Burmese Python: ಜಗತ್ತಿನ ಅತಿ ಉದ್ದನೆ ಹೆಬ್ಬಾವು ಇದು: ಫ್ಲೋರಿಡಾದಲ್ಲಿ ಹಿಡಿದ ಬರ್ಮೀಸ್ ಹೆಬ್ಬಾವು, ಅಬ್ಬಬ್ಬಾ ಎಷ್ಟು ಉದ್ದ ಇದು
Jul 18, 2023 05:48 PM IST
ಫ್ಲೋರಿಡಾದಲ್ಲಿ ಹಿಡಿದ ಬರ್ಮೀಸ್ ಹೆಬ್ಬಾವು
- Worlds Biggest Burmese Python: ಬರ್ಮೀಸ್ ಹೆಬ್ಬಾವುಗಳು ಭೂಮಿ ಮೇಲಿನ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ಅವು ಆಕ್ರಮಣಕಾರಿ ಜಾತಿಯದ್ದಾಗಿದೆ. ಈ ಹಿಂದಿನ ದಾಖಲೆಯ ಪ್ರಕಾರ, 2020ನೇ ಇಸವಿಯಲ್ಲಿ ಎವರ್‌ಗ್ಲೇಡ್ಸ್‌ನಲ್ಲಿ ಹಿಡಿದ ಹೆಬ್ಬಾವು 18 ಅಡಿ 9 ಇಂಚುಗಳ ಉದ್ದ, 104 ಪೌಂಡ್‌ಗಳಷ್ಟು ತೂಕವಿತ್ತು.
ವಾಷಿಂಗ್‌ಟನ್: 19 ಅಡಿ ಉದ್ದದ ಬರ್ಮೀಸ್ ಹೆಬ್ಬಾವು, ಅಂದರೆ ಇದುವರೆಗೆ ದಾಖಲಾದ ಅತಿ ಉದ್ದದ ಹೆಬ್ಬಾವು ಒಂದನ್ನು ಕಳೆದ ವಾರ ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಸ್ಥಳೀಯರು ಹಿಡಿದಿದ್ದಾರೆ. ಈ ಹಾವು ವಯಸ್ಕ ಜಿರಾಫೆಯು ಎತ್ತರ ಎಷ್ಟಿರುತ್ತದೋ ಅಷ್ಟು ಉದ್ದವಾಗಿದೆ. 22 ವರ್ಷದ ಜೇಕ್ ವಾಲೇರಿ ಎಂಬುವರು ಕಳೆದ ವಾರ ಇದನ್ನು ಹಿಡಿದಿದ್ದಾರೆ. ಆ ನಂತರ ಅದನ್ನು ರಕ್ಷಿಸಲಾಗಿದ್ದು, ಈ ಹಾವು 19 ಅಡಿ ಉದ್ದ ಮತ್ತು 125 ಪೌಂಡ್‌ಗಳಷ್ಟು ತೂಕ ಇದೆ. ಇದು ಉದ್ದದ ಹಾವು ಎಂಬ ಹೊಸ ವಿಶ್ವ ದಾಖಲೆ ಬರೆದಿದೆ.
ಬರ್ಮೀಸ್ ಹೆಬ್ಬಾವುಗಳು ಭೂಮಿ ಮೇಲಿನ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ಅವು ಆಕ್ರಮಣಕಾರಿ ಜಾತಿಯದ್ದಾಗಿದೆ. ಈ ಹಿಂದಿನ ದಾಖಲೆಯ ಪ್ರಕಾರ, 2020ನೇ ಇಸವಿಯಲ್ಲಿ ಎವರ್‌ಗ್ಲೇಡ್ಸ್‌ನಲ್ಲಿ ಹಿಡಿದ ಹೆಬ್ಬಾವು 18 ಅಡಿ 9 ಇಂಚುಗಳ ಉದ್ದ, 104 ಪೌಂಡ್‌ಗಳಷ್ಟು ತೂಕವಿತ್ತು. ಇದುವರೆಗೆ ಸೆರೆಹಿಡಿಯಲಾದ ಅತ್ಯಂತ ಭಾರವಾದ ಬರ್ಮೀಸ್ ಹೆಬ್ಬಾವಿನ ದಾಖಲೆಯು 2022ರ ಜೂನ್‌ನಲ್ಲಿ ಸೆರೆ ಹಿಡಿದ ಹಾವಿನ ಹೆಸರಲ್ಲಿದೆ. ಅದು 215 ಪೌಂಡ್‌ಗಳಷ್ಟು ತೂಕವಿತ್ತು.
