logo
ಕನ್ನಡ ಸುದ್ದಿ  /  ಜೀವನಶೈಲಿ  /  ಮುಟ್ಟು ನಿಂತಿದೆಯೇ, ಋತುಬಂಧ ಪ್ರಾರಂಭವಾಗಿದೆ ಎಂದು ತಿಳಿಯುವುದು ಹೇಗೆ? ಈ ರೋಗಲಕ್ಷಣಗಳನ್ನು ತಿಳಿದುಕೊಳ್ಳಿ

ಮುಟ್ಟು ನಿಂತಿದೆಯೇ, ಋತುಬಂಧ ಪ್ರಾರಂಭವಾಗಿದೆ ಎಂದು ತಿಳಿಯುವುದು ಹೇಗೆ? ಈ ರೋಗಲಕ್ಷಣಗಳನ್ನು ತಿಳಿದುಕೊಳ್ಳಿ

Priyanka Gowda HT Kannada

Oct 27, 2024 02:26 PM IST

google News

ಋತುಬಂಧ ಸಮಯದಲ್ಲಿ ಮಹಿಳೆಯರು ಅನೇಕ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.

  • ಮುಟ್ಟಿನ ಜೊತೆಗೆ, ಪ್ರತಿ ಮಹಿಳೆಯು ಋತುಬಂಧವನ್ನು ಎದುರಿಸಬೇಕಾಗುತ್ತದೆ. ಪ್ರತಿ ತಿಂಗಳು ನಡೆಯುವ ಮುಟ್ಟಿನ ಅವಧಿಯನ್ನು ಋತುಚಕ್ರ ಎಂದು ಕರೆದರೆ, ಮುಟ್ಟು ನಿಲ್ಲುವ ಅವಧಿಯನ್ನು ಋತುಬಂಧ ಎಂದು ಕರೆಯಲಾಗುತ್ತದೆ. ಪ್ರತಿ ಮಹಿಳೆಯರಿಗೆ ಋತುಬಂಧದ ಹಂತವು ಬಹಳ ಮುಖ್ಯವಾಗಿದೆ.

ಋತುಬಂಧ ಸಮಯದಲ್ಲಿ ಮಹಿಳೆಯರು ಅನೇಕ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.
ಋತುಬಂಧ ಸಮಯದಲ್ಲಿ ಮಹಿಳೆಯರು ಅನೇಕ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. (PC: Canva)

ಪ್ರತಿ ಮಹಿಳೆಯ ಜೀವನದಲ್ಲಿ ಮುಟ್ಟು ಬಹಳ ಮುಖ್ಯ. ಪ್ರತಿ ತಿಂಗಳು ಮುಟ್ಟಿನ ಅವಧಿಯನ್ನು ಅನುಭವಿಸುವ ಮಹಿಳೆಯರು ಇದರ ಜತೆಗೆ ಋತುಬಂಧದ ಮೂಲಕ ಹೋಗಬೇಕಾಗುತ್ತದೆ. ಋತುಬಂಧ ಅಥವಾ ಮೆನೋಪಾಸ್ ಮಹಿಳೆಯರ ಋತುಚಕ್ರದ ಅಂತ್ಯ ಅಥವಾ ನಿಲ್ಲಿಸುವ ಸೂಚನೆಯಾಗಿದೆ. ಮಹಿಳೆಯರಿಗೆ ಋತುಬಂಧದ ಹಂತವು ಬಹಳ ಮುಖ್ಯವಾಗಿದೆ. ಋತುಬಂಧದ ಆಕ್ರಮಣವು ಪ್ರತಿ ತಿಂಗಳ ಮುಟ್ಟಿನ ಅವಧಿಗಳನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಈ ಪ್ರಕ್ರಿಯೆಯನ್ನು ಮೆನೋಪಾಸ್ ಎಂದು ಕರೆಯಲಾಗುತ್ತದೆ.

ಋತುಬಂಧದ ಸಮಯದಲ್ಲಿ ಮಹಿಳೆಯರಲ್ಲಿ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನುಗಳ ಮಟ್ಟವು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಸ್ತ್ರೀರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಮಯದಲ್ಲಿ, ಮಹಿಳೆಯರಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯು ನಿಲ್ಲುತ್ತದೆ. ಋತುಬಂಧ ಸಮಯದಲ್ಲಿ, ಮಹಿಳೆಯ ದೇಹವು ಪ್ರಚಂಡ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಋತುಬಂಧವು ಮೂರು ಹಂತಗಳನ್ನು ಹೊಂದಿರುತ್ತದೆ. ಅವು ಪ್ರೀ ಮೆನೋಪಾಸ್, ಮೆನೋಪಾಸ್ ಮತ್ತು ಪೋಸ್ಟ್ ಮೆನೋಪಾಸ್. 

