logo
ಕನ್ನಡ ಸುದ್ದಿ  /  ಜೀವನಶೈಲಿ  /  World Animal Day 2024: ಮೂಕ ಮನಸುಗಳ ಮಾತಿಗೆ ತಪ್ಪದೇ ಕಿವಿಯಾಗಿ; ವಿಶ್ವ ಪ್ರಾಣಿ ದಿನದ ಇತಿಹಾಸ ಹಾಗೂ ಈ ವರ್ಷದ ಥೀಮ್‌ ತಿಳಿಯಿರಿ

World Animal Day 2024: ಮೂಕ ಮನಸುಗಳ ಮಾತಿಗೆ ತಪ್ಪದೇ ಕಿವಿಯಾಗಿ; ವಿಶ್ವ ಪ್ರಾಣಿ ದಿನದ ಇತಿಹಾಸ ಹಾಗೂ ಈ ವರ್ಷದ ಥೀಮ್‌ ತಿಳಿಯಿರಿ

Suma Gaonkar HT Kannada

Oct 04, 2024 06:59 AM IST

google News

ಪ್ರಾಣಿಪ್ರಿಯರ ಜೊತೆ ಮೂಕ ಮನಸುಗಳ ಮಾತು ಕೇಳಿ

    • ಪ್ರಾಣಿ ಚಿಕ್ಕದೋ, ದೊಡ್ಡದೋ ಯಾವುದೇ ಇರಲಿ ಎಲ್ಲವನ್ನೂ ಸಮನಾಗಿ ಪ್ರೀತಿಸಿ ಎಂಬ ಅರ್ಥದಲ್ಲಿ ಈ ಬಾರಿ ಆಚರಣೆ ಮಾಡಲಾಗುತ್ತಿದೆ. ಪ್ರಾಣಿಪ್ರಿಯರೆಲ್ಲ ಒಂದೆಡೆ ಸೇರಿ ಮೂಕ ಮನಸುಗಳ ಮಾತಿಗೆ ತಪ್ಪದೇ ಕಿವಿಯಾಗಿ ನಮ್ಮ ಕರ್ತವ್ಯ ಮಾಡೋಣ. ಇಲ್ಲಿದೆ ನೋಡಿ ಈ ವರ್ಷದ ಥೀಮ್‌. 
ಪ್ರಾಣಿಪ್ರಿಯರ ಜೊತೆ ಮೂಕ ಮನಸುಗಳ ಮಾತು ಕೇಳಿ
ಪ್ರಾಣಿಪ್ರಿಯರ ಜೊತೆ ಮೂಕ ಮನಸುಗಳ ಮಾತು ಕೇಳಿ

ವಿಶ್ವ ಪ್ರಾಣಿಗಳ ದಿನವನ್ನು ಕೆಲವೊಮ್ಮೆ ವಿಶ್ವ ಪ್ರಾಣಿ ಕಲ್ಯಾಣ ದಿನ ಅಂದರೆ ಎನಿಮಲ್ ವೆಲ್‌ಫೆರ್ ಡೇ ಎಂದೂ ಸಹ ಕರೆಯಲಾಗುತ್ತದೆ. ಇಂದು ಅಕ್ಟೋಬರ್‌ 4ರಂದು ವಿಶ್ವದೆಲ್ಲೆಡೆ ಪ್ರಾಣಿಗಳ ದಿನವನ್ನು ಆಚರಿಸಲಾಗುತ್ತದೆ.ಪ್ರಪಂಚದಾದ್ಯಂತ ಪ್ರಾಣಿಗಳ ಹಕ್ಕುಗಳು ಮತ್ತು ಅವುಗಳ ಅಭಿವೃದ್ದಿಯನ್ನು ಕಾಪಾಡುವ ಗುರಿಯಿಂದ ಇದನ್ನು ಆಚರಿಸಲಾಗುತ್ತದೆ. ಜಗತ್ತನ್ನು ಎಲ್ಲಾ ಪ್ರಾಣಿಗಳ ವಾಸ್ಥವ್ಯಕ್ಕೆ ಉತ್ತಮ ಸ್ಥಳವನ್ನಾಗಿ ಮಾಡಲು ಪ್ರಾಣಿ ಸಂರಕ್ಷಣಾ ಆಂದೋಲನವನ್ನು ಜಾಗತಿಕವಾಗಿ ಮಾಡಲಾಗುತ್ತದೆ. ಈ ಮಹತ್ವದ ಸಂದರ್ಭದಲ್ಲಿ ಪ್ರಾಣಿಗಳಿಗೆ ಎಲ್ಲರೂ ದಯೆ ತೋರುತ್ತಾರೆ.

ನಮ್ಮ ಗ್ರಹವನ್ನು ಹಂಚಿಕೊಳ್ಳುವ ಅನೇಕ ಜಾತಿಯ ಜೀವಿಗಳನ್ನು ರಕ್ಷಿಸುವುದು ಕೂಡ ಇದರ ಮೂಲ ಉದ್ದೇಶವೇ ಆಗಿದೆ. ಪ್ರಾಣಿಗಳ ಕುರಿತು ಕಾಳಜಿವಹಿಸುವುದು ಮತ್ತು ಅವುಗಳನ್ನು ಕಾಪಾಡುವುದು ನಮ್ಮ ಕರ್ತವ್ಯವೂ ಆಗಿದೆ. ಮಾನವ ಪ್ರಾಣಿಗಳಿಗೆ ಉಂಟುಮಾಡುವ ನೋವು ಮತ್ತು ಕ್ರೌರ್ಯವನ್ನು ತಡೆಯುವುದು ಇದರ ಉದ್ಧೇಶವಾಗಿದೆ.

