Budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಅತಿಮುಖ್ಯ ಘೋಷಣೆಗಳಿವು
Jul 23, 2024 01:50 PM IST
ಕೇಂದ್ರ ಸಚಿವೆ ನಿರ್ಮಲಾ ಮಂಡಿಸಿದ ಬಜೆಟ್ ಮುಖ್ಯಾಂಶಗಳು
- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಈ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ನ ಪ್ರಮುಖಾಂಶಗಳು ಇಲ್ಲಿವೆ.
ದೆಹಲಿ: ಸತತ ಏಳನೇ ಬಾರಿಗೆ ಆಯವ್ಯಯ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವಾರು ವಲಯಗಳಿಗೆ ತಮ್ಮ ಆಯವ್ಯಯದಲ್ಲಿ ಆದ್ಯತೆ ನೀಡಿದ್ದಾರೆ. ಅದರಲ್ಲೂ ಉತ್ಪಾದಕತೆ, ಉದ್ಯೋಗ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ ಮತ್ತು ಸುಧಾರಣೆಗಳು ಸೇರಿದಂತೆ ಒಂಬತ್ತು ಆದ್ಯತೆಗಳನ್ನು ಗುರಿಯಾಗಿಸಿಕೊಂಡು ಆದ್ಯತೆ ನೀಡಿರುವುದು ವಿಶೇಷ. ಗ್ರಾಮೀಣ ಆರ್ಥಿಕತೆಯ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ತ್ವರಿತವಾಗಿ ಗುರುತಿಸಿ ಅವುಗಳಿಗೆ ಆದ್ಯತೆ ನೀಡುವುದು ಸೇರಿದೆ ಎಂದು ನಿರ್ಮಲಾ ತಮ್ಮ ಆಯವ್ಯಯ ಭಾಷಣದಲ್ಲಿ ಉಲ್ಲೇಖಿಸಿದರು.
ಭಾರತದ ಜನರು ಮೋದಿ ನೇತೃತ್ವದ ಸರ್ಕಾರದ ಮೇಲಿನ ವಿಶ್ವಾಸದ ದ್ಯೋತಕವಾಗಿಯೇ ಮೂರನೇ ಅವಧಿಗೆ ನಮ್ಮನ್ನು ಮರು ಆಯ್ಕೆ ಮಾಡಿದ್ದಾರೆ. ಉತ್ಪಾದಕತೆ, ಉದ್ಯೋಗ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ ಮತ್ತು ಸುಧಾರಣೆಗಳು ಬಜೆಟ್ 9 ಆದ್ಯತೆಗಳಂತೆ ನಾವು ಆಯವ್ಯಯ ಮಂಡಿಸಿದ್ದೇವೆ ಎಂದು ನಿರ್ಮಲಾ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಅವರು ಮಂಡಿಸಿದ ಆಯವ್ಯಯದ ಪ್ರಮುಖಾಂಶಗಳು ಹೀಗಿವೆ.
- ಭಾರತದಲ್ಲಿ ಹೆಚ್ಚುವರಿ ಸಾಲ ವಸೂಲಾತಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗುವುದು.
- ಖಾಸಗಿ ವಲಯದಿಂದ ಉತ್ಪಾದಕತೆ ಲಾಭಗಳು, ವ್ಯಾಪಾರ ಅವಕಾಶಗಳು ಮತ್ತು ನಾವೀನ್ಯತೆಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಪ್ಲಿಕೇಶನ್ ಗಳ ಅಭಿವೃದ್ಧಿ ಮಾಡಲಿದೆ.
- ವಿದೇಶಗಳಲ್ಲಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ನಿರ್ಣಾಯಕ ಖನಿಜ ಮಿಷನ್ ಅನ್ನು ಸ್ಥಾಪಿಸಲಿದೆ
- ಸರ್ಕಾರವು ಮೊದಲ ಕಡಲಾಚೆಯ ಗಣಿಗಾರಿಕೆ ಬ್ಲಾಕ್ ಗಳ ಹರಾಜನ್ನು ಪ್ರಾರಂಭಿಸಲು ಉತ್ಸುಕವಾಗಿದ್ದು, ಅದರ ಅಂಶಗಳನ್ನೂ ಪ್ರಕಟಿಸಿದೆ.
ಇದನ್ನೂ ಓದಿರಿ: Budget Highlights: ಕೇಂದ್ರ ಬಜೆಟ್ ಮಂಡನೆಯಾಯ್ತು, ಯಾವುದು ದುಬಾರಿ, ಯಾವುದು ಅಗ್ಗ? ಮೊಬೈಲ್, ಚಿನ್ನ, ಬೆಳ್ಳಿ ದರ ಇಳಿಕೆಯಾಗುತ್ತೆ ಕಣ್ರೀ
- ಪಿಪಿಪಿ ಮಾದರಿಯಲ್ಲಿ ಕೈಗಾರಿಕಾ ಕಾರ್ಮಿಕರಿಗೆ ವಸತಿ ನಿಲಯ ಮಾದರಿಯ ಬಾಡಿಗೆ ಮನೆಗಳನ್ನು ಸರ್ಕಾರ ಒದಗಿಸಲಿದೆ.
