವನಶೈಲಿ  /  ಋತುಚಕ್ರದ ಸಂದರ್ಭದಲ್ಲಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದೇಕೆ; ತಡೆಯಲಾಗದ ನೋವಿಂದ ಪಾರಾಗುವುದು ಹೇಗೆ?

ಋತುಚಕ್ರದ ಸಂದರ್ಭದಲ್ಲಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದೇಕೆ; ತಡೆಯಲಾಗದ ನೋವಿಂದ ಪಾರಾಗುವುದು ಹೇಗೆ?

Jayaraj HT Kannada

May 09, 2024 09:00 AM IST

ಋತುಚಕ್ರದ ಸಂದರ್ಭದಲ್ಲಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದೇಕೆ

    • ಋತುಸ್ರಾವದ ಸಂದರ್ಭದಲ್ಲಿ ಸಾಮಾನ್ಯವಾಗಿ ಬಹುತೇಕ ಮಹಿಳೆಯರು ಕೀಲುಗಳಲ್ಲಿ ನೋವಿನ ಸಮಸ್ಯೆ ಅನುಭವಿಸುತ್ತಾರೆ. ಏಕೆ ಹೀಗಾಗುತ್ತದೆ? ಇದರಿಂದ ಪಾರಾಗಲು ಮಹಿಳೆಯರು ಏನು ಮಾಡಬೇಕು?ಎಂಬುದಕ್ಕೆ ಮಾಹಿತಿ ಇಲ್ಲಿದೆ.
ಋತುಚಕ್ರದ ಸಂದರ್ಭದಲ್ಲಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದೇಕೆ
ಋತುಚಕ್ರದ ಸಂದರ್ಭದಲ್ಲಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದೇಕೆ

ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ಹಿಂಸೆ ಅನುಭವಿಸಬೇಕಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಾರೆ. ಇದರ ಜೊತೆಯಲ್ಲಿ ಮಾನಸಿಕವಾಗಿ ಸಾಕಷ್ಟು ಬದಲಾವಣೆ, ಹಾರ್ಮೋನ್‌ನಲ್ಲಿ ಏರುಪೇರು, ಕಿರಿಕಿರಿ, ಆಯಾಸ ಹಾಗೂ ಕೀಲುಗಳಲ್ಲಿ ನೋವು ಅನುಭವಿಸಬೇಕಾಗಿ ಬರುತ್ತದೆ. ಇನ್ನು ಕೆಲವು ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕೀಲುಗಳನ್ನು ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಯಾಕೆ ಹೀಗೆ ಆಗುತ್ತದೆ? ಈ ನೋವಿನಿಂದ ಪಾರಾಗಲು ನೀವು ಯಾವ ರೀತಿಯಲ್ಲಿ ಮನೆ ಮದ್ದುಗಳನ್ನು ತಯಾರಿಸಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಋತುಚಕ್ರದ ಅವಧಿಯಲ್ಲಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಲು ಕಾರಣಗಳೇನು?

ಮುಟ್ಟಿನ ಸಂದರ್ಭದಲ್ಲಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಒಂದು ಸರ್ವೇ ಸಾಮಾನ್ಯ ಲಕ್ಷಣಗಳ ಪೈಕಿ ಒಂದಾಗಿದೆ ಎಂದು ಪ್ರಸೂತಿ ತಜ್ಞರು ಮಾಹಿತಿ ನೀಡಿದ್ದಾರೆ. ಆದರೂ ಕೀಲು ನೋವು ಕಾಣಿಸಿಕೊಳ್ಳಲು ಕಾರಣವಾಗುವ ಮುಖ್ಯವಾದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.

