logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದ ಷೇರುಪೇಟೆಯಲ್ಲಿ ನೀರಸವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿನ್ನೆಗಿಂತ ಕೆಳಕ್ಕೆ ಕುಸಿದ ನಿಫ್ಟಿ50 - Opening Bell

ಭಾರತದ ಷೇರುಪೇಟೆಯಲ್ಲಿ ನೀರಸವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿನ್ನೆಗಿಂತ ಕೆಳಕ್ಕೆ ಕುಸಿದ ನಿಫ್ಟಿ50 - Opening Bell

Umesh Kumar S HT Kannada

Aug 13, 2024 09:49 AM IST

google News

ಭಾರತದ ಷೇರುಪೇಟೆಯಲ್ಲಿ ನೀರಸವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿನ್ನೆಗಿಂತ ಕೆಳಕ್ಕೆ ಕುಸಿದ ನಿಫ್ಟಿ50.

  • Indian Stock Market Opening Bell Today; ಹಿಂಡೆನ್‌ಬರ್ಗ್ ವರದಿಯ ಹೊಡೆತದಿಂದ ಚೇತರಿಸಿಕೊಂಡ ಭಾರತದ ಷೇರುಪೇಟೆಯಲ್ಲಿ ಇಂದು (ಆಗಸ್ಟ್ 13) ನೀರಸವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ಏಳಬೇಕೋ ಬೀಳಬೇಕೋ ಎಂಬಂತೆ ಇದೆ. ಇನ್ನೊಂದೆಡೆ ನಿಫ್ಟಿ 50 ನಿನ್ನೆ ಮಟ್ಟಕ್ಕಿಂತ ಕೆಳಕ್ಕೆ ಕುಸಿತ ಕಂಡಿದೆ.

ಭಾರತದ ಷೇರುಪೇಟೆಯಲ್ಲಿ ನೀರಸವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿನ್ನೆಗಿಂತ ಕೆಳಕ್ಕೆ ಕುಸಿದ ನಿಫ್ಟಿ50.
ಭಾರತದ ಷೇರುಪೇಟೆಯಲ್ಲಿ ನೀರಸವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿನ್ನೆಗಿಂತ ಕೆಳಕ್ಕೆ ಕುಸಿದ ನಿಫ್ಟಿ50.

ಮುಂಬಯಿ: ಜಾಗತಿಕ ಷೇರುಪೇಟೆಯಲ್ಲಿ ಮಿಶ್ರ ವಹಿವಾಟುಗಳು ಕಂಡುಬಂದಿದ್ದು, ಪೇಟೆಯ ವಹಿವಾಟಿನಲ್ಲಿ ಹೆಚ್ಚಿನ ಏರಿಳಿತ ದಾಖಲಾಗಿವೆ. ಭಾರತದ ಷೇರುಪೇಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸೂಚ್ಯಂಕಗಳು ಮಂಗಳವಾರ (ಆಗಸ್ಟ್ 13) ನೀರಸವಾಗಿ ವಹಿವಾಟು ಶುರುಮಾಡಿವೆ.

ಷೇರುಪೇಟೆ ವಹಿವಾಟು ಆರಂಭಕ್ಕೆ ಮುನ್ನ ನಿಫ್ಟಿ 24,350ಕ್ಕಿಂತ ಕೆಳಗೆ ಮತ್ತು ಸೆನ್ಸೆಕ್ಸ್‌ ಕೂಡ ನಿನ್ನೆ ವಹಿವಾಟು ನಿಲ್ಲಿಸಿದ ಸ್ತರಕ್ಕಿಂತ ಕೆಳಕ್ಕೆ ಕುಸಿದಿದೆ. ಷೇರುಪೇಟೆ ವಹಿವಾಟು ಶುರುವಾಗುತ್ತಿದ್ದಂತೆ ಸೆನ್ಸೆಕ್ಸ್ 79,615ರಲ್ಲಿ ಮತ್ತು ನಿಫ್ಟಿ 50 ಸೂಚ್ಯಂಕ 24,342.35 ಅಂಶದಲ್ಲಿ ವಹಿವಾಟು ಆರಂಭಿಸಿದವು.