- ಮೂಲಸೌಕರ್ಯ ಅಭಿವೃದ್ಧಿಗೆ ಬಂಡವಾಳ ವೆಚ್ಚಕ್ಕಾಗಿ ಕೇಂದ್ರ ಸರ್ಕಾರ 11 ಲಕ್ಷ ಕೋಟಿ ರೂ. ಇದು ನಮ್ಮ ಜಿಡಿಪಿಯ ಶೇ.3.4ರಷ್ಟಾಗಲಿದೆ. ಕಾರ್ಯಸಾಧ್ಯತೆ ಅಂತರ ನಿಧಿ ಮತ್ತು ಸಕ್ರಿಯಗೊಳಿಸುವ ನೀತಿಗಳ ಮೂಲಕ ಖಾಸಗಿ ವಲಯದ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಒತ್ತು.
- ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ 30 ಲಕ್ಷ ಯುವಕರಿಗೆ ಮಾಸಿಕ 1 ಪಿಎಫ್ ಕೊಡುಗೆ ನೀಡುವ ಮೂಲಕ ಸರ್ಕಾರ ಪ್ರೋತ್ಸಾಹ ನೀಡಲಿದೆ
- ಸರ್ಕಾರವು ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್ ಗಳನ್ನು ದೇಶದ ನಾನಾ ಭಾಗಗಳಲ್ಲ ಸ್ಥಾಪನೆಗೆ ಆದ್ಯತೆ ನೀಡಲಿದೆ.
- ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 1,000 ಐಟಿಐಗಳನ್ನು ಮೇಲ್ದರ್ಜೆಗೇರಿಸಲು ಕ್ರಮ
- ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗಿನ ಸಾಲಕ್ಕೆ ಸರ್ಕಾರ ಆರ್ಥಿಕ ನೆರವು
ಇದನ್ನೂಓದಿರಿ: ಕೇಂದ್ರ ಬಜೆಟ್‌ನಲ್ಲಿ ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್; ಇದರಿಂದ ಏನು ಲಾಭ?
- ಎಂಎಸ್ಎಂಇಗಳಿಗೆ ಅವಧಿ ಸಾಲಗಳನ್ನು ಸುಲಭಗೊಳಿಸಲು ಕ್ರೆಡಿಟ್ ಗ್ಯಾರಂಟಿ ಯೋಜನೆ. ಈ ಯೋಜನೆಯು ಸ್ವ-ಹಣಕಾಸು ಖಾತರಿ ನಿಧಿಯು ಪ್ರತಿ ಅರ್ಜಿದಾರರಿಗೆ 100 ಕೋಟಿ ರೂ.ಗಳವರೆಗೆ ರಕ್ಷಣೆಯನ್ನು ಒದಗಿಸುತ್ತದೆ.
- ಮೊಬೈಲ್ ಫೋನ್ ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಮತ್ತು ಸರ್‌ಚಾರ್ಜ್ ಇಳಿಕೆ
- ಚಿನ್ನ ಮತ್ತು ಬೆಳ್ಳಿಯ ಮೇಲಿನ 15 ಕಸ್ಟಮ್ಸ್ ಸುಂಕವನ್ನು ಶೇ 6 ಕ್ಕೆ ಮತ್ತು ಪ್ಲಾಟಿನಂ ಅನ್ನು ಶೇ.6.4 ಕ್ಕೆ ಇಳಿಕೆ
- ಅಮೃತಸರ-ಕೋಲ್ಕತಾ ಕೈಗಾರಿಕಾ ಕಾರಿಡಾರ್ನಲ್ಲಿ, ಬಿಹಾರದ ಗಯಾದಲ್ಲಿ ಕೈಗಾರಿಕಾ ಅನುಮೋದನೆಯ ಅಭಿವೃದ್ಧಿ
- ಪಾಟ್ನಾ-ಪೂರ್ಣಿಯಾ ಎಕ್ಸ್ ಪ್ರೆಸ್ ವೇ , ಬಕ್ಸಾರ್-ಭಾಗಲ್ಪುರ್ ಹೆದ್ದಾರಿ, ಬೋಧಗಯಾ-ರಾಜ್ಗಿರ್-ವೈಶಾಲಿ-ದರ್ಭಂಗಾ ಮತ್ತು ಬಕ್ಸಾರ್ನಲ್ಲಿ ಗಂಗಾ ನದಿಗೆ ಅಡ್ಡಲಾಗಿ 26,000 ಕೋಟಿ ರೂ.ಗಳ ಹೆಚ್ಚುವರಿ ದ್ವಿಪಥ ಸೇತುವೆಯ ಅಭಿವೃದ್ಧಿಗೆ ಆದ್ಯತೆ.