ಹಾರ್ಮೋನ್ ಏರಿಳಿತಗಳು

ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ & ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಹಾರ್ಮೋನ್‌ಗಳಲ್ಲಿ ಉಂಟಾಗುವ ಬದಲಾವಣೆಗಳು ಮುಟ್ಟಿನ ಮೊದಲು ಹಾಗೂ ಮುಟ್ಟಿನ ಸಂದರ್ಭದಲ್ಲಿ ಕೀಲುಗಳಲ್ಲಿ ನೋವುಂಟು ಮಾಡುತ್ತದೆ ಎಂದು ಹೇಳಿದೆ. ಋತುಚಕ್ರದ ಸಂದರ್ಭದಲ್ಲಿ ಹಾರ್ಮೋನ್ ಮಟ್ಟದಲ್ಲಿ ಅದರಲ್ಲೂ ವಿಶೇಷವಾಗಿ ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟರಾನ್‌ನಲ್ಲಿ ಉಂಟಾಗುವ ಬದಲಾವಣೆಯೇ ಕೀಲುನೋವಿಗೆ ಪ್ರಮುಖ ಕಾರಣವಾಗಿದೆ.

ಪ್ರೊಸ್ಟಗ್ಲಾಂಡಿನ್‌ಗಳು

ಇವುಗಳು ಮುಟ್ಟಿನ ಸಂದರ್ಭದಲ್ಲಿ ದೇಹದಲ್ಲಿ ಉಂಟಾಗುವ ನೋವಿಗೆ ಪ್ರಮುಖವಾಗಿ ಕಾರಣವಾಗುವ ಹಾರ್ಮೋನ್‌ಗಳಾಗಿವೆ. ಮುಟ್ಟಿನ ಸಂದರ್ಭದಲ್ಲಿ ದೇಹದಲ್ಲಿ ಹೆಚ್ಚಿನ ಮಟ್ಟದಲ್ಲಿ ಪ್ರೊಸ್ಟಗ್ಲಾಂಡಿನ್‌ಗಳು ಬಿಡುಗಡೆಯಾಗುತ್ತದೆ. ಇವುಗಳು ನಿಮ್ಮ ಕೀಲುಗಳ ಮೇಲೆ ಪರಿಣಾಮ ಬೀರಬಹುದು ಹಾಗೂ ಇದರಿಂದ ನೋವು ಉಂಟಾಗಬಹುದು.

ಎಂಡೊಮೆಟ್ರಿಯೊಸಿಸ್

ಎಂಡೊಮೆಟ್ರಿಯೊಸಿಸ್ ಎನ್ನುವುದು ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಅದರ ಹೊರಗೆ ಬೆಳೆಯುವ ಸ್ಥಿತಿಯಾಗಿದೆ. ಇದು ಯೋನಿಯಲ್ಲಿ ನೋವು ಮತ್ತು ಉರಿಯೂತವನ್ನು ಉಂಟುಮಾಡಬಹುದು. ಅಲ್ಲದೇ ಇದು ಮುಟ್ಟಿನ ಸಮಯದಲ್ಲಿ ಕೀಲುಗಳಲ್ಲಿ ನೋವಿಗೆ ಕಾರಣವಾಗಬಹುದು.

ಇದನ್ನೂ ಓದಿ | ಟಿವಿ ನೋಡುವಾಗ ಎಷ್ಟು ದೂರದಲ್ಲಿ ಕುಳಿತುಕೊಳ್ಳಬೇಕು, ಕಣ್ಣಿಗೂ ಟಿವಿ ಪರದೆಗೂ ಎಷ್ಟು ಅಂತರವಿರಬೇಕು? ಇಲ್ಲಿದೆ ಮಾಹಿತಿ

ಪೌಷ್ಠಿಕಾಂಶದ ಕೊರತೆ

ಮೆಗ್ನಿಷಿಯಂ ಅಥವಾ ವಿಟಮಿನ್ ಡಿಯಂತಹ ಪೋಷಕಾಂಶಗಳು ಮೂಳೆ ಹಾಗೂ ಕೀಲುಗಳ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಹಿಳೆಯರ ದೇಹದಲ್ಲಿ ಈ ಅಂಶಗಳ ಕೊರತೆಯಿಂದಾಗಿ ಮುಟ್ಟಿನ ಸಂದರ್ಭದಲ್ಲಿ ಕೀಲು ನೋವಿಗೆ ಕಾರಣವಾಗುತ್ತದೆ.