ನಿಫ್ಟಿ 50 ಕೇವಲ 4.65 ಪಾಯಿಂಟ್‌ (0.02%) ಕುಸಿದು 24,342.10 ರಲ್ಲಿ ವಹಿವಾಟು ಶುರುಮಾಡಿ ಮತ್ತಷ್ಟು ಕುಸಿತ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಸ್ವಲ್ಪ ಕುಸಿದು ಬಳಿಕ 96.41 ಪಾಯಿಂಟ್ (0.12%) ಇಳಿದು 79,552.51ರಲ್ಲಿ ವಹಿವಾಟು ನಡೆಸಿದೆ. ಬ್ಯಾಂಕ್ ನಿಫ್ಟಿ ಸೂಚ್ಯಂಕವು 182.60 ಪಾಯಿಂಟ್ (0.36%) ಇಳಿದು 50,395.35ರಲ್ಲಿ ವಹಿವಾಟು ನಡೆಸಿದೆ.

ನಿಫ್ಟಿ ಸೂಚ್ಯಂಕದಲ್ಲಿ ಇಂದು ಲಾಭ ಮತ್ತು ನಷ್ಟದೊಂದಿಗೆ ವಹಿವಾಟು ಶುರುಮಾಡಿದ ಷೇರುಗಳು

ನಿಫ್ಟಿ 50 ಸೂಚ್ಯಂಕದಲ್ಲಿ 32 ಷೇರುಗಳು ಲಾಭಾಂಶದಲ್ಲಿ ವಹಿವಾಟು ನಡೆಸಿದರೆ, 18 ಷೇರುಗಳು ನಷ್ಟದ ವಹಿವಾಟು ನಡೆಸಿವೆ. ಇದರ ಪರಿಣಾಮ ನಿಫ್ಟಿ50 ಸೂಚ್ಯಂಕದ ಮೇಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಒಂದೇ ಶೇಕಡ 2ಕ್ಕಿಂತ ಹೆಚ್ಚು ಕುಸಿತ ಕಂಡಿದೆ.

ನಿಫ್ಟಿ 50 ಸೂಚ್ಯಂಕದಲ್ಲಿ ಅಗ್ರ 5 ಲಾಭ ಉಂಟುಮಾಡಿದ ಷೇರುಗಳಿವು-

ನಿಫ್ಟಿ 50 ಸೂಚ್ಯಂಕದಲ್ಲಿ ಅಗ್ರ 5 ಲಾಭ ಉಂಟುಮಾಡಿದ ಷೇರುಗಳಿವು: ಅಪೊಲೋ ಹಾಸ್ಪಿಟಲ್‌ (1.19%), ಐಸಿಐಸಿಐ ಬ್ಯಾಂಕ್‌ (1.11%), ಅದಾನಿ ಪೋರ್ಟ್ಸ್, ಕೊಟಾಕ್ ಬ್ಯಾಂಕ್, ಎಸ್‌ಬಿಐ ಲೈಫ್‌ ಷೇರುಗಳು ಲಾಭದೊಂದಿಗೆ ವಹಿವಾಟು ಶುರುಮಾಡಿವೆ.

ನಿಫ್ಟಿ 50 ಸೂಚ್ಯಂಕದಲ್ಲಿ ಅಗ್ರ 5 ನಷ್ಟ ಉಂಟುಮಾಡಿದ ಷೇರುಗಳಿವು

ನಿಫ್ಟಿ 50 ಸೂಚ್ಯಂಕದಲ್ಲಿ ಟಾಪ್‌ 5 ನಷ್ಟದ ಷೇರುಗಳಿವು - ಎಚ್‌ಡಿಎಫ್‌ಸಿ ಬ್ಯಾಂಕ್ (2.2%) ಡಿವಿಎಸ್‌ಲ್ಯಾಬ್ (1.33%) ಎಲ್‌ಟಿಐಎಂ (1.18%), ಬಿಪಿಸಿಎಲ್‌, ಟಾಟಾ ಮೋಟಾರ್ಸ್‌ ಷೇರುಗಳು ನಷ್ಟದೊಂದಿಗೆ ಇಂದು ವಹಿವಾಟು ಶುರುಮಾಡಿವೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಬ್ಯಾಂಕ್‌ ಷೇರುಗಳದ್ದೇ ಪ್ರಾಬಲ್ಯ

