MS Dhoni: ಧೋನಿಗೆ ಚಾಕೋಲೇಟ್ ನೀಡಿ ಸರ್ಪ್ರೈಸ್ ಕೊಟ್ಟ ಗಗನಸಖಿ; ಮಾಹಿಯಿಂದ 3 ಗಂಟೆಗೆ ಕ್ಯಾಂಡಿ ಕ್ರಶ್ ಗೇಮ್ ಡೌನ್‌ಲೋಡ್ ಮಾಡಿದ 36 ಲಕ್ಷ ಮಂದಿ
Jun 26, 2023 07:19 AM IST
ಧೋನಿಗೆ ಚಾಕೋಲೇಟ್ ನೀಡಿ ಸರ್ಪ್ರೈಸ್ ಕೊಟ್ಟ ಗಗನಸಖಿ
- MS Dhoni: ಇಂಡಿಯೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಂಎಸ್ ಧೋನಿಗೆ ಗಗನಸಖಿಯೊಬ್ಬರು ಚಾಕೋಲೇಟ್ ನೀಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆದರೆ ಈ ವೇಳೆ ಧೋನಿ ವೇಳೆ ಧೋನಿ ಆಡುತ್ತಿದ್ದ ಕ್ಯಾಂಡಿ ಕ್ರಶ್ ಟ್ವಿಟರ್ನಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ ಟ್ರೋಫಿ ಗೆದ್ದ ಬಳಿಕ ಕಣ್ಮರೆ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ (MS Dhoni), ಇದೀಗ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದು 3 ವರ್ಷವಾದರೂ ಅವರ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕುಗ್ಗಿಲ್ಲ. ಇನ್ನೂ ಹೆಚ್ಚಾಗುತ್ತಲೇ ಇದೆ ಎಂಬುದು ವಿಶೇಷ. ಸೋಷಿಯಲ್ ಮೀಡಿಯಾಗೆ ಸದಾ ದೂರವಿರುವ 41 ವರ್ಷದ ಕೂಲ್ ಕ್ಯಾಪ್ಟನ್ ಹೆಸರು, ಒಂದಿಲ್ಲೊಂದು ವಿಷಯಕ್ಕೆ ಸದಾ ಟ್ರೆಂಡ್ನಲ್ಲಿ ಇರುತ್ತಾರೆ. ಇದೀಗ ಮತ್ತೊಂದು ವಿಷಯಕ್ಕೆ ಟ್ರೆಂಡ್ ಆಗುತ್ತಿದ್ದಾರೆ.
ಇಂಡಿಗೋ ವಿಮಾನದಲ್ಲಿ ಗಗನಸಖಿಯೊಬ್ಬರು ಎಂಎಸ್ ಧೋನಿಗೆ ಚಾಕೊಲೇಟ್ ನೀಡಿರುವ ವಿಡಿಯೋ ಟ್ವಿಟರ್ನಲ್ಲಿ ಸಖತ್ ವೈರಲ್ ಆಗುತ್ತಿದೆ. ಧೋನಿ ಪತ್ನಿ ಸಾಕ್ಷಿ ಮತ್ತು ಅವರ ಮಗಳು ಝೀವಾ ಸಹ ಪ್ರಯಾಣಿಸುತ್ತಿದ್ದರು. ನೆಟ್ಸ್ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಈ ವಿಡಿಯೋಗೆ ಅಭಿಮಾನಿಗಳು ಎಂಥಹ ಅದ್ಭುತ ವಿಡಿಯೋ ಎನ್ನುತ್ತಿದ್ದಾರೆ. ಐಪಿಎಲ್ನಲ್ಲಿ ಮಾತ್ರ ಸಕ್ರಿಯರಾಗಿರುವ ಧೋನಿ, ಸಿಎಸ್ಕೆ ಪರ ಆಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ವೈರಲ್ ಆದ ನೋಡಿ ಎಷ್ಟು ಕ್ಯೂಟ್ ಎನ್ನುತ್ತಿದ್ದಾರೆ ಫ್ಯಾನ್ಸ್.
ಅಭಿಮಾನಿ ಗಗನಸಖಿಯಿಂದ ಸರ್ಪ್ರೈಸ್
ಟೀಮ್ ಇಂಡಿಯಾದ ಸಕ್ಸಸ್ಫುಲ್ ಕ್ಯಾಪ್ಟನ್ ಧೋನಿ ತಮ್ಮ ಸರಳತೆ ಮತ್ತು ಸರಳ ಜೀವನಕ್ಕೆ ಹೆಚ್ಚು ಜನಪ್ರಿಯ. ಅವರ ಸರಳತೆ ಸಾಕಷ್ಟು ಮಂದಿಗೆ ಮಾದರಿ. ಏಕೆಂದರೆ ಅಷ್ಟು ಭಿನ್ನವಾಗಿರುತ್ತದೆ. ಇತ್ತೀಚೆಗೆ ಧೋನಿ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಆಗ ಅಲ್ಲಿದ್ದ ಅಭಿಮಾನಿಯೊಬ್ಬರಿಂದ ಸರ್ಪ್ರೈಸ್ ಸಿಕ್ಕಿದ್ದು, ಪಕ್ಕದಲ್ಲಿ ಕುಳಿತಿದ್ದ ಪತ್ನಿ ಸಾಕ್ಷಿ ಕೂಡ ಆಶ್ಚರ್ಯಗೊಂಡಿದ್ದಾರೆ.
