Kyle Mayers: ನಾನು ಕೊಹ್ಲಿಗೆ ವೀರಾಭಿಮಾನಿ; ಐಪಿಎಲ್ನ ಲಕ್ನೋ ಪಂದ್ಯದ ವೇಳೆ ವಿರಾಟ್ ಜೊತೆಗಿನ ವಾಗ್ವಾದಕ್ಕೆ ಮೇಯರ್ಸ್ ಪ್ರತಿಕ್ರಿಯೆ
Aug 11, 2023 08:15 AM IST
ನಾನು ಕೊಹ್ಲಿಗೆ ವೀರಾಭಿಮಾನಿ; ಐಪಿಎಲ್ನ ಲಕ್ನೋ ಪಂದ್ಯದ ವೇಳೆ ವಿರಾಟ್ ಜೊತೆಗಿನ ವಾಗ್ವಾದಕ್ಕೆ ಮೇಯರ್ಸ್ ಪ್ರತಿಕ್ರಿಯೆ
- ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಇತ್ತೀಚೆಗೆ ಈ ಜಗಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಇಬ್ಬರಲ್ಲಿ ಯಾರು ಇಷ್ಟ?' ಎಂಬ ಪ್ರಶ್ನೆಗೆ ಕೈಲ್ ಮೇಯರ್ಸ್ 'ವಿರಾಟ್ ಕೊಹ್ಲಿ' ಎಂದು ಉತ್ತರಿಸಿದ್ದಾರೆ.
16ನೇ ಆವೃತ್ತಿಯ ಐಪಿಎಲ್ ಹೆಚ್ಚು ಸದ್ದು ಮಾಡಲು ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವಿನ ವಿವಾದವೂ ಒಂದು ಕಾರಣ. ಮೇ 1ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಲಕ್ನೋ ತಂಡದ ಆಟಗಾರ ಕೈಲ್ ಮೇಯರ್ಸ್, ಕೊಹ್ಲಿ ಜೊತೆ ವಾಗ್ವಾದ ನಡೆದಿತ್ತು.
ಗುರಾಯಿಸಿದ್ದೇಕೆ ಎಂದು ಕೈಲ್ ಮೇಯರ್ಸ್ ಪಂದ್ಯದ ಬಳಿಕ ಕೊಹ್ಲಿ ಬಳಿ ಕೇಳಿದ್ದರು. ಅದಕ್ಕುತ್ತರಿಸಿದ್ದ ವಿರಾಟ್, ನೀನೇಕೆ ನನ್ನನ್ನು ಗುರಾಯಿಸಿದೆ ಎಂದು ಮರು ಪ್ರಶ್ನೆ ಹಾಕಿದ್ದರು. ಇವರಿಬ್ಬರ ಮಾತಿನ ಚಕಮಕಿ ವೇಳೆ ಎಲ್ಎಸ್ಜಿ ತಂಡದ ಮೆಂಟರ್ ಗೌತಮ್ ಗಂಭೀರ್ ಮಧ್ಯ ಪ್ರವೇಶಿಸಿ, ಮತ್ತಷ್ಟು ಕೆಣಕಿದ್ದರು. ಇದು ಜೋರು ವಾಗ್ವಾದಕ್ಕೆ ಕಾರಣವಾಗಿತ್ತು. ಬಳಿಕ ಇಬ್ಬರಿಗೂ ಭಾರಿ ದಂಡ ವಿಧಿಸಲಾಯಿತು.
ಈ ಪಂದ್ಯದ ಬಳಿಕ ನಡೆದ ಈ ಹೈ ಡ್ರಾಮಾವನ್ನು ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಈಗ ಇದೇ ಸುದ್ದಿ ಬೆಳಕಿಗೆ ಬಂದಿದೆ. ವಿವಾದದ ಪ್ರಮುಖ ರೂವಾರಿಯಾಗಿದ್ದ ವೆಸ್ಟ್ ಇಂಡೀಸ್ ತಂಡದ ಕೈಲ್ ಮೇಯರ್ಸ್ ಈ ಬಗ್ಗೆ ಮಾತನಾಡಿದ್ದು, ನಾನು ಕೊಹ್ಲಿಗೆ ವೀರಾಭಿಮಾನಿ ಎಂದು ಹೇಳಿದ್ದಾರೆ. ಅಂದು ಕೊಹ್ಲಿ ಜೊತೆ ಜಗಳ ಮಾಡಿದ ಕ್ರಿಕೆಟಿಗನೇ ಅಭಿಮಾನಿ ಎಂದಿರುವುದು ಅಭಿಮಾನಿಗಳ ಮನ ಗೆದ್ದಿದ್ದಾರೆ.