ಋತುಬಂಧವು ಸಾಮಾನ್ಯವಾಗಿ 45 ರಿಂದ 55 ವರ್ಷ ವಯಸ್ಸಿನ ಮಹಿಳೆಯರಲ್ಲಿ ಪ್ರಾರಂಭವಾಗುತ್ತದೆ. ಜೀವನಶೈಲಿಯ ಬದಲಾವಣೆಗಳ ಜೊತೆಗೆ, ಕೆಲವು ವೈದ್ಯಕೀಯ ಪರಿಸ್ಥಿತಿಗಳು ಕೆಲವು ಮಹಿಳೆಯರಲ್ಲಿ ಈ ಹಂತವು ಸಾಮಾನ್ಯಕ್ಕಿಂತ ಮುಂಚೆಯೇ ಪ್ರಾರಂಭವಾಗಬಹುದು. ಈ ನೈಸರ್ಗಿಕ ಪ್ರಕ್ರಿಯೆಯು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳ ಕುಸಿತದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ. ಋತುಬಂಧ ಸಮಯದಲ್ಲಿ ಮಹಿಳೆಯರು ಅನೇಕ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಈ ರೋಗಲಕ್ಷಣಗಳ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಈ ರೋಗಲಕ್ಷಣಗಳನ್ನು ಮೊದಲೇ ಗುರುತಿಸುವುದರಿಂದ ಈ ಹಂತವನ್ನು ನಿಭಾಯಿಸಲು ಸುಲಭವಾಗುತ್ತದೆ.

ಋತುಬಂಧದ ಲಕ್ಷಣಗಳೇನು?

ಹಾಟ್ ಫ್ಲ್ಯಾಶ್ ಋತುಬಂಧಕ್ಕೆ ಸಂಬಂಧಿಸಿದ ಸಾಮಾನ್ಯ ಲಕ್ಷಣವಾಗಿದೆ. ಇದು ವಿಪರೀತ ಬೆವರುವಿಕೆ ಮತ್ತು ಅಸ್ವಸ್ಥತೆಯನ್ನು ಅನುಭವಿಸಲು ಕಾರಣವಾಗಬಹುದು. ಹಾಟ್ ಫ್ಲ್ಯಾಶ್ ಸಾಮಾನ್ಯವಾಗಿ ಕೆಲವು ನಿಮಿಷಗಳಿಂದ ಹಲವಾರು ಗಂಟೆಗಳವರೆಗೆ ಇರುತ್ತದೆ. ಇದು ಸಾಮಾನ್ಯವಾಗಿ ಅನಿಯಮಿತ ಹೃದಯ ಬಡಿತ ಮತ್ತು ತಲೆನೋವುಗಳಂತಹ ರೋಗಲಕ್ಷಣಗಳೊಂದಿಗೆ ಇರುತ್ತದೆ.

ಅನಿಯಮಿತ ಮುಟ್ಟಿನ ಅವಧಿಗಳು: ಋತುಬಂಧ ಸಮೀಪಿಸುತ್ತಿದ್ದಂತೆ, ಮಹಿಳೆಯರು ಅನಿಯಮಿತ ಮುಟ್ಟಿನ ಅವಧಿಗಳನ್ನು ಅನುಭವಿಸಬಹುದು. ಇದು ಮುಖ್ಯವಾಗಿ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಾಗಿ ಈ ರೀತಿ ಸಂಭವಿಸಬಹುದು. ಇದರರ್ಥ ಅವಧಿಗಳು ಸಾಮಾನ್ಯಕ್ಕಿಂತ ಕಡಿಮೆ ಅಥವಾ ಹೆಚ್ಚು ಇರಬಹುದು ಮತ್ತು ರಕ್ತದ ಹರಿವು ಭಾರವಾಗಿರುತ್ತದೆ ಅಥವಾ ಹಗುರವಾಗಿರುತ್ತದೆ.

ರಾತ್ರಿ ಬೆವರುವಿಕೆ: ರಾತ್ರಿ ವೇಳೆ ಮಲಗಿದ್ದಾಗ ನಿದ್ದೆಯ ಸಮಯದಲ್ಲಿ ಬೆವರುವಿಕೆಗಳಾಗಿವೆ. ಇದರಿಂದ ವ್ಯಕ್ತಿಯು ಸಂಪೂರ್ಣವಾಗಿ ಬೆವರಿನಿಂದ ಮುಳುಗಿದಂತೆ ಭಾಸವಾಗುತ್ತದೆ. ಇದರಿಂದ ನಿದ್ರಿಸಲು ಕಷ್ಟವಾಗುತ್ತದೆ. ಇದು ಒಬ್ಬರ ಮನಸ್ಥಿತಿ ಮತ್ತು ಶಕ್ತಿಯ ಮಟ್ಟದ ಮೇಲೆ ಪರಿಣಾಮ ಬೀರಬಹುದು.

ಮೂಡ್ ಸ್ವಿಂಗ್ಸ್: ಋತುಬಂಧವು ಮೂಡ್ ಸ್ವಿಂಗ್‌ಗಳನ್ನು ಹೋಲುತ್ತದೆ. ಒಂದು ಬಾರಿ ಇದ್ದಕ್ಕಿದ್ದಂತೆ ಒಂದು ಕ್ಷಣ ತುಂಬಾ ದುಃಖಿತರಾಗಬಹುದು ಅಥವಾ ಕೆಲವೊಮ್ಮೆ ತುಂಬಾ ಸಂತೋಷದಿಂದ ಇರಬಹುದು. ಅಥವಾ ಕೆಲವೊಂದು ಬಾರಿ ಕೋಪಗೊಳ್ಳಬಹುದು. ಇದು ಋತುಬಂಧಕ್ಕೆ ಒಳಗಾದವರಿಗೆ ಮತ್ತು ಸುತ್ತಮುತ್ತಲಿನ ಜನರಿಗೆ ಸವಾಲಾಗಿರಬಹುದು. ಇದು ವ್ಯಕ್ತಿಯ ವೈಯಕ್ತಿಕ ಸಂಬಂಧಗಳು ಮತ್ತು ದೈನಂದಿನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