ಎಂಎಸ್ ಧೋನಿ ವಿಂಡೋ ಸೀಟ್ನಲ್ಲಿ ಕೂತಿದ್ದರು. ಧೋನಿ ಅಭಿಮಾನಿ ಗಗನಸಖಿ ಒಂದು ಟ್ರೇನಲ್ಲಿ ಚಾಕೋಲೇಟ್ ಸೇರಿದಂತೆ ಇನ್ನಿತರ ಉಡುಗೆಗಳೊಂದಿಗೆ ಧೋನಿಯ ಬಳಿ ಹೋಗುತ್ತಾರೆ. ಧೋನಿ ನಗುತ್ತಾ, ತುಂಬಾ ಅದ್ಭುತ ಮಾತನಾಡಿದರು. ತನ್ನ ನೆಚ್ಚಿನ ಆಟಗಾರ ಧೋನಿಯನ್ನು ಕಣ್ತುಂಬಿಕೊಂಡ ಗಗನಸಖಿ ಖುಷಿಗೆ ಪಾರವೇ ಇರಲಿಲ್ಲ. ಧೋನಿ ಚಾಕೋಲೇಟ್ ತೆಗೆದುಕೊಂಡ ಬಳಿಕ ಇನ್ನೂ ತೆಗೆದುಕೊಳ್ಳುವಂತೆ ಗಗನಸಖಿ ಮನವಿ ಮಾಡುತ್ತಾರೆ. ನನಗೆ ಸಾಕೆಂದ ಧೋನಿ, ಟ್ರೇ ಅನ್ನು ವಾಪಸ್ ಕೊಡುತ್ತಾರೆ. ಈ ಸಮಯದಲ್ಲಿ ಧೋನಿಗೆ ನಗುತ್ತಾ ಧನ್ಯವಾದ ಹೇಳಿದ್ದಾರೆ. ಗಗನಸಖಿ ಕೈ ಬರಹದ ಚೀಟಿಯನ್ನೂ ಕೊಟ್ಟಿರುವುದನ್ನೂ ಇಲ್ಲಿ ಕಾಣಬಹುದು.
ಗಗನಸಖಿ, ಧೋನಿಗೆ ಚಾಕೋಲೇಟ್ ಕೊಟ್ಟ ವಿಡಿಯೋವನ್ನು ಲಿಯೋ ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಧೋನಿ ತನ್ನ ಕಣ್ಣುಗಳನ್ನು ಮಿಟುಕಿಸುವ ರೀತಿ ಮತ್ತು ಹೆಂಡತಿ ಇರುವಾಗ ಅವಳು (ಗಗನಸಖಿ) ಸಖತ್ ಕ್ಯೂಟ್ ಆಗಿ ವರ್ತಿಸುತ್ತಿದ್ದ ರೀತಿ ಅದ್ಭುತ ಎಂದು ಬರೆದಿದ್ದಾರೆ. ಮತ್ತೊಬ್ಬ ಪ್ರತಿಕ್ರಿಯಿಸಿದ್ದು, ನನಗೂ ಈಗ ಚಾಕೋಲೇಟ್ ತಿನಿಸಬೇಕು ಎನಿಸುತ್ತಿದೆ ಎಂದಿದ್ದಾನೆ. ಎಷ್ಟು ಕ್ಯೂಟ್ ಆಗಿದೆ ಅಲ್ವಾ ಈ ವಿಡಿಯೋ ಎನ್ನುತ್ತಿದ್ದಾರೆ ಧೋನಿ ಅಭಿಮಾನಿಗಳು.
ಟ್ರೆಂಡ್ ಆಯ್ತು ಕ್ಯಾಂಡಿ ಕ್ರಶ್ ಗೇಮ್
ಚಾಕೋಲೇಟ್ ನೀಡಿ ಗಗನಸಖಿ ಸರ್ಪ್ರೈಸ್ ಕೊಟ್ಟರು. ಆದರೆ ಇದರ ಪರಿಣಾಮ ಕ್ಯಾಂಡಿ ಕ್ರಶ್ ಗೇಮ್ ಮೇಲೆ. ಧೋನಿ ತನ್ನ ಟ್ಯಾಬ್ಲೆಟ್ನಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಇನ್ಮುಂದೆ ನಾನು ಕ್ಯಾಂಡಿ ಕ್ರಶ್ ಗೇಮ್ ಆಡುತ್ತೇನೆ ಎನ್ನುತ್ತಿದ್ದಾರೆ. ನೋಡಿದ ಎಲ್ಲಾ ಅಭಿಮಾನಿಗಳು ಆ್ಯಪ್ ಡೌನ್ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕ್ಯಾಂಡಿ ಕ್ರಶ್ ಸಾಗ ಇಂಡಿಯಾ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, 'ಜಸ್ಟ್ ಇನ್- ಕೇವಲ 3 ಗಂಟೆಗಳಲ್ಲಿ 3.6 ಮಿಲಿಯನ್ ಹೊಸದಾಗಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ದಂತಕಥೆಗೆ ಎಂಎಸ್ ಧೋನಿ (@msdhoni) ಅವರಿಗೆ ಧನ್ಯವಾದಗಳು. ನಿಮ್ಮಿಂದ ನಾವು ಭಾರತದಲ್ಲಿ ಟ್ರೆಂಡಿಂಗ್ ಆಗಿದ್ದೇವೆ ಎಂದು ಹೇಳಿದೆ.