ಕೊಹ್ಲಿಯೇ ಉತ್ತಮ
ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಇತ್ತೀಚೆಗೆ ಈ ಜಗಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಇಬ್ಬರಲ್ಲಿ ಯಾರು ಇಷ್ಟ?' ಎಂಬ ಪ್ರಶ್ನೆಗೆ ಕೈಲ್ ಮೇಯರ್ಸ್ 'ವಿರಾಟ್ ಕೊಹ್ಲಿ' ಎಂದು ಉತ್ತರಿಸಿದ್ದಾರೆ. ನಮ್ಮಿಬ್ಬರ ಯಾವುದೇ ಭಿನ್ನಾಬಿಪ್ರಾಯಗಳು . ವಾಸ್ತವವಾಗಿ ವಿರಾಟ್ ಕೊಹ್ಲಿಯಂತಹ ಆಟಗಾರನನ್ನು ಬೇಗ ಔಟ್ ಮಾಡಬೇಕೆಂಬುದು ಎಲ್ಲಾ ತಂಡಗಳ ಬಯಕೆ ಎಂದು ಮೇಯರ್ಸ್ ಪ್ರತಿಕ್ರಿಯಿಸಿದ್ದಾರೆ.
ಕೊಹ್ಲಿಗೆ ವೀರಾಭಿಮಾನಿ
ಐಪಿಎಲ್ ಸಮಯದಲ್ಲಿ ನಿಮ್ಮ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ಸಂಭಾಷಣೆ, ಕೊಹ್ಲಿ ಅಗ್ರೆಸ್ಸಿವ್ ಕುರಿತ ಪ್ರಶ್ನೆಗೆ ಉತ್ತರಿಸಿದ ಮೇಯರ್ಸ್, ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಅವರ ಆಕ್ರಮಣಕಾರಿ ವರ್ತನೆಗೆ ನಾನು ದೊಡ್ಡ ಅಭಿಮಾನಿ. ಕೆಲವೊಮ್ಮೆ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಲು ಅಗ್ರೆಸ್ಸಿವ್ ಅಗತ್ಯ ಇದೆ. ಇದರಿಂದ ಉಳಿದ ಆಟಗಾರರಿಗೂ ಉತ್ಸಾಹ ಹೆಚ್ಚುತ್ತದೆ. ಜೋಷ್ ಬರುತ್ತದೆ. ತಂಡದ ಗೆಲುವಿಗಾಗಿ, ಕೊಹ್ಲಿ ಏನು ಬೇಕಾದರೂ ಮಾಡಲು ಹಿಂದೆ ಮುಂದೆ ನೋಡಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಮೇಯರ್ಸ್.
ಕೊಹ್ಲಿ ಜೊತೆ ನವೀನ್ ಕೋಳಿ ಜಗಳ
ಆದರೆ ಈ ಪಂದ್ಯದಲ್ಲಿ ನವೀನ್ ಉಲ್ ಹಕ್ ಕೂಡ ಕೊಹ್ಲಿ ವಿರುದ್ಧ ಸಮರ ಸಾರಿದ್ದರು. ಪಂದ್ಯ ಮುಗಿದ ನಂತರ ಕೈ ಕುಲುಕುವ ವೇಳೆ ಕೊಹ್ಲಿ-ನವೀನ್ಗೂ ವಾಗ್ದಾದ ಏರ್ಪಟ್ಟಿತ್ತು. ಆದರೆ ಇವರಿಬ್ಬರ ವಾಗ್ವಾದ ಐಪಿಎಲ್ ಮುಗಿಯುವವರೆಗೂ ಇತ್ತು. ಮುಂಬೈ ಎದುರಿನ ಪಂದ್ಯದಲ್ಲಿ ಕೊಹ್ಲಿ ಬೇಗನೇ ಔಟಾಗುತ್ತಿದ್ದಂತೆ ನವೀನ್, ಪಂದ್ಯ ವೀಕ್ಷಿಸುತ್ತಿರುವ ಟಿವಿ ಪರದೆಯ ಚಿತ್ರವನ್ನು ಹಂಚಿಕೊಂಡು ಸ್ವೀಟ್ ಮ್ಯಾಂಗೋಸ್ ಬೇಕಾ ಎಂದು ಕಿಂಡಲ್ ಮಾಡಿದ್ದರು. ಆದರೆ ಕೊಹ್ಲಿ ಸುಮ್ಮನಿದ್ದರೂ, ಅಭಿಮಾನಿಗಳು ಸರಯಾಗಿ ಜಾಡಿಸಿದ್ದರು.