ಇತಿಹಾಸ

ಜರ್ಮನ್ ಪ್ರಕಾಶನ ಮ್ಯಾನ್ ಅಂಡ್ ಡಾಗ್‌ನ ಬರಹಗಾರ ಮತ್ತು ಸಂಪಾದಕರಾದ ಹೆನ್ರಿಕ್ ಝಿಮ್ಮರ್‌ಮ್ಯಾನ್ ಅವರು ವಿಶ್ವ ಪ್ರಾಣಿ ದಿನದ ಪರಿಕಲ್ಪನೆ ತಂದರು. ಮಾರ್ಚ್ 24, 1925 ರಂದು, ಜರ್ಮನಿಯ ಬರ್ಲಿನ್‌ನಲ್ಲಿರುವ ಸ್ಪೋರ್ಟ್ಸ್ ಪ್ಯಾಲೇಸ್‌ನಲ್ಲಿ ವಿಶ್ವ ಪ್ರಾಣಿಗಳ ದಿನದ ಉದ್ಘಾಟನಾ ಕಾರ್ಯಕ್ರಮವನ್ನು ಜಿಮ್ಮರ್‌ಮ್ಯಾನ್ ಯೋಜಿಸಿದರು. ಈ ಸಂದರ್ಭದಲ್ಲಿ 5,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಹೇಳಲಾಗುತ್ತದೆ.

ಝಿಮ್ಮರ್‌ಮನ್ ವಿಶ್ವ ಪ್ರಾಣಿ ದಿನವನ್ನು ಮುನ್ನಡೆಸಲು ತಮ್ಮ ಸಮಯವನ್ನು ಮೀಸಲಿಟ್ಟಿದ್ದರು. ಮೇ 1931 ರಲ್ಲಿ ಇಟಲಿಯ ಫ್ಲಾರೆನ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಕಾರ್ಯಕ್ರಮದಲ್ಲಿ ಅಕ್ಟೋಬರ್ 4 ಅನ್ನು ವಿಶ್ವ ಪ್ರಾಣಿ ದಿನವೆಂದು ಘೋಷಣೆ ಮಾಡಲಾಯಿತು.

ಯುಕೆ ಮೂಲದ ಪ್ರಾಣಿ ಸಂರಕ್ಷಣಾ ಸಂಸ್ಥೆ ನೇಚರ್‌ವಾಚ್ ಫೌಂಡೇಶನ್ 2003 ರಲ್ಲಿ ವಿಶ್ವ ಪ್ರಾಣಿ ದಿನದ ವೆಬ್‌ಸೈಟ್‌ಅನ್ನು ಪರಿಚಯಿಸಿದೆ.

ವಿಶ್ವ ಪ್ರಾಣಿ ಕಲ್ಯಾಣ ದಿನದ ಮಹತ್ವ
ಈ ದಿನದಂದು ಪ್ರಾಣಿ ಪ್ರಿಯರು ತಮ್ಮದೇ ಆದ ವಿಶೇಷ ರೀತಿಯಲ್ಲಿ ಪ್ರಾಣಿಗಳ ರಕ್ಷಣೆ ಮತ್ತು ಸಂರಕ್ಷಣೆಯ ಕಾರಣಕ್ಕೆ ಕೊಡುಗೆ ನೀಡುತ್ತಾರೆ. ಪ್ರಪಂಚದ ಎಲ್ಲೆಡೆ, ಪ್ರಾಣಿ ಪ್ರೇಮಿಗಳು ಈ ದಿನವನ್ನು ಆಚರಿಸುತ್ತಾರೆ.

‘Great or Small, Love Them All’ - ಇದು ಈ ವರ್ಷದ ಥೀಮ್ ಆಗಿದೆ

ಪ್ರಾಣಿ ಚಿಕ್ಕದೋ, ದೊಡ್ಡದೋ ಯಾವುದೇ ಇರಲಿ ಎಲ್ಲವನ್ನೂ ಸಮನಾಗಿ ಪ್ರೀತಿಸಿ ಎಂಬ ಅರ್ಥದಲ್ಲಿ ಈ ಬಾರಿ ಆಚರಣೆ ಮಾಡಲಾಗುತ್ತಿದೆ. ಇಂದು ಎಷ್ಟೋ ಪ್ರಾಣಿಗಳನ್ನು ಕೊಂದು ತಿನ್ನಲಾಗುತ್ತಿದೆ. ಅಥವಾ ಮಾನವನ ಇನ್ಯಾವುದೋ ಉದ್ದೇಶಕ್ಕಾಗಿ ಅವುಗಳನ್ನು ಸಾಯಿಸಲಾಗುತ್ತಿದೆ.

ವಿವಿಧ ಅಭಿಯಾನಗಳು, ಸ್ಪರ್ಧೆಗಳು, ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿ ಈ ದಿನವನ್ನು ಬಹಳ ಪ್ರೀತಿಯಿಂದ ಆಚರಿಸಲಾಗುತ್ತದೆ. ಮುಂದಿನ ಪೀಳಿಗೆಗೆ ಎಲ್ಲ ರೀತಿಯ ಪ್ರಾಣಿಗಳನ್ನೂ ನೋಡುವ ಭಾಗ್ಯ ಉಳಿಯಲಿ ಎಂಬ ಆಶಯ ಇದರಲ್ಲಿದೆ. ಯಾಕೆಂದರೆ ಎಷ್ಟೋ ಪ್ರಭೇದದ ಪ್ರಾಣಿಗಳನ್ನು ನಾವಿಂದು ಕಳೆದುಕೊಂಡಿದ್ದೇವೆ.

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