ಈ ಕೀಲು ನೋವು ಎಷ್ಟು ಸಮಯಗಳವರೆಗೆ ಇರುತ್ತದೆ?

ಋತುಚಕ್ರದ ಸಮಯದಲ್ಲಿ ಕಾಣಿಸುವ ಕೀಲು ನೋವು ಕೆಲವು ಸಮಯಗಳವರೆಗೆ ಮಾತ್ರ ಇರುತ್ತದೆ. ಕೆಲವು ದಿನಗಳವರೆಗೆ ಅಥವಾ ಒಂದು ವಾರದವರೆಗೆ ನೋವು ಕಾಣಿಸಿಕೊಳ್ಳಬಹುದು. ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಕೀಲು ನೋವನ್ನು ತಾತ್ಕಾಲಿಕ ಎಂದು ಪರಿಗಣಿಸಬಹುದಾಗಿದೆ. ಋತುಸ್ರಾವದ ಬಳಿಕ ಹಾರ್ಮೋನ್‌ಗಳು ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಈ ಕೀಲು ನೋವು ಕೂಡ ಮಾಯವಾಗುತ್ತದೆ. ಒಂದು ವೇಳೆ ಈ ಕೀಲು ನೋವು ದೀರ್ಘಕಾಲದವರೆಗೆ ಮುಂದುವರಿದರೆ ಸಂಧಿವಾತದ ಲಕ್ಷಣ ಎಂದು ಪರಿಗಣಿಸಬಹುದಾಗಿದೆ. ಇಂತಹ ಸಂದರ್ಭದಲ್ಲಿ ವೈದ್ಯರ ತಪಾಸಣೆಯ ಅಗತ್ಯವಿರುತ್ತದೆ.

ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಕೀಲು ನೋವಿನಿಂದ ಪಾರಾಗುವುದು ಹೇಗೆ?

  • ಕೀಲು ನೋವು ಕಾಣಿಸಿಕೊಂಡ ಜಾಗದಲ್ಲಿ ಐಸ್ ಪ್ಯಾಕ್‌ ಹಚ್ಚಿಕೊಳ್ಳಿ.
  • ಆರಾಮದಾಯಕ ನಡಿಗೆ ಹಾಗೂ ಕಡಿಮೆ ಪ್ರಭಾವ ಹೊಂದಿರುವ ವ್ಯಾಯಾಮಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.
  • ಸಮತೋಲಿತ ಆಹಾರ ಸೇವನೆ ಮಾಡಿ ಹಾಗೂ ಮುಟ್ಟಿನ ಸಂದರ್ಭದಲ್ಲಿ ಹೆಚ್ಚೆಚ್ಚು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
  • ಸಂಸ್ಕರಿಸಿದ ಆಹಾರ, ಸಕ್ಕರೆ ಅಂಶ ಹೆಚ್ಚಿರುವ ತಿನಿಸುಗಳು ಹಾಗೂ ಕೆಫಿನ್ ಅಂಶಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡಿ, ಸಾಧ್ಯವಾದರೆ ತಿನ್ನುವುದನ್ನೇ ನಿಲ್ಲಿಸಿ.
  • ನಿಯಮಿತವಾದ ವ್ಯಾಯಾಮ ಹಾಗೂ ಸಮತೋಲಿತ ಆಹಾರ ಸೇವನೆಯಿಂದ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಇಂಥ ನೋವುಗಳಿಂದ ಹೆಚ್ಚಿನ ರಕ್ಷಣೆ ಪಡೆಯಲು ಸಾಧ್ಯವಿದೆ.

ನಿಮ್ಮ ಕೀಲುಗಳ ಮೇಲಿನ ಹೆಚ್ಚಿನ ಒತ್ತಡವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು