logo
ಕನ್ನಡ ಸುದ್ದಿ  /  ಜೀವನಶೈಲಿ  /  Yoga For Constipation: ಮಲಬದ್ಧತೆ ನಿವಾರಣೆಗೆ ಈ ಯೋಗ ಭಂಗಿಗಳು ಸಹಾಯಕಾರಿ..ಸಮಸ್ಯೆ ಇರುವವರು ಪ್ರಯತ್ನಿಸಿ

Yoga for Constipation: ಮಲಬದ್ಧತೆ ನಿವಾರಣೆಗೆ ಈ ಯೋಗ ಭಂಗಿಗಳು ಸಹಾಯಕಾರಿ..ಸಮಸ್ಯೆ ಇರುವವರು ಪ್ರಯತ್ನಿಸಿ

HT Kannada Desk HT Kannada

Oct 17, 2022 08:24 AM IST

ಮಲಬದ್ಧತೆ ನಿವಾರಣೆಗೆ ಸಹಾಯವಾಗುವ ಯೋಗ ಭಂಗಿಗಳು

    • ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಸ್ನಾಯುಗಳು, ಮುಂದೋಳುಗಳು, ಮೊಣ ಕೈಗಳು, ತೊಡೆಗಳು, ಬೆನ್ನುಹುರಿ , ಎದೆ, ಮಣಿಕಟ್ಟಿನ ಕೀಲುಗಳು ಬಲಗೊಳ್ಳುತ್ತವೆ. ಮಯೂರಾಸನವು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಮಧುಮೇಹ ಮತ್ತು ಪೈಲ್ಸ್‌ಗೆ ಅತ್ಯುತ್ತಮ ಚಿಕಿತ್ಸೆಯಾಗಿದೆ.
ಮಲಬದ್ಧತೆ ನಿವಾರಣೆಗೆ ಸಹಾಯವಾಗುವ ಯೋಗ ಭಂಗಿಗಳು
ಮಲಬದ್ಧತೆ ನಿವಾರಣೆಗೆ ಸಹಾಯವಾಗುವ ಯೋಗ ಭಂಗಿಗಳು (Pc: freepik.com)

ಈಗಂತೂ ಮಲಬದ್ಧತೆ ಸಮಸ್ಯೆ ಬಹಳ ಜನರಿಗೆ ಸಾಮಾನ್ಯ ಎನಿಸಿಬಿಟ್ಟಿದೆ. ಈ ಸಮಸ್ಯೆಯನ್ನು ಅನೇಕರು ಎದುರಿಸುತ್ತಿದ್ದರೂ ಅದನ್ನು ಬಹಳ ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಈ ಸಮಸ್ಯೆ ಬಗ್ಗೆ ಗಮನ ಕೊಡಬೇಕಾಗಿರುವುದು ಬಹಳ ಅಗತ್ಯ. ಏಕೆಂದರೆ ದೀರ್ಘಕಾಲದ ಮಲಬದ್ಧತೆ ಸಮಸ್ಯೆಗಳು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಟ್ರೆಂಡಿಂಗ್​ ಸುದ್ದಿ

Optical Illusion: ಇಲ್ಲಿರುವ ನಾಲ್ಕು ಬಾಕ್ಸ್‌ಗಳಲ್ಲಿ ಒಂದು ಮಾತ್ರ ಭಿನ್ನವಾಗಿದೆ, ಅದು ಯಾವುದು? ನಿಮ್ಮ ಕಣ್ಣು ಶಾರ್ಪ್‌ ಇದ್ರೆ ಉತ್ತರ ಹೇಳಿ

ಬೇಸಿಗೆ ರಜೆ ಅಂತ ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದೇ ಪಾಲಿಸಿ, ಪೋಷಕರಿಗೆ ಸಲಹೆ

ಅನಾನಸ್ ಸ್ಪೆಷಲ್ ಕೇಸರಿಬಾತ್: ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ತಯಾರಿಸುವುದು ತುಂಬಾ ಸುಲಭ

Beauty Tips: ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ

ವಿಶ್ರಾಂತಿ ಕೊರತೆ, ಅನಿಯಮಿತ ಕೆಲಸದ ಸಮಯ, ಅತಿಯಾದ ಮಾಂಸ ಸೇವನೆ, ಜಂಕ್ ಫುಡ್, ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಕೊರತೆ, ಕಡಿಮೆ ನೀರು ಕುಡಿಯುವುದು, ಅತಿಯಾದ ಮದ್ಯಪಾನ ಇತ್ಯಾದಿಗಳು ಮಲಬದ್ಧತೆಗೆ ಕಾರಣವಾಗುತ್ತವೆ. ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ತಾತ್ಕಾಲಿಕ ಪರಿಹಾರ ಕ್ರಮಗಳ ಹೊರತಾಗಿ, ಯೋಗವು ಅತ್ಯುತ್ತಮ ಮಾರ್ಗವಾಗಿದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುವುದರಿಂದ ಕರುಳಿನ ಚಲನೆ, ಒತ್ತಡ ಮತ್ತು ಉಬ್ಬುವಿಕೆಯನ್ನು ತಡೆಯಬಹುದು. ಈ ಯೋಗವು ರಕ್ತ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ.

ಮಲಬದ್ಧತೆ ನಿವಾರಣೆಗಾಗಿ ಈ ಆಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಸಮಸ್ಯೆ ಕಡಿಮೆಯಾಗಲಿದೆ.