ಫ್ಲೋರಿಡಾದ ಕಾನೂನಿನ ಪ್ರಕಾರ, ಈ ಹೆಬ್ಬಾವುಗಳನ್ನು ಕೊಲ್ಲಲು ಯಾವುದೇ ಪರವಾನಗಿ ಬೇಡ. ಆದ್ದರಿಂದ ಈ ಹಾವುಗಳು ಅಳಿವಿನ ಅಂಚಿಗೆ ಬಂದಿವೆ. ಈ ಬರ್ಮೀಸ್ ಹೆಬ್ಬಾವುಗಳು ಫ್ಲೋರಿಡಾದ ದೊಡ್ಡ ಮತ್ತು ಚಿಕ್ಕ ಚಿಕ್ಕ ವನ್ಯಪ್ರಾಣಿಗಳಾದ ಮೊಲಗಳು ಮತ್ತು ಮನೆಯ ಸಾಕುಪ್ರಾಣಿಗಳಿಂದ ಹಿಡಿದು, ನರಿಗಳು ಮತ್ತು ಬಿಳಿ ಬಾಲದ ಜಿಂಕೆಗಳ ತನಕ ವಿವಿಧ ಪ್ರಾಣಿಗಳನ್ನು ತಮ್ಮ ಆಹಾರ ಮಾಡಿಕೊಂಡಿವೆ.
2022ರ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದು ವಿಜ್ಞಾನಿಗಳು ಹಾವಿನ ಕಳೇಬರ ಪರಿಶೀಲಿಸುವಾಗ 18 ಅಡಿ ಉದ್ದದ ಹೆಬ್ಬಾವಿನಿಂದ 5 ಅಡಿ ಉದ್ದದ ಮೊಸಳೆಯನ್ನು ತೆಗೆದುಹಾಕುವ ದೃಶ್ಯವನ್ನು ದಾಖಲಿಸಿದೆ. ಫ್ಲೋರಿಡಾದಲ್ಲಿ ಪ್ರತಿ ವರ್ಷ ಈ ಹೆಬ್ಬಾವುಗಳ ಬೇಟೆಯ ಸ್ಪರ್ಧೆ ಆಯೋಜಿಸಲಾಗುತ್ತದೆ. ಇದರಲ್ಲಿ ಹವ್ಯಾಸಿ ಹಾಗೂ ವೃತ್ತಿಪರ ಬೇಟೆಗಾರರು ಭಾಗೀ ಆಗುತ್ತಾರೆ. ಇದರಲ್ಲಿ ಗೆದ್ದವರಿಗೆ 1,000 ಡಾಲರ್‌ನಿಂದ 10,000 ಡಾಲರ್‌ವರೆಗಿನ ಬಹುಮಾನವು ಸಿಗುತ್ತದೆ.
ಇದನ್ನೂ ಓದಿ
Rainbow of X-rays: ಎಕ್ಸ್ ರೇಗಳ ಕಾಮನಬಿಲ್ಲು; ನಾಸಾದ ಕ್ರಿಸ್ಮ್ ಮಿಷನ್ ಕುರಿತು ತಿಳಿದುಕೊಂಡಿರಬೇಕಾದ ವಿಚಾರಗಳಿವು
Rainbow of X-rays: ನಾಸಾದ ಹೊಸ ಉಪಗ್ರಹ XRISM ಮತ್ತು ಅದರ ಮಿಷನ್ ಕುರಿತಾದ ವಿಚಾರಗಳು ಈಗ ಬಾಹ್ಯಾಕಾಶ ವಿದ್ಯಮಾನ ಆಸಕ್ತರ ಚರ್ಚೆಯ ಕೇಂದ್ರ ಬಿಂದು. ಈ ಮಿಷನ್ ಕುರಿತಾದ ಕೆಲವು ವಿವರಗಳು, ಫೋಟೋಗಳೊಂದಿಗೆ ಇಲ್ಲಿದೆ.
Youtuber Income: ಯೂಟ್ಯೂಬ್ ಮೂಲಕ 1 ಕೋಟಿ ಸಂಪಾದಿಸಿದ ತಸ್ಲಿಮ್ ಮನೆಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಯೂಟ್ಯೂಬರ್‌ಗಳಿಗೆ ಎಚ್ಚರಿಕೆ
Youtuber income tax raid: ಉತ್ತರ ಪ್ರದೇಶದ ಯೂಟ್ಯೂಬರ್ ತಸ್ಲಿಮ್ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆತ Trading Hub 3.0 ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದಾನೆ. ದಾಳಿ ಸಮಯದಲ್ಲಿ ನಗದು, ಚಿನ್ನಾಭರಣ ಪತ್ತೆಯಾಗಿದೆ. ಯೂಟ್ಯೂಬ್ ಮೂಲಕ ಆದಾಯ ಗಳಿಸುವ ಯೂಟ್ಯೂಬರ್‌ಗಳು ಸರಕಾರಕ್ಕೆ ತೆರಿಗೆ ಪಾವತಿಸುವುದು ಕಡ್ಡಾಯ.
ವಿಭಾಗ