ಇನ್ನು ಸೆನ್ಸೆಕ್ಸ್ ಅನ್ನು ಮುನ್ನಡೆಸುವಲ್ಲಿ ಬ್ಯಾಂಕ್ ಷೇರುಗಳು ಮುಖ್ಯಪಾತ್ರವಹಿಸಿವೆ. ಸೆನ್ಸೆಕ್ಸ್ ಪಟ್ಟಿಯಲ್ಲಿರುವ 30 ಷೇರುಗಳ ಪೈಕಿ 19 ಷೇರುಗಳು ಹಸಿರಾಗಿದ್ದವು. 11 ಷೇರುಗಳು ಕೆಂಪಾಗಿದ್ದವು.

ಸೆನ್ಸೆಕ್ಸ್ ಪಟ್ಟಿಯಲ್ಲಿ ಬ್ಯಾಂಕ್‌ ಷೇರುಗಳದ್ದೇ ಪ್ರಾಬಲ್ಯ

ಸೆನ್ಸೆಕ್ಸ್ ಸೂಚ್ಯಂಕವನ್ನು ಬ್ಯಾಂಕ್ ಷೇರುಗಳ ಲಾಭದ ವಹಿವಾಟು ಮುನ್ನಡೆಸುತ್ತಿದ್ದು, ಇಂದು ಆರಂಭದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್‌, ಏಕ್ಸಿಸ್ ಬ್ಯಾಂಕ್, ಕೊಟಾಕ್ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್ ಲಾಭದ ವಹಿವಾಟು ತೋರಿಸಿವೆ. ಇದಲ್ಲದೆ, ಎನ್‌ಟಿಪಿಸಿ, ಸನ್‌ಫಾರ್ಮಾ, ಭಾರ್ತಿ ಏರ್‌ಟೆಲ್‌, ನೆಸ್ಟ್ಲೆ ಇಂಡಿಯಾ, ಮಾರುತಿ, ಎಸ್‌ಬಿಐಎನ್‌, ರಿಲಯನ್ಸ್, ಐಟಿಸಿ, ಎಲ್‌ಟಿ, ಜೆಎಸ್‌ಡಬ್ಲ್ಯೂ ಸ್ಟೀಲ್‌, ಅದಾನಿ ಪೋರ್ಟ್ಸ್‌, ಇನ್‌ಫೋಸಿಸ್‌, ಟಿಸಿಎಸ್‌, ಹಿಂದೂಸ್ತಾನ್ ಲಿವರ್ ಷೇರುಗಳು ಲಾಭದ ವಹಿವಾಟು ದಾಖಲಿಸಿವೆ.

ನಿನ್ನೆ ಹಿಂಡೆನ್‌ಬರ್ಗ್ ವರದಿ ಪರಿಣಾಮ ಉಂಟಾದ ಕುಸಿತದಿಂದ ಚೇತರಿಸಿಕೊಂಡ ಭಾರತದ ಷೇರುಪೇಟೆಯಲ್ಲಿ ದಿನದ ವಹಿವಾಟಿನ ಕೊನೆಗೆ ಸೆನ್ಸೆಕ್ಸ್ 56.99 ಪಾಯಿಂಟ್‌ (0.07%) ಕುಸಿದು 79,648.92 ಕ್ಕೆ ತಲುಪಿತು. ನಿಫ್ಟಿ ಸೂಚ್ಯಂಕವು 20.50 ಪಾಯಿಂಟ್‌ (0.08%) ಕುಸಿದು 24,347.00 ಕ್ಕೆ ತಲುಪಿತು. ಸುಮಾರು 1760 ಷೇರುಗಳು ಲಾಭದ ವಹಿವಾಟು ನಡೆಸಿದರೆ, 1801 ಷೇರುಗಳು ನಷ್ಟ ಅನುಭವಿಸಿವೆ. 87 ಷೇರುಗಳ ಮೌಲ್ಯ ಸ್ಥಿರವಾಗಿದ್ದವು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