ಬದ್ಧ ಕೋನಾಸನ (ಚಿಟ್ಟೆ ಭಂಗಿ)

ಈ ಆಸನ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಮಾತ್ರವಲ್ಲದೆ ಗ್ಯಾಸ್ಟ್ರಿಕ್‌, ಹೊಟ್ಟೆ ಉಬ್ಬುವುದು, ಸೆಳೆತವನ್ನು ನಿವಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ಬದ್ಧ ಕೋನಾಸನ ಅಭ್ಯಾಸ ಮಾಡುವುದರಿಂದ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ, ದೀರ್ಘ ಸಮಯ ನಿಲ್ಲುವುದರಿಂದ ಮತ್ತು ನಡೆಯುವುದರಿಂದ ಉಂಟಾಗುವ ಆಯಾಸವನ್ನು ನಿವಾರಿಸುತ್ತದೆ. ಮುಟ್ಟಿನ ಅಸ್ವಸ್ಥತೆ, ಋತುಬಂಧದ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ, ಗರ್ಭಿಣಿಯರಿಗೆ ಸುಗಮ ಹೆರಿಗೆಗೆ ಕೂಡಾ ಈ ಆಸನ ಸಹಾಯ ಮಾಡುತ್ತದೆ.

ನೆಲದ ಮೇಲೆ ಕುಳಿತುಕೊಂಡು ನಿಮ್ಮ ಎರಡೂ ಪಾದಗಳನ್ನು ನಿಧಾನವಾಗಿ ಜೋಡಿಸಿ. ನಂತರ ನಿಮ್ಮ ತೊಡೆಗಳನ್ನು ಚಿಟ್ಟೆಗಳು ರೆಕ್ಕೆಗಳನ್ನು ಬಡಿಯುವಂತೆ ಅಲುಗಾಡಿಸಿ. ಮಧ್ಯೆ ಕೆಲವು ಸೆಕೆಂಡ್‌ ಬ್ರೇಕ್‌ ನೀಡಿ ನಂತರ ಮತ್ತೆ ಮುಂದುವರೆಸಿ.

ಅರ್ಧ-ಮತ್ಸ್ಯೇಂದ್ರಾಸನ

ಈ ಆಸನವನ್ನು ಮಾಡುವುದರಿಂದ ಮೇದೋಜ್ಜೀರಕ ಗ್ರಂಥಿ, ಯಕೃತ್ತು, ಗುಲ್ಮ, ಮೂತ್ರಪಿಂಡಗಳು ಮತ್ತು ಹೊಟ್ಟೆಯ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ. ಬೆನ್ನುಮೂಳೆಯನ್ನು ಮೃದುಗೊಳಿಸುತ್ತದೆ, ಬೆನ್ನುಮೂಳೆಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಎದೆಯನ್ನು ವಿಸ್ತರಿಸುತ್ತದೆ ಮತ್ತು ಶ್ವಾಸಕೋಶಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ.

ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಿ. ನಂತರ ಒಂದು ಬದಿಗೆ ಸರಿದು ನಿಮ್ಮ ಒಂದು ಕಾಲನ್ನು ವಿರುದ್ಧ ದಿಕ್ಕಿಗೆ ಇರಿಸಿ ಬೆನ್ನನ್ನು ಮತ್ತೊಂದು ದಿಕ್ಕಿಗೆ ಮಾಡಿ. ಈ ಆಸನದಲ್ಲಿ ನಿರ್ದಿಷ್ಟ ಸೆಕೆಂಡ್‌ಗಳವರೆಗೆ ಇದ್ದು ನಂತರ ಮತ್ತೊಂದು ಬದಿಗೆ ಈ ಆಸನವನ್ನು ಪುನರಾವರ್ತಿಸಿ.

ಮಯೂರಾಸನ (ನವಿಲು ಭಂಗಿ)

ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಸ್ನಾಯುಗಳು, ಮುಂದೋಳುಗಳು, ಮೊಣ ಕೈಗಳು, ತೊಡೆಗಳು, ಬೆನ್ನುಹುರಿ , ಎದೆ, ಮಣಿಕಟ್ಟಿನ ಕೀಲುಗಳು ಬಲಗೊಳ್ಳುತ್ತವೆ. ಮಯೂರಾಸನವು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಮಧುಮೇಹ ಮತ್ತು ಪೈಲ್ಸ್‌ಗೆ ಅತ್ಯುತ್ತಮ ಚಿಕಿತ್ಸೆಯಾಗಿದೆ.

ಈ ಆಸನ ಮಾಡುವುದು ಕಷ್ಟವಾಗಬಹುದು. ಆದರೆ ಅಭ್ಯಾಸ ಮಾಡಿದರೆ ಬಹಳ ಸುಲಭ. ಈ ಆಸನ ಮಾಡಲು ತೋಳುಗಳಲ್ಲಿ ಹೆಚ್ಚಿನ ಬಲ ಇರಬೇಕು. ಮೊದಲು ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಎರಡೂ ಹಸ್ತಗಳನ್ನು ಮಂಡಿಯ ಕಡೆಗೆ ಊರಿ. ನಂತರ ನಿಮ್ಮ ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿ ಕೆಲವು ಸೆಕೆಂಡ್‌ವರೆಗೂ ಇದೇ ಭಂಗಿಯಲ್ಲಿ ಇರಿ.

ಯೋಗವು ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಿದೆ. ಈ ಭಂಗಿಗಳನ್ನು ಪ್ರಯತ್ನಿಸಿ ಮಲಬದ್ಧತೆ ಸಮಸ್ಯೆಯಿಂದ ಹೊರಬನ್ನಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು